ಜ್ವಾಲಾಮುಖಿಗಳ ಬಗ್ಗೆ ( VOLCANOES )
ಜ್ವಾಲಾಮುಖಿ ಎಂದರೇನು?(what is volcano)
ಭೂಮಿಯ ಅಂತರಾಳದ ಮ್ಯಾಂಟಲ್ ಪದರದಲ್ಲಿನ ಮ್ಯಾಗ್ಮ ಎಂಬ ಶಿಲಾಪಾಕವು ಅಧಿಕ ಉಷ್ಣಾಂಶದಿಂದ ಒತ್ತಡ ಉಂಟಾಗಿ ಅಲ್ಲಿನ ಶಿಲಾಚೂರು, ನೀರಾವಿ, ಅನಿಲ, ಮತ್ತು ಬೂದಿಗಳೊಡನೆ ಭೂ ಹೊರಕವಚದ ದುರ್ಬಲ ಪದರಗಳ ದ್ವಾರದ ಮೂಲಕ ಹೊರ ಹಾಕಲ್ಪಡುವುದನ್ನು ಜ್ವಾಲಾಮುಖಿ ಎನ್ನುವರು.
ಜ್ವಾಲಾಮುಖಿಯು ತೆರದ ನಾಳವಾಗಿದ್ದು, ಇದರ ಮೂಲಕ ಅನಿಲಗಳು, ಶಾಖದಿಂದ ಕೂಡಿದ ಬಿಸಿ ನೀರು, ಲಾವ & ಶಿಲಾಚೂರುಗಳು ಭೂ ಅಂತರಾಳದಿಂದ ಹೊರ ಭಾಗಕ್ಕೆ ಚೆಲ್ಲುತ್ತದೆ. ಜ್ವಾಲಮುಖಿಯ ವಸ್ತುಗಳು ಹೊರ ಹರಿಯುವ ಭೂಕವಚದಲ್ಲಿ ರಂಧ್ರ ಪ್ರದೇಶಕ್ಕೆ "ನಾಳ" ಎನ್ನುವರು. ಜ್ವಾಲಾಮುಖಿ ಪರ್ವತದ ಇಳಿಜಾರಿನಿಂದ ಕೊಡಿದ ಬೊಗಣಿ ಆಕಾರದ ಜ್ವಾಲಾಮುಖಿ ಬಾಯಿ ಪ್ರದೇಶಕ್ಕೆ " ಕಾಲ್ಡೆರಾ " ಎನ್ನುವರು. ಜ್ವಾಲಾಮುಖಿಯನ್ನು ಕುರಿತು ವೈಜ್ಞಾನಿಕವಾಗಿ ಅಧ್ಯಾಯನ ಮಾಡುವ ಶಾಸ್ತ್ರವನ್ನು " ಜ್ವಾಲಾಮುಖಿಶಾಸ್ತ್ರ " ( Volcanology ) ಎನ್ನುವರು.
ವಾಲ್ಕನ್ ಎಂಬುದು ಪ್ರಾಚೀನ ಕಾಲದ ಗ್ರೀಕ್ ರ ಒಂದು ಪರ್ವತ. ಈ ಪರ್ವತದ ತಳ ಭಾಗದಲ್ಲಿ ನೆಲಸಿರುವವಳೆ ವಾಲ್ಕನ್ ದೇವತೆ. ಈ ದೇವತೆ ಕೋಪಗೊಂಡಾಗ ಜ್ವಾಲಾಮುಖಿ ವಸ್ತುಗಳನ್ನು ಹೊರಚೆಲ್ಲುತ್ತಾಳೆ ಎಂಬುದು ಗ್ರೀಕ್ ಕರ ನಂಬಿಕೆ. ಇಂದಿಗೂ ಅನೇಕ ಜ್ವಾಲಾಮುಖಿಯನ್ನು ಅಗ್ನಿ ದೇವತೆಯ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ.
ಉದಾ = ಜಪಾನಿನ ಫ್ಯೂಜಿಯಾಮ ಪರ್ವತ
 |
| Volcano |
ಜ್ವಾಲಾಮುಖಿ ಹೇಗೆ ಉಂಟಾಗುತ್ತದೆ
* ಭೂಮಿಯ ಆಳಕ್ಕೆ ಹೋದಂತೆ ಅಧಿಕ ತಾಪಮಾನದಿಂದ ಒತ್ತಡ ಹೆಚ್ಚಾಗಿ ಮ್ಯಾಗ್ಮವು ತುಳುಕಲ್ಪಡುವುದು.
* ಭೂಮಿಯಲ್ಲಿನ ಅಂತರ್ಜಲ ಅಧಿಕ ಬಿಸಿಯಿಂದಾಗಿ ಅನಿಲ ಮತ್ತು ನೀರಾವಿಯಾಗಿ ಪರಿವರ್ತನೆಯಾಗುವುದು.
* ಅಧಿಕ ಒತ್ತಡದಿಂದ ಶಿಲಾ ಪಾಕವು ಕಡಿಮೆ ಒತ್ತಡದ ಕಡೆಗೆ ಅಂದರೆ, ಕ್ರಸ್ಟ್ ಪದರದೆಡೆಗೆ ಮೇಲೇರುವುದು.
ಜ್ವಾಲಾಮುಖಿಯ ವಿಧಗಳು :-
ಜ್ವಾಲಾಮುಖಿಗಳು ಉಂಟಾಗುವ ಸ್ಪೋಟನಾ ಸಂಭವನೀಯ ಆಧಾರದ ಮೇಲೆ 3 ವಿಧಗಳಾಗಿ ವಿಭಾಗಿಸಲಾಗಿದೆ.
1) ಜಾಗೃತ ಜ್ವಾಲಾಮುಖಿ
2) ಸುಪ್ತ ಜ್ವಾಲಾಮುಖಿ
3) ಲುಪ್ತ ಜ್ವಾಲಾಮುಖಿ
1) ಜಾಗೃತ ಜ್ವಾಲಾಮುಖಿ :-
ನಿರಂತವಾಗಿ ಘನ, ದ್ರವ & ಅನಿಲ ವಸ್ತುಗಳನ್ನು ಹೊರಚೆಲ್ಲುವ ಜ್ವಾಲಾಮುಖಿಗೆ " ಜಾಗೃತ ಜ್ವಾಲಾಮುಖಿ ಎನ್ನುವರು. ಆಗಾಗ್ಗೆ ತಮ್ಮ ಕಾರ್ಯಾಚರಣೆಯಿಂದ ಭೂ ಗರ್ಭದ ವಸ್ತುವನ್ನು ಹೊರ ಚೆಲ್ಲುತ್ತವೆ.
ಉದಾ = ಹವಾಯಿ ದ್ವೀಪದ ಮೌನಲೋವ, ಇಟಲಿಯ ಶಿಸಿಲಿಯಾದ ಎಟ್ನಾ ಪರ್ವತ, ಮತ್ತು ಸ್ಟ್ರಂಬೊಲಿ ದಕ್ಷಿಣ ಅಮೆರಿಕದ ಆಂಡಿಸ್ ಪರ್ವತದ ಕೋಟೋಪಾಕ್ಷಿ, ಮೆಕ್ಸಿಕೋದ ಪಾರಿಕುಟಿನ್, ಪಿಲಿಫೈನ್ಸ್ ನ ಪಿನಾಟೋಬಾ, ಯು. ಎಸ್.ಎ. ಯು ಸೆಂಟ್ ಹೆಲೆನಾ ಮತ್ತು ಸಾಲ್ವಡೋರ್ ನ ಇಜಾಲ್ಕೊ. ಸ್ಟ್ರಾಂಬೊಲಿಯನ್ನು ಮೆಡಿಟರೇನಿಯನ್ ಸಮುದ್ರ ಬೆಳಕಿನ ಮನೆ ಎನ್ನುವರು. ಇಜಾಲ್ಕೋವನ್ನು " ಮಧ್ಯೆ ಅಮೆರಿಕಾದ ಬೆಳಕಿನ ಮನೆ" ಎನ್ನುವರು.
2) ಸುಪ್ತಿ ಜ್ವಾಲಾಮುಖಿ :-
ಬಹುಕಾಲದವರೆಗೆ ಯಾವುದೇ ವಸ್ತುಗಳನ್ನು ಹೊರಚೆಲ್ಲುವ ಸೂಚನೆ ನೀಡದೆ ಕ್ಷಿಪ್ರವಾಗಿ ಕಾರ್ಯಾಚರಣೆಗೊಳ್ಳುವುದಕ್ಕೆ ಸುಪ್ತ ಜ್ವಾಲಾಮುಖಿಗಳು ಎನ್ನುವರು. ಈ ಜ್ವಾಲಾಮುಖಿಗಳು ಮಾನವನ ಪ್ರಾಣ & ಆಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿಯನ್ನುಂಟು ಮಾಡುತ್ತವೆ. ಉದಾ = ಇಟಲಿಯ ಮೌಂಟ್ ವೆಸೊವಿಯಸ್ ಪರ್ವತ ಜಪಾನಿನ ಫ್ಯೂಜಿಯಾಮ ಪರ್ವತ, ಇಂಡೋನೇಷಿಯಾದ ಕ್ರಕಟೋವ ಪರ್ವತ, ತಾಂಜಾನೀಯಾದ ಕಿಲಿಮಂಜರೋ & ವೆಸ್ಟ್ ಇಂಡೀಸ್ ನ ಮೌಂಟ್ ಪೀಲಿ ಜ್ವಾಲಾಮುಖಿಗಳು.
3) ಲುಪ್ತಿ ಜ್ವಾಲಾಮುಖಿ :-
ಇವುಗಳನ್ನು " ನಂದಿತ ಜ್ವಾಲಾಮುಖಿ " ಎನ್ನುವರು. ಇತಿಹಾಸದ ಯಾವುದೇ ಕಾಲದಲ್ಲಿ ಕಾರ್ಯ ನಿರ್ವಹಿಸಿ ಇತಿಹಾಸದುದ್ದಕ್ಕೂ ಅವಶೇಷವಾಗಿರುವ ಜ್ವಾಲಾಮುಖಿಗಳು. ಇವುಗಳಿಂದ ಯಾವುದೇ ವಸ್ತುಗಳು ಹೊರಬರುವ ಸಾಧ್ಯತೆ ಇಲ್ಲದಿರುವುದರಿಂದ "ನಿದ್ರಿತ" & " ಮೃತ" ಜವ್ವಲಾಮುಖಿ ಎನ್ನುವರು
ಉದಾ = ದಕ್ಷಿಣ ಆಫ್ರಿಕಾದ ಚಿಂಬೊರೋಸೋ, ತಾಂಜಾನೀಯಾದ ಗೋರಾಂಗೋರೋ ಅರ್ಜೆಂಟೈನಾದ ಅಂಕಾಂಗುವ, ಐಫಲ್( ಮಯನ್ಮರ್), ಸ್ಕಾಟ್ ಲ್ಯಾಂಡ್ ಅರ್ಧಸ್ರೀಟ್ ಭಾರತದಲ್ಲಿ ಗುಜರಾತ್ ಗಿರ್ನಾರ್ ಬೆಟ್ಟಗಳಲ್ಲಿ ಮತ್ತು ಅಂಡಮಾನ್ ನಿಕೊಬಾರ್ ದ್ವಿಪಗಳಲ್ಲಿ ಕಂಡುಬರುತ್ತವೆ.
ಪ್ರಸಿದ್ದ ಜ್ವಾಲಾಮುಖಿಗಳು
1) ಮೌಂಟ್ ವೆಸೂವಿಯಸ್ ( ಇಟಲಿ )
2) ಕ್ರಕಟೋವ ( ಇಂಡೋನೇಷ್ಯಾ )
3) ಮೌಂಟ್ ಪೀಲೀ ( ವೆಸ್ಟ್ ಇಂಡೀಸ್ )
4) ಮೌಂಟ್ ಫ್ಯೂಜಿಯಾಮ ( ಜಪಾನ್ )
what is volcano , what is volcano
ಧನ್ಯವಾದಗಳು