ರಸಾಯನ ಶಾಸ್ತ್ರದ ಶಾಖೆಗಳು ( Branches of Chemistry )
ರಸಾಯನ ಶಾಸ್ತ್ರವನ್ನು ಆಳವಾಗಿ ಅಧ್ಯಾಯನ ಮಾಡುವ ಸಲುವಾಗಿ ಅನೇಕ ಶಾಖೆಗಳಾಗಿ ವಿಂಗಡಿಸಲಾಗಿದೆ.
Branches of Chemistry in kannada
1. ಭೌತ ರಸಾಯನಶಾಸ್ತ್ರ ( Physical Chemistry )
2. ಸಾವಯವ ರಸಾಯನಶಾಸ್ತ್ರ ( Organic CHemistry )
3. ಸಾವಯವವಲ್ಲದ ರಸಾಯನಶಾಸ್ತ್ರ ( Innorganic Chemistry )
4. ಜೀವ ರಸಾಯನಶಾಸ್ತ್ರ ( Bio Chemistry )
5. ವಿಶೇಷಕ ರಸಾಯನಶಾಸ್ತ್ರ ( Analytical Chemistry )
1. ಭೌತ ರಸಾಯನಶಾಸ್ತ್ರ ( Physical Chemistry )
ಭೌತ ರಸಾಯನಶಾಸ್ತ್ರವು ಭೌತಶಾಸ್ತ್ರದ ಪರಿಕಲ್ಪನೆಗಳಾದ ಚಾಲನೆ, ಶಕ್ತಿ, ಬಲ, ಕಾಲ, ಥರ್ಮೋಡೈನಮಿಕ್ಸ್ ಗಳ ತತ್ವ, ನಿಯಮ, ಆಧಾರದ ಮೇಲೆ ರಸಾಯನ ವ್ಯವಸ್ಥೆಯ ಅಧ್ಯಯನ ಮಾಡುವ ಶಾಖೆಯಾಗಿದೆ.
2. ಸಾವಯವ ರಸಾಯನಶಾಸ್ತ್ರ ( Organic Chemistry )
ಇದು ಇಂಗಾಲದ ಸಂಯುಕ್ತಗಳನ್ನು ಅಧ್ಯಾಯನ ಮಾಡುವ ಶಾಖೆಯಾಗಿದೆ. ಇದನ್ನು ಇಂಗಾಲೀಯ ರಸಾಯನ ಶಾಸ್ತ್ರ ಎಂದು ಕರೆಯುತ್ತಾರೆ. ಇಂಗಾಲೀಯ ರಸಾಯನ ಶಾಸ್ತ್ರವು ಹೈಡ್ರೋಕಾರ್ಬನ್ ಗಳ ಮತ್ತು ಅವುಗಳ ರೂಪಾಂತರಗಳ ರಚನೆ, ಲಕ್ಷಣಗಳು, ಸಂಯೋಜನೆ, ಕ್ರಿಯೆ ಹಾಗೂ ಸಿದ್ದತೆ ಮುಂತಾದವುಗಳ ವೈಜ್ಞಾನಿಕ ಅಧ್ಯಾಯನವನ್ನು ಒಳಗೊಂಡಿದೆ. ಇದು ಮೂಲತಃ ಇಂಗಾಲ - ಜಲಜನಕದ ಬಂಧ ( Carbon - Hydrogen Bond )ದ ಬಗ್ಗೆ ಅಧ್ಯಯನ ಮಾಡುತ್ತದೆ.
3. ಸಾವಯವವಲ್ಲದ ರಸಾಯನಶಾಸ್ತ್ರ ( Innorganic Chemistry )
ಸಾವಯುವವಲ್ಲದ ವಸ್ತುಗಳ ಬಗ್ಗೆ ಅಧ್ಯಯನ ಮಾಡುವ ರಸಾಯನ ಶಾಸ್ತ್ರದ ಶಾಖೆಯನ್ನು " ಸಾವಯುವವಲ್ಲದ ರಸಾಯನ ಶಾಸ್ತ್ರ " ಎನ್ನುವರು. ಈ ಶಾಖೆಯು ಇಂಗಾಲ ಮತ್ತು ಇಂಗಾಲ ಸಂಯುಕ್ತವಲ್ಲದ ವಸ್ತುಗಳ ಬಗ್ಗೆ ಹಾಗೂ ಇಂಗಾಲ - ಜಲಜನಕದ ಬಂಧವಿಲ್ಲದ ಸಂಯುಕ್ತಗಳ ಗುಣಲಕ್ಷಣ, ರಚನೆಗಳ ಬಗ್ಗೆ ಅಧ್ಯಯನ ಮಾಡುತ್ತದೆ.
4. ಜೀವ ರಸಾಯನಶಾಸ್ತ್ರ ( Bio Chemistry )
ಸಜೀವ ವಸ್ತುಗಳಲ್ಲಾಗುವ ರಾಸಾಯನಿಕ ಕ್ರಿಯೆಗಳ ಅಧ್ಯಯನ, ಈ ಶಾಖೆಯು ಸಸ್ಯಗಳು ಹಾಗೂ ಪ್ರಾಣಿಗಳಿಂದ ದೊರಕುವ ಕೊಬ್ಬು, ಪೋಷಕಾಂಶಗಳು, ಹಾರ್ಮೋನ್ಸ್ ಗಳು ಮತ್ತು ಕಿಣ್ವಗಳನ್ನು ಗುರ್ತಿಸುವುದು ಹಾಗೂ ಇವುಗಳ ಉಪವಾಚಯದ ಬಗ್ಗೆ ಅಧ್ಯಯನ ಮಾಡುವುದಾಗಿದೆ.
5. ವಿಶೇಷಕ ರಸಾಯನಶಾಸ್ತ್ರ ( Analytical Chemistry )
ಇದು ವಸ್ತುಗಳನ್ನು ವರ್ಗೀಕರಿಸುವ, ಗುರ್ತಿಸುವ, ಗುಣಮಟ್ಟವನ್ನು ಅಳೆಯಲು ಬಳಸುವ ವಿಧಾನ ಮತ್ತು ಉಪಕರಣಗಳನ್ನು ಬಳಸುವ ಬಗ್ಗೆ ಅಧ್ಯಾಯನವಾಗಿದೆ. ಈ ವಿಭಾಗವು ಯಾವುದೇ ವಸ್ತುವಿನ ರಾಸಾಯನಿಕ ಗುಣಲಕ್ಷಣಗಳ ಅಧ್ಯಯನ ಹಾಗೂ ಇದಕ್ಕೆ ಉಪಯೋಗಿಸುವ ವಿಧಾನಗಳ ತಂತ್ರಜ್ಞಾನಕ್ಕೆ " ವಿಶೇಷಕ ರಸಾಯನಶಾಸ್ತ್ರ " ಎನ್ನುವರು.
ಉದಾ :
A. ವಿಜ್ಞಾನ ಹಾಗೂ ಕೈಗಾರಿಕಾ ಬೆಳವಣಿಗೆಗೆ ಇದು ಅತ್ಯಂತ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.
B. ರಾಸಾಯನಿಕ ವಿಶೇಷಣೆ, ಮಾಲಿನ್ಯಗಳ ತೀವ್ರತೆ ಅಳತೆ, ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ಪತ್ತೆ, ಆಹಾರೋದ್ಯಮ, ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.


ಧನ್ಯವಾದಗಳು