ಭಾರತದಲ್ಲಿ ಉಣ್ಣೆ ಬಟ್ಟೆ ಕೈಗಾರಿಕೆ
ಉಣ್ಣೆ(Wool)ಯನ್ನು ಕುರಿ ಮತ್ತು ಇತರೆ ಪ್ರಾಣಿಗಳ ತುಪ್ಪಟದಿಂದ ಪಡೆಯಲಾಗುತ್ತದೆ. ಉಣ್ಣೆಯನ್ನು ಬಟ್ಟೆ ತಯಾರಿಸುಲು ಬಳಸಲಾಗುತ್ತದೆ. ಇದು ಜವಳಿ ವರ್ಗದ ನಾರಿನ ಎಳೆಯಾಗಿದೆ.
*) ಅಂಗೋರ ಎಂಬ ಪ್ರಾಣಿಯನ್ನು ಉಣ್ಣೆಗಾಗಿ ಬೆಳೆಸಲಾಗುತ್ತದೆ. ಉಣ್ಣೆ ಎಳೆಗಳು ಆರ್ದತೆಯನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ತಕ್ಷಣದಲ್ಲೇ ತೇವಾಂಶವನ್ನು ಹೀರಿಕೊಳ್ಳುತ್ತದೆ. ಉಣ್ಣೆಯು ಹೆಚ್ಚು ತಾಪಮಾನ ಒಳಗೊಂಡಿರುತ್ತದೆ.
*) ಭಾರತದಲ್ಲಿ ಬಟ್ಟೆ ಕೈಗಾರಿಕೆಯಲ್ಲಿ ಉಣ್ಣೆ ಬಟ್ಟೆ ಕೈಗಾರಿಕೆಯು ಒಂದಾಗಿದ್ದು,ಆದರೆ ಹೆಚ್ಚು ಉತ್ಪಾದನೆಯನ್ನು ಹೊಂದಿಲ್ಲ.
*) ಭಾರತದಲ್ಲಿ ಮೊಟ್ಟ ಮೊದಲ ಉಣ್ಣೆ ಕೈಗಾರಿಕೆಯನ್ನು 1876 ರಲ್ಲಿ ಬ್ರಿಟಿಷ್ ಇಂಡಿಯಾ ಕಾರ್ಪೋರೇಷನ್ ರವರು ಕಾನ್ಪುರದಲ್ಲಿ ಸ್ಥಾಪಿಸಿದರು. ನಂತರ ಅದೇ ಅವಧಿಯಲ್ಲಿ ಮತ್ತೊಂದು ಕೈಗಾರಿಕೆಯು ದಾರಿವಾಲ್ ನಲ್ಲಿ ಆರಂಭಗೊಂಡಿತು.
*) 1896 ರಲ್ಲಿ ಬೆಂಗಳೂರು ಮತ್ತು ಮುಂಬೈನಲ್ಲಿ ಉಣ್ಣೆ ಕೈಗಾರಿಕೆ ಸ್ಥಾಪನೆಯಾದವು.
*) ಪ್ರಸ್ತುತವಾಗಿ ಭಾರತದಲ್ಲಿ 224 ಸಂಘಟಿತ ಉಣ್ಣೆ ಬಟ್ಟೆ ಕಾರ್ಖಾನೆಗಳಿವೆ. ಇವುಗಳಲ್ಲಿ 180 ನೂಲು ಉತ್ಪಾದಿಸುವ ಮತ್ತು 35 ಸಂಯೋಕ್ತ ಕಾರ್ಖಾನೆಗಳಿವೆ.
ಭಾರತದಲ್ಲಿ ಉಣ್ಣೆ ಕೈಗಾರಿಕೆಯಲ್ಲಿ 3 ಸರ್ಕಾರಿ ವಲಯಕ್ಕೆ ಸೇರಿದೆ
ಅವುಗಳೆಂದರೆ :-
1) ರಾಜಸ್ಥಾನ ಕಂಬಳಿ ನೂಲುವ ಗಿರಣಿ
2) ಕಾಶ್ಮೀರ ಸಾರಕಾರಿ ಉಲ್ಲನ್ ಮೀಲ್ಸ್ (ಶ್ರೀನಗರ)
3) ಸರ್ಕಾರಿ ಸ್ಪಿನ್ನಿಂಗ್ ಮಿಲ್ಸ್ ನೌಸೆರಾ (ಶ್ರೀನಗರ)
ಉಳಿದವೆಲ್ಲಾ ಖಾಸಗಿ ಒಡೆತನದವಾಗಿದೆ. ಭಾರತದ ಪ್ರಮುಖ ಉಣ್ಣೆ ಬಟ್ಟೆ ಕೈಗಾರಿಕಾ ಕೇಂದ್ರಗಳೆಂದರೆ : ಕಾನ್ಪುರ, ಲೂದಿಯಾನ್, ದೆಹಲಿ,ಆಗ್ರಾ, ಮುಂಬೈ, ದರಿವಾಲ್, ಬೆಂಗಳೂರು, ಜಾಮಾನಗರ, ಅಹಮ್ಮದಾಬಾದ್, ಶ್ರೀನಗರ.
ಭಾರತದಲ್ಲಿ ಉಣ್ಣೆ ಬಟ್ಟೆ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳ ಮೂಲ
*) ಉಣ್ಣೆ ಬಟ್ಟೆ ಕೈಗಾರಿಕೆಗಳು ಪ್ರಾಣಿ ವರ್ಗ ಆಧಾರಿತ ಕೈಗಾರಿಕೆಗಳಾಗಿವೆ.
*) ಭಾರತದಲ್ಲಿ ಯಾಕ್, ಮೋಹೇರ್, ಕಾಶ್ಮೀರಿ ಮೇಕೆಗಳು, ಲಾಮ್, ಆಡು, ಕುರಿ, ವೂಲಿನಾಯಿ ಮತ್ತು ಚಿರು ( ಟಿಬೆಟ್ ನ ಪ್ರಾಣಿ) ಪ್ರಾಣಿಗಳ ತುಪ್ಪಳದಿಂದ ಉಣ್ಣೆಯನ್ನು ಪಡೆಯಲಾಗುತ್ತದೆ. ಹೀಗಾಗಿ ಈ ಪ್ರಾಣಿಗಳು ತುಪ್ಪಳಕ್ಕಾಗಿ ಈ ಪ್ರಾಣಿಯನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ಇವುಗಳ ಆಸ್ತಿತ್ವ ಕಡಿಮೆಯಾಗುತ್ತದೆ. ಪ್ರಸ್ತುತ ಭಾರತದ ಲಡಾಕ್ ಮತ್ತು ಚೀನಾದ ಟಿಬೆಟ್ ಭಾಗದಲ್ಲಿ ಮಾತ್ರ ಕಂಡು ಬರುವ ಟಿಬೆಟ್ ಯನ್ ಹುಲ್ಲೆ(ಚಿರು)ಗಳಿಂದ " ಶಹತೂಶ್ ಶಾಲು " ಗಳನ್ನು ತಯಾರಿಸಲಾಗುತ್ತದೆ. ಇದರಿಂದಾಗಿ ಈ ಶಾಲುಗಳ ಬೇಡಿಕೆ ಹೆಚ್ಚಾಗುತ್ತಾ ಸಾಗಿದಂತೆ ಈ ಪ್ರಾಣಿಗಳ ಆಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ.
*) ನ್ಯೂಜಿಲೆಂಡಿನ ಮೆರಿನೋ ಜಾತಿಯ ಕುರಿಗಳ ತುಪ್ಪಳದಿಂದ ಉನ್ನತ ಗುಣಮಟ್ಟದ ಉಣ್ಣೆಯನ್ನು ತಯಾರಿಸಲಾಗುತ್ತದೆ.
*) ಪ್ರಪಂಚದಲ್ಲಿ ಅತ್ಯುತ್ತಮ ಗುಣಮಟ್ಟದ ಉಣ್ಣೆ ಬಟ್ಟೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಪ್ರಸಿದ್ದವಾಗಿದೆ. ಇದರಲ್ಲಿ ಆಸ್ಟ್ರೇಲಿಯಾ ಅತಿ ಹೆಚ್ಚು ಉಣ್ಣೆ ಬಟ್ಟೆಯನ್ನು ಉತ್ಪಾದಿಸುತ್ತದೆ, 2 ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ ಮತ್ತು 3 ನೇ ಸ್ಥಾನದಲ್ಲಿ ಚೀನಾ ಕಂಡುಬರುತ್ತದೆ.
ಜಗತ್ತಿನಲ್ಲಿ ಉಣ್ಣೆ ಉತ್ಪಾದನೆಯಲ್ಲಿ ಸ್ಥಾನ
1) ಆಸ್ಟ್ರೇಲಿಯಾ
2) ಚೀನಾ
3) ನ್ಯೂಜಿಲೆಂಡ್
4) ಅರ್ಜೆಂಟೈನಾ
5) ಟರ್ಕಿ
6) ಇರಾನ್
7) ಯು.ಕೆ
8) ಭಾರತದ
ಭಾರತದಲ್ಲಿ ಉಣ್ಣೆ ಉತ್ಪಾದನೆ
1) ಪಂಜಾಬ್
2) ಹರಿಯಾಣ
3) ರಾಜಸ್ಥಾನ
4) ಜಮ್ಮು ಕಾಶ್ಮೀರ
5) ಕರ್ನಾಟಕ
6) ಗುಜರಾತ್
7) ಉತ್ತರ ಪ್ರದೇಶ
ಧನ್ಯವಾದಗಳು