ಭೂಕಂಪಗಳು ( Earth Quake )
ಭೂಕಂಪ ಎಂತರೇನು (What is Earth quake) ?
ಭೂಮಿಯ ಅಂತರಾಳದಲ್ಲಿ ಉಂಟಾದ ಶಿಲಾಪಾಕದ ಚಲನೆಯಿಂದ ಭೂಕಂಪದ ಅಲೆಗಳು ಭೂಮಿಯ ಮೇಲ್ಪದರಕ್ಕೆ ಸಾಗಿದಾಗ ಭೂಕಂಪ ಉಂಟಾಗುತ್ತದೆ.
* ಭೂಕಂಪವನ್ನು ಅಳೆಯುವ ಮಾನ ಸಿಸ್ಮೋಗ್ರಾಫ್ ( ಭೂಕಂಪಲೇಖಿ )
* ಭೋಕಂಪದ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನವೇ ಸಿಸ್ಮೋಲಜಿ. ಇದು ಭೂಕಂಪಗಳು ಸಂಭವಿಸುವ ಸ್ಥಳ, ವೇಳೆ, ವೇಗ, ಮತ್ತು ಭೂಕಂಪನ ಅಲೆಗಳ ದಿಕ್ಕನು ದಾಖಲು ಮಾಡುವ ಸಾಧನವಾಗಿದೆ.
* ಭೂಕಂಪಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡುವವರನ್ನು " ಭೂಕಂಪಶಾಸ್ತ್ರಜ್ನ "( ಸಿಸ್ಮೋಲಜಿಸ್ಟ್ ) ಎಂದು ಕರೆಯುತರೆ.
* ಭೂಕಂಪದ ತೀವ್ರತೆಯನ್ನು ಅಳೆಯಲು ರಿಕ್ಟರ್ ಮಾನವನ್ನು ಬಳಸುತ್ತಾರೆ. ಚಾರ್ಲ್ಸ್ ರಿಕ್ಟರ್ ಎಂಬುವರು 1935ರಲ್ಲಿ ರಿಕ್ಟರ್ ಮಾನವನ್ನು ಅಭಿವೃದ್ದಿ ಪಡಿಸಿದರು. ಇದು 1 ರಿಂದ 10ರವರೆಗಿನ ಮೌಲ್ಯವನ್ನು ಹೊಂದಿದೆ.
* ರಿಕ್ಟರ್ ಅಲ್ಲದೇ ಮರ್ಸೆಲ್ಲಿ ಮಾಪಕದಿಂದಲೂ ಭೂಕಂಪವನ್ನು ಅಳೆಯಲಾಗುತ್ತದೆ.
* ಐಸೋ ಸಿಸ್ಮಲ್ ಲೈನ್ ( Isosesismal ) : ಒಂದೇ ರೀತಿಯ ಭೂಕಂಪನದ ತೀವ್ರತೆ ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆಗೆ ಐಸೋ ಸಿಸ್ಮಲ್ ರೇಖೆ ಎನ್ನುವರು.
* ಭೂಕಂಪವು ಉಂಟಾಗುವ ಕೇಂದ್ರವನ್ನು ಭೂಕಂಪನ ನಾಭಿ / ಭೂಕಂಪನ ಒಳಕೇಂದ್ರ/ ಐಸೋಸೆಂಟರ್ ಎನ್ನುವರು. ಭೂಕಂಬನ ನಾಭಿಯಿಂದ ಅಗಾಧವಾದ ಶಕ್ತಿಯು ಅಲೆಗಳ ರೂಪದಲ್ಲಿ ಸುತ್ತಲೂ ಚಲಿಸಿ ಕಂಪನ ಉಂಟಾಗುತ್ತದೆ.
* ಭೂಕಂಪನ ನಾಭಿಯಿಂದ ಲಂಬಕೋನದಲ್ಲಿರುವ ಭೂಮೇಲ್ಮೈನ ಸ್ಥಾನವನ್ನು ಭೂಕಂಪನ ಬಾಹ್ಯ ಕೇಂದ್ರ or ಎಪಿಸೆಂಟರ್ or ಭೂಕಂಪನ ಹೊರ ಕೇಂದ್ರ ಎನ್ನುವರು.
![]() |
Earth quake |
ಭೂಕಂಪಕ್ಕೆ(Earth quake) ಕಾರಣಗಳು
ಭೂ ನಡುಗುವಿಕೆಯ ಆಕಸ್ಮಿಕವಾಗಿದ್ದರೂ ಕೊಡ ಹಲವಾರು ಭೌಗೋಳಿಕ ಮತ್ತು ಮಾನವ ಅಂಶಗಳು ಭೂ ನಡುಗುವಿಕೆಗೆ ಕಾರಣವಾಗುತ್ತವೆ. ಅವುಗಳೆಂದರೆ
1) ಭೌಗೋಳಿಕ ಕಾರಣ
* ಭೂ ಸ್ವರೂಪದ ರಚನಾ ವ್ಯವಸ್ಥೆ :-
ಭೂಮಿಯ ಶಿಲಾ ಪದರದ ಮೇಲಿರುವ ಮಡಿಕೆ ಪರ್ವತಗಳು, ಸ್ತರ ಭಂಗಗಳು, ಬೃಹತ್ ಆಕಾರದ ಶಿಲಾಸ್ತರಗಳ ಸ್ಥಾನಪಲ್ಲಟಗೊಳ್ಳುವ ಕ್ರಿಯೆಯಿಂದ ಭೂಕಂಪಗಳು ಉಂಟಾಗುತ್ತವೆ.
* ಜ್ವಾಲಾಮುಖಿ ಕಂಪನಗಳು :-
ಮ್ಯಾಂಟೆಲ್ ಪದರದ ಆಳದಿಂದ ಸ್ಪೋಟಿಸುವ ಜ್ವಾಲಾಮುಖಿಗಳು ಭೂ ನಡುಗುವಿಕೆಗೆ ಕಾರಣವಾಗುತ್ತವೆ.
2) ಮಾನವ ನಿರ್ಮಿತ ಕಾರಣಗಳು :-
ಆಧುನಿಕ ಮಾನವನು ಭೌಗೋಳಿಕ ಅಂಶಗಳನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಳ್ಳುವ ಅವುಗಳ ಸ್ವರೂಪವನ್ನು ಬದಲಾಯಿಸುತ್ತಿದ್ದಾನೆ. ಇದು ಭೂಕಂಪಕ್ಕೆ ಕಾರಣವಾಗುತ್ತದೆ. ಉದಾ : ಬೃಹತ್ ಆಕಾರದ ಅಣೆಕಟ್ಟೆಗಳು, ಆಳವಾದ ಗಣಿಗಾರಿಕೆ ಮತ್ತು ಭೂ ಅಂತರ್ ಭಾಗದಲ್ಲಿ ಅಣುಸ್ಪೋಟ ಕಾರ್ಯಾಚರಣೆ ಮುಂತಾದ ಕ್ರಿಯೆಯಿಂದ ಭೂಕಂಪ ಉಂಟಾಗುತ್ತದೆ.
ಧನ್ಯವಾದಗಳು