ಭತ್ತ
◆ ಭತ್ತದ ವೈಜ್ಞಾನಿಕ ಹೆಸರು - " ಒರೈಸಾ ಸಟೈವಾ"
◆ ಭತ್ತ ಬೆಳೆಯಲು ಮೆಕ್ಕಲು ಮಣ್ಣು, ಜೇಡಿ ಮಣ್ಣು ಸೂಕ್ತ.
◆ ಭಟ್ಟವು ಪೊಯೆಸ್ ಹುಲ್ಲಿನ ವರ್ಗದ ಜಾತಿಗೆ ಸೇರಿದ ಸಸ್ಯವಾಗಿದೆ.
◆ ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಭತ್ತದ ಕ್ಷೇತ್ರವನ್ನು ಹೊಂದಿದ್ದು, ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿದೆ.
◆ ಭತ್ತವು ಖಾರೀಫ್ ಬೆಳೆಯಾಗಿದೆ. 25 ಡಿಗ್ರೀ ಉಷ್ಣಾಂಶ 25 ಡಿಗ್ರೀ ಸೆಲ್ಸಿಯಸ್ ಉಷ್ಣಾಂಶ, 100 ರಿಂದ 200 ಸೆಂ.ಮೀ ವಾರ್ಷಿಕ ಮಳೆ ಅವಶ್ಯಕ.
◆ ಇದು ಭಾರತದ ಪ್ರಮುಖ ಆಹಾರ ಧಾನ್ಯಗಳಲ್ಲೊಂದು.
◆ ಇದೊಂದು ಖಾರೀಫ್ ಬೆಳೆ (ಮುಂಗಾರು ಬೆಳೆ), ನೀರಾವರಿ ಪ್ರದೇಶದಲ್ಲಿ ಇದನ್ನು ರಾಭಿ ಬೆಳೆಯಾಗಿಯೂ ಬೆಳೆಯುತ್ತಾರೆ. ಭತ್ತವು ಉಷ್ಣವಲಯದ ಬೆಳೆಯಾಗಿದ್ದು, 18 ರಿಂದ 25 ಡಿಗ್ರೀ ಸೆಂ ಉಷ್ಣಾಂಶ ಬೇಕು.
◆ ಭತ್ತವನ್ನು ಬೆಳೆಯಲು ಗಿಡದ ಬುಡದಲ್ಲಿ ನೀರು ನಿಂತಿರಬೇಕು. ಹೀಗಾಗಿ ಭೂಮಿಯು ಸಮತಟ್ಟಾಗಿರಬೇಕು
◆ ಭಾರತದಲ್ಲಿ ಭತ್ತವನ್ನು ನಾಟಿ ವಿಧಾನ ಮತ್ತು ಚೆಲುವ ವಿಧಾನದ ಮೂಲಕ ಭಿತ್ತನೆ ಮಾಡಲಾಗುತ್ತದೆ.
◆ ಜೂನ್ ತಿಂಗಳಲ್ಲಿ ಭಿತ್ತನೆ ಮಾಡಿ ನವೆಂಬರ್ ತಿಂಗಳಲ್ಲಿ ಕಟಾವು ಮಾಡುವ ಭತ್ತದ ಬೆಳೆಗೆ ಹೈನು ಬೆಳೆ ಎಂತಲೂ, ಬೇಸಿಗೆಯಲ್ಲಿ ನೀರಾವರಿ ಸೌಲಭಯದಿಂದ ಫೆಬ್ರವರಿಯಲ್ಲಿ ಭಿತ್ತನೆ ಮಾಡಿ ಜೂನ್ ತಿಂಗಳಲ್ಲಿ ಕಟಾವು ಮಾಡುವುದನ್ನು ಕಾರು ಬೆಳೆ ಎಂದು ಕರೆಯುವರು.
◆ ಪಶ್ಚಿಮ ಬಂಗಾಲವು ಹೆಚ್ಚು ಭತ್ತವನ್ನು ಉತ್ಪಾದಿಸುವ ಹಾಗೂ ಭತ್ತ ಬೆಳೆಯುವ ಕ್ಷೇತ್ರದಲ್ಲೂ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ( ಇದಕ್ಕಿಂತ ಮೊದಲು ಆಂಧ್ರ ಪ್ರದೇಶವು ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯವಾಗಿತ್ತು. ಆದುದ್ದರಿಂದ ಆಂಧ್ರ ಪ್ರದೇಶವನ್ನು ಐತಿಹಾಸಿಕವಾಗಿ " ಭಾರತದ ಭತ್ತದ ಕಣಜ" ಎಂದು ಕರೆಯುತ್ತಿದ್ದರು )
◆ ಭತ್ತದ ಇಳುವರಿ ಪ್ರಮಾಣದಲ್ಲಿ ಪಂಜಾಬ್ ಮೊದಲ ಸ್ಥಾನದಲ್ಲಿದೆ. ನಂತರ 2 ನೇ ಸ್ಥಾನದಲ್ಲಿ ತಮಿಳುನಾಡು ರಾಜ್ಯ ಇದೆ. ಭಾರತವು "ಬಾಸುಮತಿ ಅಕ್ಕಿ " ರಫ್ತಿನಲ್ಲಿ ಪ್ರಪಂಚದಲ್ಲೇ ಮೊದಲನೇ ಸ್ಥಾನದಲ್ಲಿದೆ.
◆ ಭಾರತದ ಪಂಜಾಬ್ ನ ಬಾಸುಮತಿ ಅಕ್ಕಿಯು ಗುಜರಾತಿನ ಕಾಂಡ್ಲಾ ಬಂದರಿನ ಮೂಲಕ ಸೌದಿ ಅರೇಬಿಯಾಕ್ಕೆ ಹೆಚ್ಚು ರಫ್ತು ಆಗುತ್ತದೆ. ಪ್ರಪಂಚದಲ್ಲಿ ಭತ್ತದ ರಫ್ತಿನಲ್ಲಿ ಥೈಲೆಂಡ್ ನ ನಂತರ ಭಾರತ 2 ನೇ ಸ್ಥಾನದಲ್ಲಿದೆ.
◆ ಕರ್ನಾಟಕದಲ್ಲಿ ರಾಯಚೂರು ಅತಿ ಹೆಚ್ಚು ಭತ್ತ ಉತ್ಪಾದಿಸುವ ಜಿಲ್ಲೆಯಾಗಿದೆ.
◆ ಕೊಪ್ಪಳ ಜಿಳಲೆಯು ಗಂಗಾವತಿ ತಾಲ್ಲೂಕಿನ ಕಾರಟಗಿಯಲ್ಲಿ ರೈಸ್ ಪಾರ್ಕ್ ಕಂಡು ಬರುತ್ತದೆ.
ಧನ್ಯವಾದಗಳು