ಭಾರತದ ಅತಿ ಉದ್ದವಾದ ಸೇತುವೆ
ಭೂಪೇನ್ ಹಜಾರಿಕಾ
ಭೂಪೇನ್ ಹರರಿಕಾ ಸೇತುವೆ ಅಥವಾ ದೋಲಾ ಸಾಡಿಯಾ ಸೇತುವೆ ಭಾರತದ ಅತ್ಯಂತ ಉದ್ದದ ನದಿ ಸೇತುವೆಯಾಗಿದೆ. ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ನಡುವೆ ರಸ್ತೆ ಸಂಪರ್ಕ ಕಲ್ಪಿಸುವ ಈ ಸೇತುವೆಯು ಲೋಹಿತಾ ನದಿಯ ಮೇಲೆ ನಿರ್ಮಾಣಗೊಂಡಿರುವ ಈ ಸೇತುವೆ 9.15 ಕಿ.ಮೀ ಉದ್ದವಿದೆ.
![]() |
ಭಾರತದ ಅತಿ ಉದ್ದವಾದ ಸೇತುವೆ |
ಧನ್ಸಿರಿ ನದಿ :-
ಈ ನದಿಯು ನಾಗಾಲ್ಯಾಂಡ್ ಲೈಸಾಂಗ್ (Laisang) ಶಿಖರದಲ್ಲಿ ಹುಟ್ಟಿ ನಾಗಾಲ್ಯಾಂಡ್ ಮತ್ತು ಅಸ್ಸಾಂನ ಮೂಲಖ ಹರಿದು ಬ್ರಹ್ಮಪುತ್ರ ನದಿಯ ಎಡ ದಂಡೆಗೆ ಸೇರುತ್ತದೆ. ಈ ನದಿಯು ಒಟ್ಟು 352 ಕಿ.ಮೀ ಉದ್ದ ಹರಿಯುತ್ತದೆ.
ಬರಾಕ್ ನದಿ :-
ಈ ನದಿಯು ಮಣಿಪುರದಲ್ಲಿ ಹುಟ್ಟಿ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಮೂಲಕ ಹರಿಯುತ್ತದೆ. ಈ ನದಿಯು ಅಸ್ಸಾಂ ನ ಬರಾಕ್ ಕಣಿವೆಯಲ್ಲಿ ಹರಿಯುವುದರಿಂದ ಇದನ್ನು ಭಾರತದಲ್ಲಿ ಬರಾಕ್ ನದಿ ಅಂತಲೂ, ಬಾಂಗ್ಲಾ ದೇಶದಲ್ಲಿ ಮೇಘನಾ ನದಿ ಎಂತಲೂ ಕರೆಯುತ್ತಾರೆ.
ಈಶಾನ್ಯ ರಾಜ್ಯಗಳಲ್ಲಿ ಅತಿ ಮುಖ್ಯ ನದಿಯಾಗಿರುವ ಈ ನದಿಯು ಆಂತರಿಕ ಜಲಸಾರಿಗೆಗೆ ಸೂಕ್ತವಾಗಿದೆ.
ಬಲದಂಡೆಯ ಉಪನದಿಗಳು :-
ಸುಬನ್ ಸಿರಿ, ಮನ್ ಸಿರಿ, ತಿಸ್ತಾ ನದಿ ಮತ್ತು ಪದ್ಮ ನದಿ.
ಸುಬನ್ ಸಿರಿ ನದಿ :-
ಟಿಬೆಟ್ ಭಾಗದ ಹಿಮಾಯಾಲ ಸರಣಿಯಲ್ಲಿ ಹುಟ್ಟುವ ಈ ನದಿಯು ಭಾರತದ ಅರುಣಾಚಲ ಪ್ರದೇಶದ ಮೂಲಕ ಅಸ್ಸಾಂ ಗೆ ಹರಿದು ಲಿಕಿಪುರ ನಗರದ ಬಳಿ ಬ್ರಹ್ಮಪುತ್ರ ನದಿಯ ಬಳದಂಡೆಗೆ ಸೇರುತ್ತದೆ. ಈ ನದಿಯು ಒಟ್ಟು ಉದ್ದ 442 ಕಿ.ಮೀ.
ಮನ್ ಸಿರಿ ನದಿ :-
ಹಿಮಾಲಯ ಪರ್ವತದ ಮಾನಸ್ಲು ಶಿಖರದ ಬಳಿ ಹುಟ್ಟುವ ಈ ನದಿಯು ನೇಪಾಳ ಸಿಕ್ಕಿಂ ಮತ್ತು ಭೂತಾನ್ ಮೂಲಕ ಅಶಸಂಗೆ ಹರಿದು ಅಲ್ಲಿ ಬ್ರಹ್ಮಪುತ್ರ ನದಿಯ ಬಲದಂಡೆಗೆ ಸೇರುತ್ತದೆ.
ತೀಸ್ತಾ ನದಿ :-
ಸಿಕ್ಕಿಂ ನ ಜೀವನದಿ ಎನಿಸಿದ ತೀಸ್ತಾ ನದಿಯು ಬ್ರಹ್ಮಪುತ್ರ ನದಿಯ ಬಲ ದಂಡೆಯ ಉಪನದಿಯಾಗಿದೆ. ಈ ನದಿಯು ಪೂರ್ವ ಹಮಾಲಯದಲ್ಲಿ ಹುಟ್ಟಿ ಪಶ್ಚಿಮ ಬಂಗಾಳ, ಸಿಕ್ಕಿಂ, ಮೂಲಕ ಬಾಂಗ್ಲಾ ದೇಶದಲ್ಲಿ ಹರಿದು ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ಇತ್ತೀಚಿಗೆ ಈ ನದಿಗೆ ಭಾರತದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಯೋಜನೆ ಕೈಗೊಂಡಿದ್ದು, ಇದನ್ನು ಬಾಂಗ್ಲಾದೇಶ ವಿರೋಧಿಸಿದೆ.
ತಿಸ್ತಾ ನದಿಯು ಬಾಂಗ್ಲಾ ದೇಶದಲ್ಲಿ ಬ್ರಹ್ಮಪುತ್ರ ನದಿಯನ್ನು ಸೇರಿದ ನಂತರ ಮುಂದೆ ಪದ್ಮ ನದಿ ಬ್ರಹ್ಮಪುತ್ರ ನದಿಯನ್ನು ಸೇರುವವರೆಗೆ ಬ್ರಹ್ಮಪುತ್ರ ನದಿಯನ್ನು ಜಮುನ ನದಿ ಎನ್ನುವರು.
ಪದ್ಮಾ ನದಿ :-
ಈ ನದಿಯು ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಗೆ ನಿರ್ಮಿಸಿದ ಫರಕ್ಕಾ ಆಣೆಕಟ್ಟಿನ ನಂತರ ಪೂರ್ವಕ್ಕೆ ಹರಿಯುವ ನದಿಯ ಕವಲು ನದಿಯಾಗಿದೆ.
ಪದ್ಮ ನದಿಯು ಭಾರತದ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶದಲ್ಲಿ ಹರಿದು ಬ್ರಹ್ಮಪುತ್ರ (ಜಮುನ)ನದಿಯ ಬಲದಂಡೆಗೆ ಸೇರುತ್ತದೆ. ನಂತರ ಮುಂದೆ ಸಾಗುವಾಗ ಇದನ್ನು ಪದ್ಮ ಎಂಬ ಹೆಸರಿನಲ್ಲಿ ಕರೆದು, ನಂತರ ಮೇಘನಾ ನದಿಯು ಒಂದು ಸೇರುತ್ತದೆ. ಮೇಘನಾ ನದಿಯು ಸೇರಿದ ನಿಂತರ ಪದ್ಮ ನದಿಯ ಹೆಸರಿನ ಬದಲಿಗೆ ಮೇಘನಾ ಎಂದು ಕರೆಯಲಾಗತ್ತದೆ. ಈ ನದಿಯು ತ್ಸಾಂಗ್ಪೋ, ಬ್ರಹ್ಮಪುತ್ರ, ನಂತರ ಬಾಂಗ್ಲಾದಲ್ಲಿ ಪದ್ಮಾ ತದನಂತರ ಅಂತಿಮವಾಗಿ ಮೇಘನಾ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ.
ಧನ್ಯವಾದಗಳು