Type Here to Get Search Results !

ಭಾರತದ ನೀರಾವರಿ ವ್ಯವಸ್ಥೆ ಮತ್ತು ವಿಧಗಳು

 ಭಾರತದ ನೀರಾವರಿ ವ್ಯವಸ್ತೆ 

ಭಾರತದ ನೀರಾವರಿ 

ನೀರಾವರಿ ಎಂದರೆ ವ್ಯವಸಾಯದ ಭೂಮಿಗೆ ಕೃತಕವಾಗಿ ಕೆರೆ, ಬಾವಿ, ಕಾಲುವೆ ಮತ್ತು ಕೊಳವೆ ಬಾವಿಗಳ ಮೂಲಕ ನೀರನ್ನು ಒದಗಿಸುವುದೇ "ನೀರಾವರಿ" ಎಂದು ಕರೆಯುತ್ತಾರೆ. ಭಾರತದ ನೀರಾವರಿ ವ್ಯವಸಾಯ  ಪದ್ದತಿಯು ಐತಿಹಾಸಿಕವಾಗಿದೆ. ನದಿಗಳ ಮೂಲಕ ಹರಿಯುವ ನೀರಿನ ಪ್ರಮಾಣ 1869 ಬಿಲಿಯನ್ ಘನ ಕಿಮೀ ಇದರಲ್ಲಿ ಬಳಸಿಕೊಳ್ಳಬಹುದಾದ ಪ್ರಮಾಣ 690 ದ.ಲ ಕಿ.ಮೀ ಅಂತರ್ಜಲದ ಪ್ರಮಾಣ 432 ದ.ಲ ಘನ ಕಿ.ಮೀ.


* ದೇಶದಲ್ಲಿ ಬಳಕೆಗೆ ದೋರೆಯುವ ಒಟ್ಟು ಜಲ ಸಂಪತ್ತಿನ ಪ್ರಮಾಣ 1,122 ಬಿಲಿಯನ್ ಘನ ಕಿಮೀ 

* ಭಾರತವು ನೀರಾವರಿಯಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಕ್ಷೇತ್ರವನ್ನು ಹೊಂದಿದೆ. ಚೀನಾ ದೇಶವು ಎರಡನೇ ಸ್ಥಾನದಲ್ಲಿದೆ. ಉತ್ತರ ಭಾರತದ ಮಹಾ ಮೈದಾನವು ಸಮಾತಟ್ಟಾಗಿದ್ದು, ಮತ್ತು ಹಿಮಾಲಯದ ನದಿಗಳು ವರ್ಷ ಪೂರ್ತಿ ಹರಿಯುತ್ತಿದ್ದು. ಈ ಭಾಗ ಅತಿ ಹೆಚ್ಚು ನೀರಾವರಿ ಹೊಂದಲು ಸಹಕಾರಿಯಾಗಿದೆ. 

* ಭಾರತದಲ್ಲಿ ಉತ್ತರ ಪ್ರದೇಶ ಅತ್ತಿ ಹೆಚ್ಚು ನೀರಾವರಿ ಪ್ರದೇಶ ಹೊಂದಿದೆ. 

* ಕರ್ನಾಟಕದಲ್ಲಿ ಬೆಳೆಗಾವಿ ಜಿಲ್ಲೆಯು ಅತಿ ಹೆಚ್ಚು ನೀರಾವರಿಯನ್ನು ಹೊಂದಿದೆ. ಕೊಡಗು ಜಿಲ್ಲೆ ಅತಿ ಕಡಿಮೆ ನೀರಾವರಿ ಹೊಂದಿರುವ ಜಿಲ್ಲೆಯಾಗಿದೆ. 

ಭಾರತದ ನೀರಾವರಿ ವ್ಯವಸ್ಥೆ ಮತ್ತು ವಿಧಗಳು


ನೀರಾವರಿಯ ವಿಧಗಳು 

      1. ಬಾವಿ ನೀರಾವರಿ 

      2. ಕಾಲುವೆ ನೀರಾವರಿ 

      3. ಕೆರೆ ನೀರಾವರಿ 

1. ಬಾವಿ ನೀರಾವರಿ :

ಭಾರತದ ನೀರಿನ ಮೂಲಗಳಲ್ಲಿ ಅತಿ ಹೆಚ್ಚು ಕೃಷಿ ಕ್ಷೇತ್ರಕ್ಕೆ ನೀರು ಒದಗಿಸುವ ವಿಧಾನವಾಗಿದೆ. ಇದರಲ್ಲಿ 2 ವಿಧಗಳಿವೆ

a. ತೆರದ ಬಾವಿ :

              ಕೃಷಿ ಭೂಮಿಯ ಸೂಕ್ತವಾದ ಸ್ಥಳದಲ್ಲಿ ಬಾವಿ ತೆಗೆದು ಅವುಗಳಿಂದ ನೀರನ್ನು ಮಾನವನ ದೈಹಿಕ ಬಲ, ಪ್ರಾಣಿಗಳಿಂದ ಅಥವಾ ಯಂತ್ರಗಳ ಸಹಾಯದಿಂದ ಮೇಲೆತ್ತಿ ಜಮೀನಿಗೆ ಒದಗಿಸಲಾಗುವುದಾಗಿದೆ. 

       ಭೂಮಿಯ ಮೇಲ್ಪದರದಲ್ಲಿಯೇ ಕಂಡು ಬರುವ ಅಂತರ್ಜಲವನ್ನು ಹೊರ ತೆಗೆಯುವ ಸೂಕ್ತವಾದ ಭಾವಿಯಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಅಂತರ್ಜಾಲದ ಪ್ರಮಾಣವು ಕಡಿಮೆಯಾಗಿ ತೆರದ ಭಾವಿ ನೀರವಾರಿ ವ್ಯವಸ್ಥೆಯು ಕೊಡ ಕಡಿಮೆಯಾಗುತ್ತದೆ. ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯು ಅತಿ ಹೆಚ್ಚು ಬಾವಿ ನೀರಾವರಿ ಹೊಂದಿದೆ. 


b. ಕೊಳವೆ ಬಾವಿ:

        ಕೊಳವೆ ಬಾವಿಯು ಒಟ್ಟು ಬಾವಿ ಕ್ಷೇತ್ರದ 59.7 ರಷ್ಟು ಹಾಗೂ ದೇಶದ ಒಟ್ಟು ನೀರಾವರಿ ಕ್ಷೇತ್ರದ 33.7 ರಷ್ಟು ಕೊಳವೆ ನೀರಾವರಿಯನ್ನು ಒದಗಿಸುತ್ತದೆ. ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ನೀರಾವರಿ ವ್ಯವಸ್ಥೆಯಾಗಿದೆ. 

* ಯಂತ್ರಗಳ ಸಹಾಯದಿಂದ ಭೂಮಿಯ ಆಳದಲ್ಲಿರುವ ಅಂತರ್ಜಲವನ್ನು ಕೃಷಿ ಚಟುವಟಿಕೆಗಳಿಗೆ ಬಲಸಿಕೊಳ್ಳುವ ಒಂದು ವಿಧಾನವಾಗಿದೆ. 

* ಇತ್ತೀಚಿಗೆ ಕರ್ನಾಟಕ ಸರ್ಕಾರವು ರೈತರಿಗೆ ಕೊಳವೆ ಬಾವಿಗಳಿಂದ ನೀರಾವರಿ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕೊಳವೆ ಬಾವಿ ನೀರಾವರಿಗೆ ಅತಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. 


2. ಕಾಲುವೆ ನೀರಾವರಿ 

ಭಾರತ ದೇಶದಲ್ಲಿ ನೀರಾವರಿ ಒದಗಿಸುವ ಬಾವಿಯ ನಂತರ 2 ನೇ ಮೂಲವಾಗಿದೆ. ಇದು ಜಗತ್ತಿನ ಕಾಲುವೆ ನೀರಾವರಿಯನ್ನು ಹೊಂದಿದ ದೇಶಗಳಲ್ಲಿ ಪ್ರಮುಖವಾದದು. ಭಾರತದಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ರಾಜ್ಯವಾಗಿದೆ. 

 ಭಾರತದಲ್ಲಿ ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಬಿಹಾರ ಪ್ರದೇಶಗಳಲ್ಲಿ ಕಾಲುವೆ ಜಲ ಹರಡಿದೆ. ಇದರಲ್ಲಿ 2 ವಿಧಗಳಿವೆ 



a. ಪ್ರವಾಹ ಕಾಲುವೆ 

         ಯಾವುದೇ ರೀತಿಯಲ್ಲಿ ಆನೆಕ್ಕಟೆಗಳನ್ನು ಕಟ್ಟದೆ ನದಿಗಳಿಂದ ನೇರವಾಗಿ ಕಾಲುವೆಗಳನ್ನು ತೊಡಲಾಗವುದು. ನದಿಗಳು ತುಂಬಿ ಹರಿಯುವಾಗ ಈ ಕಾಲುವೆಗಳ ಮೂಲಕ ಕೃಷಿಗೆ ನೀರನ್ನು ಒದಗಿಸುವುದಾಗಿದೆ. ಉತ್ತರ ಭಾರತದ ಮೈದಾನ ಪ್ರದೇಶವು ವರಶಪೂರ್ತಿ ಹರಿಯುವ ನದಿಗಳನ್ನು ಹೊಂದಿದ್ದು, ಈ ಭಾಗದಲ್ಲಿ ಆಣೆಕಟ್ಟುಗಲಿಲ್ಲದೆ ನದಿಗಳಿಂದ ನೇರವಾಗಿ ಕಾಲುವೆಗಳ ಮೂಲಕ ನೀರನ್ನು ಪಡೆಯಲಾಗುತ್ತದೆ. 



b. ಸರ್ವಕಾಲಿಕ ಕಾಲುವೆ 

       ಸರ್ವಕಾಲಿಕ ಕಾಲುವೆಯು ಜಲಾಶಯ ನಿರ್ಮಿಸಿ ಕೃಷಿ ಭೂಮಿಗೆ ನೀರನ್ನು ಒದಗಿಸಲು ತೊಡಗುವ ಕಾಲುವೆಯಾಗಿದೆ. 

ಪರ್ಯಾಯ ಪ್ರಸ್ಥಭೂಮಿ ಭಾಗದ ನದಿಗಳು ವರ್ಷ ಪೂರ್ತಿ ಹರಿಯದದೇ ಋತುಮಾನಕ್ಕೆ ಅನುಸಾರವಾಗಿ ಮಳೆಗಾಲದಲ್ಲಿ ತುಂಬಿ ಹರಿದರೆ ಬೇಸಿಗೆಯಲ್ಲಿ ಖಾಲಿಯಾಗಿರುತ್ತದೆ. ಹೀಗಾಗಿ ಮಳೆಗಾಲದ ನೀರನ್ನು ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ಇತರ ಅವಧಿಯಲ್ಲಿ ಕೃಷಿ ಚಟುವಟಿಕೆಗೆ ಬಲಸಿಕೊಳ್ಳಲಾಗುವುದು. ಹೀಗಾಗಿ ಪರ್ಯಾಯ ಪ್ರಸ್ಥಭೂಮಿ ಅತಿ ಹೆಚ್ಚು ಸರ್ವಕಾಲಿಕ ಕಾಲುವೆ ನೀರಾವರಿಯನ್ನು ಹೊಂದಿದೆ. 



3. ಕರೆ ನೀರಾವರಿ 

ಈ ನೀರಾವರಿಯು ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಪದ್ದತಿಯಾಗಿದೆ. ಆಂಧ್ರಪ್ರದೇಶ, ತಮಿಳನಾಡು, ಒಡಿಶಾ ಮತ್ತು ಕರ್ನಾಟಕ ರಾಜ್ಯಗಳು ಕೆರೆ ನೀರಾವರಿಯನ್ನು ಹೊಂದಿದೆ. ಗುಡ್ಡಗಾಡುಗಳಿಂದ ಕೊಡಿದ ಅಥವಾ ಏರಿಳಿತಗಳಿಂದ ಕೊಡಿದ ಭೂ ಸ್ವರೂಪವು ಕೆರೆ ನಿರ್ಮಾಣಗಳಿಗೆ ಸೂಕ್ತವಾದ ಪ್ರದೇಶವಾಗಿದೆ. ದಖನ್ ಪ್ರಸ್ಥಭೂಮಿಯು ಹೆಚ್ಚು ಏರಿಳಿತಗಳಿಂದ ಕೊಡಿದ್ದು, ಅತಿ ಹೆಚ್ಚು ಕೆರೆ ನೀರವರಿಯನ್ನು ಹೊಂದಿದೆ. ಮೈದಾನ ಪ್ರದೇಶವು ಸಮತಟ್ಟಾಗಿರುವುದರಿಂದ ಆ ಭಾಗದಲ್ಲಿ ಕೆರೆ ನೀರಾವರಿಯ ಪ್ರಮಾಣ ಕಡಿಮೆ ಕಂಡು ಬರುತ್ತದೆ. ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ "ಶಾಂತಿ ಸಾಗರ (ಸೂಳೆಕೆರೆ)"

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad