ಭಾರತದ ಹಣಕಾಸು ಆಯೋಗ ( Finance Commission )
ಸಂವಿಧಾನದ 280 ನೇ ವಿಧಿಯ ಪ್ರಕಾರ ರಾಷ್ಟ್ರಾಧ್ಯಕ್ಷರು ಪ್ರತಿ 5 ವರ್ಷಗಳಿಗೆ ಒಮ್ಮೆ ಹಣಕಾಸು ಆಯೋಗವನ್ನು ರಚಿಸುತ್ತಾರೆ. ಈ ಆಯೋಗವು ಕೇಂದ್ರ ಹಾಗೂ ರಾಜ್ಯಗಳ ನಡುವೆ ಆದಾಯದ ಮೂಲಗಳು ಹೇಗೆ ಹಂಚಿಕೆಯಾಗಬೇಕು ಎಂಬುವುದರ ಬಗ್ಗೆ ಶಿಪಾರಸು ಮಾಡುತ್ತದೆ.
ಹಣಕಾಸು ಆಯೋಗದ ರಚನೆ
ಹಣಕಾಸು ಆಯೋಗವು ಒಬ್ಬ ಅಧ್ಯಕ್ಷ ಹಾಗೂ 4 ಮಂದಿ ಸದಸ್ಯರನ್ನು ಒಳಗೊಂಡಿರುತ್ತದೆ. ಇವರನ್ನು ರಾಷ್ಟ್ರಾಧ್ಯಕ್ಷರು 5 ವರ್ಷಗಳ ಅವಧಿಗೆ ನೇಮಕ ಮಾಡುತ್ತಾರೆ. ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆಯನ್ನು ಸಂಸತ್ತು ನಿರ್ದಾರಿಸುತ್ತದೆ. ಸಾರ್ವಜನಿಕ ವ್ಯವಹಾರಗಳ ಬಗ್ಗೆ ಅನುಭವ ಇರುವ ವ್ಯಕ್ತಿಯನ್ನು ಅಧ್ಯಕ್ಷನ್ನಾಗಿ ನೇಮಿಸಲಾಗುತ್ತದೆ. ಉಚ್ಚನ್ಯಾಯಲಯದ ನ್ಯಾಯಾಧೀಶರನ್ನು ಅಥವಾ ನ್ಯಾಯಾಧೀಶರಾಗುವ ಅರ್ಹತೆಯುಳ್ಳ, ಸಾರ್ವಜನಿಕ ಹಣಕಾಸು ವಿಷಯದಲ್ಲಿ ವಿಶೇಷ ಜ್ಞಾನ ಹೊಂದಿದ, ಹಣಕಾಸು ವಿಷಯ ಹಾಗೂ ಆಡಳಿತದಲ್ಲಿ ಹೆಚ್ಚಿನ ಅನುಭವವಿರುವ ಹಾಗೂ ಆರ್ಧಶಾಸ್ತ್ರದಲ್ಲಿ ವಿಶೇಷ ಜ್ಞಾನವನ್ನು ಹೊಂದಿರುವ ವ್ಯಕ್ತಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ.
ಕಾರ್ಯಗಳು :
ಹಣಕಾಸು ಆಯೋಗವು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ.
1. ಕೇಂದ್ರ ಹಾಗೂ ರಾಜ್ಯಗಳ ನಡುವಣ ಆದಾಯ ಹಂಚಿಕೆಗೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರಿಗೆ ಸಲಹೆ ನೀಡುತ್ತದೆ.
2. ಯಾವ ನಿಯಮವನ್ನು ಅನುಸರಿಸಿ ಕೇಂದ್ರವು ಭಾರತದ ಸಂಚಿತ ನಿಧಿಯಿಂದ ( Consolidated Fund ) ರಾಜ್ಯಗಳಿಗೆ ಧಾನ್ಯ ಸಹಾಯ ಮಾಡಬೇಕು ಎಂಬುವುದರ ಬಗ್ಗೆ ರಾಷ್ಟ್ರಾಧ್ಯಕ್ಷರಿಗೆ ಸಲಹೆ ನೀಡುತ್ತದೆ.
3. ಉತ್ತಮ ಹಣಕಾಸು ಸ್ಥಿತಿಯನ್ನು ಕಾಪಾಡಲು ರಾಷ್ಟ್ರಾಧ್ಯಕ್ಷರು ಕೇಳುವ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ ನೀಡುತ್ತದೆ
ಆಯೋಗವು ತಮಗೆ ಸಲ್ಲಿಸುವ ವರದಿಯನ್ನು ರಾಷ್ಟ್ರಾಧ್ಯಕ್ಷರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಈ ಆಯೋಗದ ಸಲಹೆಗಳನ್ನು ಕೇಂದ್ರ ಸರ್ಕಾರ ಒಪ್ಪಬಹುದು or ತಿರಸ್ಕರಿಸಬಹುದು.
1951ರಿಂದ 2025 ರ ವರೆಗಿನ Chairmanಗಳ ಪಟ್ಟಿ ಇಲ್ಲಿದೆ
Finance Commission | Years of Establishment | Chaiman list | Duration |
---|---|---|---|
1 | 1951 | K.C.Neogy | 1952-57 |
2 | 1956 | K Santhanam | 1957-62 |
3 | 1960 | A.K.Chanda | 1962-66 |
4 | 1964 | P.V>Rajamannar | 1966-69 |
5 | 1968 | Mahaveer Tyagi | 1969-74 |
6 | 1972 | K. brahmananda Reddy | 1974-79 |
7 | 1977 | J.M Shelat | 1979-84 |
8 | 1983 | Y.B Chavan | 1984-89 |
9 | 1987 | N.K.P Salve | 1989-95 |
10 | 1992 | K.C Pant | 1995-00 |
11 | 1998 | A.M. Khusro | 2000-05 |
12 | 2002 | C.Rangarajan | 2005-10 |
13 | 2007 | Dr.Vijay L.Kelkar | 2010-15 |
14 | 2013 | Dr.Y.V.Reddy | 2015-20 |
15 | 2017 | N.k Singh | 2020-25 |
ಧನ್ಯವಾದಗಳು