ಭಾರತದ ಕರಾವಳಿ ಪ್ರದೇಶ ( Coastal Line of India )
ಕರಾವಳಿ ಎಂದರೆ "ಸಮುದ್ರಕ್ಕೆ ತಾಗಿಕೊಂಡಿರುವ ಭೂ ಪ್ರದೇಶ ಅಥವಾ ಸಮುದ್ರದ ಹಾಗೂ ಸಾಗರಗಳ ತೀರ ಪ್ರದೇಶವಾಗಿದೆ. ಭಾರತ ದೇಶವು ಪೂರ್ವ ಮತ್ತು ಆಗ್ನೇಯದಲ್ಲಿ ಬಂಗಾಳ ಕೊಲ್ಲಿಯನ್ನು ಹಾಗೂ ಪಶ್ಚಿಮ ಮತ್ತು ನೈರುತ್ಯದಲ್ಲಿ ಅರಬ್ಬೀ ಸಮುದ್ರವನ್ನು ದಕ್ಷಿಣದಲ್ಲಿ ಹಿಂದೂ ಮಹಾಸಾಗರವನ್ನು ಹೊಂದಿದ್ದು, ಇವುಗಳ ತೀರದ ಪ್ರದೇಶವನ್ನೇ "ಕರಾವಳಿ ಪ್ರದೇಶ" ಎನ್ನುವರು .
ಕರಾವಳಿಯ ಮಹತ್ವ
ಕಾರವಳಿಗಳು ನೈಸರ್ಗಿಕ ಮತ್ತು ಕೃತಕವಾದ ಬಂಡರುಗಳ ಸೌಲಭ್ಯವನ್ನು ಒದಗಿಸುತ್ತವೆ. ಮೀನುಗಾರಿಕೆ ಮತ್ತು ಜಲ ಕೃಷಿಗೆ ಸಹಕಾರಿಯಾಗಿವೆ.
* ಕರಾವಳಿ ಮೈದಾನದ ಕೆಳಮಟ್ಟದ ಪ್ರದೇಶಗಳು ಉಪ್ಪು, ಸಮುದ್ರನೊರೆ, ಹವಳ ಮತ್ತು ಮುತ್ತುಗಳ ಉತ್ಪಾದನೆಗೆ ಸೂಕ್ತವಾಗಿದೆ.
* ಕರಾವಳಿಯು ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಬೀಚ್ ಗಳು ಮನರಂಜನೆಯ ತಾನಗಲಾಗಿವೆ.
* ಹಿನ್ನೀರು ಮತ್ತು ಲಗೊನ್ ಸರೋವರಗಳು ತೀರದುದ್ದಕ್ಕೊ ನೌಕಾಯಾನಕ್ಕೆ ಉಪಯೋಗವಾಗಿವೆ. ಕರಾವಳಿ ಪ್ರದೇಶವು ಹೇರಳವಾಗಿ ಖನಿಜ ಸಂಪತ್ತನ್ನು ಹೊಂದಿದ್ದು, ಥೋರಿಯಂ ಇಲ್ಲಿ ಹೇರಳವಾಗಿ ಕಂಡು ಬರುತ್ತದೆ.
ಜಗತ್ತಿನ ಅತಿ ಉದ್ದದ ಕರಾವಳಿ ತೀರವನ್ನು ಹೊಂದಿರುವ ದೇಶಗಳು
* ಕೆನಡಾ
ಕೆನಡಾ ದೇಶವು ಜಗತ್ತಿನಲ್ಲೇ ಅತಿ ಉದ್ದದ ಕರಾವಳಿಯನ್ನಿ ಹೊಂದಿರುವ ದೇಶವಾಗಿದೆ. ಕೆನಡಾ ದೇಶವು 2,02,080 ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದೆ.
* ಇಂಡೋನೇಷ್ಯಾ
ಈ ದೇಶವು 54,716 ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದ್ದು, ಜಗತ್ತಿನಲ್ಲಿ 2 ನೇ ಸ್ಥಾನದಲ್ಲಿದೆ.
* ಗ್ರೀನ್ ಲ್ಯಾಂಡ್
ದೇಶವು 44,087 ಕಿ.ಮೀ ಕರಾವಳಿ ತೀರ ಹೊಂದಿದ್ದು, 3 ನೇ ಸ್ಥಾನದಲ್ಲಿದೆ.
* ರಷ್ಯಾ
ರಷ್ಯಾ ದೇಶವು 37,653 ಕಿ.ಮೀ ಕಾರವಳಿ ತೀರ ಹೊಂದಿದ್ದು 4 ನೇ ಸ್ಥಾನದಲ್ಲಿದೆ.
* ಭಾರತವು
ಭಾರತವು ಜಗತ್ತಿನ ರಾಷ್ಟ್ರಗಳಲ್ಲಿ ಹೆಚ್ಚು ಕರಾವಳಿ ಉದ್ದವನ್ನು ಹೊಂದಿರುವ ದೇಶಗಳ ಪೈಕಿ 18 ನೇ ಸ್ಥಾನದಲ್ಲಿದೆ.
ಭಾರತದ ಕರಾವಳಿ ಪ್ರದೇಶ
> ಪರ್ಯಾಯ ಪ್ರಸ್ಥಭೂಮಿಯ ಎರಡೂ ಬದಿಯಲ್ಲಿ ಉತ್ತರದಿಂದ ದಕ್ಷಿಣದವರೆಗೆ ವಿವಿಧ ಅಗಲದಲ್ಲಿ ಕಿರಿದಾದ ಕರಾವಳಿ ಮೈದಾನವನ್ನು ಹೊಂದಿದ್ದು, ಅವುಗಳನ್ನು ಪೂರ್ವ ಕರಾವಳಿ ಮತ್ತು ಪಶ್ಚಿಮ ಮೈದಾನಗಳೆಂದು ಕರೆಯುತ್ತಾರೆ. ಅವುಗಳು ನದಿಗಳ ಸಂಚಯನ ಮತ್ತು ಸಮುದ್ರ ಅಲೆಗಳ ಸವೆತ ಹಾಗೂ ಸಂಚಯನ ಕಾರ್ಯದಿಂದ ನಿರ್ಮಿತಗೊಂಡಿವೆ.
> ಭಾರತದ ಕರಾವಳಿ ಪ್ರದೇಶವು ಗುಜರಾತ್ ನ ಕಛ್ ನಿಂದ ಪೂರ್ವದಲ್ಲಿ ಗಂಗಾ ನದಿಯ ಮುಖಜ ಭೂಮಿಯವರೆಗೊ ವ್ಯಾಪಿಸಿದೆ. ಭಾರತದ ಕರಾವಳಿ ಒಟ್ಟು ಉದ್ದ 6,100 ಕಿ.ಮೀ.
>ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಭಾರತದ ಕರಾವಳಿ ಉದ್ದ - 7,516 ಕಿ.ಮೀ (ಸುಮಾರು 7,517 ಕಿ.ಮೀ), ಕರ್ನಾಟಕವು 320 ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದೆ.
> ಭಾರತದ ಅತಿ ಉದ್ದದ ಕರಾವಳಿ ಪ್ರದೇಶ ಹೊಂದಿರುವ ರಾಜ್ಯ - ಗುಜರಾತ್, 2 ನೇ ಸ್ಥಾನ- ಆಂಧ್ರ ಪ್ರದೇಶ.
ಭಾರತದ ಕರಾವಳಿ ಪ್ರದೇಶ
> ಭಾರತದಲ್ಲಿ ಕರಾವಳಿ ರಾಜ್ಯಗಳು ಒಟ್ಟು 9 ರಾಜ್ಯಗಳು
ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್.
ಪೂರ್ವ ಕರಾವಳಿ ರಾಜ್ಯಗಳು
ಪಶ್ಚಿಮ ಬಂಗಾಳ, ಒಡಿಶಾ ಆಂಧ್ರ ಪ್ರದೇಶ ಮತ್ತು ತಮಿಳುನಾಡು.
ಪಶ್ಚಿಮ ಕರಾವಳಿ ರಾಜ್ಯಗಳು
ಗುಜರಾತ್, ಮಹರಾಷ್ಟ್ರ, ಗೋವಾ, ಕರ್ನಾಟಕ, ಕೇರಳ.
> ಒಳನಾಡು ನೌಕಾ ಸೌಕರ್ಯಕ್ಕೆ ಯೋಗ್ಯವಾದ ಜಲಮಾರ್ಗ - 16,180 ಕಿ.ಮೀ.
ಭಾರತದಲ್ಲಿ ಕರಾವಳಿ ತೀರ ಹೊಂದಿರುವ 4 ಕೇಂದ್ರಾಡಳಿತ ಪ್ರದೇಶಗಳು
ಭಾರತದಲ್ಲಿ 7+1 ಕೇಂದ್ರಾಡಳಿತ ಪ್ರದೇಶಗಳಿದ್ದು, ಇವುಗಳಲ್ಲಿ 4 ಕೇಂದ್ರಾಡಳಿತ ಪ್ರದೇಶಗಳು ಕರಾವಳಿ ತೀರ ಹೊಂದಿವೆ. ಅವುಗಳೆಂದರೆ
1. ಲಕ್ಷ ದ್ವೀಪಗಳು.
2. ದಿಯು ಮತ್ತು ದಾಮನ್, ದಾದ್ರಾ, ನಗರ ಹವೇಲಿ.
3. ಪಾಂಡಿಚೇರಿ
4. ಅಂಡಮಾನ್ ನಿಕೊಬಾರ್ ಪೂರ್ವ ಕರಾವಳಿಯಲ್ಲಿದೆ.
ಧನ್ಯವಾದಗಳು