ಸೌರವ್ಯೂಹ (Solar System)
ಸೂರ್ಯನ ಪರಿವರಕ್ಕೆ "ಸೌರವ್ಯೂಹ" ಎಂದು ಕರೆಯುತರೆ. ಎಲ್ಲಾ ಗ್ರಹಗಳು ಸೂರ್ಯನನ್ನು ಸುತ್ತು ಹಾಕುತ್ತವೆ. ಪ್ರತಿ ಗ್ರಹವು ತನ್ನದೇ ಆದ ನಿರ್ದಿಷ್ಟ ಚಲನಾ ಪಧವನ್ನು ಹೊಂದಿದೆ. ಆ ಪಧವನ್ನು "ಕಕ್ಷಾಮಾರ್ಗ" or " ಭೂ ಪಧ" ಎನ್ನುವರು. [ 8 ಗ್ರಹಗಳು + ಉಪಗ್ರಹಗಳು + ಕ್ಷುದ್ರಗ್ರಹಗಳು + ಉಲ್ಕೆಗಳು + ಧೂಮಕೇತುಗಳ ಒಟ್ಟು ಪರಿವರಕ್ಕೆ ಸೌರವ್ಯೂಹ ಎನ್ನುವರು ] ಸೂರ್ಯನಿಗೆ ಹತ್ತಿರವಿರುವ ನಕ್ಷತ್ರ "ಪ್ರಾಕ್ಸಿಮ ಸೆಂಟಾರಿ' ಇದರ ದೂರ 4.33 ಜ್ಯೋತಿರ್ ವರ್ಷಗಳು. ಸೂರ್ಯನು ಸೌರವ್ಯೂಹದ ಕೇಂದ್ರವಾಗಿದೆ. ಸೌರವ್ಯೂಹವು ಆಕಾಶ ಗಂಗೆಯ ಕೇಂದ್ರದ ಸುತ್ತಲೂ ಪ್ರತಿ ಘಂಟೆಗೆ 7,92,000 ಕಿಮೀ ವೇಗದಲ್ಲಿ ಚಳಿಸುತ್ತದೆ. ಸೂರ್ಯನಿರುಯ ಕ್ಷೀರ ಪಧಕ್ಕೆ ಹತ್ತಿರದಲ್ಲಿರುವ ಕ್ಷೀರ ಪದ್ಧಗಳೆಂದರೆ ಲಾರ್ಜ್ಮೆಗಲಾನಿಕ್ ಕ್ಲೌಡ್ ಮತ್ತು ಸ್ಮಾಲ್ ಮೆಗಲಾನಿಕ್ ಕ್ಲೌಡ. ಸೌರವ್ಯೂಹದ ಒಟ್ಟು ದ್ರವ್ಯರಾಶಿಯಲ್ಲಿ ಶೇ 99 ರಷ್ಟು ದ್ರವ್ಯರಾಶಿ ಹೊಂದಿದೆ. ಸೌರವ್ಯೂಹವು 5 ಬಿಲಿಯನ್ ವರ್ಷಗಳ ಹಿಂದೆ ಉಗಮವಾಗಿದೆ ಎಂದು ತಿಳಿಸಿದಾರೆ.
 |
Solar System |
ಸೂರ್ಯ
ಸೂರ್ಯ ಸ್ವಪ್ರಕಾಶಮಾನವುಳ್ಳ ನಕ್ಷತ್ರವಾಗಿದೆ. ಶೇ 71 ರಷ್ಟು ಜಲಜನಕ, ಶೇ 27 ರಷ್ಟು ಹೀಲಿಯಂ ಹಾಗೂ ಇತರೆ ಅನಿಲಗಳನ್ನು ಹೊಂದಿದೆ. ಜಲಜನಕಗಳ ಸಮ್ಮಿಲನದಿಂದ ಹೀಲಿಯಂ ಉತ್ಪತಿಯಾಗಿ ಶಾಖ & ಬೆಳಕು ಉಂಟಾಗುವುದನ್ನು ಬೈಜಿಕ ಸಮ್ಮಿಲನ ಎನ್ನುವರು. ಸೂರ್ಯನ ವ್ಯಾಸ 13,90,600 ಕಿಮೀ ಆಗಿದೆ. ಸೂರ್ಯನಿಗೆ ಗುರುತ್ವ ಶಕ್ತಿ ಇದ್ಡು ಇತರೆ ಗ್ರಹಗಳನ್ನು ತನ್ನ ಸುತ್ತ ಸುತ್ತುವಂತೆ ಮಾಡುತ್ತದೆ. ಭೂಮಿಯ ತ್ರಿಜ್ಯಕ್ಕಿಂತ ಸೂರ್ಯ ತ್ರಿಜ್ಯ 109 ಪಟ್ಟು ಹೆಚ್ಚು ಗಾತ್ರ ಹೊಂದಿದೆ. ಸೂರ್ಯನ ಕೇಂದ್ರ ಭಾಗದಲ್ಲಿ 20 ದಶಲಕ್ಷ ಸೆಂಟಿಗ್ರೇಡ್ ಉಷ್ಣಾಂಶ ಹೊಂದಿದೆ. ಸೂರ್ಯನ ಹೊರ ವಲಯದಲ್ಲಿ 6000 ಸೆ. ಉಷ್ಣಾಂಶವಿದೆ. ಸೂರ್ಯ ಅಕ್ಷಭ್ರಮಣದ ಅವಧಿ 27 ದಿನಗಳು. ಸೂರ್ಯನು ಪೂರ್ವದಿಂದ ಪಕ್ಷಿಮಕ್ಕೆ ತಿರುಗುತ್ತಾನೆ. 1 ಸೇಕಂಡ್ ಗೆ 600 ಮಿಲಿಯನ್ ಟನ್ ಜಲಜನಕವು ಹೀಲಿಯಂ ಆಗಿ ಪರಿವರ್ತನೆಯಾಗುತ್ತದೆ.
ಬುಧ( Mercury )
ಇದು ಸೂರ್ಯನಿಗೆ ಹತ್ತಿರದ ಗ್ರಹ. ಇದು ಸೌರಮಂಡಲದ(solar system) ಅತ್ಯಂತ ಚಿಕ್ಕ ಗ್ರಹವಾಗಿದೆ. ಇದು ಸೂರ್ಯನಿಂದ 58 ದಶಲಕ್ಷ ಕಿಮೀ ಗಳಷ್ಟು ದೂರದಲ್ಲಿದೆ. ಇದು ಭೂಮಿಯ ಶೇ 40 ರಷ್ಟಿದೆ. ಇದು ಸೌರವ್ಯೂಹದಲ್ಲೇ ಅತ್ಯಂತ ಕಡಿಮೆ ಪರಿಭ್ರಮಣ ಅವಧಿ ಹೊಂದಿರುವ ಗ್ರಹವಾಗಿದೆ. ಇದು ಅತಿ ಹೆಚ್ಚು ಕಂದಕಗಳನ್ನು ಹೊಂದಿರುವ ಗ್ರಹವಾಗಿದೆ. ಅಕ್ಷಭ್ರಮಣ 58.7 ದಿನಗಳು , ಪರಿಭ್ರಮಣ 88 ದಿನಗಳು. ಇದರ ವ್ಯಾಸ 4,827 ಕಿ ಮೀ. ಇದರ ಉಷ್ಣಾಂಶ - ಸೂರ್ಯನ ಅಭಿಮುಖ ಭಾಗದಲ್ಲಿ 427ಡಿಗ್ರೀ ಸೆ ಮತ್ತೊಂದು ಭಾಗದಲ್ಲಿ - 185ಡಿಗ್ರೀ ಸೆ. ಈ ಗ್ರಹವು ಒಂದು ಭಾಗವು ಅತಿ ಉಷ್ಣಾಂಶವಿದ್ದರೆ ಮತ್ತೊಂದು ಕಡೆ ಶೀತದಿಂದ ಕೊಡಿದೆ.
* ಇದು ಇಂಗಾಲದ ಡೈಆಕ್ಸೈಡನ್ನು ಒಳಕೋಂಡಿದೆ
* ಇದಕ್ಕೆ ಗುರುತ್ವಾಕರ್ಷ ಇಲ್ಲದ ಕಾರಣ ಯಾವುದೇ ಉಪಗ್ರಹ ಇಲ್ಲ
* ಇದನ್ನು ಮೆರಿನರ್ - ಟನ್ ಎಂಬ ಬಾಹ್ಯಕಾಶ ನೌಕೆ 1974-75ರಲ್ಲಿ ಚಿತ್ರ ತೆಗೆಯಿತು.
* ಮೆಸೆಂಜರ್ ಬಾಹ್ಯಾಕಾಶ ನೌಕೆ 2008 ಜನವರಿ 14ರಂದು ಇದರ ಮೇಲ್ಮೈ ಚಿತ್ರ ತೆಗೆಯಿತು.
ಶುಕ್ರ ( Venus )
ಇದು ಭೂಮಿಗೆ ಹತ್ತಿರವಾಗಿರುವ ಗ್ರಹವಾಗಿದೆ. ಶುಕ್ರಗ್ರಹವು ಸೂರ್ಯನಿಂದ 107 ದಶಲಕ್ಷ ಕಿ. ಮೀ ದೂರದಲ್ಲಿದೆ. ಅತ್ಯಂತ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುವ ಗ್ರಹ. ಇದರಲ್ಲಿರುವ ಧೂಳು ಮತ್ತು ಅನಿಲ ರಾಶಿಯಿಂದ ಪ್ರಜ್ವಲಿಸುತ್ತದೆ. ಅಕ್ಷಭ್ರಮಣ 243 ದಿನಗಳು ಪರಿಭ್ರಮಣ 225 ದಿನಗಳು. ಇದರ ಅಕ್ಷಭ್ರಮಣ ಅವಧಿಯು ಪರಿಭ್ರಮಣ ಅವಧಿಗಿಂತ ಹೆಚ್ಚಾಗಿರುತ್ತದೆ. ಇದು ಗುರುತ್ವ ಇಲ್ಲ ಇದರಿಂದ ಇದಕ್ಕೆ ಉಪಗ್ರಹ ಇಲ್ಲ. ಶುಕ್ರ ಗ್ರಹವನ್ನು ಭೂಮಿಯ ಅವಳಿ ಗ್ರಹ ಎನ್ನುವರು. ಏಕೆಂದರೆ ಅದರ ಗಾತ್ರ ಮತ್ತು ಆಕರಗಳು ಭೂಮಿಯನ್ನು ಹೋಲುತ್ತದೆ. ಇದರ ಭೂಮಂಡಲವು ಸಲ್ಫ್ಯುರಿಕ್ ಆಮ್ಲದ ಮೋಡಗಳಿಂದ ಮಾಡಲ್ಪಟ್ಟಿರುವುದರಿಂದ ಭೂಮಿಯಿಂದ ಈ ಗ್ರಹವನ್ನು ವೀಕ್ಷಿಸಬಹುದು. ಇದು ಸೂರ್ಯನ ಸುತ್ತುವ ಎಲ್ಲಾ ಗ್ರಹಗಳ ದಿಕ್ಕಿಗೆ ವಿರುದ್ದವಾಗಿ ಸುತ್ತುತ್ತದೆ.
ಭೂಮಿ (Earth)
ಇದು ಜೀವಿಗಳನ್ನು ಹೊಂದಿರುವ ಏಕೈಕ ಗ್ರಹವಾಗಿದೆ. 4.54 ಬಿಲಿಯನ್ ವರ್ಷಗಳ ಹಿಂದೆ ಇದು ಉಗಮವಾಯಿತು ಎನ್ನುತ್ತಾರೆ. 510.9 ದಶ ಲಕ್ಷ ಚ. ಕಿ. ಮೀ (ಒಟ್ಟು ಕ್ಷೇತ್ರ). 149.1 ದಶ ಲಕ್ಷ ಕಿಮೀ (ಭೂ ಭಾಗ) (ಶೇ 29.2) 361.8 ದಶ ಲಕ್ಷ ಚ. ಕಿ. ಮೀ (ಜಲಭಾಗ ಶೇ 70.8) ಸರಾಸರಿ ಉಷ್ಣಾಂಶ 14 ಡಿಗ್ರೀ ಸೆಂ. ಸೂರ್ಯನಿಂದ ದೂರ 149.6 ದಶ ಲಕ್ಷ ಕಿ. ಮೀ ( 1 ಆಸ್ಟ್ರೋನಾಮಿಕಲ್ ಯೂನಿಟ್ ). ಭೂಮಿಯ ಪರಿಭ್ರಮಣ ಅವಧಿ 365.25 ದಿನಗಳು. ಅಕ್ಷಭ್ರಮಣ ಅವಧಿ 23 ಘಂಟೆ 56 ನಿಮಿಷ 4.10 ಸೇಕಂಡ್, ದ್ರವ್ಯ ರಾಶಿ - 1.00, ಸಾಂದ್ರತೆ -5.5 ಸೌರವ್ಯೂಹದ ನಾಲ್ಕು ಆಂತರಿಕ ಗ್ರಹ ( ಬುಧ, ಶುಕ್ರ, ಭೂಮಿ, ಮಂಗಲ )ಗಳಲ್ಲಿ ಒಂದಾಗಿದೆ. ಇದರ ಸ್ವಭಾವಿಕ ಉಪಗ್ರಹ ಚಂದ್ರ ನಾಗಿದೆ. ವಾಯುಮಂಡದಲ್ಲಿರುವ ವಿವಿಧ ಅನಿಲಗಳ ಪ್ರಮಾಣಗಳೆಂದರೆ , ಸಾರಜನಕ ಶೇ 78.08%, ಆಮ್ಲಜನಕ ಶೇ 20.95%, ಆರ್ಗಾನ್ ಶೇ 0.93%, ಮತ್ತು Co2 ಶೇ 0.038%
ಮಂಗಳ (Mars)
ಇದು ಸೂರ್ಯನಿಂದ 4 ನೇ ಗ್ರಹವಾಗಿದೆ. ಮಾರ್ಸ್ ಎಂದು ಕರೆಯಲು ಕಾರಣ ರೋಮನ್ ಉಪದೇವತೆಯ ಹೆಸರು. ಸೌರವ್ಯೂಹದ(solar system) 4 ಆಂತರಿಕ ಗ್ರಹಗಳಲ್ಲಿ 4 ನೇ ಆಂತರಿಕ ಗ್ರಹವಾಗಿದೆ. ಇದು ಸೂರ್ಯನಿಂದ 228 ದಶಲಕ್ಷ ಕಿ. ಮೀ ದೂರದಲ್ಲಿದೆ. ಇದು ಶೇ 95.2 ರಷ್ಟು ಇಂಗಾಲದ ಡೈ ಆಕ್ಸೈಡ್ ಶೇ 2.7 ರಷ್ಟು ಸಾರಜನಕ, ಶೇ 1.6 ರಷ್ಟು ಆರ್ಗಾನ್. 0.2 ರಷ್ಟು ಆಮ್ಲಜನಕವನ್ನು ಹೊಂದಿದೆ. ಇದರ ಅಕ್ಷಭ್ರಮಣವು 24 ಗಂಟೆ 6 ನಿಮಿಷಗಳಾಗಿವೆ ಇದರ ಪರಿಭ್ರಮಣವು 687 ದಿನಗಳಾಗಿವೆ.
ಗುರು ( Jupiter )
ಸೌರವ್ಯೂಹ ದಲ್ಲಿ(solar system) ಪ್ರಜ್ವಲಿಸುವ 2 ನೇ ಗ್ರಹವಾಗಿದೆ ಇದು. ಸೌರವ್ಯೂಹದಲ್ಲೇ ಅತಿ ದೊಡ್ಡ ಗ್ರಹವಾಗಿದೆ. ಇದು ಭೂಮಿಕಿನತ ಸಾವಿರ ಪಟ್ಟು ದೊಡ್ಡದಾಗಿದೆ. ಅತಿ ವೇಗವಾಗಿ ಚಲಿಸುವ ಗ್ರಹವಾಗಿದೆ. ಇದರ ಅಕ್ಷಭ್ರಮಣ 9 ಘಂಟೆ 50 ನಿಮಿಷ ಇದು ಸೌರವ್ಯೂಹದಲ್ಲೇ ಅತಿ ಕಡಿಮೆ ಅಕ್ಷಭ್ರಮಣ ಅವಧಿ ಹೊಂದಿರುವ ಗ್ರಹವಾಗಿದೆ. ಪರಿಭ್ರಮಣವು 11.86 ವರ್ಷವಾಗಿದೆ.
ಶನಿ ( Saturn )
ಸೂರ್ಯನಿಂದ 1,426 ದಶಲಕ್ಷ ಕಿ. ಮೀ ದೂರದಲ್ಲಿದ್ದು ಇದರ ಅಕ್ಷಭ್ರಮಣ 10 ಗಂಟೆ 14 ನಿಮಿಷ ಮತ್ತು ಪರಿಭ್ರಮಣ 29.46 ವರ್ಷಗಳು. ಸೌರವ್ಯೂಹದಲ್ಲಿ ಅತ್ಯಂತ ಸುಂದರವಾದ ಗ್ರಹ ಇದು. ಕಾರಣ ಬಳೆಗಳನ್ನು ಹೊಂದಿರುವುದರಿಂದ ಸುಂದರವಾಗಿದೆ. ಪ್ರಮುಖವಾಗಿ A, B, C ಎಂಬ 3 ವಿಧದ ಬಳೆಗಳಿದ್ದೂ ಅವುಗಳಲ್ಲಿ 10 ಸಾವಿರಗಿಂತ ಹೆಚ್ಚು ಬಳೆಗಳನ್ನು ಹೊಂದಿದೆ. ಈ ಮೂರು ಬಳೆಗಳು ಪ್ರತ್ಯೇಕವಾಗಿದ್ದು A, B, ಮಧ್ಯದ ವಿಭಾಗವನ್ನು ಕ್ಯಾಸ್ಟಿನೋ ವಿಭಾಗವೆಂದು ಫ್ರಂಜ್ ಖಗೋಳ ಶಾಸ್ತ್ರಜ್ನ ಗಿಯೋ ವನ್ನಿ ಕ್ಯಾಸಿನಿ ಹೆಸರಿಸಿದ್ದಾರೆ. ಸೌರಮಂಡಲದ ಎರಡನೇ ದೊಡ್ಡ ಗ್ರಹ ಇದು.
ಶನಿ ಗ್ರಹವು ಗಂಟೆಗೆ 1,800 ಕಿ ಮೀ ವೇಗದಲ್ಲಿ ಮಾರುತಗಳು ಬೀಸುತ್ತದೆ. ಇದೊಂದು ಅನಿಲ ದೈತ್ಯವಾಗಿದ್ದು, ಶೇ 96 ರಷ್ಟು ಜಲಜನಕ ಹಾಗೂ ಶೇ 3 ರಷ್ಟು ಹೀಲಿಯಂ ಶೇ 0.4 ರಷ್ಟು ಮಿಧೆನ್ ಹೊಂದಿದೆ. ಇದು 27 ಉಪಗ್ರಹಗಳನ್ನು ಹೊಂದಿದೆ (ಇತ್ತೀಚಿಕೆ 60 ಉಪಗ್ರಹಗಳ ಬಗ್ಗೆ ಸ್ಪಸ್ಟ ಮಾಹಿತಿ ದೊರೆತಿದೆ.
ಯುರೇನಸ್ ( Uranus )
ಸೂರ್ಯನಿಂದ 7 ನೇ ಗ್ರಹವಾಗಿದೆ ಹಾಗೂ 3 ನೇ ದೊಡ್ಡ ಗ್ರಹವಾಗಿದೆ. ಇದು ಸೂರ್ಯನಿಂದ 2,868 ದಶಲಕ್ಷ ಕಿಮೀ ದೂರದಲ್ಲಿದೆ. ಇದರ ಅಕ್ಷಭ್ರಮಣ ಅವಧಿ 16 ಗಂಟೆ , ಪರಿಭ್ರಮಣ ಅವಧಿ 84 ವರ್ಷಗಳು. ಇದನ್ನು ನೀಲಿ ಗ್ರಹ ಎನ್ನುವರು ಕಾರಣ ಇದು ಮಿಧೆನ್ ನನ್ನು ಒಳಗೊಂಡಿದೆ. ಈ ಗ್ರಹದಲ್ಲಿ ಶೇ 83 ರಷ್ಟು ಜಲಜನಕ, ಶೇ 15 ರಷ್ಟು ಹೀಲಿಯಂ, ಶೇ 2.3 ರಷ್ಟು ಮೀಧೆನ್ ಇದೆ. ಇದನ್ನು ಉರುಳುವ ಗ್ರಹ ಎನ್ನುವರು ಇದು 17 ಉಪಗ್ರಹ ಹೊಂದಿದೆ [ ಇತ್ತೀಚಿನ ಸಂಶೋಧನೆಯ ಪ್ರಕಾರ 27 ಉಪಗ್ರಹ ಹೊಂದಿದೆ ]
ನೆಪ್ಚೂನ್ ( Neptune )
ನೆಪ್ಚೂನ್ ಸೂರ್ಯನಿಂದ 8 ನೇ ಗ್ರಹವಾಗಿದೆ. ಸೂರ್ಯನಿಂದ ಅತಿ ದೂರದ ಗ್ರಹವಾಗಿರುವುದರಿಂದ ಅತಿ ತಂಪಾಗಿದೆ. ಇದರ ಪರಿಭ್ರಮಣ ಅವಧಿ 164 ವರ್ಷ ಮತ್ತು ಇದರ ಅಕ್ಷಪ್ರಮಣ ಅವಧಿ 60 ದಿನಗಳಾಗಿದೆ. ಅನಿಲ ದೈತ್ಯವಾಗಿದ್ದು ಶೇ 80 ರಷ್ಟು ಜಲಜನಕ, ಶೇ 19 ರಷ್ಟು ಹೀಲಿಯಂ, ಶೇ 1.5 ರಷ್ಟು ಮೀಧೆನ್ ಹೊಂದಿದೆ, ಆದುದರಿಂದ ಇದರ ಬಣ್ಣ ನೀಲಿಯಾಗಿದೆ.
ಧನ್ಯವಾದಗಳು