ಉಚ್ಚ ನ್ಯಾಯಾಲಯದ ಪರಿಚಯ
ಉಚ್ಚ ನ್ಯಾಯಾಲಯವು ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನವನ್ನು ಅಲಂಕಾರಿಸಿದೆ. ಉಚ್ಚ ನ್ಯಾಯಾಲಯವು ಏಕಿಕೃತ ನ್ಯಾಯಾಂಗ ವ್ಯವಸ್ಥೆಯ ಒಂದು ಭಾಗ್ಯವಾಗಿದ್ದರೂ, ಸ್ವಾತಂತ್ರವಾದ ಕಾರ್ಯಕ್ಷೇತ್ರವನ್ನು ಹೊಂದಿದೆ. ಸಂವಿಧಾನದ 214 ನೇ ವಿಧಿಯು ಪ್ರತಿ ರಾಜ್ಯದಲ್ಲೂ ಒಂದು ಉಚ್ಚ ನ್ಯಾಯಾಲಯವಿರಬೇಕು ಎಂದು ಸ್ಪಷ್ಟಪಡಿಸುತ್ತದೆ. ಸಂಸತ್ತು ಎರಡು ಅಥವಾ ಎರಡಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ ಒಂದೇ ಉಚ್ಚ ನ್ಯಾಯಾಲಯವನ್ನು ರಚಿಸಬಹುದು. example ಪಂಜಾಬ್, ಹರಿಯಾಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡಿಗಢ ಇವುಗಳು ಒಂದೇ ಉಚ್ಚ ನ್ಯಾಯಾಲಯವನ್ನು ಹೊಂದಿದೆ. ಭಾರತದಲ್ಲಿ ಈಗ ಒಟ್ಟು 24 ಉಚ್ಚ ನ್ಯಾಯಾಲಯ ಹೊಂದಿದೆ.
⌂ ರಚನೆ:
ಸಂವಿಧಾನವು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು ನಿಗದೀಪಡಿಸಿಲ್ಲವಾದ್ದರಿಂದ ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳ ಸಂಖ್ಯೆ ಹೆಚ್ಚಿದ್ದರೆ ರಾಷ್ಟ್ರಾಧ್ಯಕ್ಷರು ಹೆಚ್ಚುವರಿ ನ್ಯಾಯಾಧೀಶರನ್ನು ನೇಮಿಸಬಹುದು. ಖಾಯಂ ನ್ಯಾಯಾಧೀಶರು ಗೈರು ಹಾಜರಿಯಲ್ಲಿ ರಾಷ್ಟ್ರಾಧ್ಯಕ್ಷರು ಹಂಗಾಮಿ ನ್ಯಾಯಾಧೀಶರನ್ನು ನೇಮಿಸಬಹುದು.
⌂ ನೇಮಕಾತಿ :
ರಾಷ್ಟ್ರಾಧ್ಯಕ್ಷರು ಕೇಂದ್ರ ಮಂತ್ರಿ ಮಂಡಲದ ಸಲಹೆಯ ಮೇರೆಗೆ ಸಂಬಂಧಪಟ್ಟ ರಾಜ್ಯಗಳ ರಾಜ್ಯಪಾಲಯರೊಂದಿಗೆ ಸಮಾಲೋಚನೆ ನಡಸಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತಾರೆ. ಇತರ ನ್ಯಾಯಾಧೀಶರನ್ನು ನೇಮಕಾತಿಯಲ್ಲಿ ರಾಷ್ಟ್ರಾಧ್ಯಕ್ಷರು ಇದರೊಂದಿಗೆ ಸಂಬಂಧಪಟ್ಟ ರಾಜ್ಯಗಳ ಮುಖ್ಯಾ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸುತ್ತಾರೆ.
⁂ ಅರ್ಹತೆ :
ಭಾರತದ ಸಂವಿಧಾನವು ಹುಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗೆ ಈ ಕೆಳಗಿನ ಅರ್ಹತೆಗಳನ್ನು ನಿಗದೀಪಡಿಸಿದೆ.
▶ ಭಾರತದ ಪ್ರಜೆಯಾಗಿರಬೇಕು
▶ ಭಾರತದ ಯಾವುದಾದರೂ ಆಧೀನ ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು or
▶ ಒಂದು or ಒಂದಕ್ಕಿಂತ ಹೆಚ್ಚು ಉಚ್ಚ ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ವಕೀಲನಾಗಿ ಸೇವೆ ಸಲ್ಲಿಸಿರಬೇಕು.
⁂ ಅಧಿಕಾರಾವಧಿ :
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನಿವೃತಿಯಾಗುವವರೆಗೆ ಅಧಿಕಾರದಲ್ಲಿ ಮುಂಡುವರೆಯುತ್ತಾರೆ. ಅವರ ನಿವೃತಿಯ ವಯಸ್ಸು 62 ವರ್ಷಗಳು. ಇವರು ರಾಷ್ಟ್ರಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಸಬಹುದು.
⁂ ಪದೆಚ್ಯುತಿ:
ಅಸಮರ್ಥತೆ ಮತ್ತು ದುರ್ನಡತೆ ಆಪಾದನೆಯ ಆಧಾರದ ಮೇಲೆ ರಾಷ್ಟ್ರಾಧ್ಯಕ್ಷರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ನಿವೃತ್ತಿಗೆ ಮುನ್ನವೇ ಅಧಿಕಾರದಿಂದ ವಜಾ ಮಾಡಬಹುದು. ಈ ಸಂಬಂಧ ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿದ್ದು, ಮತ ನೀಡುವ ಸದಸ್ಯರಲ್ಲಿ 2/3 ರಷ್ಟು ಸದಸ್ಯರು ಪದಚ್ಯುತಿಗೆ ಸಂಬಂಧಿಸಿದ ನಿರ್ಣಯವನ್ನು ಅನುಮೋದಿಸಬೇಕು. ಈ ಪ್ರಕ್ರಿಯೆಯನ್ನು " ಮಹಾಭಿಯೋಗ" or " ದೋಷಾರೋಪಣೆ " ಎಂದು ಕರೆಯುತ್ತಾರೆ.
⁂ ವೇತನ :
ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ, ಭತ್ಯೆ ಹಾಗೂ ಇತರೆ ಸವಲತ್ತುಗಳನ್ನು ಕಾಲ ಕಾಲಕ್ಕೆ ಸಂಸತ್ತು ನಿರ್ಧರಿಸುತ್ತದೆ. ಮುಖ್ಯ ನ್ಯಾಯಮೂರ್ತಿಗಳು 90,000/-Rs ಮಾಸಿಕ ವೇತನವನ್ನು ಹಾಗೂ ಇತರೆ ನ್ಯಾಯಾಧೀಶರು 80,000/- Rs ವೇತನವನ್ನು ಪಡೆಯುತ್ತಾರೆ. ಇವರಿಗೆ ಬಾಡಿಗೆ ರಹಿತ ನಿವಾಸ, ಉಚಿತ ಸಾರಿಗೆ, ವಿದ್ಯುತ್, ನೀರು, ದೂರವಾಣಿ ಇನ್ನೂ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ನ್ಯಾಯಾಧೀಶರ ಅಧಿಕಾರಾವಧಿಯಲ್ಲಿ ಅವರಿಗೆ ಅನನುಕೂಲವಾಗುವಂತೆ ವೇತನ, ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ವ್ಯತ್ಯಾಸಗೊಳಿಸುವಂತಿಲ್ಲ. ಆದರೆ ಹಣಕಾಸು ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಸಂದರ್ಭದಲ್ಲಿ ಮಾತ್ರ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ವೇತನ, ಭತ್ಯೆ ಸೌಲಭ್ಯಗಳನ್ನು ಕಡಿಮೆ ಮಾಡಬಹುದು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ, ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು "ರಾಜ್ಯದ ಸಂಚಿತ ನಿಧಿ"ಯಿಂದ ನೀಡಲಾಗುತ್ತದೆ.
ಧನ್ಯವಾದಗಳು