ಸಂವಿಧಾನದ ರಚನಾ ಸಭೆಯ ವಿವರಗಳು
ಸಂವಿದನಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಸಂವಿಧಾನ ರಚನಾ ಸಭೆಯಲ್ಲಿ ಅನೇಕ ಸಮಿತಿಗಳು ರಚನೆಯಾದವು.
ಅವುಗಳಲ್ಲಿ ಪ್ರಮುಖವಾದ ಸಮಿತಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಸಮಿತಿಯ ಹೆಸರು | ಅಧ್ಯಕ್ಷರು |
---|---|
ಕರಡು ಸಮಿತಿ | ಡಾ∣∣ ಬಿ. ಆರ್. ಅಂಬೇಡ್ಕರ್ |
ರೂಲ್ಸ್ ಆಫ್ ಪ್ರೊಸೀಜರ್ ಕಮೀಟಿ | ಡಾ∣∣ ಬಾಬು ರಾಜೇಂದ್ರ ಪ್ರಸಾದ್ |
ಸ್ಟೀರಿಂಗ್ ಸಮಿತಿ | ಡಾ∣∣ ಬಾಬು ರಾಜೇಂದ್ರ ಪ್ರಸಾದ್ |
ಸದನ ಸಮಿತಿ | ಬಿ. ಪಟ್ಟಾಭಿ ಸೀತಾರಾಮಯ್ಯ |
ಹಣಕಾಸು ಮತ್ತು ಸಿಬ್ಬಂದಿ ಸಮಿತಿ | ಡಾ∣∣ ಬಾಬು ರಾಜೇಂದ್ರ ಪ್ರಸಾದ್ |
ಕ್ರೆಡೆನ್ಸಿಯಲ್ ಕಮಿಟಿ | ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ |
ಆರ್ಡರ್ ಆಫ್ ಬಿಸಿನೆಸ್ ಕಮಿಟಿ | ಕೆ. ಎಂ. ಮುನ್ಷಿ |
ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದ ತಾತ್ಕಾಲಿಕ ಸಮಿತಿ | ಡಾ∣∣ ಬಾಬು ರಾಜೇಂದ್ರ ಪ್ರಸಾದ್ |
ಸಂವಿಧಾನದ ರಚನಾ ಸಭೆಯ ಕಾರ್ಯಗಳ ಮೇಲಿನ ಸಮಿತಿ | ಜಿ. ವಿ. ಮಾವಳಂಕರ್ |
ರಾಜ್ಯಗಳ ಸಮಿತಿ | ಪಂಡಿತ್ ಜವಾಹರಲಾಲ್ ನೆಹರು |
ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರು ಆದಿವಾಸಿ ಮತ್ತು ಹೊರಟುಪಡಿಸಿದ ಪ್ರದೇಶಗಳ ಮೇಲಿನ ಸಲಹಾ ಸಮಿತಿ | ಸರ್ದಾರ್ ವಲ್ಲಭ ಭಾಯ್ ಪಟೇಲ್ |
ಕೇಂದ್ರ ಅಧಿಕಾರಗಳ ಸಮಿತಿ | ಪಂಡಿತ್ ಜವಾಹರಲಾಲ್ ನೆಹರು |
ರಾಜ್ಯಗಳೊಂದಿಗೆ ಸಂಧಾನ ನಡೆಸುವ ಸಮಿತಿ | ಡಾ∣∣ ಬಾಬು ರಾಜೇಂದ್ರ ಪ್ರಸಾದ್ |
ಕೇಂದ್ರ ಸಂವಿಧಾನ ಸಮಿತಿ | ಪಂಡಿತ್ ಜವಾಹರಲಾಲ್ ನೆಹರು |
ಅಲ್ಪ ಸಂಖ್ಯಾತರ ಉಪಸಮಿತಿ | ಹೆಚ್.ಸಿ. ಮುಖರ್ಜಿ |
ಮೂಲಭೂತ ಹಕ್ಕುಗಳ ಉಪಸಮಿತಿ | ಜೆ.ಬಿ. ಕೃಪಲಾನಿ |
ಸಂವಿಧಾನದ ಕರಡು ಪರಿಶೀಲಿಸುವ ವಿಶೇಷ ಸಮಿತಿ | ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ |
ಸಂವಿಧಾನ ರಚನಾ ಸಮಿತಿಯ ಪ್ರಮುಖ ಸದಸ್ಯರು
ಪಂಡಿತ ಜವಾಹರಲಾಲ್ ನೆಹರು, ವಲ್ಲಭಭಾಯ್ ಪಟೇಲ್, ಬಾಬು ರಾಜೇಂದ್ರ ಪ್ರಸಾದ್, ಮೌಲನಾ ಅಬ್ದುಲ್ ಕಲಾಂ ಆಜಾದ್, ಹೆಚ್.ವಿ ಕಾಮತ್, ಕೆ ಸಂತಾನಂ, ಹೆಚ್.ಎನ್ ಕುಂಜ್ರು, ಕೆ.ಟಿ ಶಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ ಮುನ್ಷಿ, ಟಿ.ಟಿ ಕೃಷ್ಣಮಾಚಾರಿ, ಎಸ್ ರಾಮಕೃಷ್ಣನ್, ವಿ ರಾಮಸ್ವಾಮಿ ಮೊದಲಿಯಾರ್, ಕೆಂಗಲ್ ಹನುಮಂತಯ್ಯ, ಎಸ್ ನಿಜಲಿಂಗಪ್ಪ, ಎನ್ ಮಾಧವರಾವ್ ಮುಂತಾದವರು ಸಂವಿಧಾನದ ರಚನಾ ಸಭೆಯ ಪ್ರಮುಖ ಸದಸ್ಯರು. 15 ಮಂದಿ ಮಹಿಳಾ ಸದಸ್ಯರಲ್ಲಿ ಸುಜೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಸರೋಜಿನಿ ನಾಯ್ಡು, ಹಂಸ ಮೆನನ್ ಪ್ರಮುಖರಾಗಿದ್ದಾರೆ.
ಸಂವಿಧಾನ ರಚನಾ ಸಭೆಯು ಒಟ್ಟು 12 ಬಾರಿ ಅಧಿವೇಶನ ಸೇರಿತು. ಸಂವಿಧಾನ ರಚನಾ ಸಮಿತಿಯು ನಮ್ಮ ದೇಶದ ಸಂವಿಧಾನ ರಚಿಸಲು ಒಟ್ಟು 2 ವರ್ಷಗಳು, 11 ತಿಂಗಳು ಮತ್ತು 18 ದಿನಗಳ ಕಾಲಾವಧಿಯನ್ನು ತೆಗದುಕೊಂಡಿತು. ಕರಡು ಸಂವಿಧಾನವನ್ನು ಪರಿಶೀಲಿಸಲು 114 ದಿನಗಳನ್ನು ತೆಗದುಕೊಳ್ಳಲಾಯಿತು.
ಸಂವಿಧಾನದ ಮಂಡನೆ
04-11-1948 ರಂದು ಕರಡು ಸಮಿತಿಯ ಸಂವಿಧಾನದ ಕರಡು ಪ್ರತಿಯನ್ನು ಸಂವಿಧಾನ ರಚನಾ ಸಮಿತಿಯ ಮುಂದೆ ಇಟ್ಟಿತು. ಸುದೀರ್ಘ ಚರ್ಚೆಯ ನಂತರ ಸಂವಿಧಾನ ರಚನಾ ಸಭೆಯು 26-11-2949 ರಂದು ಸಂವಿಧಾನವನ್ನು ಅಂಗೀಕರಿಸಿತು. ಆದರೆ ನಮ್ಮ ಸಂವಿಧಾನವು 26-01-1950 ರಂದು ಜಾರಿಗೆ ಬಂದಿತು. ಈ ದಿನವನ್ನು ನಾವು ಇಂದಿಗೊ ಗಣರಾಜ್ಯ ದಿನವನ್ನಾಗಿ ಆಚಾರಿಸುತ್ತಿದ್ದೇವೆ.
ಧನ್ಯವಾದಗಳು