Type Here to Get Search Results !

August Offer 1940 | Cripps proposal 1942| in kannada

     ಆಗಸ್ಟ್ ಕೊಡುಗೆ 1940 


ಆಗಸ್ಟ್ 8, 1940 ರಂದು ವೈಸ್ ರಾಯ್ ಲಾರ್ಡ್ ಲಿಲಿನ್ ತ್ಸೋ ಭಾರತೀಯರಿಗೆ ಕೆಲವು ಕೊಡುಗೆಗಳನ್ನು ನೀಡುವುದಾಗಿ ಆಶ್ವಾಸನೆ ನೀಡಿದರು. ಇದನ್ನು ಆಗಸ್ಟ್ ಕೊಡುಗೆ ಎಂದು ಕರೆಯುತ್ತಾರೆ. ಎರಡನೇ ಮಹಾ ಯುದ್ದದಲ್ಲಿ ಭಾರತೀಯರ ಬೆಂಬಲ ಹಾಗೂ ಸಹಕಾರ ಪಡೆಯುವುದು ಆಗಸ್ಟ್ ಕೊಡುಗೆಯ ಉದ್ದೇಶವಾಗಿತ್ತು.
(Cripps proposal 1942 ಮಾಹಿತಿ ಕೆಳಗೆ ನೀಡಲಾಗಿದೆ)

ಆಗಸ್ಟ್ ಕೊಡುಗೆಯ ಮುಖ್ಯಾಂಶಗಳು :-

1. ಯುದ್ದದ ತರುವಾಯ ಡೊಮಿನಿಯನ್ ಮಾದರಿ ಆಧರದ ಮೇಲೆ ಜವಾಬ್ದಾರಿ ಸರ್ಕಾರ ರಚಿಸುವುದು. 
2. ತಮ್ಮ ಸಂವಿದನವನ್ನು ತಾವೇ ರಚಿಸಿಕೊಳ್ಳುವ ಭಾರತೀಯರ ಹಕ್ಕನ್ನು ಮಾನ್ಯ ಮಾಡುವುದು. 
3. ಎರಡನೇ ಮಹಾ ಯುದ್ದದ ನಂತರ ಸಂವಿದಾನ ರಚನಾ ಸಮಿತಿಯನ್ನು ರಚಿಸುವುದು. 
4. ಅಲ್ಪ ಸಂಖ್ಯಾತರ ಅಭಿಪ್ರಾಯಕೆ ಸಂಪೂರ್ಣ ಮನ್ನಣೆ ನೀಡುವುದು. ಆ ಮೂಲಕ ಅಲ್ಪಸಂಖ್ಯಾತರ ಸ್ಥಾನಮಾನವನ್ನೂ ರಕ್ಷಿಸುವುದು. 
5. ವೈಸ್ ರಾಯ್ ಕಾರ್ಯಕಾರಿ ಮಂಡಳಿಯನ್ನು ವಿಸ್ತರಿಸಿ, ಅದರಲ್ಲಿ ಭಾರತೀಯರಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡುವುದು. 
6. ಭಾರಟಕೆ ಡೊಮಿನಿಯನ್ ಸ್ಥಾನಮಾನ ನೀಡುವುದು. 


        ಕ್ರಿಪ್ಸ್ ಪ್ರಸ್ತಾವನೆ 1942

ಎರಡನೇ ಮಹಾ ಯುದ್ದ ಆರಂಭದಲ್ಲಿ ಬ್ರಿಟಿಷ್ ಸರ್ಕಾರ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಜಪಾನ್ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿ, ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಬೆದರಿಕೆಯೂಡ್ಡಿತ್ತು. ಅತ್ತ ಯೂರೋಪಿನಲ್ಲಿ ಜರ್ಮನಿ ವಿರುದ್ದ ಬ್ರಿಟನ್ ಹೋರಾಡುತ್ತಿತ್ತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬ್ರಿಟನ್, ಭಾರತದೊಂದಿಗೆ ಸ್ನೆಹಪರ ನಿಲಿವು ತಾಳಲು ಇಚ್ಚಿಸಿತು. ವಿನ್ಸ್ಟನ್ ಚರ್ಚಿಲ್ ರವರ ನೇತೃತ್ವದ ಬ್ರಿಟಿಷ್ ಸರ್ಕಾರ, ಭಾರತದ ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಮಾರ್ಚ್ 22, 1942 ರಂದು ಬ್ರಿಟಿಷ್ ಕ್ಯಾಬಿನೆಟ್ ಸದಸ್ಯರಾಗಿದ್ದ ಸರ್ ಸ್ಟ್ಯಾ ಫೋರ್ಡ್ ಕ್ರಿಪ್ಸ್ ರವರ ನೇತೃತ್ವದಲ್ಲಿ ಒಂದು ನಿಯೋಗವನ್ನು ಭಾರತಕ್ಕೆ ಕಳುಹಿಸಿತು. ಈ ನಿಯೋಗವು ಭಾರತೀಯ ಮುಖಂಡರ ಮುಂದೆ ಕೆಲವು ಸಲಹೆಗಳನ್ನು ಪ್ರಸ್ತಾಪಿಸಿತು. ಈ ಸಲಹೆಗಳನ್ನು ಕ್ರಿಪ್ಸ್ ಪ್ರಸ್ತಾವನೆ ಗಳೆಂದು ಕರೆಯುತರೆ.


ಕ್ರಿಪ್ಸ್ ಪ್ರಸ್ತಾವನೆ 

1. ಭಾರತದ ಒಂದು ಡೊಮಿನಿಯನ್ ರಾಜ್ಯ ಸ್ಥಾಪಿಸುವುದು 
2. ಎರಡನೇ ಮಹಾ ಯುದ್ದ ನಿಂತ ತಕ್ಷಣ ಭಾರತಕ್ಕೆ ಒಂದು ಹೊಸ ಸಂವಿಧಾನ ವನ್ನು ರಚಿಸಲು ಚುನಾಯಿತ ಸಭೆಯ ಸ್ಥಾಪನೆ 
3. ಹೊಸ ಸಂವಿಧಾನ ರಚನೆಯ ಹೊಣೆಯನ್ನು ಸಂಪೂರ್ಣವಾಗಿ ಭಾರತೀಯರಿಗೆ ವಹಿಸಿತು. 
4. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲು ಭಾರತ ರಾಜ್ಯಗಳಿಗೆ ಅವಕಾಶ ನೀಡುವುದು. 
5. ಸಂವಿಧಾನ ರಚನಾ ಸಭೆಗೆ ಬ್ರಿಟಿಷ್ ಪ್ರಾಂತ್ಯಗಳ  ಲೆಜೆಸ್ಲೇಟಿವ್  ಅಸೆoಬ್ಲಿಯ ಸದಸ್ಯರು ಅಲ್ಲಿನ ಜನಸಂಖ್ಯಾ ಆಧಾರದ ಮೇಲೆ ಆಯ್ಕೆಯಾಗತಕ್ಕದು .
6. ಸಂವಿಧಾನ ರಚನಾ ಸಭೆಗೆ ದೇಶೀಯ ಸಂಸ್ಥಾನಗಳ ಪ್ರತಿನಿಧಿಗಳನ್ನು ಅಲ್ಲಿನ ಜನಸಂಖ್ಯೆ ಆಧರದ ಮೇಲೆ ಚುನಾಯಿಸಿ ಕಳುಹಿಸುವುದು. 
7. ಹೊಸ ಸಂವಿಧಾನವನ್ನು ಒಪ್ಪಿಕೊಳ್ಳುವುದು ಆಧವಾ ತಿರಸ್ಕರಿಸುವುದು ಬ್ರಿಟಿಷ್ ಭಾರತದ ಯಾವುದೇ ಪ್ರಾಂತ್ಯದ ಹಕ್ಕು. ಹೊಸ ಸಂವಿಧಾನ ಒಪ್ಪಿಗೆ ನೀಡದ ಬ್ರಿಟಿಷ್ ಭಾರತದ ಯಾವುದೇ ಪ್ರಾಂತ್ಯ ಅಂದಿನ ಸಂವಿದನಾತ್ಮಕ ಸ್ಥಿತಿಯಲ್ಲಿಯೇ ಮುಂದುವರೆಯಲು ಬ್ರಿಟಿಷ್ ಸರ್ಕಾರ ಅವಕಾಶ ನೀಡುವುದು. 
8. ಭಾರತದ ರಕ್ಷಣೆಯ ಹೊಣೆಕರಿಕೆ ಮತ್ತು ನಿರ್ದೇಶನಗಳನ್ನು ಹೊಸ ಸಂವಿಧಾನ ರಚನೆಯಾಗುವವರೆಗೆ ಬ್ರಿಟಿಷ್ ಸಾರ್ವಭೌಮ ಸರಕಾರವೇ ನಿಯಂತ್ರಿಸತಕ್ಕದ್ದು. 

                  ಕ್ರಿಪ್ಸ್ ಪ್ರಸ್ತಾವನೆಗಳು ಯುದ್ದ ಮುಗಿದ ನಂತರ ಜಾರಿಗೆ ಬರಲಿದ್ದವು. ಆದ್ದರಿಂದ ಗಾಂದಿ ಜಿ ಈ ಪ್ರಸ್ತಾವನೆಯನ್ನು  ಮುಂದಿನ ದಿನಾಂಕಗಳ ಚೆಕ್ಕು( Post Dated Cheque ) ಎಂದು ಕರೆದರು. ಅಲ್ಲದೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ಗಳೆರಡೂ ಕ್ರಿಪ್ಸ್ ಪ್ರಸ್ತಾವನೆಯನ್ನು ತಿರಸ್ಕರಿಸಿತು 

Cripps proposal
Cripps and Gandhi ji




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad