ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು
![]() |
ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು |
1. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಇಂದು ಭಾರತ ದೇಶದ ಅತೀ ದೊಡ್ಡ ವಿಮಾನ ನಿಲ್ದಾಣವಾಗಿದೆ. ಮೊದಲು ಇದನ್ನು ಭಾರತೀಯ ವಾಯುಪಡೆಯು ವಿರವಹಿಸುತ್ತಿತ್ತು. ಇದು ಪಶ್ಚಿಮ ದೆಹಲಿಯಲ್ಲಿದೆ.
1) ಇದು 2 ನೇ ಮಹಾಯುದ್ಧ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ನಿಲ್ದಾಣವಾಗಿ ಸೇವೆ ಸಲ್ಲಿಸಿವೆ.
2) 1986 ಮೇ 2 ರಲ್ಲಿ ಇದನ್ನು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಹೆಸರಿಸಲಾಯಿತು.
3) ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಒಡೆತನ ಹೊಂದಿದ್ದು, 2006 ಮೇ ಯಿಂದ ಇದನ್ನು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿಯಂತ್ರಣ ಮಾಡುತ್ತಿದೆ.
4) ಪ್ರಾರಂಭದಲ್ಲಿ ಪಾಲಂ ಏರ್ ಪೋರ್ಟ್ ಎಂದು ಕರೆಯುತ್ತಿದ್ದರು.
5) ಇದು ದಕ್ಷಿಣ ಏಷ್ಯಾದಲ್ಲೇ ಹೆಚ್ಚು ಪ್ರಯಾಣಿಕರು & ಹೆಚ್ಚು ವಿಮಾನ ಸಂಚಾರ ಹೊಂದಿರುವ ವಿಮಾನ ನಿಲ್ದಾಣವಾಗಿದೆ.
2. ರಾಜಸಾನ್ಸಿ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಇದು ಪಂಜಾಬ್ ನ ಅಮೃತಸರದಲ್ಲಿದೆ. ಈ ವಿಮಾನ ನಿಲ್ದಾಣವನ್ನು ಗುರುರಾಮ್ ದಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕೊಡ ಕರೆಯುತ್ತಾರೆ. ಸಿಖ್ ರ ಧರ್ಮದ 4 ನೇ ಗುರುವಾದ ಗುರುರಾಮ್ ದಾಸ್ ರವರು ಅಮೃತಸರದ ನಿರ್ಮಾಪಕರು.
1) ಇದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ನಿರ್ವಹಿಸುತ್ತದೆ.
2) ಇದು ಸಾರ್ವಜನಿಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
3) 2009 ಫೆಬ್ರವರಿ 25 ರಂದು ರಾಜಸಾನ್ಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು ಆಧುನೀಕರಣಗೊಳಿಸಿ ಉದ್ಘಾಟಿಸಲಾಯಿತು.
4) ಅಮೃತಸರವು ಸ್ವರ್ಣ ದೇವಾಲಯವನ್ನು ಹೊಂದಿದ್ದು ಪ್ರವಾಸಿಗರ ಆಕರ್ಷಣಾ ತಾಣವಾಗಿದೆ. ಇದರಿಂದ ತಾಷ್ಕೆಂಟ್, ತೆಹರಾನ್, ಲಂಡನ್, ಮಾಸ್ಕೆಟ್ ದೇಶಗಳಿಗೆ ಸಂಪರ್ಕ ಹೊಂದಿದ.
5) ಈ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಯಾ ಏರ್ ಲೈನ್ , ಜೆಟ್ ವಿಮಾನಗಳು ಇಲ್ಲಿಂದ ಕಾರ್ಯನಿರ್ವಹಿಸುತ್ತದೆ.
3. ಗೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಗೋವಾದ ವಾಸ್ಕೋದ ಬಳಿಯ ದಬೋಲಿಂನಲ್ಲಿ ಕಂಡುಬರುತ್ತದೆ. ಇದನ್ನು ಮೊದಲು ದಬೋಲಿಂ ವಿಮಾನ ನಿಲ್ದಾಣವೆಂದು ಕರೆಯುತ್ತಿದ್ದರು. ಗೋವಾ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಇದನ್ನು ಭಾರತೀಯ ನೌಕಾಪಡೆ ಹಾಗೂ ಭಾರತೀಯ ವಿಮಾನ ಪ್ರಾಧಿಕಾರವು ನಿರ್ವಹಿಸುತ್ತವೆ. ಈ ವಿಮಾನ ನಿಲ್ದಾಣದಿಂದ ಶಾರ್ಜಾ, ಮಾಸ್ಕೋ, ಲಂಡನ್, ದೋಹಾ, ಸ್ಟಾಕ್ ಹೋಂ ಕಡೆಗಳಿಗೆ ಸಂಪರ್ಕವನ್ನು ಹೊಂದಿದೆ. ಈ ವಿಮಾನ ನಿಲ್ದಾಣದಿಂದ ಕರಾಚಿ, ತೈಮಾರ್ ಗೆ ನಿರಂತರವಾಗಿ ವಿಮಾನ ಸಂಪರ್ಕವಿದೆ. ಇದೊಂದು ವಾಯುಪಡೆಗೆ ಸೇರಿದ ವಿಮಾನ ನಿಲ್ದಾಣವಾಗಿದ್ಡು, ಮಿಲಿಟರಿ ವಿಮಾನವಾದ ಐ. ಎನ್. ಎಸ್ ಹನ್ಸಾ ನಾಗರಿಕ ಸೇವೆಗೆ ಬಳಕೆಯಾಗುತ್ತಿದೆ.
4. ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಇದು ಗುಜರಾತಿನ ಅಹಮದಾಬಾದ್ ನಲ್ಲಿ ಕಂಡುಬರುತ್ತದೆ. ಇದು 3 ವಿಧದ ಸೇವೆಗಳನ್ನು ಸಲ್ಲಿಸುತ್ತದೆ.
1) ಸರಕು ಸೇವೆ
2) ನಾಗರಿಕಾ ಸೇವೆ
3) ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ.
1) ಭಾರತದ 8 ನೇ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಇದನ್ನು ಅಹಮದಾಬಾದ್ ವಿಮಾನ ನಿಲ್ದಾಣವೆಂದು ಕರೆಯುತ್ತಾರೆ. ನಂತರ ಈ ವಿಮಾನ ನಿಲ್ದಾಣಕ್ಕೆ ಭಾರತದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಹೆಸರು ಇಡಲಾಯಿತು.
2) ಈ ವಿಮಾನ ನಿಲ್ದಾಣದಿಂದ ಇಂಡಿಯನ್ ಏರ್ ಲೈನ್, ಜೆಟ್ ಏರ್ ಲೈನ್ ಕಿಂಗ್ ಫಿಶರ್, ಸ್ಪೇಸ್ ಜೆಟ್ ವಿಮಾನಗಳು ಸಂಚರಿಸುತ್ತದೆ. ಈ ವಿಮಾನ ನಿಲ್ದಾಣವೂ ಭಾರತೀಯ ವಿಮಾನ ಪ್ರಾಧಿಕಾರ ನಿರ್ವಹಿಸುತ್ತದೆ. ಈ ನಿಲ್ದಾಣದಿಂದ ಪ್ರತಿದಿನ ಸರಾಸರಿ 150 ವಿಮಾನಗಳು ಸಂಚರಿಸುತ್ತದೆ. ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇದು ಒಂದಾಗಿದೆ.
5. ಛತ್ರಪತಿ ಶಿವಾಜಿ ಅಂತರರರಾಷ್ಟೀಯ ವಿಮಾನ ನಿಲ್ದಾಣ :-
ಇದು ಮಹಾರಾಷ್ಟ್ರದ ಮುಂಬೈನಲ್ಲಿದೆ. ಇದನ್ನು ಮುಂಬೈ ಏರ್ಪೋರ್ಟ್ ಎಂದು ಕರೆಯುತ್ತಾರೆ. ಈ ವಿಮಾನ ನಿಲ್ದಾಣವು ದೇಶದ 2 ನೇ ಅತಿ ಹೆಚ್ಚು ಜನನಿಬಿಡ ನಿಲ್ದಾಣವಾಗಿದೆ. ದೆಹಲಿಯ ನಂತರ ಎರಡನೇ ಅತಿ ದೊಡ್ಡ ಜನಸಾಗಾಣಿಕೆಯ ವಿಮಾನ ನಿಲ್ದಾಣವಾಗಿದೆ.
1) ಪ್ರಾರಂಭದಲ್ಲಿ ಇದನ್ನು ಸಹರಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಮತ್ತು ಸಂತಕ್ರುಜ್ ರಾಷ್ಟ್ರೀಯ ನಿಲ್ದಾಣ ಎಂದು ಕರೆಯುತ್ತಿದ್ದರು.
2) ಈ ಎರಡು ನಿಲ್ದಾಣವನ್ನು ಸೇರಿಸಿ 17 ನೇ ಶತಮಾನದ ಮರಾಠರ ದೊರೆಯಾದ ಛತ್ರಪತಿ ಶಿವಾಜಿಯ ಹೆಸರನ್ನು ಫೆಬ್ರವರಿ 2006ರಲ್ಲಿ ಈ ವಿಮಾನ ನಿಲ್ದಾಣಕ್ಕೆ ಹೆಸರು ಇಡಲಾಯಿತು.
3) ಈ ನಿಲ್ದಾಣವು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು. ಬೆಸ್ಟ್ ಏರ್ಪೋರ್ಟ್ ಇನ್ ಇಂಡಿಯಾ ಅಂಡ್ ಸೆಂಟ್ರಲ್ ಏಷ್ಯಾ ( 2016 ) ಎಂಬ ಪ್ರಶಸ್ತಿಯನ್ನು ಗಳಿಸಿದೆ. ಇದನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮವು ನಿರ್ವಹಿಸುತ್ತದೆ.
6.ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಕೇರಳದ ಕೊಚ್ಚಿನ್ ಯಲ್ಲಿರುವ ಈ ನಿಲ್ದಾಣವನ್ನು ನೆಡುಂಬೇಸರಿ ವಿಮಾನ ನಿಲ್ದಾಣವೆಂದು ಕರೆಯುತ್ತಾರೆ. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮವು ನಿರ್ವಹಿಸುತ್ತದೆ
1) ಈ ವಿಮಾನ ನಿಲ್ದಾಣದಿಂದ ಮಾಸ್ಕಾಟ್, ಕುವೈತ್, ದುಬೈ, ಅಬುದಬಿ, ಶಾರ್ಜಾ, ಸಿಂಗಪೂರ್ ದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಇದು ದೇಶೀಯ ಅನೇಕ ರಾಜ್ಯಗಳಿಗೆ ಸಂಪರ್ಕ ಹೊಂದಿದೆ.
2) ಈ ನಿಲ್ದಾಣವು ಸಂಪೂರ್ಣವಾಗಿ ಸೌರವಿದ್ಯುತ್ ನಿಂದ ಕಾರ್ಯ ನಿರ್ವಹಿಸುತ್ತಿರುವ ದೇಶದ ಮೊಟ್ಟ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ.
3) ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೆಚ್ಚು ಕಾರ್ಯನಿರ್ವಹಿಸುವ ವಿಮಾನವಾಗಿದೆ ಇಲ್ಲಿ.
4) ಇದು ಭಾರತದ ಸಾರ್ವಜನಿಕ ನಿಯಮಿತ ಕಂಪನಿ ಹೊಡಿಕೆಯಿಂದ ನಿರ್ವಹಿಸಲ್ಪಟ್ಟಿರುವ ಮೊದಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇದು ಒಂದಾಗಿದೆ.
7. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಇದು ಕರ್ನಾಟಕ ರಾಜ್ಯದ ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿದೆ. ಬೆಂಗಳೂರಿನಲ್ಲಿ ಮೊದಳಿದ್ದ ಎಚ್. ಎ. ಎಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ನಿರ್ಮಿಸಲಾಯಿತು.
1) ಜುಲೈ 2005ರಲ್ಲಿ ನಿರ್ಮಿಸಲು ಪ್ರಾರಂಭಿಸಿ 2008 ಮೇ 23 ರಲ್ಲಿ ಮುಕ್ತಾಯಗೊಳಿಸಿ ಪ್ರಯಾಣಿಕರ ಸೇವೆಗೆ ಓ ದಗಿಸಲಾಯಿತು.
2) ಭಾರತದ 4 ನೇ ಅತಿ ಹೆಚ್ಚು ಜನಭರಿತ ವಿಮಾನ ನಿಲ್ದಾಣವಾಗಿದೆ.
3) ಇದನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ನಿರ್ವಹಿಸುತ್ತವೆ. ಇದಕ್ಕೆ 2009 ಫೆಬ್ರವರಿ 27 ರಂದು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ಈ ವಿಮಾನ ನಿಲ್ದಾಣದ ಹೆಸರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣಕ್ಕೆ ಕೋರಿತ್ತು. ಈ ಮನವಿಯನ್ನು 14 ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು.
4) ಈ ನಿಲ್ದಾಣದಿಂದ ದುಬೈ, ಪ್ಯಾರಿಷ, ಹಾಂಕಾಂಗ್, ಕೌಲಲಾಂಪುರ, ಸಿಂಗಪುರ ಹಾಗೂ ಜಗತ್ತಿನ ವಿವಿಡದೆಗೆ ಸಂಪರ್ಕ ಕಲ್ಪಿಸುತ್ತದೆ. ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇದು ಒಂದಾಗಿದೆ.
8. ಕೋಲ್ಕತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಇದು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಇದೆ. ಇದನ್ನು ಮೊದಲು ಡಂಡಂ ವಿಮಾನ ನಿಲ್ದಾಣವೆಂದು ಕರೆಯುತ್ತಿದ್ದರು, ಕಾರಣ ಇದು ಕೋಲ್ಕತಾ ಬಳಿಯ ಡಂಡಂ ಸ್ಥಳದಲ್ಲಿತ್ತು. ಪೂರ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಅತಿ ಹೆಚ್ಚು ದೊಡ್ಡದಾದ್ಯಂತಹ ವಿಮಾನ ನಿಲ್ದಾಣವಾಗಿದೆ. ಇದು ಬಾಂಗ್ಲಾದೇಶ ಹಾಗೂ ಈಶಾನ್ಯ ಭಾರತದ ವಿಮಾನಗಳ ಪ್ರಮುಖ ಕೇಂದ್ರ ಸ್ಥಳವಾಗಿದೆ ಇದನ್ನು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವೂ ನಿರ್ವಹಣೆ ಮಾಡುತ್ತದೆ. ಇಲ್ಲಿ ಇಂದ ವಿಮಾನಗಳು ಕೌಲಲಾಂಪುರ, ಬ್ಯಾಂಕಾಕ್, ಢಾಕಾ, ಸಿಂಗಪುರ, ದುಬೈ ಕಡೆಗೆ ಸಂಪರ್ಕ ಹೊಂದಿದೆ.
9. ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಇದು ಕೇರಳದ ತಿರುವನಂತಪುರಂನಲ್ಲಿದೆ. ಇದನ್ನು ತ್ರಿವೆಂಡ್ರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯುತ್ತಾರೆ. ಇದನ್ನು 1932 ರಲ್ಲಿ ಸ್ಥಾಪಿಸಲಾಯಿತು. ಈ ನಿಲ್ದಾಣವು ಕುವೈತ್, ದುಬೈ, ಕೌಲಲಾಂಪುರ, ಮಾಸ್ಕಾಟ್, ಸಿಂಗಪುರ, ಮಾಲೆ, ಬಹರೈ, ದೋಹಾ, ಅಬುದಾಬಿಗಳಿಗೆ ನೀರ ವಿಮಾನ ಸಂಪರ್ಕವನ್ನು ಹೊಂದಿದೆ.
1) 1991ರ ಜನವರಿ 1 ರಂದು ಇದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮಾಡಲಾಯಿತು.
2) ಕೇರಳದ ಮೊದಲ ವಿಮಾನ ನಿಲ್ದಾಣವಾಗಿದೆ.
3) ಈ ವಿಮಾನ ನಿಲ್ದಾಣವನ್ನು ಕೇರಳ ವಿಮಾನ ನಿಲ್ದಾಣ ಪ್ರಾಧಿಕಾರವು ನಿರ್ವಹಣೆ ಮಾಡುತ್ತದೆ.
10. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ :-
ಇದು ತಮಿಳುನಾಡಿನ ಚೆನ್ನೈನಲ್ಲಿದೆ. ಈ ವಿಮಾನ ನಿಲ್ದಾಣವನ್ನು " ಮೀನಾಬಾಕಂ ವಿಮಾನ ನಿಲ್ದಾಣವೆಂದು ಕರೆಯುತ್ತಾರೆ" ಇದು ಭಾರತದ 3 ನೇ ಅತಿ ಜನಬಿಡವಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಸರಕು ಸಾಗಾಣಿಕೆ ನಿರ್ವಹಿಸುವ 2 ನೇ ದೊಡ್ಡ ವಿಮಾನ ನಿಲ್ದಾಣವಾಗಿದೆ. ಇಲ್ಲಿ ವಿಮಾನಗಳು ಸಿಂಗಾಪುರ, ಕೊಲಂಬೊ, ದೋಹಾ \, ಮಾಸ್ಕಾಟ್, ಕುವೈತ್, ಅಬುದಾಬಿ, ಲಂಡನ್, ಹಾಂಕಾಂಗ್ ಗಳ ಸಂಪರ್ಕ ಹೊಂದಿದೆ.
ಇದು ಮೂರು ವಿಧದ ಸೇವೆಗಳು ಸಲ್ಲಿಸುತ್ತದೆ
1) ಅಂತರರಾಷ್ಟ್ರೀಯ
2) ರಾಷ್ಟ್ರೀಯ
3) ಸರಕು ಸೇವೆಗಳನ್ನು ನಿರ್ವಹಿಸುತ್ತದೆ.
![]() |
ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು |
ಧನ್ಯವಾದಗಳು