Type Here to Get Search Results !

ಅಭ್ರಕದ ಉಪಯೋಗ ಮತ್ತು ವಿಧಗಳು - Mica

ಅಭ್ರಕ -(ಮೈಕಾ - Mica)


ಅಭ್ರಕ ಎಂದರೆ ಇಂಗ್ಲೀಷ್ ನಲ್ಲಿ Mica ಎಂದರ್ಧ mica ಎಂಬುದರ ಅರ್ಥ Glitter ಆರ್ Shine. ಇದೊಂದು ಲೋಹದ ಖನಿಜ. ಇದನ್ನು ಕಾಗೆ ಬಂಗಾರ or ಅಭ್ರಕ ಎಂದು ಕರೆಯುತ್ತಾರೆ. ಅಭ್ರಕ ರಾಸಾಯನಿಕ ಕೈಗಾರಿಕೆಗಳಿಗೆ ಅಗತ್ಯವಾದ ಅಲೋಹ ಖನಿಜವಾಗಿದೆ. ಇದು ಹೊಳಪುಳ್ಳ ಸಿಲಿಕೇಟ್ ಖನಿಜವಾಗಿದೆ. ಇದೊಂದು  Hexogonal ( ಆರುಮುಖಗಳ) ಹಾಳೆಯಾಕಾರದ ಅಣು ಜೋಡಣೆ ಹೊಂದಿದೆ. 

ಅಭ್ರಕದ ಉಪಯೋಗಗಳು :

1) ಇದರ ಭೌತ ರಾಸಾಯನಿಕ ಶಾಖ ಗುಣದಿಂದ ಹೆಚ್ಚು ಉಪಯುಕ್ತ ಹೊಂದಿದೆ. ಇದು ಸ್ಥಿತಿ ಸ್ಥಾಪಕತ್ವ ಹಾಗೂ ಶಾಖ ನಿರೋಧಕ, ವಿಧ್ಯುತ್ ನಿರೋಧಕ ಎಂಬ ವಿಶಿಷ್ಟ ಗುಣ ಹೊಂದಿರುವುದರಿಂದ ವಿಧ್ಯುತ್ ಕ್ಷೇತ್ರದಲ್ಲಿ ( Dielectric strength , Dielectric canstant) ಆಗಿ, ಬಳಸುತ್ತಾರೆ. ಅದುದ್ದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದೆ. 
2) ವೈಜ್ಞಾನಿಕ ಪ್ರಯೋಗ ಶಾಲೆಗಳಲ್ಲಿ ಉಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. 
3) ಆಭರಣಗಳು ಮತ್ತು ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. 
4) ಶಾಖ ನಿರೋಧಕ ಗುಣ ಹೊಂದಿರುವುದರಿಂದ ದೀಪಗಳ ಚಿಮಣಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇತ್ತೀಚಿಗೆ ಅಮೇರಿಕದಲ್ಲಿ ( Teh USA) ಟೆಲಿಸ್ಟಾರ್ ಟ್ರಾನ್ಸ್ ಮೀಟರ್, ಸಟಲೈಟ್ ತಯಾರಿಕೆಯಲ್ಲೂ ಬಳಸುತ್ತಾರೆ. 
5) ಟೆಲಿಪೋನ್ , ಟೆಲಿಗ್ರಾಫ್, ಬಣ್ಣ, ಪ್ಲಾಸ್ಟಿಕ್, ಕೃತಕ ರಬ್ಬರ್, ಕೀಲೆಣ್ಣೆ, ವಾರ್ನಿಷ್, ಮುಂತಾದವುಗಳ ತಯಾರಿಕೆಯಲ್ಲಿಯೂ ಬಳಸುತ್ತಾರೆ. 
6) ಇದನ್ನು ರೇಡಿಯೋದಲ್ಲಿ Capacitors ಆಗಿ ಬಳಸುತ್ತಾರೆ. 
7) ಅಭ್ರಕವನ್ನು ತೆಳುವಾದ ಹಾಳೆಯನ್ನಾಗಿಸಿ ಗ್ರಿಗರ್ಮುಲ್ಲರ್ ಕೌಂಟರ್ ಟ್ಯೂಬ್ ನಲ್ಲಿ ಹಾದು ಹೋಗುವ ಅಲ್ಟ್ರಾಕಿರಣಗಳನ್ನು ಪತ್ತೆಹಚ್ಚಲು ಬಳಸುತ್ತಾರೆ. 
8) ವೈಜ್ಞಾನಿಕ ಸಾಮಗ್ರಿಗಳನ್ನು ಹಾಗೂ ಸಾರಿಗೆ ವಾಹನಗಳ ಬಿಡಿ ಭಾಗಗಳನ್ನು ತಯಾರಿಸಿ ಬಳಸಲಾಗುತ್ತದೆ. 
9) ಪ್ಲಾಸ್ಟಿಕ್ ವಸ್ತುಗಳು ಮತ್ತು ಗಟ್ಟಿ ರಬ್ಬರ್ ಗಳ ತಯಾರಿಕೆಯಲ್ಲಿ ಹಾಗೂ ಪುಡಿ ಮಾಡಿ ಒಣಗಿಸಿದ ಅಭ್ರಕವನ್ನು ಛಾವಣಿ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. 
10) ಹೊಳಪ್ಪನ್ನು ಕೊಡಲು ಇದರ ಪುಡಿಯನ್ನು ಗೋಡೆ, ಕಾಗದ ಹಾಗೂ ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ. 
11) ಡೈನಾಮೋಗಳು, ಕಂಡೆನ್ಸರ್ ಗಳು, ಲ್ಯಾಂಪ್ ಹಿಡಿಗಳು ಮತ್ತು ಒಲೆಗಳ ತಯಾರಿಕೆಯಲ್ಲಿ ಬಳಸುತ್ತಾರೆ. 
12) ಕೆಲವು ಔಷಧಿ ತಯಾರಿಕೆಯಲ್ಲೂ ಬಳಸುತ್ತಾರೆ. 
13) ಪ್ರಸ್ತುತವಾಗಿ ಅಭ್ರಕವನ್ನು ರಾಕೆಟ್ ಗಳು, ಕ್ಷಿಪನಿಗಳು ಹಾಗೂ ಜೆಟ್ ಇಂಜಿನ್ ಗಳಲ್ಲಿ ಇಗ್ನೀಶನ್ ವ್ಯವಸ್ಥೆಯಲ್ಲಿ ಬಳಸುತ್ತಾರೆ. 
ಅಭ್ರಕ mica
Mica Mine



ಅಭ್ರಕದ ವಿವಿಧ ಹೆಸರುಗಳು ( Other Names of Mica)

→ ಕ್ಯಾಟ್ ಗೋಲ್ಡ್ - Cat Gold
→ ಕ್ಯಾಟ್ ಸಿಲ್ವರ್ - Cat Silver
→ ಗ್ಲಿಮ್ಮರ್ - Glimmer
→ ಗ್ಲಿಸ್ಟ್ - Glist
→ ಕೇಟೆನ್  ಸಿಲ್ಬರ್  -  Katen  Silber 
→ ಕೆಟ್ಜನ್ ಸಿಲ್ಬರ್ - Katzan Silbar 
→ ಕೆಟ್ಜನ ಗೋಲ್ಡ್ - Katzan Gold 
→ ಆರ್ ಡಸ್ ಚಾಟ್ಸ್ - Ordes chats 
→ ರಾಂಬಾಯ್ಡಿಲ್ ಮೈಕಾ - Rhomboidal Mica 

ಅಭ್ರಕ ದೊರೆಯುವ ಮೂಲಗಳು 

  ನಿಸರ್ಗದಲ್ಲಿ ಅಭ್ರಕವು ಮುಖ್ಯವಾಗಿ ಕಣಶಿಲೆಯಲ್ಲಿ ಪೆಗ್ಮಟೈಟ್, ಪದರುಶಿಲೆ & ಮರಳುಗಲ್ಲುಗಳಲ್ಲಿ ದೊರೆಯುತ್ತದೆ. 

ಅಭ್ರಕದ ವಿಧಗಳು (Types of Mica)


ಪ್ರಕೃತಿಯಲ್ಲಿ ಸಿಗುವ ಅಭ್ರಕಗಳೊಂದಿಗೆ ಇರುವ ರಾಸಾಯನಿಕ ಅಂಶಗಳನ್ನು ( ಸೋಡಿಯಂ, ಕಬ್ಬಿಣ, ಮೆಗ್ನಿಶಿಯಂ, ಲೀಧಿಯಂ, ಪ್ಲೋರೀನ್, ಬೀರಿಯಂ) ಆಧರಿಸಿ ಅಭ್ರಕವನ್ನು ರಾಸಾಯನಿಕವಾಗಿ 7 ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

1. ಶ್ವೇತ ಅಭ್ರಕ 
2. ಹಳದಿ ಅಭ್ರಕ 
3. ನೇರಳೆ ಅಭ್ರಕ 
4. ಶಿಲಾರಾಳ ಅಭ್ರಕ 
5. ಕಪ್ಪು ಅಭ್ರಕ 
6. ಕಂದು ಅಭ್ರಕ 
7. ಕಡು ಕಂದು ಅಭ್ರಕ 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad