ದಹನದ ವಿಧಗಳು ( Types of Combustion )
1. ನಿಧಾನ ದಹನ ( Slow Combustion )
ಕಬ್ಬಿಣದ ಮೊಳೆಗಳು ತುಕ್ಕು ಹಿಡಿಯುವುದು, ಮಾನವನ ಉಸಿರಾಟದ ವೇಗ , ಈ ಕ್ರಿಯೆಗಳು ನಿಧಾನ ಕ್ರಿಯೆಗಳು. ಈ ರೀತಿಯ ದಹನವನ್ನು ವಿಧಾನ ದಹನ ಎನ್ನುವರು.
2. ತೀವ್ರ ದಹನ ( Rapid Combustion )
ಇದೊಂದು ವಿಧದ ದಹನ. ಇದರಲ್ಲಿ ಹೆಚ್ಚು ಪ್ರಮಾಣದ ಉಷ್ಣ ಮತ್ತು ಬೆಳಕಿನ ಶಕ್ತಿಯು ಒಮ್ಮೆಲೇ ಬಿಡುಗಡೆಯಾಗುತ್ತದೆ ಅಥವಾ ತಕ್ಷಣ ಬಿಡುಗಡೆಯಾಗುತ್ತದೆ.
ಉದಾ|| ಮೇಣದ ಬತ್ತಿ ಉರಿಯುವುದು, ಗ್ಯಾಸ್ ಸ್ಟೌವ್ ಉರಿಯುವುದು, ಸೀಮೆಎಣ್ಣೆ ಅಥವಾ ಪೆಟ್ರೋಲ್ ನ ದಹನ.
3. ತಂತಾನೆ ದಹನ ( Spontaneous Combustion )
ಹೊರಗಿನ ಉಷ್ಣದ ಅವಶ್ಯಕತೆ ಇಲ್ಲದಿರುವ ದಹನ ಇದಾಗಿದೆ. ಸುತ್ತಮುತ್ತಲಿನ ಗಾಳಿಯ ಉಷ್ಣವೇ ಈ ದಹನಕ್ಕೆ ಸಾಕಾಗುತ್ತದೆ. ಬಿಳಿ ರಂಜಕವು 30℃ ಉಷ್ಣತೆಯಲ್ಲಿ ಉರಿಯುವುದು. ಇದು ನೀರಿನಲ್ಲಿ ಕರಗುವುದಿಲ್ಲ. ಆದರಿಂದ ಇದನ್ನು ನೀರಿನಲ್ಲಿ ಶೇಖರಿಸಿ ಇಟ್ಟಿರುತ್ತಾರೆ. ನೀರು ಆಕ್ಸಿಜನ್ ನ ಪೂರೈಕೆಯನ್ನು ತಡೆಯುತ್ತದೆ.
4. ಸ್ಪೋಟನ ದಹನ ( Explosion )
ಬಹಳ ಬೇಗ ದಹನ ಹೊಂದಿ ಉಷ್ಣ, ಬೆಳಕು ಮತ್ತು ಶಬ್ದದ ರೂಪದಲ್ಲಿ ಕಡಿಮೆ ಸಮಯದಲ್ಲಿ ಅತ್ಯಾಧಿಕ ಶಕ್ತಿಯನ್ನು ನೀಡುವ ದಹನ ಇದಾಗಿದೆ.
ಉದಾ || ಪಟಾಕಿಗಳನ್ನು ಸಿಡಿಸುವುದು, ಇದರಿಂದಾಗಿ ಸ್ಪೋಟನ ದಹನದಲ್ಲಿ ಅನಿಲವು ತೀವ್ರವಾಗಿ ವಿಕಸನಗೊಳ್ಳುವುದುದರಿಂದ ಶಬ್ದ ಬಿಡುಗಡೆಯಾಗುತ್ತದೆ.
5. ನಿಯಂತ್ರದ ದಹನ ( Controlled Combustion )
ದಹನಾನುಕೂಲ ವಸ್ತುಗಳನ್ನು ನಿಯಂತ್ರಣಗೊಳಿಸಿ. ದಹನದ ವೇಗವನ್ನು ಹತೋಟಿಯಲ್ಲಿಡುವ ಕ್ರಿಯೆಗೆ ನಿಯಂತ್ರಣ ದಹನ ಎನ್ನುವರು.
ಉದಾ|| ಗ್ಯಾಸ್ ಸ್ಟೌವ್, ಸೀಮೆಎಣ್ಣೆ ಸ್ಟೌವ್.


ಧನ್ಯವಾದಗಳು