ಭಾರತ ಸ್ವಾತಂತ್ರ್ಯ ಕಾಯ್ದೆ - 1947
ಭಾರತ ಸ್ವಾತಂತ್ರ್ಯ ಕಾಯ್ದೆ - 1947ರ ಪ್ರಮುಖ ಲಕ್ಷಣಗಳು:-
1) ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗಾಣಿಸಲಾಯ್ತು ಮತ್ತು 1947 ಆಗಸ್ಟ್ 15ರಿಂದ ಭಾರತ ಬಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರವೆಂದು ಘೋಷಿಸಲಾಯಿತು.
2) ಭಾರತವನ್ನು ವಿಭಜಿಸಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ಡೊಮಿನಿಯನ್ ಗಳನ್ನು ( Independent Dominions) ರಚಿಸಲು ಅವಕಾಶ ನೀಡಲಾಯಿತು. ಈ ಎರಡು ರಾಜ್ಯಗಳಿಗೆ ಬ್ರಿಟಿಷ್ ಕಾಮನ್ ವೆಲ್ತ್ ನಿಂದ ಹೊರನಡೆಯುವ ಹಕ್ಕನು ನೀಡಲಾಯಿತು.
3) ವೈಸ್ ರಾಯ್ ಹುದ್ದೆಯನ್ನು ರದ್ದುಕೊಳಿಸಲಾಯಿತು. ಅಲ್ಲದೆ ಪ್ರತಿ ಡೊಮಿನಿಯನ್ಗೆ ಒಬ್ಬ ಗವರ್ನರ್ ಜನರಲ್ ನನ್ನು ಹೊಂದಲು ಅವಕಾಶ ನೀಡಲಾಯಿತು. ಡೊಮಿನಿಯನ್ ಕ್ಯಾಬಿನೆಟ್ ಸಲಹೆಯ ಮೇರೆಗೆ ಬ್ರಿಟಿಷ್ ಚಕ್ರವರ್ತಿಯು ಗವರ್ನರ್ ಜನರಲ್ ರನ್ನು ನೇಮಕ ಮಾಡಬೇಕು ಎಂದು ಈ ಕಾಯ್ದೆ ಸ್ಪಷ್ಟಪಡಿಸುತ್ತದೆ.
4) ಯಾವುದೇ ಸಂವಿಧಾನವನ್ನು ರಚಿಸಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಅಧಿಕಾರವನ್ನು ಎರಡು ಡೊಮಿನಿಯನ್ಗಳ ಸಂವಿಧಾನ ರಚನಾ ಸಭೆಗಳಿಗೆ ನೀಡಲಾಯಿತು . ಅಲ್ಲದೆ ಭಾರತ ಸ್ವಾತಂತ್ರ್ಯ ಕಾಯ್ದೆ 1947 ನ್ನು ಒಳಕೊಂಡಂತೆ ಬ್ರಿಟಿಷ್ ಸಂಸತ್ ನಿಂದ ರೂಪಿಸಲ್ಪಟ್ಟ ಯಾವುದೇ ಕಾಯ್ದೆಯನ್ನು ರದ್ದು ಪಡಿಸುವ ಅಧಿಕಾರವನ್ನು ಎರಡೂ ಡೊಮಿನಿಯನ್ ಗಳಿಗೆ ನೀಡಲಾಯಿತು.
5) ಹೊಸ ಸಂವಿಧಾನ ಜಾರಿಗೆ ಬರುವ ವರೆಗೆ ತಮ್ಮ ಭೂಪ್ರದೇಶಗಳಿಗೆ ಅಗತ್ಯವಾದ ಶಾಸನಗಳನ್ನು ರಚಿಸುವ ಅಧಿಕಾರವನ್ನು ಎರಡೂ ದೊಮೋನಿಯನ್ ಗಳ ಸಂವಿಧಾನ ರಚನ ಸಮಿತಿಗಳಿಗೆ ನೀಡಲಾಯಿತು.
6) ಭಾರತದ ಕಾರ್ಯದರ್ಶಿ ಹುದ್ದೆಯನ್ನು ರದ್ದುಪಡಿಸಲಾಯಿತು ಮತ್ತು ಅವರ ಅಧಿಕಾರಗಳನ್ನು ಕಾಮನ್ ವೆಲ್ತ್ ವಿದ್ಯಮಾನಗಳ ರಾಜ್ಯ ಕಾರ್ಯದರ್ಶಿಯಾವರಿಗೆ ವರ್ಗಾಯಿಸಲಾಯಿತು.
7) 1947 ಆಗಸ್ಟ್ 15 ರಿಂದ ಭಾರತ ದೇಶೀಯ ಸಂಸ್ಥೆಗಳ ಮೇಲಿನ ಬ್ರಿಟಿಷ್ ಸಾರ್ವಭೌಮತ್ವಕ್ಕೆ ಮಂಗಳ ಹಾಡಲಾಯಿತು.
8) ಭಾರತದ ದೇಶೀಯ ಸಂಸ್ಥೆಗಳಿಗೆ ಭಾರತದ ಡೊಮಿನಿಯನ್ ಅಧವಾ ಪಾಕಿಸ್ತಾನ ಡೊಮಿನಿಯನ್ ಅನ್ನು ಸೇರುವ ಅಧವಾ ಎರಡುಕ್ಕು ಸೇರದೆ ಸ್ವತಂತ್ರವಾಗಿ ಉಳಿಯುವ ಸ್ವಾತಂತ್ರವನ್ನು ನೀಡಲಾಯಿತು.
9) ಹೊಸ ಸಂವಿಧಾನ ರಚನೆಯಾಗುವ ವರೆಗೂ ಎರಡು ಡೊಮಿನಿಯನ್ ಮತ್ತು ಪ್ರಾಂತ್ಯಗಳ ಆಡಳಿತವನ್ನು ಭಾರತ ಸರ್ಕಾರ ಕಾಯ್ದೆ 1935ರ ಅನ್ವಯ ನಡೆಸಲು ಅವಕಾಶ ನೀಡಲಾಯಿತು. ಕಾಯ್ದೆಯನ್ನು ಮಾರ್ಪಾಡು ಮಾಡುವ ಅಧಿಕಾರವನ್ನು ಡೊಮಿನಿಯನ್ ಗಳಿಗೆ ನೀಡಲಾಯಿತು.
10) ಮಸೂದೆಗಳ ಮೇಲೆ ವೀಟೊ ಚಲಾಯಿಸುವ ಅಧಿಕಾರವನ್ನು ಅಧವಾ ಕೆಲವು ಮಸೂದೆಗಳನ್ನು ತನ್ನ ಅನುಮೋಡನೆಗಾಗಿ ಕಾಯ್ದಿರಿಸುವಂತೆ ಆದೇಶಿಸುವ ಅಧಿಕಾರವನ್ನು ಬ್ರಿಟಿಷ್ ಚಕ್ರವರ್ತಿಯಿಂದ ಹಿಂದಕ್ಕೆ ಪಡೆದುಕೊಳ್ಳಲಾಯಿತು. ಅ ಅಧಿಕಾರವನ್ನು ಗವರ್ನರ್ ಜನರಲ್ ನಿಗೆ ನೀಡಲಾಯಿತು.
11) ಭಾರತದ ಗವರ್ನರ್ ಜನರಲ್ ಮತ್ತು ಪ್ರಾಂತೀಯ ಗವರ್ನರ್ಗಳನ್ನು ರಾಜ್ಯಗಳ ಸಂವಿಧಾನಾತ್ಮಕ (ನಾಮಪತ್ರ) ಮುಖ್ಯಸ್ಥರನ್ನಾಗಿ ನಿಯೋಜಿಸಲಾಯಿತು. ಎಲ್ಲ ವಿಷಯಗಳಲ್ಲಿಯೂ ಸಂಬಂಧಪಟ್ಟ ಮಂತ್ರಿಮಂಡಲದ ಸಲಹೆಯ ಮೇರೆಗೆ ಗವರ್ನರ್ ಜನರಲ್ ಮತ್ತು ಪ್ರಾಂತೀಯ ಗವರ್ನರ್ ಗಳು ಕಾರ್ಯನಿರ್ವಹಿಸುವಂತೆ ಮಾಡಲಾಯಿತು.
12) ಭಾರತೀಯ ಕಾರ್ಯದರ್ಶಿ ಯಿಂದ ನಾಗರಿಕ ಸೇವೆಗಳಿಗೆ ನಡೆಸುತಿದ್ದ ನೇಮಕಾತಿಯನ್ನು ಸ್ಥಗಿತ ಕೋಳಿಸಲಾಯಿತು. ಆಗಸ್ಟ್ 15 1947 ಕ್ಕಿಂದ ಮುಂಚಿತವಾಗಿ ನೇಮಕಗೊಂಡ ಸಾರ್ವಜನಿಕ ಸೇವಾ ವರ್ಗದ ಸದಸ್ಯರಿಗೆ ತಮಗೆ ಸೇರಬೇಕಾದ ಎಲ್ಲ ಸವಲತ್ತುಗಳನ್ನು ಆಗಸ್ಟ್ 15 1947 ರವರೆಗೆ ಅನುಭವಿಸುವ ಅವಕಾಶ ನೀಡಲಾಯಿತು. 1948 ಆಗಸ್ಟ್ 14-15 ರ ಮಧ್ಯ ರಾತ್ರಿಯಲ್ಲಿ ಬ್ರಿಟಿಷ್ ಆಡಳಿತ ಕೊನೆಕೊಂಡು ಭಾರತ ಮತ್ತು ಪಾಕಿಸ್ತಾನಗಳೆಂಬ ಎರಡು ಡೊಮಿನಿಯನ್ ಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಲಾರ್ಡ್ ಮೌಂಟ್ ಬ್ಯಾಟನ್ ಹೊಸ ಡೊಮಿನಿಯನ್ ಆದ ಭಾರತ ಭಾರತಕ್ಕೆ ಪ್ರಧಮ ಗವರ್ನರ್ ಜನರಲ್ ಆದನು. ಅವನು ಸ್ವಾತಂತ್ರ ರಚನಾ ಸಭೆಯು ಭಾರತೀಯ ಡೊಮಿನಿಯನಿನ್ನ ಸಂಸತ್ತಾಗಿ ಕಾರ್ಯ ನಿರ್ವಹಿಸಲಾರಂಬಿಸಿತು.
![]() |
ಭಾರತ ಸ್ವತಂತ್ರ ಪಡೆಯುವ |
ಧನ್ಯವಾದಗಳು