Type Here to Get Search Results !

ಮಾನ್ಸೂನ್ ಮಾರುತಗಳು | for exam

ಮಾನ್ಸೂನ್ ಮರುತಗಳು / ಮಳೆಗಾಲ 


                          ಭಾರತದಲ್ಲಿ ಮಾನ್ಸೂನ್ ಮರುತಗಳ ಕಾಲ ಎಂದರೆ ಮಳೆಗಾಲ ಎಂದರ್ಧ. ಭಾರತದಲ್ಲಿ ಪಡೆಯುವ ಮಳೆಯು "ಮಾನ್ಸೂನ್ ಮಾರುತ" ಗಳಿಂದಾಗಿದ್ದು, ಈ ಮಾನ್ಸೂನ್ ಮಾರುತಗಳು ಜಲಪೊರಿತ ಮಾರುತಗಲಾಗಿದ್ದು, ಭಾರತದಲ್ಲಿ ಹೆಚ್ಚು ಭಾಗದಲ್ಲಿ ಮಳೆ ಸುರಿಸುತ್ತದೆ. ಮಾನ್ಸೂನ್ ಮರುತಗಳು ಎರಡು ರೀತಿಯಲ್ಲಿ ಆಗಮಿಸುತ್ತದೆ. 
1) ಅರಬ್ಬೀ ಸಮುದ್ರ ವಿಭಾಗ 
2) ಬಂಗಾಳಕೊಲ್ಲಿ ವಿಭಾಗ 

1) ಅರಬ್ಬೀ ಸಮುದ್ರ ವಿಭಾಗ[ಮಾನ್ಸೂನ್ ಮಾರುತಗಳು ಆಗಮಿಸುವ ವಿಧ] :-

                                       ಈ ವಿಭಾಗವು ಧಾರ್ ಮರುಭೂಮಿಯ ಕಡಿಮೆ ಒತ್ತಡದ ಕಡೆಗೆ ವಿಸ್ತರಿಸುವುದು. ಈ ವಿಭಾಗವು ಬಂಗಾಳಕೊಲ್ಲಿ ವಿಭಾಗಕ್ಕಿಂತ 3 ಪಟ್ಟು ಬಲಯುತವಾಗಿದ್ದು, ಭಾರತದ ಭೂ ಪ್ರದೇಶಕ್ಕೆ ಮೇ 25 ರಂದು ಪ್ರವೇಶಿಸುತ್ತದೆ. ಇದು ಈಶಾನ್ಯ ದಿಕ್ಕನ್ನು ತಲುಪಿ ಹಿಮಾಲಯದತ್ತ ಮುಂದುವರೆಯುತ್ತದೆ. ಅರಬ್ಬೀ ಸಮುದ್ರದ ಮಾನ್ಸೂನ್ ಮಾರುತಗಳಿಂದ ದಕ್ಷಿಣ ಭಾರತವು ಉತ್ತರ ಭಾರತಕ್ಕಿಂತ ಹೆಚ್ಚು ಮಳೆಯನ್ನು ಪಡೆಯುತ್ತದೆ. 

2) ಬಂಗಾಳಕೊಲ್ಲಿ ವಿಭಾಗ[ಮಾನ್ಸೂನ್ ಮಾರುತಗಳು ಆಗಮಿಸುವ ವಿಧ] :-

                                      ಇದು ಅಂಡಮಾನ್ & ನಿಕೊಬಾರ್ ದ್ವೀಪಗಳ ಮೇಲೆ ಮಳೆಸುರಿಸುತ್ತದೆ. ಇವು ಭಾರತದ ಪ್ರಮುಖ ಪ್ರದೇಶಗಳತ್ತ ಧಾವಿಸುವುದು. ಬಂಗಾಳಕೊಲ್ಲಿ ವಿಭಾಗವು ಕನ್ಯಾಕುಮಾರಿ ಭೂಶಿರದಿಂದ ಓಡಿಶ ರಾಜ್ಯವನ್ನು ಆಕ್ರಮಿಸುವುದು. ನಂತರ ವಾಯುವ್ಯ ಮಾರ್ಗದಲ್ಲಿ ತಿರುಗಿ ಇಂಡೋ - ಗಾಂಗ್ಟಾಕ್ ಮೈದಾನವನ್ನು ತಲುಪುವುದು. ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರ ವಿಭಾಗದ ಮಾನ್ಸೂನ್ ಮಾರುತಗಳು ಛೋಟಾನಾಗ್ಪುರ ಪ್ರದೇಶದ ಬಳಿ ಸಂಧಿಸುತ್ತದೆ. 



ಭಾರತದಲ್ಲಿ ಮಾನ್ಸೂನ್ ಮಾರುತಗಳನ್ನು ಪ್ರಮುಖವಾಗಿ 2 ವಿಧದಲ್ಲಿ ವಿಂಗಡಿಸಲಾಗುತ್ತದೆ

1) ನೈರುತ್ಯ ಮಾನ್ಸೂನ್ 
2) ಈಶಾನ್ಯ ಮಾನ್ಸೂನ್ 

1) ನೈರುತ್ಯ ಮಾನ್ಸೂನ್ ( South West Monsoon)(ಮುಂಗಾರು ಮಳೆ):-

                                     ಭಾರತದಲ್ಲಿ ನೈರುತ್ಯ ಮಾನ್ಸೂನ್ ಅವಧಿಯಲ್ಲಿ ಶೇ 75 ರಷ್ಟು ಮಳೆಯನ್ನು ಪಡೆಯುತ್ತದೆ. ಮೇ ತಿಂಗಳು ಅಂತ್ಯದ  ಮಳೆಗೆ ಸೂರ್ಯನ ಕಿರಣಗಳು ಮಧ್ಯ ಭಾರತದ ಮೇಲೆ ( ಉತ್ತರ ಗೋಳಾರ್ಧದ ಕಡೆ) ನೇರವಾಗಿ ಬೀಳುವುದರಿಂದ ವಾಯುವ್ಯ ಭಾರತದಲ್ಲಿ ಉಷ್ಣಾಂಶವು ಹೆಚ್ಚಾಗಿರುತ್ತದೆ. ಇದರಿಂದ ರಾಜಸ್ಥಾನದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗುತ್ತದೆ. ಈ ಅತಿ ಕಡಿಮೆ ಒತ್ತಡವು ಸಮಭಾಜಕ ವೃತ್ತದ ದಕ್ಷಿಣ ದಿಂದ ಬರುವ ವಾಣಿಜ್ಯ ಮಾರುತಗಳನ್ನು ಆಕರ್ಷಿಸುತ್ತದೆ.  

              ಫೇರಲ್ ನಿಯಮ   :

                                        ಈ ಮಾರುತಗಳು ಸಮಭಾಜಕ ವೃತ್ತವನ್ನು ದಾಟಿದ ಕೊಡಲೇ ಫೆರಾಲ್ ನಿಯಮದ ಪ್ರಕಾರ ತಮ್ಮ ದಿಕ್ಕನ್ನು ಬದಲಿಸಿಕೊಂಡು    ನೈರುತ್ಯ ಮಾನ್ಸೂನ್ ಮಾರುತಗಳಾಗಿ ಮಾರ್ಪಡುತ್ತದೆ . ಭಾರತದ ಮೇಲೆ ಬೀಸುವ ನೈರುತ್ಯ ಮಾನ್ಸೂನ್ ಮರುತಗಳು ದಕ್ಷಿಣ ಗೋಳದಲ್ಲಿ  ಉಗಮವಾಗುತ್ತವೆ. ಹೀಗಾಗಿ ಇವುಗಳನ್ನು ದಕ್ಷಿಣ ಗೋಳದ ಮಾರುತಗಳು or ಜಲ ಗೋಳದ ಮಾರುತಗಳು ಎನ್ನುವರು. 

ನೈರುತ್ಯ ಮಾನ್ಸೂನ್ ( South West Monsoon)ಗಳ ವಿಸ್ತಾರ ಮತ್ತು ಬೆಳೆಯುವ ಬೆಳೆಗಳು :-

                 ನೈರುತ್ಯ ಮಾನ್ಸೂನ್ ನನ್ನು "ಮುಂಗಾರು ಮಳೆ" ಎಂದು ಕರೆಯಲಾಗುತ್ತದೆ. ಇವು ಭಾರತದಲ್ಲಿ ಅತಿ ಹೆಚ್ಚು ಭಾಗದಲ್ಲಿ ಮಳೆ ಸೂರಿಸುದ್ದದೆ. ಭಾರತದ ಒಟ್ಟು ವಾರ್ಷಿಕ ಮಳೆಯಲ್ಲಿ ಶೇ 75 ರಷ್ಟು ಮಳೆ ಈ ವೇಳೆಯಲ್ಲಿ ಬೀಳುತ್ತದೆ. ತಮಿಳುನಾಡು & ಪಂಜಾಬ್ ಹೊರತುಪಡಿಸಿ, ಭಾರತದ ಹೆಚ್ಚು ಭಾಗಕ್ಕೆ ನೈರುತ್ಯ ಮಾನ್ಸೂನ್ ಮಾರುತಗಳಿಂದ ಮಳೆ ಸುರಿಯುತ್ತದೆ. 
ಬೆಳೆಗಳು :- ನೈರುತ್ಯ ಮಾನ್ಸೂನ್ ಅವಧಿಯು ಜೂನ್ ನಿಂದ ಸೆಪ್ಟೆಂಬರ್ ತಿಂಗಳಾಗಿರುತ್ತದೆ. ಈ ಮಳೆಗೆ ಬೆಳೆಯುವ ಬೆಳೆಗಳನ್ನು ಖಾರೀಫ್ ಬೆಳೆಗಳೆನ್ನುವರು ಉದಾ : ಭತ್ತ , ಜೋಳ , ಮುಸುಕಿನ ಜೋಳ , ಹತ್ತಿ. 



2) ಈಶಾನ್ಯ ಮಾನ್ಸೂನ್ ಮಾರುತ (North East Monsoons)( ಹಿಂಗಾರು ಮಳೆ ):- 

             ಈಶಾನ್ಯ ಮಾರುತಗಳಿಂದ ಪಡೆಯುವ ಮಳೆಯನ್ನು ಹಿಂಗಾರು ಮಳೆ ಎನ್ನುವರು. ಇದನ್ನು ನಿರ್ಗಮಿಸುವ ಮಾನ್ಸೂನ್ ಮಾರುತಗಳ ಕಾಲ ಎಂದು ಕರೆಯುತ್ತಾರೆ. ಈಶಾನ್ಯ ಮರುತಗಳ ಅವಧಿಯು ಸೆಪ್ಟೆಂಬರ್ ಅಂತ್ಯದಿಂದ ಡಿಸೆಂಬರ್ ಆರಂಭದ ವರೆಗೆ ಕಂಡು ಬರುತ್ತದೆ. ದೇಶದ ಒಟ್ಟು ಮಳೆ ಹಂಚಿಕೆಯಲ್ಲಿ ವಾರ್ಷಿಕ ಮಳೆಯ ಶೇಕಡಾ 13 ರಷ್ಟು ಮಳೆಯನ್ನು ಈ ಮಾರುತದಿಂದ ಪಡೆಯಲಾಗುತ್ತದೆ. ಈಶಾನ್ಯ ದಿಕ್ಕಿನಿಂದ ಗಾಳಿಯು ಕಡಿಮೆ ಒತ್ತಡ ಪ್ರದೇಶವಾದ ಬಂಗಾಳಕೊಲ್ಲಿ ಕಡೆಗೆ ಉಂಟಾಗುವುದರಿಂದ ಆವರ್ತ ಮಾರುತ ಉಂಟಾಗಿ ಪೂರ್ವದ ತೀರದ ಕಡೆಗೆ ಗಾಳಿ ಬೀಸುತ್ತದೆ. 

     

ಈಶಾನ್ಯ ಮಾನ್ಸೂನ್ ಮಾರುತದ ವಿಸ್ತಾರ ಮತ್ತು ಬೆಳೆಗಳು :

                             ಈಶಾನ್ಯ ಮಾರುತದಿಂದ ಅಧಿಕ ಮಳೆಯು ತಮಿಳುನಾಡು ರಾಜ್ಯದಲ್ಲಿ ಉಂಟಾಗುತ್ತದೆ. ಈ ಅವಧಿಯಲ್ಲಿ ಪೂರ್ವ ಕರಾವಳಿಯ(ತಮಿಳುನಾಡು) ಕೆಲವೊಂದು ಬಂಡರುಗಳು [ ಚೆನ್ನೈ , ಎನ್ನೊರು , ಟಿಟುಕೋರಿಯನ್ ] ತಮ್ಮ ಕಾರ್ಯವನ್ನು ನಿಲ್ಲಿಸುತ್ತದೆ 
ಬೆಳೆಗಳು :   ಗೋಧಿ, ಬಾರ್ಲಿ, ಬಟಾಣಿ, ಸಾಸಿವೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.

ಮಾನ್ಸೂನ್ ಮಾರುತಗಳು
ಮಾನ್ಸೂನ್ ಮಾರುತ 

ಮಾನ್ಸೂನ್ ಮಾರುತಗಳು 
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad