Type Here to Get Search Results !

ಕಾವೇರಿ ನದಿ ಮತ್ತು ಅದರ ಉಪನದಿಗಳ ವಿವರಗಳು ?

 ಕಾವೇರಿ ನದಿ ( Cauvery River )

            "ದಕ್ಷಿಣ ಗಂಗೆ" ಎಂದೇ ಖ್ಯಾತವಾದ ಕಾವೇರು ನದಿಯು ಕರ್ನಾಟಕ ಮತ್ತು ತಮಿಳುನಾಡಿನ ಜೀವ ನದಿಯಾಗಿದೆ. ಇದರ ಹರಿವಿನ ಪ್ರದೇಶವನ್ನು ಪುಣ್ಯ ಭೋಮಿ ಎಂದು ಪರಿಗಣಿಸಲ್ಪಟ್ಟಿದೆ. ಕಾವೇರಿ ನದಿಯು ಕೊಡಗು ಜಿಲ್ಲೆಯ ಪಕ್ಷಿಮ ಘಟ್ಟಗಳ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿರುವ ತಲಕಾವೇರುಯಲ್ಲಿ ಸಮುದ್ರ ಮಟ್ಟದಿಂದ 1342 ಮೀ. ಎತ್ತರದಲ್ಲಿ ಉಗಮಿಸುತ್ತದೆ. ಕಾವೇರಿ ನದಿಯು ಪೂರ್ವಾಭಿಮುಖವಾಗಿ 805 ಕಿ. ಮೀ ಹರಿದು ತಮಿಳುನಾಡಿನ ಕಾವೇರಿ ಪಟ್ಟನಂ ಬಳಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. 

ಕಾವೇರಿ ನದಿ ಮತ್ತು ಅದರ ಉಪನದಿಗಳ ವಿವರಗಳು


ಕಾವೇರಿ ನದಿಯ ಉಪನದಿಗಳು 

ಕಾವೇರಿ ನದಿಯ ಉಪನದಿಗಳನ್ನು ಎರಡು ರೀತಿಯಲ್ಲಿ ಪರಿಗಣಿಸಬಹುದು 

Ⅰ. ಎಡದಂಡೆಯ ಉಪನದಿಗಳು :

                      ಹೇಮಾವತಿ, ಶಿಂಷಾ, ಅರ್ಕವತಿ, ಲೋಕಪಾವನಿ, 


Ⅳ. ಬಲದಂಡೆಯ ಉಪನದಿಗಳು : 

                    ಕಬಿನಿ, ಲಕ್ಷ್ಮಣತೀರ್ಥ, ಅಲ್ಲದೆ ತಮಿಳುನಾಡಿನ ಭವಾನಿ, ನೋಯಲ್ ಮತ್ತು ಅಮರಾವತಿ ನದಿಗಳು ಕಾವೇರಿ ನದಿಯನ್ನು ಸೇರುತ್ತದೆ. 

▶ ಚುಂಚನಕಟ್ಟೆ ಜಲಪಾತ ( ಸುಮಾರು 20 ಮೀಟರ್ ) ಹಾಗೂ ಶಿವನ ಸಮುದ್ರ ಜಲಪಾತಗಳು ( ಸುಮಾರು 100 ಮೀಟರ್ ) ರಾಜ್ಯಗಳಲ್ಲಿವೆ.

▶ ಕಾವೇರಿ ನದಿಯು ಪೂರ್ವ ಕರಾವಳಿಯಲ್ಲಿ 8 ಸಾವಿರ ಚ. ಕಿ. ಮೀ ವಿಸ್ತಾರದ ಮುಖಜಭೂಮಿ ಇದೆ. ಇದರ ಮುಖಜಭೂಮಿಯು ಚತುಷ್ಕೋನಾಕೃತಿಯಲ್ಲಿದೆ. 

▶ ಕಾವೇರಿ ನದಿಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ 805 ಕಿ. ಮೀ ಹರಿದು ಬಂಗಾಳಕೊಲ್ಲಿ ಸೇರುತ್ತದೆ. 



1. ಹೇಮಾವತಿ ನದಿ :-

• ಪಕ್ಷಿಮ ಘಟ್ಟದ ಒಡಲಲ್ಲಿ ಸುಮಾರು 1,219 ಮೀಟರ್ ಎತ್ತರದಲ್ಲಿ ಹೇಮಾವತಿ ನದಿ ಉಗಮವಾಗುತ್ತದೆ. \

• ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಉಗಮಿಸುವ ನದಿಯಾಗಿದೆ. 

• ಕೃಷ್ಣರಾಜಸಾಗರದ ಬಳಿ ಕಾವೇರಿ ನದಿಯೊಂದಿಗೆ ಸಂಗಮವಾಗುತ್ತದೆ.

• ಈ ನದಿಯು ಸರಾಸರಿ 245 ಕಿ. ಮೀ ಉದ್ದ ಹರಿಯುತ್ತದೆ. ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ನದಿಗಳಲ್ಲೊಂದು.

• ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. 

• ಕೃಷ್ಣರಾಜ ಪೇಟೆ ತಾಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಸೇರ್ಪಡೆಯಾಗುತ್ತದೆ. ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟೆನ್ನು ಕಟ್ಟಲಾಗಿದೆ. 

• ಈ ನದಿಯು ಪ್ರಮುಖ ಉಪನದಿ ಯಗಚಿ. 

ಯಗಚಿ ನದಿ ( Yagachi River ) :- 

                  ಹೇಮಾವತಿ ನದಿಯ ಪ್ರಮುಖ ಉಪನದಿಯಾಗಿದೆ. ಇದಕ್ಕೆ " ಬದರಿ " ಎಂಬ ಹೆಸರಿದೆ. 

→ ಈ ನದಿ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಯಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಬೇಲೂರು ಪಟ್ಟಣದ ಮೂಲಕ ಹಾಸನ ಜಿಲ್ಲೆಯ ಗೊರೂರು ಗ್ರಾಮದ ಹತ್ತಿರ ಹೇಮಾವತಿ ನದಿಯನ್ನು ಕೊಡಿಕೊಳ್ಳುತ್ತದೆ. 


2. ಕಬಿನಿ ನದಿ ( Kabini River ) 

        ಈ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಇದನ್ನು "ಕಪಿಲ" ಎಂದು ಕರೆಯುತ್ತಾರೆ. ಸುಮಾರು 230 ಕಿ. ಮೀ ದೊರ ಒಳ ಹರಿವನ್ನು ಹೊಂದಿದೆ.  ಸುಮಾರು 7,040 ಚ. ಕಿ. ಮೀ ನಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ. 

• ಈ ನದಿಯ ದಡದ ಮೇಲೆ ಕರ್ನಾಟಕದ ಅತಿ ದೊಡ್ಡ ದೇವಾಲಯವಾದ ನಂಜನಗೊಡಿನ ಶ್ರೀನಂಜುಂಡೇಶ್ವರ ದೇವಾಲಯ ಕಂಡು ಬರುತ್ತದೆ.

• ಈ ನದಿಯ ಉಪನದಿಗಳು ಗುಂಡ್ಲುಹೊಳೆ ಮತ್ತು ನುಗು. 

• ತಿರುಮಲ ಕೊಡಲು ನರಸೀಪುರ ( ಟಿ. ನರಸೀಪುರ )ದಲ್ಲಿ ಕಬಿನಿ ನದಿಯು ಕಾವೇರಿ ನದಿಯನ್ನು ಸೇರುತ್ತದೆ.

• ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ ಪನಮರಂ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೊಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಇದು ಸರ್ವಋತು  ನದಿಯಾಗಿದೆ. 

ಕರ್ನಾಟದ ತ್ರಿವೇಣಿ ಸಂಗಮ - 

ಟಿ. ನರಸೀಪುರ :- ಗುಂಜ ನರಸಿಂಹಸ್ವಾಮಿ ದೇವಾಲಯವು ಕಬಿನಿ ನದಿಯ ದಡದಲ್ಲಿದೆ. ಟಿ ನರಸೀಪುರದಲ್ಲಿ 3 ನದಿಗಳು ಸೇರುವುದರಿಂದ ಇದನ್ನು " ಕರ್ನಾಟಕದ ತ್ರಿವೇಣಿ ಸಂಗಮ " ಎಂದು ಕರೆಯುತ್ತಾರೆ. ಅಂಥಹಾ ನದಿಗಳೆಂದರೆ, ಕಾವೇರಿ, ಕಬಿನಿ ಮತ್ತು ಸ್ಪಟಿಕ ಸರೋವರ ( ಗುಪ್ತ ಗಾಮಿನಿ )


3. ಸುವರ್ಣವತಿ  ನದಿ :-

              ಈ ನದಿಯನ್ನು ಹೊನ್ನಹೊಳೆ ಎಂದು ಕರೆಯುತ್ತಾರೆ. ಇದು ಕಾವೇರಿ ನದಿಯ ಉಪನದಿಯಾಗಿದೆ. ಈ ನದಿಯು ಮೈಸೂರು ಜಿಲ್ಲೆಯ ಆಗ್ನೇಯ ಭಾಗದ ಗಜಹಟ್ಟಿ ಕಣಿವೆ ಬಳಿ ಉಗಮಿಸಿ ಚಾಮರಾಜ ನಗರ ಜಿಲ್ಲೆಯ ಯಾಳಂದೂರು ಮತ್ತು ಕೊಳ್ಳೇಗಾಲ ತಾಲೂಕುಗಳ ಪಟ್ಟಣದ ಮೂಲಕ 88 ಕಿ. ಮೀ ಹರಿದು ತಲಕಾಸಿನ ಸಮೀಪ ಕಕ್ಕೊರು ಎಂಬಲ್ಲಿ ಕಾವೇರಿ ನದಿಯೊಂದಿಗೆ ಸಂಗಮವಾಗುತ್ತದೆ. 


4. ಶಿಂಷಾ ನದಿ :-

         ಕಾವೇರಿ ನದಿಯ ಉಪನದಿಯಾಗಿದೆ. ಇದಕ್ಕೆ ಶಿಂಷಾ, ಕದಂಬ, ಕಡಬಹೊಳ್ಳ ಎಂಬ ಹೆಸರುಗಳಿವೆ. ಈ ನದಿ ತುಮಕೂರು ಜಿಲ್ಲೆಯಲ್ಲಿ ದೇವರಾಯನದುರ್ಗದ ದಕ್ಷಿಣ ಭಾಗದಲ್ಲಿ ಹುಟ್ಟಿ ನೈರುತ್ಯದತ್ತ ಸಾಗಿ ತುರುವೇಕೆರೆ ತಾಲ್ಲೂಕಿತ ಮೂಲಕ ಕುಣಿಗಲ್ ಮೂಲಕ ಮದ್ದೊರಿನ ಕಿರಂಗೊರ ಬಳಿ ಮಂಡ್ಯ ಜಿಲ್ಲೆ ಪ್ರವೇಶಿಸಿ ಆನಂತರ ಮಳವಳ್ಳಿ ತಾಲ್ಲೂಕುನ್ನು ಪ್ರವೇಶಿಸಿ ಶಿವನ ಸಮುದ್ರ ಜಲಪಾತಕ್ಕೆ ಸ್ವಲ್ಪ ಹಿಂದೆ ಕಾವೇರಿ ನದಿಗೆ ಸೇರುತ್ತದೆ. 

        ಶಿಂಷಾ ನದಿಯ ಉದ್ದ ಸುಮಾರು 130 ಕಿ. ಮೀ ಮಂಡ್ಯ ಜಿಲ್ಲೆಯ ಮಳವಳ್ಳಿ ಬಳಿಯ ಶಿಂಷಾ ಪುರದಲ್ಲಿ 1940 ರಲ್ಲಿ ಜಲವಿದ್ಯುತ್ ಶಕ್ತಿ ಉತ್ಪಾದನೆಯನ್ನು ಆರಂಭಿಸಲಾಯಿತು. ಇದು ರಾಜ್ಯದ 2 ನೇ ಜಲವಿದ್ಯುತ್ ಶಕ್ತಿ ಉತ್ಪಾದನಾ ಘಟಕವಾಗಿದೆ. ಈ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹತ್ತಿರವಿದ್ದರೂ ಸಹ ಕಾವೇರಿ ನದಿಯಿಂದ ಕೊಳವೆ ಮಾರ್ಗವಾಗಿ ನೀರನ್ನು ಪಡೆದು ವಿಧ್ಯುತ ಶಕ್ತಿ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. 

ಶಿಂಷಾ ನದಿಯ ಉಪನದಿಗಳು :-

      ನಾಗ ಮತ್ತು ನಾಗಿನಿ ಎಂಬ ತೊರೆಗಳು. ತುಮಕೂರಿನ ಜಿಲ್ಲೆಯ ಮಾರ್ಕೋನಹಳ್ಳಿ ಅಣೆಕಟ್ಟೆನ್ನು ಕಟ್ಟಲಾಗಿದೆ. ಈ ನದಿಗೆ ಕಾವೇರಿ ಸೇರುವ ಮುಂಚೆ ಸಣ್ಣ ಪ್ರಮಾಣದ ವಿಧ್ಯುತ್ ಉತ್ಪಾದನಾ ಕೇಂದ್ರ ಒಂದನ್ನು ನಿರ್ಮಿಸಲಾಗಿದೆ.



5. ಅರ್ಕಾವತಿ ನದಿ :-

                    ಇದು ಕಾವೇರಿ ನದಿಯ ಉಪನಾಡಿಯಾಗಿದೆ. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ನದಿಯಾಗಿದೆ. ಈ ನದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚುಂಚು ಎಂಬ ಜಲಪಾತ ಧೂಮುಕುತ್ತದೆ. 

→ ಕೋಲಾರ, ರಾಮನಗರ, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು 45 ಕಿ. ಮೀ ದೊರದಲ್ಲಿರು ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.

→ ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬಿ. ಡಬ್ಲ್ಯು.ಎಸ್ .ಬಿಯವರು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಾರೆ. 

→ ಈ ನದಿಯು ಉಪ ನದಿ ವೃಷಭಾವತಿ 

             ವೃಷಭಾವತಿ 

ಇದು ಅರ್ಕವಟಿ ನದಿಯ ಉಪನಾಡಿಯಾಗಿದೆ. ಇದು ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ಹರಿಯುತ್ತದೆ. ಈ ನದಿ ಕೈಗಾರಿಕೆ. ಕೃಷಿ ಮತ್ತು ದಿನಬಳಕೆ ಉದ್ದೇಶದ ಬಳಕೆಯಿಂದಾಗಿ ಮಾಲಿನ್ಯವಾಗುತ್ತಿದೆ. ಬೆಂಗಳೂರು ನಗರವು  ವೃಷಭಾವತಿ ನದಿಯ ದಡದ ಮೇಲೆ ಕಂದು ಬರುತ್ತದೆ. 


6. ಲಕ್ಷ್ಮಣ ತೀರ್ಥ :-

             ಕಾವೇರಿ ನದಿಯು ಬಲ ದಂಡೆಯ ಉಪನದಿಯಾಗಿದ್ದು, ಕೊಡಗು ಜಿಲ್ಲೆಯ ಬ್ರಹ್ಮಗಿರಿ ಪರ್ವತದ ಬಳಿಯ ದೇವಸಿ ಬೆಟ್ಟದಲ್ಲಿ ಉಗಮವಾಗುತ್ತದೆ. ಈ ನದಿಯು ಕೊಡಗು ಜಿಲ್ಲೆಯಲ್ಲಿ ಇರ್ಪು ಎಂಬ ಪ್ರಸಿದ್ದ ಜಲಪಾತವನ್ನು ನಿರ್ಮಿಸುತ್ತದೆ. ರಾಮ ತೀರ್ಥ ಮತ್ತು ಕೆರೆಹೊಳೆ ಈ ನದಿಯ ಪ್ರಮುಖ ಉಪನದಿಗಳಾಗಿದ್ದು, ಇದು ಹುಣಸೂರು, ಕೃಷ್ಣರಾಜಸಾಗರ ತಾಲ್ಲೂಕುಗಳ ಮೂಲಕ ಹರಿದು ಕಾವೇರಿ ನದಿ ಸೇರುತ್ತದೆ. 



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad