Type Here to Get Search Results !

ಪ್ಲಾಟಿನಂ (Platinum ) - Details of platinum

ಪ್ಲಾಟಿನಂ (Platinum )


ಚಿನ್ನ, ಬೆಳ್ಳಿಗಿಂತ ಬೆಲೆಬಾಳುವ ಲೋಹವೇ ಪ್ಲಾಟಿನಂ. ಪ್ಲಾಟಿನಂ ಒಂದು ಸಂಕ್ರಮಣ ಲೋಹ ( Transition meta ) ಇದರ ಸಂಕೇತವು Pt ಇದರ ಪರಮಾಣು ಸಂಖ್ಯೆ - 78. ಪ್ಲಾಟಿನಂಟಿ ಹೆಸರನ್ನು ಸ್ಪ್ಯಾನಿಶ್ ಪದ " ಪ್ಲಾಟಿನಾ ಡೆಲ್ ಪಿಂಟೋ " ಎಂಬ ಪದದಿಂದ ಆರಿಸಲಾಗಿದೆ. ಇದರ ಶಬ್ದಾರ್ಧವು " Little  Silver of the Pinto River" 

ಪ್ಲಾಟಿನಂ/platinum


 

ಪ್ಲಾಟಿನಂ ದೊರೆಯುವಿಕೆ  


> ಇದೊಂದು ಅಪರೂಪವಾಗಿ ದೊರೆಯುವಂತಹ ಲೋಹ. 

> ಭೂಮಿಯ ಹೊರ ತೊಗಟೆಯಲ್ಲಿ ಪ್ಲಾಟಿನಂ 0.003ppb ಯಷ್ಟು ದೊರೆಯುತ್ತದೆ. ( pp ಎಂದರೆ PartsperBillion ) platinum

> ಇದು ರಾಶಯನಿಕವಾಗಿ ಯಾವುದೇ ವಸ್ತುವಿನೊಂದಿಗೆ ಮಿಶ್ರವಾಗಿರದೆ ಶುದ್ದವಾಗಿ ದೊರೆಯುತ್ತದೆ. ಕೆಲವೂಮ್ಮೆ ಹಿರಿಡಿಯಂ ಜೊತೆಗೆ ಮಿಶ್ರಣವಾಗಿ ಪ್ಲಾಟಿನಿರಿಡಿಯಂ ಆಗಿ ದೊರೆಯುತ್ತದೆ. 

> ಇದು ಕೆಲವೂಮ್ಮೆ ನಿಕ್ಕಲ್ & ತಾಮ್ರದ ಅದಿರಿನಲ್ಲೂ ಮಿಶ್ರಣವಾಗಿರುತ್ತದೆ. ಅದ್ದುದರಿಂದ ಅದು ತುಕ್ಕುಹಿಡಿಯುವುದಿಲ್ಲ. 

> ಪ್ಲಾಟಿನಂ ಪ್ರಮುಖವಾಗಿ ಕೂಪರೈಟ್. 

( Cooperite ರಾಸಾಯನಿಕ ಸಂಕೇತ :- [pt, pd, Ni]S )



ಪ್ಲಾಟಿನಂನ ಗುಣಗಳು 


> ಪ್ಲಾಟಿನಂ ಶುದ್ದ ಲೋಹವಾಗಿದ್ದು. ಬೆಳ್ಳಿ ಬಿಳಿಯ ಬಣ್ಣ ಹೊಂದಿದ್ದು ಹೊಳೆಯುವ, ಸಾಂದ್ರತೆ ಹೊಂದಿರುವ, ಪತ್ರಶೀಲತೆ, ತಾಂತವತೆ ಗುಣವನ್ನು ಹೊಂದಿರುವ ಅಪರೂಪದ ಲೋಹವಾಗಿದೆ. 

> ಇದರ ಬಣ್ಣ ಹಾಗೂ ಹೊಳೆಯುವಿಕೆಯಿಂದ ಬೆಳ್ಳಿ ಎಂದು ತಪ್ಪಾಗಿ ಭವಿಸುತ್ತಾರೆ. 

> ಪ್ಲಾಟಿನಂ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ನೈಟ್ರೇಟ್ ಆಮ್ಲದಲ್ಲಿ ಕರಗುವುದಿಲ್ಲ . ಲೋಹದಲ್ಲಿ ಅತಿ ಗಟ್ಟಿಯಾದ ಲೋಹ. 



ಪ್ಲಾಟಿನಂನ ( Platinum) ಉಪಯೋಗಗಳು 


> ಆಭರಣ ತಯಾರಿಕೆಯಲ್ಲಿ, ಪ್ರಯೋಗಾಲಯದ ಸಾಧನಗಳಾಗಿ ಬಳಸುತ್ತಾರೆ.

> ಪ್ಲಾಟಿನಂ ಅತಿ ಹೆಚ್ಚು ರಾಸಾಯನಿಕ ಪ್ರತಿಕ್ರಿಯೆಯ ರೋಧತೆಯನ್ನು ಹೊಂದಿದೆ. 

> ಅತಿ ಹೆಚ್ಚು ಉಷ್ಣತೆಯ ಗುಣವನ್ನು ಹಾಗೂ ಸ್ಥಿರವಾದ ವಿದ್ಯುತ್ ಗುಣಗಳನ್ನು ಹೊಂದಿರುವುದರಿಂದ ಇದನ್ನು ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಬಳಸುತ್ತಾರೆ. 

> ಇದನ್ನು ದಂತ ವೈದ್ಯಕೀಯ ಸಾಧನವನ್ನಾಗಿ ಬಳಸುತ್ತಾರೆ. ಎಲೆಕ್ಟ್ರೋ ಡ್ಸ್  ಗಳಾಗಿ ಬಳಸುತ್ತಾರೆ. 

> ಪ್ಲಾಟಿನಂ ರೆಜಿಸ್ಟೆನ್ಸ್  ಥರ್ಮೊ ಮೀಟರ್ ಗಳಲ್ಲಿ ಬಳಸುತ್ತಾರೆ. 

> ಇದನ್ನು ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕವಾಗಿ ಬಳಸುತ್ತಾರೆ. 


ಪ್ಲಾಟಿನಂ( Platinum) ಉತ್ಪಾದನೆ 

> ದಕ್ಷಿಣ ಆಫ್ರಿಕಾದ ಬುಷ್ ವೆಲ್ಡ್ ಸಂಕೀರ್ಣದಲ್ಲಿ ಪ್ಲಾಟಿನಂ ನಿಕ್ಷೇಪಗಳು ಕಂಡುಬರುತ್ತದೆ. 

> ದಕ್ಷಿಣ ಆಫ್ರಿಕಾವು ಜಗತ್ತಿನ ಶೇಕಡಾ 80 ರಷ್ಟು ಪ್ಲಾಟಿನಂ ಉತ್ಪಾದನೆ ಮಾಡಿ ಮೊದಲ ಸ್ಥಾನದಲ್ಲಿದೆ. 

> ನಂತರ 2 ನೇ ಸ್ಥಾನವನ್ನು ರಷ್ಯಾ, 3 ನೇ ಸ್ಥಾನವನ್ನು ಕೆನಡಾ ದೇಶವು ಪಡೆದಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad