ಭಾರತದ ದ್ವೀಪ ಪ್ರದೇಶಗಳು
ಸುತ್ತಲೂ ನೀರನ್ನು ಹೊಂದಿದ್ದು, ಮಧ್ಯ ಭೂಮಿಯನ್ನು ಹೊಂದಿರುವ ಪ್ರದೇಶವನ್ನು 'ದ್ವೀಪ' ಎಂದು ಕರೆಯುತ್ತಾರೆ. ಭಾರತದಲ್ಲಿ ಹಲವಾರು ಸಾಗರಿಕ ದ್ವೀಪಗಳು ಮತ್ತು ಮುಖಜ ಭೂಮಿಯ ದ್ವೀಪಗಳನ್ನು ಒಳಗೊಂಡಿದೆ. ಭಾರತದಲ್ಲಿ ಒಟ್ಟು 1,208 ದ್ವೀಪಗಳಿವೆ. ಇವುಗಳಲ್ಲಿ ಜನವಸತಿ ಇರುವ ಮತ್ತು ಭಾರತದ ಆಡಳಿತದ ಅಧಿಕಾರಕ್ಕೆ ಸೇರಿರುವ ಸವಿಪಗಳ ಸಂಖ್ಯೆ 247, ಈ ದ್ವಿಪಗಳಲ್ಲಿ ಬಂಗಳಕೊಳ್ಳಿಯಲ್ಲಿ 204 ದ್ವಿಪಗಳಿದ್ದು, ಅವುಗಳನ್ನು ಅಂಡಮಾನ್ ನಕೋಬಾರ್ ದ್ವಿಪಗಳೆಂದು ಕರೆಯುತ್ತಾರೆ. 43 ದ್ವಿಪಗಳು ಅರಬ್ಬೀ ಸಮುದ್ರದಲ್ಲಿದ್ದು, ಇವುಗಳನ್ನು ಲಕ್ಷದ್ವೀಪಗಳೆಂದು ಕರೆಯುತ್ತಾರೆ. ಮನ್ನಾರ್ ಖಾರಿಯಲ್ಲಿ ಹಲವು ಹವಳದ ಬಂಡೆಯ ದ್ವೀಪಗಳಿವೆ.
![]() |
| ಭಾರತದ ದ್ವೀಪ ಪ್ರದೇಶಗಳು |
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
1) ಅಂಡಮಾನ್ ಮತ್ತು ನಿಕೋಬಾರ್ ದ್ವಿಪವು ಬಂಗಾಳಕೊಲ್ಲಿಯಲ್ಲಿದ್ದು, ಈ ದ್ವಿಪಗಳು ಜ್ವಾಲಾಮುಖಿಯಿಂದ ಉಂಟಾದ ಗಟ್ಟಿ ಶಿಲೆಗಳಿಂದ ಉಂಟಾಗಿವೆ.
2) ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳಲ್ಲಿ ಭೂ ಅಂತರ್ ಜನಿತ ಶಕ್ತಿಗಳು ಮತ್ತು ಜ್ವಾಲಾಮುಖಿಗಳಿಂದ ದ್ವೀಪಗಳು ಉಂಟಾಗಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳಲ್ಲಿ 4 ಪ್ರಮುಖ ದ್ವೀಪಗಳಿವೆ
1. ಉತ್ತರ ಅಂಡಮಾನ್
2. ಮಧ್ಯ ಅಂಡಮಾನ್
3. ದಕ್ಷಿಣ ಅಂಡಮಾನ್
4. ಚಿಕ್ಕ ಅಂಡಮಾನ್
3) ಭಾರತದಲ್ಲಿ ಅತಿ ದೊಡ್ಡ ದ್ವೀಪ ಮಧ್ಯೆ ಅಂಡಮಾನ್ ನಂತರದ ಸ್ಥಾನದಲ್ಲಿ ಗ್ರೇಟ್ ನಿಕೋಬಾರ್ ಇದೆ.
4) ಪೋರ್ಟ್ ಬ್ಲೇರ್ ಅಂಡಮಾನ್ ದ್ವೀಪಗಳ ರಾಜಧಾನಿಯಾಗಿದ್ದು, ದಕ್ಷಿಣ ಅಂಡಮಾನ್ ದ್ವಿಪದಲ್ಲಿದೆ.
5) ಬ್ಯಾರನ್ ಮತ್ತು ನಾರಕೊಂಡಾಮ್ ಗಳ (Narcondam ) ಪ್ರಮುಖ ಅಂಡಮಾನ್ ನಿಕೋಬಾರ್ ನಲ್ಲಿರುವ ಜ್ವಾಲಾಮುಖಿ ದ್ವೀಪಗಳು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 10 degree Channel ಉತ್ತರ ಅಕ್ಷಾಂಶವು ಬೇರ್ಪಡಿಸುತ್ತದೆ.
6) ಸ್ಯಾಡ್ಯುಲ್ ಎಂಬ ಶಿಖರವು 731 ಮೀಟರ್ ಎತ್ತರವಿದ್ದು, ಇದು ಅಂಡಮಾನ್ ನಿಕೋಬಾರ್ ನ ಅತ್ಯಂತ ಎತ್ತರವಾದ ಶಿಖರವಾಗಿದೆ. ಇದು ಉತ್ತರ ಅಂಡಮಾನ್ ದ್ವಿಪದಲ್ಲಿ ಕಂಡುಬರುತ್ತದೆ.
7) ನಿಕೋಬಾರ್ ದ್ವೀಪ ಸಮೂಹದಲ್ಲಿ 3 ಪ್ರಮುಖ ದ್ವೀಪಗಳಿವೆ ಅವುಗಳೆಂದರೆ
1. ಕಾರ್ ನಿಕೋಬಾರ್
2. ಚಿಕ್ಕ ಅಥವಾ ಲಿಟಲ್ ನಿಕೋಬಾರ್
3. ಗ್ರೇಟ್ ನಿಕೋಬಾರ್ (ಇದೊಂದು ದೊಡ್ಡ ದ್ವಿಪವಾಗಿದೆ )
8) ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವು ಹಿಂದಿನಿಂದಲೂ ಪ್ರಸಿದ್ದವಾಗಿದ್ದು, ಇವುಗಳ ಬಗ್ಗೆ ಪ್ರವಾಸಿಗರಾದ ಮಾರ್ಕೊಪೋಲೊ, ನಿಕಾಲೊಕಾಂಟಿ ಅವರು ಪ್ರಸ್ತಾಪಿಸಿದರು.
9) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬೆಚ್ಚಚೆಗಿನ ಉಷ್ಣವಲಯದ ವಾಯುಗುಣವನ್ನು ಹೊಂದಿದ್ದು, ನೈರುತ್ಯ ಮತ್ತು ಈಶಾನ್ಯ ಮಾರುತಗಳ ಕಾಲಾವಧಿಯಲ್ಲಿ ಅಧಿಕ ಮಳೆಯನ್ನು ಪಡೆಯುತ್ತವೆ.
10) ದಟ್ಟ ಅರಣ್ಯಗಳು ಮತ್ತು ಅಧಿಕ ವನ್ಯ ಜೀವಿಗಳನ್ನು ಹೊಂದಿವೆ.
ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್
ಇದು ಭಾರತದ ಭೂಪಡೆ, ವಾಯುಪಡೆ ಮತ್ತು ನೌಕಾ ಪಡೆಯ 3 ಸೇವೆಗಳನ್ನು ಒದಗಿಸುವ ಭಾರತೀಯ ಶಸ್ತ್ರಾಸ್ತ್ರ ಪಡೆಯ ಕಮಾಂಡ್ ಆಗಿದೆ. ಇದರ ಕೇಂದ್ರ ಕಚೇರಿ ಪೋರ್ಟ್ ಬ್ಲೇರ್ ನಲ್ಲಿದೆ.
ದೇಶದ ದಕ್ಷಿಣ ತುತ್ತತುದಿ ಇಂದಿರಾ ಪಾಯಿಂಟ್
ಭಾರತದ ದೇಶದ ದಕ್ಷಿಣದ ತುತ್ತತುದಿ ಇಂದಿರಾ ಪಾಯಿಂಟ್ ಅಥವಾ ಪಿಗ್ಮಿಲಿಯನ್ ಪಾಯಿಂಟ್ ಆಗಿದ್ದು. ಇದು ಅಂಡಮಾನ್ ನಿಕೋಬಾರ್ ದ್ವೀಪದ ಗ್ರೇಟ್ ನಿಕೋಬಾರ್ ನಲ್ಲಿ ಕಂಡುಬರುತ್ತದೆ. ಇಂದಿರಾ ಪಾಯಿಂಟ್ ಅಥವಾ ಪಿಗ್ಮಿಲಿಯನ್ ಪಾಯಿಂಟ್ 6.45 ಡಿಗ್ರೀ ಉತ್ತರ ಅಕ್ಷಾಂಶದಲ್ಲಿ ಕಂಡು ಬರುತ್ತದೆ.
ಸೆಲ್ಯೂಲಾರ್ ಜೈಲ್ ಬಗ್ಗೆ ಮಾಹಿತಿ (Cellular Jail)
ಸೆಲ್ಯೂಲಾರ್ ಜೈಲ್ ಅನ್ನು ಕಾಲಪಾಣಿ ಎಂದು ಕೊಡ ಕರೆಯುತ್ತಾರೆ. ಬ್ರಿಟಿಷ್ ಕಾಲದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ನಿರ್ಮಿಸಿದ್ದು ಜೈಲ್ ಆಗಿದೆ. ರಾಜಕೀಯ ಖೈದಿಗಳನ್ನು ಮತ್ತು ಗಡಿಪಾರಾದವರನ್ನು ವಿಶೇಷವಾಗಿ ಇಂತಹ ದೊರದ ಪ್ರದೇಶದಲ್ಲಿ ಬಂಧಿಸಲು ನಿರ್ಮಿಸಿದ ಬಂಧಿಖಾನೆಯಾಗಿದೆ. ಇಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೀರ್ಘಕಾಲ ಜೈಲು ಶಿಕ್ಷೆ ಅನುಭವಿಸಿದ V. D. ಸಾವರ್ಕರ್ ಅವರನ್ನು ಬಂಧಿಸಲಾಗಿತ್ತು
ಭಾರತದಲ್ಲಿ ಕಂಡುಬರುವ ಜ್ವಾಲಾಮುಖಿ
1. ಭಾರತದಲ್ಲಿ ಜ್ವಾಲಾಮುಖಿಯು ಬ್ಯಾರನ್ ದ್ವೀಪದಲ್ಲಿ ಕಂಡು ಬರುತ್ತದೆ. ಈ ಜ್ವಾಲಾಮುಖಿಗಳು ಇತ್ತೀಚೆಗೆ ಕಡಿಮೆಯಾಗಿದ್ದು, ಈ ದ್ವೀಪವನ್ನು ಲುಪ್ತ ಜ್ವಾಲಾಮುಖಿ ವಿಭಾಗಕ್ಕೆ ಸೇರಿಸಲಾಗಿದೆ.
2. ಅಂಡಮಾನ್ ನಿಕೋಬಾರ್ ದ್ವೀಪದ ನಾರ್ಕೊಂಡಾಮ್ ನಲ್ಲಿ ಸಣ್ಣ ಸಣ್ಣ ಜಾಗೃತ ಜ್ವಾಲಾಮುಖಿಗಳು ಕಂಡು ಬರುತ್ತದೆ.
3. ಭಾರತದಲ್ಲಿ ಕಂಡು ಬರುವ ಏಕೈಕ ಜಾಗೃತ ಜ್ವಾಲಾಮುಖಿ ಪ್ರದೇಶ ಅಂಡಮಾನ್ ನಿಕೋಬಾರ್ ದ್ವೀಪಗಳಾಗಿವೆ.
ದ್ವೀಪದ ಮರುಣಾಮಕರಣ
* 2019 ಜನವರಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ನ ಪ್ರಮುಖ ಮೂರು ದ್ವೀಪಗಳಾದ ರಾಸ್ ದ್ವೀಪಕ್ಕೆ "ಸುಭಾಸ್ ಚಂದ್ರ ಭೋಸ್ ಎಂತಲೂ, ನೈಲ್ ದ್ವೀಪಕ್ಕೆ "ಸ್ವರಾಜ್"ಎಂತಲೂ ಮರುನಾಮಕರಣ ಮಾಡಲಾಗಿದೆ.


ಧನ್ಯವಾದಗಳು