ರೆಗ್ಯುಲೇಟಿಂಗ್ ಕಾಯ್ದೆ - 1773(Regulating act - 1773)
![]() |
| Regulating act 1773 |
ರೇಗ್ಯುಲೇಟಿಂಗ್ ಕಾಯಿದೆಯನ್ನು ಪಾಸು ಮಾಡುವುದರ ಮೂಲಕ ಬ್ರಿಟಿಷ್ ಸರ್ಕಾರವು ಪ್ರಧಮ ಬಾರಿಗೆ ಭಾರತದಲ್ಲಿ ಈಸ್ಟ್ ಇಂಡಿಯ ಕಂಪನಿಯ ವ್ಯವಹಾರಗಳನ್ನು ನಿಯಂತ್ರಿಸಿತು. ಈ ಕಾಯಿದೆ ಯ ಮೂಲಕ ಬ್ರಿಟಿಷ್ ಸರ್ಕಾರವು ಮೊಟ್ಟ ಮೊದಲ ಬಾರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ವಹಿಸಿತು. ಈ ಎಲ್ಲ ಕಾರಣಗಳಿಂದ ಈ ಕಾಯಿದೆಯು ಅತ್ಯಂತ ಹೆಚ್ಚಿನ ಸಮಿಡನಾತ್ಮಕ ಪ್ರಾಮುಖ್ಯತೆ ಪಡೆದಿದೆ.
ಕಾಯ್ದೆಯ ಲಕ್ಷಣಗಳು:-
1) ಈ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಅನ್ನು ಬಂಗಾಳದ ಗವರ್ನರ್ ಜನರಲ್ ನ್ನಾಗಿ ಬದಲಾಗಿಸಿತು. ಬಂಗಾಳದ ಗವರ್ನರ್ ಜನರಲನಗಿ ಆಡಳಿತದಲ್ಲಿ ನೆರವು ನೀಡಲು 4 ಮಂದಿ ಸದಸ್ಯರಿಂದ ಕೊಡಿದ ಒಂದು ಕಾರ್ಯಕಾರಿ ಮಂಡಳಿಯನ್ನು ರಚಿಸಿತು. ವಾರನ್ ಹೇಸ್ಟಿನ್ಗ್ ನೇ ಅಂತಹ ಮೊದಲನೆಯ ಗವರ್ನರ್ ಜನರಲ್
2) ಈ ಕಾಯ್ದೆಯ ಮೂಲಕ ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳ ಗವರ್ಣರನ್ನು ಬಂಗಾಳದ ಗವರ್ನರ್ ಜನರಲ್ನಿಗೆ ಅಧೀನ ಕೋಳಿಸಲಾಯಿತು. ಇದಕು ಮುನ್ನ ಬಾಂಬೆ, ಮದ್ರಾಸ್ ಮತ್ತು ಬಂಗಾಳ ಪ್ರಾಂತ್ಯಗಳು ಪರಸ್ಪರ ಸ್ವಾತಂತ್ರಯವಾಗಿತ್ತು.
3) ಈ ಕಾಯ್ದೆ ಒಬ್ಬ ಮುಖ್ಯ ನಿಯಾಧೀಶ ಹಾಗೂ ಮೂವರು ಇತರೆ ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ್ನು ಕಲ್ಕತಾದಲ್ಲಿ ಸ್ಥಾಪಿಸಲು ಅವಕಾಶ ಕೊಟ್ಟಿತು.
4) ಈ ಕಾಯ್ದೆಯು ಯಾವುದೇ ಖಾಸಗಿ ವ್ಯವಹಾರದಲ್ಲಿ ತೊಡಗದಂತೆ ಮತ್ತು ಸ್ಥಳೀಯರಿಂದ ಕಾಣಿಕೆ ಅಥವಾ ಲಂಚ ಸ್ವೀಕರಿಸದಂತೆ ಈಸ್ಟ್ ಇಂಡಿಯಾ ಕಂಪನಿಯ ನೌಕರರ ಮೇಲೆ ನಿರಬಂದ ಹೀರಿತು.
5) ಈ ಕಾಯ್ದೆಯು ಕಂಪನಿಯ ಆಡಳಿತ ಅಂಗವಾದ ನಿರ್ದೇಶಕರ ಮಂಡಳಿಗೆ ಭಾರತದಲ್ಲಿನ ಕಂದಾಯ, ಸಿವಿಲ್ ಮತ್ತು ಮಿಲಿಟರಿ ವಿಷಯಗಳಿಗೆ ಸಂಬಂದಿಸಿದಂತೆ ಬ್ರಿಟಿಷ್ ಸರ್ಕಾರಕೆ ವರದಿ ನೀಡಬೇಕೆಂದು ನಿರ್ದೇಶನ ನೀಡಲಯಿತು. ಈ ಮೂಲಕ ಕಂಪನಿಯ ಮೇಲಿನ ಬ್ರಿಟಿಷ್ ಸರ್ಕಾರ ನಿಯಂತ್ರಣವನ್ನು ಬಲಪಡಿಸಿತು.
ಒಟ್ಟಾರೆ ಹೇಳುವುದಾದರೆ ಈ ಕಾಯ್ದೆಯು ಭಾರತದ ವಿದ್ಯಮನದಲ್ಲಿ ತೊಡಗಿಸಿಕೊಳ್ಳಲು ಬ್ರಿಟಿಷ್ ಸರ್ಕಾರಕೆ ಅನುವು ಮಾಡಿಕೊಟ್ಟಿತು.
ಇವುಗಳು ರೇಗ್ಯುಲೇಟಿಂಗ್ ಕಾಯ್ದೆಯ ಪ್ರಮುಖ ಲಕ್ಷಣಗಳು

.jpg)
ಧನ್ಯವಾದಗಳು