ಕೈಗಾರಿಕೆಗಳು
ಕೈಗಾರಿಕೆ ಎಂದರೇನು ಮತ್ತು ಅವಶ್ಯಕತೆಯ ವಿಶ್ಲೇಷಣೆ
ಮಾನವನ ಆಧುನಿಕ ಆರ್ಧಿಕ ಚಟುವಟಿಕೆಗಳಲ್ಲಿ ಕೈಗಾರಿಕೆಗಳು ಅತ್ಯಂತ ಮಹತ್ವದ್ದಾಗಿವೆ. ಯಾವುದೇ ದೇಶದ ಆರ್ಧಿಕ ಪ್ರಗತಿಯನ್ನು ನಿರ್ಧರಿಸಲು ಆ ದೇಶವು ಹೊಂದಿರುವ ಕೈಗಾರಿಕೆಯ ಅಭಿವೃದ್ದಿಯನ್ನು ಸಹ ಪ್ರಧಾನವಾಗಿ ಪರಿಗಣಿಸಲಾಗುವುದು. ಕೈಗಾರಿಕೆಗಳು ಆಧುನಿಕ ನಾಗರಿಕತೆಯ ಲಕ್ಷಣಗಳಾಗಿದ್ದು, ನಮಗೆ ಅವಶ್ಯಕವಾದ ವಸ್ತುಗಳನ್ನು ಪೂರೈಸುವುದಲ್ಲದೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ದೊರೆಕಿಸಿಕೊಡುತ್ತದೆ. ಸಾಮಾನ್ಯವಾಗಿ ಕಚ್ಚಾ ವಸ್ತುಗಳನ್ನು ಸಿದ್ದ ವಸ್ತುಗಳನ್ನಾಗಿ ಪರಿವರ್ತಿಸುವ ಮಾನವನ ಎಲ್ಲ ಉದ್ಯೋಗಗಳನ್ನು ಕೈಗಾರಿಕೆ ಎಂದು ಕರೆಯುತ್ತಾರೆ.
 |
ಕೈಗಾರಿಕೆ |
ಕೈಗಾರಿಕೆಗಳ ಉಪಯೋಗಗಳು:-
* ವಿದೇಶಿ ವಿನಿಮಯ ಕೈಗಾರಿಕೆಗಳಿಂದ ಹೆಚ್ಚಾಗುತ್ತದೆ.
* ಮಾನವನ ಬೇಡಿಕೆಯನ್ನು ಪೂರೈಸುತ್ತದೆ.
* ಉದ್ಯೋಗ ಸೃಷ್ಟಿಯಾಗುತ್ತದೆ.
* ಸಾರಿಗೆ ಮತ್ತು ಸಂಪರ್ಕ ಅಭಿವೃದ್ದಿಯಾಗುತ್ತದೆ.
* ಸಂಪನ್ಮೂಲಗಳ ಸದ್ಭಳಕೆಯಾಗುತ್ತದೆ.
* ಮಾರುಕಟ್ಟೆ ವಿಸ್ತಾರಣೆಯಾಗುತ್ತದೆ.
* ರಾಷ್ಟ್ರೀಯ ಮತ್ತು ತಲಾ ಆದಾಯ ಹೆಚ್ಚಾಗುತ್ತದೆ.
* ಉತ್ಪಾದನೆ ಹೆಚ್ಚಾಗುತ್ತದೆ.
* ದೇಶದ ಆರ್ಧಿಕತೆಯು ವೃದ್ದಿಯಾಗುತ್ತದೆ.
* ವಿದೇಶಿ ವ್ಯಾಪಾರ, ವಹಿವಾಟು ಹೆಚ್ಚಾಗುತ್ತದೆ.
ಕೈಗಾರಿಕೆಯ ಸ್ಥಾನೀಕರಣದ ಅಂಶಗಳು
ಒಂದು ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕಾದರೆ ಈ ಕೆಳಕಂಡ ಅಂಶಗಳು ಪ್ರಮುಖವಾದ ಪತ್ರ ವಹಿಸುತ್ತದೆ.
* ಕಚ್ಚಾವಸ್ತುಗಳು
* ಶಕ್ತಿ ಸಂಪನ್ಮೂಲಗಳು
* ಸಾರಿಗೆ ಮತ್ತು ಸಂಪರ್ಕ
* ವಾಯುಗುಣ
* ಕಾರ್ಮಿಕರು
* ಬ್ಯಾಂಕಿಂಗ್ ಸೌಲಭ್ಯ
* ಬಂಡವಾಳ
* ಮಾರುಕಟ್ಟೆ .
ಕೈಗಾರಿಕೆಯ ವಿಧಗಳು
ಕೈಗಾರಿಕೆಯನ್ನು ಅವುಗಳ ಬಂಡವಾಳ, ಉತ್ಪಾದನೆಯ ಆಧಾರದ ಮೇಲೆ ಈ ಕೆಳೆಕಂಡಂತೆ ವಿಂಗಡಿಸಲಾಗಿದೆ.
1) ಬೃಹತ್ ಪ್ರಮಾಣದ ಕೈಗಾರಿಕೆ
2) ಮಧ್ಯಮ ಪ್ರಮಾಣದ ಕೈಗಾರಿಕೆಗಳು
3) ಸಣ್ಣ ಪ್ರಮಾಣದ ಕೈಗಾರಿಕೆಗಳು
4) ಗೃಹ / ಗುಡಿ ಕೈಗಾರಿಕೆಗಳು
1) ಬೃಹತ್ ಪ್ರಮಾಣದ ಕೈಗಾರಿಕೆ :-
ಬೃಹತ್ ಪ್ರಮಾಣದ ಕೈಗಾರಿಕೆಗಳು ದೊಡ್ಡ ಪ್ರಮಾಣದ ಕೈಗಾರಿಕೆಗಳಾಗಿದ್ದು, ಹೆಚ್ಚು ಜನ ಕಾರ್ಮಿಕರನ್ನು ಒಳಗೊಂಡಿದ್ದು, ಬಂಡವಾಳವು ಕೂಡ ಹೆಚ್ಚಾಗಿದ್ದು, ಉತ್ಪಾದನೆಯು ಕೂಡ ಅಧಿಕಪಟ್ಟುದ್ದಾಗಿರುತ್ತದೆ. ಈ ಕೈಗಾರಿಕೆಯನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತದೆ
* ದೊಡ್ಡ ಪ್ರಮಾಣದ ಕೈಗಾರಿಕೆಗಳು :-
ಕನಿಷ್ಟ 10 ಕೋಟಿಗಿಂತ ಹೆಚ್ಚು ಆದರೆ 100 ಕೋಟಿಗಿಂತ ಕಡಿಮೆ ಬಂಡವಾಳವನ್ನು ಹೂಡುವಂತಹ ಕೈಗಾರಿಕೆಗಳಾಗಿವೆ.
* ಬಹುದೊಡ್ಡ ಕೈಗಾರಿಕೆಗಳು :-
100 ಕೋಟಿಗಳಿಗಿಂತ ಅಧಿಕ ಬಂಡವಾಳವನ್ನು ಹೂಡುವಂತಹ ಕೈಗಾರಿಕೆಗಳಾಗಿವೆ. ಉದಾ = ಕಬ್ಬಿಣ & ಉಕ್ಕು, ಬಟ್ಟೆ, ಸಿಮೆಂಟ್ ಕಾರ್ಖಾನೆಗಳು
2) ಮಧ್ಯಮ ಪ್ರಮಾಣದ ಕೈಗಾರಿಕೆಗಳು :-
ಈ ಕೈಗಾರಿಕೆಗಳು 2 ಕೋಟಿಯಿಂದ 10 ಕೋಟಿವರೆಗೆ ಬಂಡವಾಳವನ್ನು ಹೂಡಿ ಯಂತ್ರಗಳು ನೌಕರರನ್ನು, ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಮಧ್ಯಮ ಪ್ರಮಾಣದ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಎನ್ನುತ್ತಾರೆ.
3) ಸಣ್ಣ ಪ್ರಮಾಣದ ಕೈಗಾರಿಕೆಗಳು :-
ವೇತನದ ಆಧಾರದ ಮೇಲೆ 10 ರಿಂದ 50 ಮಂದಿ ಕಾರ್ಮಿಕರನ್ನು ಹೊಂದಿರುವ ಹಾಗೂ ಯಂತ್ರ ಮತ್ತು ವಿದ್ಯುತ್ ನ್ನು ಬಳಸಿ ಉತ್ಪಾದನೆ ಮಾಡುವ ಕಾರ್ಖಾನೆಗಳನ್ನು ಸಣ್ಣ ಪ್ರಮಾಣದ ಕಾರ್ಖಾನೆ ಎನ್ನುವರು.
ಉದಾ = ಸೈಕಲ್, ಹೊಲಿಗೆ ಯಂತ್ರಗಳು, ಸಾಬೂನು
4) ಗೃಹ / ಗುಡಿ ಕೈಗಾರಿಕೆಗಳು :-
ಗೃಹ ಕೈಗಾರಿಕೆಗಳನ್ನು ಗುಡಿ ಕೈಗಾರಿಕೆ ಎಂದು ಕರೆಯುತ್ತಾರೆ. ಕುಟುಂಬದ ಸದಸ್ಯರು ವೈಯುಕ್ತಿಕವಾಗಿ ವ್ಯವಸ್ಥೆಗೊಳಿಸಿ ಖಾಸಗಿ ಸಂಪನ್ಮೂಲ ಆಧವಾ ಸರ್ಕಾರದ ಸಹಾಯ ಧನವನ್ನು ಬಳಸಿಕೊಂಡು ಪೂರ್ಣಾವಧಿ ಅಧವಾ ಅಲ್ಪಾವಧಿವರೆಗೆ ಇರುವ ಕೈಗಾರಿಕೆಗಳನ್ನು ಗೃಹ / ಗುಡಿ ಕೈಗಾರಿಕೆಗಳು ಎಂದು ಕರೆಯುತ್ತಾರೆ.
ಉದಾ = ಚಾಪೆ, ಅಗರಬತ್ತಿ, ಮೇಣ ತಯಾರಿಕೆ.
ಕಚ್ಚಾ ವಸ್ತುಗಳನ್ನು ಆಧರಿಸಿ ಕೈಗಾರಿಕೆಗಳನ್ನು ವಿವಿಧ ಪ್ರಕಾರಗಳನ್ನಾಗಿ ವಿಂಗಡಿಸಲಾಗಿದೆ.
1) ವ್ಯವಸಾಯ ಆಧಾರಿತ ಕೈಗಾರಿಕೆಗಳು
2) ಖನಿಜ ಆಧಾರಿತ ಕೈಗಾರಿಕೆಗಳು
3) ಅರಣ್ಯ ಆಧಾರಿತ ಕೈಗಾರಿಕೆಗಳು
4) ರಾಸಾಯನಿಕ ಕೈಗಾರಿಕೆಗಳು
ಉದ್ಯಮ, ಉತ್ಪಾದಕ ಉದ್ಯಮಗಳ ಗುಂಪು ಅಥವಾ ಸರಕುಗಳು, ಸೇವೆಗಳು ಅಥವಾ ಆದಾಯದ ಮೂಲಗಳನ್ನು ಉತ್ಪಾದಿಸುವ ಅಥವಾ ಪೂರೈಸುವ ಸಂಸ್ಥೆಗಳು. ಅರ್ಥಶಾಸ್ತ್ರದಲ್ಲಿ, ಕೈಗಾರಿಕೆಗಳನ್ನು ಸಾಮಾನ್ಯವಾಗಿ ಪ್ರಾಥಮಿಕ, ಮಾಧ್ಯಮಿಕ, ತೃತೀಯ ಮತ್ತು ಕ್ವಾಟರ್ನರಿ ಎಂದು ವರ್ಗೀಕರಿಸಲಾಗಿದೆ; ದ್ವಿತೀಯ ಕೈಗಾರಿಕೆಗಳನ್ನು ಮತ್ತಷ್ಟು ಭಾರೀ ಮತ್ತು ಹಗುರವಾಗಿ ವರ್ಗೀಕರಿಸಲಾಗಿದೆ
ಧನ್ಯವಾದಗಳು