ಏಕಾತ್ಮಕ ವ್ಯವಸ್ಥೆಯ ಲಕ್ಷಣಗಳು
ಭಾರತದ ರಾಜಕೀಯ ವ್ಯವಸ್ಥೆಯು ಈ ಕೆಳಗಿನ ಏಕಾತ್ಮಕ ಪದ್ದತಿಯ ಲಕ್ಷಣಗಳನ್ನು ಒಳಗೊಂಡಿದೆ.
1. ಪ್ರಬಲ ಕೇಂದ್ರ ಸರ್ಕಾರ
ಪ್ರಬಲ ಕೇಂದ್ರ ಸರ್ಕಾರವು ಏಕಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖವಾದ ಲಕ್ಷಣವಾಗಿದೆ. ಕೇಂದ್ರ ಪಟ್ಟಿಯು 100 ವಿಷಯಗಳನ್ನು ಒಳಗೊಂಡಿದ್ದರೆ, ರಾಜ್ಯ ಪಟ್ಟಿಯು ಕೇವಲ 61 ವಿಷಯಗಳನ್ನು ಒಳಗೊಂಡದೆ. ಅಷ್ಟೇ ಅಲ್ಲದೆ ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾಯದೆಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರ ಗಾಹು ರಾಜ್ಯ ಸರ್ಕಾರಗಳೆರಡೂ ಪಡೆದುಕೊಂಡಿದೆ. ಕೆಲವು ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕಾಯ್ದೆಯನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ. ಈ ರೀತಿಯ ಅಸಮತೋಲನವಾದ ಅಧಿಕಾರ ವಿಭಜನೆಯು ಕೇಂದ್ರದ ಪ್ರಬಾಲ್ಯಕ್ಕೆ ಕಾರಣವಾಗಿದೆ.
2. ಏಕೈಕ ಸಂವಿಧಾನ
ಅಮೇರಿಕಾ, ಸ್ವಿಟ್ಜರ್ ಲ್ಯಾಂಡ್ ನಂಥ ನೈಜ ಸಂಯುಕ್ತ ವ್ಯವಸ್ಥೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮದೇ ಆದ ಪ್ರತ್ಯೇಕ ಸಂವಿಧಾನಗಳನ್ನು ಹೊಂದಿರುತ್ತವೆ. ಆದರೆ ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ಸಂವಿಧಾನವನ್ನು ಹೊಂದಿವೆ.
3. ಏಕೈಕ ಚುನಾವಣಾ ಆಯೋಗ
ಮಾದರಿ ಸಂಯುಕ್ತ ವ್ಯವಸ್ಥೆಯಲ್ಲಿ ಕೆಂದರದೊಂದಿಗೆ ರಾಜ್ಯ ಸರ್ಕಾರಗಳು ಕೊಡ ತಮ್ಮದೇ ಆದ ಪ್ರತ್ಯೇಕ ಚುನಾವಣಾ ಆಯೋಗಗಳನ್ನು ಹೊಂದಿರುತ್ತದೆ. ಆದರೆ ಭಾರತದಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರಗಳು ಒಂದೇ ಚುನಾವಣಾ ಆಯೋಗವನ್ನು ಹೊಂದಿದೆ. ಅ ಆಯೋಗವೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದಂತೆ ಚುನಾವಣೆಗಳನ್ನು ನಡೆಸುತ್ತದೆ.
4. ಏಕ ಪೌರತ್ವ
ಅಮೆರಿಕಾ ಸಂಯುಕ್ತ ಸಂಸ್ಥಾನ, ಸ್ವಿಟ್ಜರ್ ಲ್ಯಾಂಡ್ ಮುಂತಾದ ಮಾದರಿ ಸಂಯುಕ್ತ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ದ್ವಿ-ಪೌರತ್ವ ಆಸ್ತಿತ್ವದಲ್ಲಿರುವುದನ್ನು ಕಾಣಬಹುದು. ಅಂತಹ ರಾಷ್ಟ್ರಗಳಲ್ಲಿ ಒಬ್ಬ ವ್ಯಕ್ತಿಯು ತಾನು ಜನಿಸಿದ ರಾಜ್ಯ ಮತ್ತು ರಾಷ್ಟ್ರಗಳೆರಡು ಪೌರತ್ವವನ್ನು ಪಡೆದಿರುತ್ತಾನೆ.
5. ಮೇಲ್ಮನೆಯಲ್ಲಿ ರಾಜ್ಯಗಳಿಗೆ ಅಸಾಮಾನ್ಯ ಪ್ರಾತಿನಿಧ್ಯೆ
ಸಂಯುಕ್ತ ವ್ಯವಸ್ಥೆಯಲ್ಲಿ ಶಾಸಕಾಂಗದ ಮೇಲ್ಮನೆಯಲ್ಲಿ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯತೆಯನ್ನು ನೀಡಲಾಗಿರುತ್ತದೆ, ಆದರೆ ಭಾರತದ ಶಾಸಕಾಂಗದ ಮೇಲ್ಮನೆಯಾದ ರಾಜ್ಯ ಸಭೆಯಲ್ಲಿ ರಾಜ್ಯಗಳಿಗೆ ಪ್ರಾತಿನಿಧಯಎತೆಯನ್ನು ಸಮನಾಗಿ ನೀಡದೆ ಜನಸಂಖ್ಯೆಯ ಆಧಾರದ ಮೇಲೆ ನೀಡಲಾಗಿದೆ.
6. ಅಖಿಲ ಭಾರತ ಸೇವೆಗಳು
ಭಾರತದಲ್ಲಿ I.A.S., I.P.S, I.F.S, -ಈ ಅಖಿಲ ಭಾರತ ಸೇವೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಕೇಂದ್ರ ಸರ್ಕಾರವೆ ನೇಮಕ ಮಾಡುತ್ತದೆ. ಅಖಿಲ ಭಾರತದ ಸೇವೆಗೆ ಸೇರಿದ ಅಧಿಕಾರಿಗಳು ರಾಜ್ಯಗಳಲ್ಲಿಯೂ ಸೇವೆ ಸಲ್ಲಿಸುತ್ತಾರೆ. ಆದರೆ ರಾಜ್ಯ ಸರ್ಕಾರವು ಅವರ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ಹೊಂದಿರುವುದಿಲ್ಲ. ಇದು ಕೇಂದ್ರ ಸರ್ಕಾರವನ್ನು ಪ್ರಬಲಕೋಳಿಸುತ್ತದೆ. ರಾಜ್ಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ.
7. ರಾಷ್ಟ್ರಾಧ್ಯಕ್ಷರ ಆಡಳಿತ
356 ನೇ ವಿಧಿಯನ್ವಯ ಸಾಂವಿಧಾನಿಕ ಯಂತ್ರ ಕುಸಿದು ಬಿದ್ದಾಗ ರಾಜ್ಯಗಳಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಬಹುದು. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ರದ್ದುಪಡಿಸಲಾಗಿರುತ್ತದೆ. ಅಲ್ಲದೇ ಕೇಂದ್ರ ಸರ್ಕಾರವೇ ರಾಜ್ಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ.
8. ತುರ್ತು ಪರಿಸ್ಥಿತಿ ಅಧಿಕಾರಗಳು
ರಾಷ್ಟ್ರಾಧ್ಯಕ್ಷರು ಭಾರತದಾದ್ಯಂತ ಅಥವಾ ಭಾರತದ ಯಾವುದೇ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಸಂವಿಧಾನದ 352 ನೇ ವಿಧಿಯನ್ವಯ ಘೋಷಿಸಲಾಗುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಂತು ಭಾರತದ ಸಂಯೋಕ್ತ ವ್ಯವಸ್ಥೆಯು ಸಂಪೂರ್ಣವಾಗಿ ಏಕಾತ್ಮಕ ವ್ಯವಸ್ಥೆಯ ಸ್ವರೂಪವನ್ನು ತಾಳಿರುತ್ತದೆ.
9. ರಾಜ್ಯಪಾಲರ ನೇಮಕಾತಿ
ಸಾಮಾನ್ಯವಾಗಿ ಸಂಯುಕ್ತ ಪಡ್ಡತಿಯೂ ಆಸ್ತಿತ್ವದಲ್ಲಿರುವ ರಾಷ್ಟ್ರಗಳಲ್ಲಿ ರಾಜ್ಯಗಳ ರಾಜ್ಯಪಾಲರುಗಳನ್ನು ಸಂಬಂಧಪಟ್ಟ ರಾಜ್ಯಗಳ ಜನರೇ ಚುನಾಯಿಸುತ್ತಾರೆ. ಆದರೆ ಭಾರತದಲ್ಲಿ ರಾಜ್ಯಪಾಲರುಗಳು ಹಲವಾರು ಸಂದರ್ಭದಲ್ಲಿ ಕೇಂದ್ರ ಸರಕಾರ ಏಜೆಂಟರಂತೆ ವರ್ತಿಸಿರುವ ಉದಾಹರಣೆಗಳು ನೋಡಬಹುದು.
10. ಅನುದಾನ
ಭಾರತದಲ್ಲಿ ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಸಂಧಿಗ್ದೆತೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಧನ ಸಹಾಯವನ್ನು ಪಡೆದುಕೊಳ್ಳುತ್ತವೆ. ಇದರಿಂದ ರಾಜ್ಯ ಸರ್ಕಾರಗಳು ಕೇಂದ್ರದ ಕೃಪಾಕಟಾಕ್ಷದಲ್ಲಿ ಉಳಿಯಬೇಕಾಗುತ್ತದೆ.
11. ಶೇಷಾಧಿಕಾರಗಳು.
ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಿಂದ ಹೊರಗೆ ಉಳಿಯುವ ಅಧಿಕಾರಗಳೆ ಶೇಷಾಧಿಕಾರಗಳು. ಭರಾಟ ಸಂವಿಧಾನವು ಈ ಅಧಿಕಾರಗಳನ್ನು ಕೇಂದ್ರ ಸರಕಾರಕ್ಕೆ ನೀಡುವುದರ ಮೂಲಕ ಕೇಂದ್ರ ಸರ್ಕಾರವನ್ನು ಪ್ರಬಳಗೊಳಿಸಿದೆ.
ಧನ್ಯವಾದಗಳು