ಭಾರತ ಸರ್ಕಾರ ಕಾಯ್ದೆ - 1919
ಮೊದಲನೇ ಜಾಗತಿಕ ಯುದ್ದದ ಸಮಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ  ಸ್ವಯಂ ಆಡಳಿತದ ಬೇಡಿಕೆಯನ್ನು ಇಡತೊಡಗಿತ್ತು. ಯುದ್ದದಲ್ಲಿ ಬ್ರಿಟೀಶರಿಗೆ ಸಹಕಾರ ನೀಡಿದರೆ ಯುದ್ದದ ನಂತರ ಭಾರತೀಯರಿಗೆ ಸ್ವಯಂ ಆಡಳಿತದ ಹಕ್ಕನು ನೀಡುವುದಾಗಿ ವಾಗ್ದಾನ ಮಾಡಲಾಯಿತು. 1909 ರ ಕಾಯ್ದೆಯ ಲೋಪದೋಷಗಳನ್ನು ಸರಿಪಡಿಸಬೇಕೆಂಬ ಒತ್ತಡವು ಇತ್ತು. ಭಾರತದಲ್ಲಿ ಕ್ರಮೇಣವಾಗಿ ಜವಾಬ್ದಾರಿ ಸರ್ಕಾರವನ್ನು ಜಾರಿಕೊಳಿಸುವ ಉದ್ದೇಶದಿಂದ ಭಾರತ ಸರ್ಕಾರ ಕಾಯ್ದೆ - 1919 ನ್ನು ರೂಪಿಸಲಾಯಿತು.
                       ಮಾಂಟೆಗೋ  ರವರು ಭಾರತದ ಕಾರ್ಯದರ್ಶಿಯಾಗಿ(Secretary of State for India) ಹಾಗೂ ಲಾರ್ಡ್ ಚೆಲ್ಮ್ಸ್  ಪರ್ಡ್ ಭಾರತದ ವೈಸ್ ರಾಯ್ ಆಗಿಯು ಕಾರ್ಯ ನಿರ್ವಹಿಸುತಿದ್ದರು. ಆದ್ದರಿಂದ   ಈ ಕಾಯಿದೆ ಯನ್ನು ಮಾಂಟೆಗೋ  -  ಚೆಲ್ಮ್ಸ್  ಪರ್ಡ್ ಸೂದರಣೆ ಎಂದು ಕರೆಯುತರೆ. 
|  | 
| govt of india act 1919 | 
ಭಾರತ ಸರ್ಕಾರ ಕಾಯ್ದೆ - 1919ರ ಪ್ರಮುಖ ಲಕ್ಷಣಗಳು:-
1) ಶಾಸಕಾಂಗದ ಅಧಿಕಾರಗಳನ್ನು ಕೇಂದ್ರ ವಿಷಯಗಳು ಮತ್ತು ಪ್ರಾಂತೀಯ ವಿಷಯಗಳು ಎಂಬ ಎರಡು ವಿಧಗಳಾಗಿ ವರ್ಗೀಕರಿಸಲಾಯಿತು. ಕೇಂದ್ರ ಪಟ್ಟಿಯಲ್ಲಿ ಬರುವ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದ್ದರೆ, ಪ್ರಾಂತೀಯ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರ ಪ್ರಾಂತೀಯ ಸರ್ಕಾರಗಳಿಗೆ ಇದ್ದಿತು. ವಿದೇಶಾಂಗ ವ್ಯವಹಾರಗಳು, ರಕ್ಷಣೆ ಮುಂತಾದ ಮಹತ್ವದ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರವನ್ನು ಕೇಂದ್ರ ಸರಕಾರವೇ ಇಟ್ಟು ಕೊಂಡಿತು. 
2)ಪ್ರಾಂತೀಯ ವಿಷಯಗಳನ್ನು ವರಗಾಹಿಸಲ್ಪಟ್ಟ ವಿಷಯಗಳು ಮತ್ತು ಮೀಸಲು ವಿಷಯಗಳೆಂದು ವರ್ಗೀಕರಿಸಲಾಯಿತು. ಮಂತ್ರಿಗಳ ನೆರವಿನಿಂದ ರಾಜ್ಯಪಾಲರು ವರ್ಗಾಯಿಸಲ್ಪಟ್ಟ ವಿಷಯಗಳನ್ನು ನಿರ್ವಹಿಸಬೇಕಿತ್ತು. ಮೀಸಲು ವಿಷಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ರಾಜ್ಯಪಾಲ ಮತ್ತು ಅವರ ಕಾರ್ಯನಿರ್ವಾಹಕ ಮಂಡಳಿಗೆ ನೀಡಲಾಯಿತು. ಈ ರೀತಿಯ ವ್ಯವಸ್ತೆಯನ್ನು ದ್ವಿ-ಸರ್ಕಾರ ಪದ್ದತಿ ಎಂದು ಕರೆಯಲಾಯಿತು. 
3) ದ್ವಿ-ಸದನ ಶಾಸಕಾಂಗ ಪಡ್ಡತಿಯನ್ನು ಪ್ರಧಮ ಬಾರಿಗೆ ಜಾರಿಗೆ ತರಲಾಯಿತು. ಮೇಲ್ಮನೆಯನ್ನು ಕೌನ್ಸಿಲ್ ಅಪ್ ಸ್ಟೇಟ್ಸ್ ಎಂತಲೂ ಕೆಲಮನೆಯನ್ನು ಲೆಜಿಸ್ಲೇಟ್ವ್ ಆಸೆಂಬ್ಲಿ  ಎಂತಲೂ ಕರೆಯಲಾಯಿತು. ಎರಡು ಸದನಗಳ ಬಹುತೇಕ ಸದಸ್ಯರನ್ನು ಪ್ರತ್ಯಕ್ಷ ಚುನಾವಣೆಯ ಮೂಲಕ ಆರಿಸಲಾಯಿತು. 
4)ಗವರ್ನರ್ ಜನರಲ್ ನಿಗೆ ವಿಶೇಷ ಅಧಿಕಾರವನ್ನು ನೀಡಲಾಯಿತು. ಇವನು ತನ್ನ ಇಚ್ಚೆಯ ಮೇರೆಗೆ ಎರಡೊ ಸದನಗಳನ್ನು ವಿಸರ್ಜಿಸುವ ಅಧಿಕಾರ ಹೊಂದಿದನು. ಇಲ್ಲದೆ ಇವನು ತುರ್ತು ಸಂದರ್ಭದಲ್ಲಿ ಸುಗ್ರೀ ವಾಜ್ನ್ಯೆ ಗಳನ್ನು ಹೊರಡಿಸುವ ಅಧಿಕಾರವನ್ನು ಹೊಂದಿದನು. 
5)ವೈಸ್ ರಾಯ್ ರವರ ಕಾರ್ಯ ನಿರ್ವಾಹಕ ಮಂಡಳಿಯ 6 ಮಂದಿ ಸದಸ್ಯರಲ್ಲಿ ಸೇನಪಡೆಯ ಮುಖ್ಯಸ್ಥನು  ಹೊರತುಪಡಿಸಿ 3 ಮಂದಿ ಸದಸ್ಯರು ಭಾರತಿಯರಾಗಿರಬೇಕಿತ್ತು 
6)ಸಿಖ್ಖರು, ಭಾರತೀಯ ಕ್ರಿಶ್ಚಿಯನ್ನರು, ಆಂಗ್ಲೊ-ಇಂಡಿಯನ್ ನರು ಹಾಗೂ ಯೂರೋಪಿಯನ್ನರಿಗೆ ಪ್ರತ್ಯೇಕ ಮತದಾರ ವರ್ಗ ನೀಡಲಾಯಿತು. ಈ ಮೂಲಕ 1919ರ ಕಾಯ್ದೆಯು  ಕೋಮುವಾರು ಪ್ರಾತಿನಿದ್ಯತೆಯ ತತ್ವವನ್ನು ವಿಸ್ತರಿಸಿತು. 
7)ಆಸ್ತಿ, ತೆರಿಗೆ ಪಾವತಿ ಅಧವಾ ಶಿಕ್ಷಣ ಇವುಗಳ ಆಧಾರದ ಮೇಲೆ ಸೀಮಿತ ಸಂಖ್ಯೆ ಜನರಿಗೆ ಮತದಾನದ ಹಕ್ಕನು ನೀಡಲಾಯಿತು
8) ಲಂಡನ್ ನಲ್ಲಿ  'ಭಾರಟಿಯಾರಿಗಾಗಿ ಹೈ ಕಮಿಷನರ್' ಎಂಬ ಹೊಸ ಹುದ್ದೆಯನ್ನು ಸ್ರುಷ್ಟಿಸಲಾಯಿತು. ಈ ಹಿಂದೆ ಭಾರತದ ಕಾರ್ಯದರ್ಶಿ ನಿರ್ವಹಿಸುತಿದ್ದ ಕೆಲವು ಕಾರ್ಯಗಳನ್ನು ಹೈಕಮಿಷನರ್ ಗೆ ವರ್ಗಾಹಿಸಲಾಯಿತು. 
9) ಈ ಕಾಯ್ದೆಯಲ್ಲಿ ಲೋಕಸೇವಾ ಆಯೋಗದ ಸ್ಥಾಪನೆಗೆ ಅವಕಾಶ ನೀಡಲಾಯಿತು. ಆದ್ದರಿಂದ ನಾಗರೀಕ ಸೇವೆಗಳಿಗೆ ಸೂಕ್ತ ವ್ಯೆಕ್ತಿಗಳನ್ನು ನೇಮಕ ಮಾಡಿಕೊಳ್ಳಲು 1926 ರಲ್ಲಿ ಕೇಂದ್ರ ಲೋಕಸೇವಾ ಆಯೋಗವನ್ನು ಸ್ಥಾಪಿಸಲಾಯಿತು. 
10)ಕೇಂದ್ರ ಆಯವ್ಯಯ ಪಟ್ಟಿಯಿಂದ ಪ್ರಾಂತೀಯ ಆಯವ್ಯಯ ಪಟ್ಟಿಯನ್ನು ಪ್ರಧಮ  ಬಾರಿಗೆ ಬೇರ್ಪಡಿಸಲಾಯಿತು. ಪ್ರಾಂತೀಯ ಶಾಸಕಾಂಗಗಳಿಗೆ ತಮ್ಮ ಆಯವ್ಯಯ ಪಟ್ಟಿಯನ್ನು ಜಾರಿಕೋಳಿಸುವ ಅಧಿಕಾರ ನೀಡಲಾಯಿತು.

 
 
 
 
ಧನ್ಯವಾದಗಳು