ಉತ್ತರ ಮತ್ತು ದಕ್ಷಿಣ ಭಾರತದ ನದಿಗಳಿಗಿರುವ ಹೋಲಿಕೆ
ಉತ್ತರ ಭಾರತದ ನದಿಗಳು | ದಕ್ಷಿಣ ಭಾರತದ ನದಿಗಳು |
---|---|
ಉತ್ತರಭಾರತದ ನದಿಗಳಲ್ಲಿ ಹೆಚ್ಚು ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ, ಸಿಂದೂ ನದಿ ಮತ್ತು ಅದರ ಉಪನದಿಗಳು ಮಾತ್ರ ಪಶ್ಚಿಮಕ್ಕೆ ಹರಿಯುತ್ತದೆ, | ದಕ್ಷಿಣ ಭಾರತದ ನದಿಗಳು ಪೂರ್ವಕ್ಕೆ ಮತ್ತು ಪಶ್ಚಿಮಕ್ಕೆ ಎರಡೂ ದಿಕ್ಕಿಗೂ ಹರಿಯುತ್ತವೆ. ಪಶ್ಚಿಮಕ್ಕೆ ಹರಿಯುವ ನದಿಗಳು ರಭಸವಾಗಿ ಹರಿಯುತ್ತವೆ. ಕಾರಣ ಪಶ್ಚಿಮ ಘಟ್ಟಗಳಿಂದ ಅರಬ್ಬೀ ಸಮುದ್ರದ ಕಡೆಗೆ ಸಾಗುತ್ತದೆ. |
ಉತ್ತರ ಭಾರತದ ನದಿಗಳು ವರ್ಷವಿಡೀ ತುಂಬಿ ಹರಿಯುತ್ತವೆ. ಮಳೆಗಾಲದಲ್ಲಿ ಮಳೆ ನೀರಿನಿಂದ ತುಂಬಿ ಹರಿದರೆ, ಬೇಸಿಗೆಯಲ್ಲಿ ಹಿಮ ಕರಗಿದ ನೀರಿನಿಂದ ಹರಿಯುತ್ತದೆ. | ದಕ್ಷಿಣ ಭಾರತದ ನದಿಗಳು ತಾತ್ಕಾಲಿಕ ನದಿಗಳಾಗಿದ್ದು, ಮಾನ್ಸೂನ ಮಾರುತಗಳ ಕಾಲದಲ್ಲಿ ಮಳೆ ನೀರಿನಿಂದ ಕೊಡಿ ಹರಿಯುತ್ತದೆ. |
ಈ ನದಿಗಳು ಉದ್ದವಾದ ಮತ್ತು ಅಗಲವಾದ ಕಣಿವೆಗಳನ್ನು ಹೊಂದಿದೆ | ಈ ನದಿಗಳು ತುಂಡು ನದಿಗಳಾಗಿದ್ದು, ಕಿರಿದಾದ ಮತ್ತು ಆಳವಾದ ಕಣಿವೆಗಳಿಂದ ಕೊಡಿವೆ. |
ಬಳಿದಾದ ಇಳಿಜಾರು ಕಣಿವೆಗಳ ಮೂಲಕ ನಿಧಾನವಾಗಿ ಹರಿಯುತ್ತದೆ. | ಕಡಿದಾದ ಪ್ರದೇಶದಲ್ಲಿ ಏರಿಳಿತ ಭೂ ಸ್ವರೂಪಗಳ ಮೂಲಕ ವೇಗವಾಗಿ ಹರಿದು ಜಲಪಾತಗಳನ್ನು ನಿರ್ಮಿಸಿದೆ. |
ಈ ನದಿಗಳನ್ನು ಮುಖ್ಯವಾಗಿ ಕೃಷಿ ಮತ್ತು ಇತರೆ ಸಂಬಂಧಿತ ಚಟುವಟಿಕೆಗಳಿಗೆ ಬಳಸಲಾಗುತ್ತದೆ. | ಈ ನದಿಗಳನ್ನು ಮುಖ್ಯವಾಗಿ ಕೃಷಿ ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ಬಳಸಲಾಗುತ್ತದೆ. |
ಇವು ವಿಶಾಲವಾದ ಮೈದಾನಗಳು ಮತ್ತು ಮುಖಜ ಭೂಮಿಗಳನ್ನು ನಿರ್ಮಿಸಿ | ಆಳವಾದ ಕಣಿವೆಗಳು ಮತ್ತು ಅಳಿವೆಗಳನ್ನು ನಿರ್ಮಾಣ ಮಾಡಿದೆ. |
ಹಿಮಾಲಯ ಪರ್ವತಗಳಲ್ಲಿ ಹುಟ್ಟುತ್ತದೆ | ಪರ್ಯಾಯ ಪ್ರಸ್ತಭೂಮಿಗಳಲ್ಲಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ. |
ನೌಕಾಯಾನಕ್ಕೆ ಸೂಕ್ತವಾಗಿವೆ | ನೌಕಾಯಾನಕ್ಕೆ ಸೂಕ್ತವಾಗಿಲ್ಲ |
ಅಸಂಖ್ಯಾತ ಚೂಪಾದ ತಿರುವುಗಳ ಶೃಂಗ ಸರೋವರಗಳನ್ನು ನಿರ್ಮಾಣ ಮಾಡಿವೆ. | ಅಳವಿಲ್ಲದ ತಿರುವುಗಳನ್ನು ನಿರ್ಮಿಸಿವೆ. |
ಅಪಾರ ಪ್ರಮಾಣದ ನಿಕ್ಷೇಪ ಮತ್ತು ಕಣಗಳನ್ನು ಸಾಗಿಸುತ್ತವೆ | ಕಡಿಮೆ ಸಾಮರ್ಥ್ಯ ನಿಕ್ಷೇಪ ಮತ್ತು ಕಣಗಳನ್ನು ಸಾಗಿಸುತ್ತವೆ. |
ಪ್ರಸ್ತಭೂಮಿಯ ನದಿಗಳಿಗೆ ಹೋಲಿಸಿದರೆ ಈ ನದಿಗಳು ಇತ್ತೀಚಿನ ದಿನಗಳಲ್ಲಿ ಉಗಮವಾಗಿವೆ. | ಈ ನದಿಗಳು ತುಂಬಾ ಪುರಾತನ ನದಿಗಲಾಗಿವೆ. |
ಕಣ್ಣೀರಿನ ನದಿಗಳು
1) ಕೋಸಿ ನದಿ - ಬಿಹಾರ,
2) ಮಹಾನದಿ - ಒಡಿಶಾ
3) ದಾಮೋದರ - ಪಶ್ಚಿಮ ಬಂಗಾಳ
ಕರ್ನಾಟಕದ ಪಂಚ ನದಿಗಳ ಬೀಡು :-
ವಿಜಯಪುರವನ್ನು ಕರ್ನಾಟಕದ ಪಂಚ ನದಿಗಳ ಬೀಡು ಎನ್ನುವರು, ವಿಜಯಪುರ ಜಿಲ್ಲೆಯಲ್ಲಿ ಘಟಪ್ರಭ, ಮಲಪ್ರಭ, ಭೀಮ, ದೋಣಿ ಮತ್ತು ಕೃಷ್ಣ ನದಿಗಳು ಹರಿಯುತ್ತದೆ.
ಭಾರತದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು
1. ಆಂಧ್ರ ಪ್ರದೇಶ -ಶಿಲೆರೊ
2. ಗುಜರಾತ್ - ಧುವಾರನ
3. ಕೇರಳ - ಶಬರಿಗಿರಿ, ಇಡಕ್ಕಿ
4. ಮಹಾರಾಷ್ಟ್ರ - ಕೊಯ್ನ
ಧನ್ಯವಾದಗಳು