ಬಲಿಹಾಲ್ ಮಾರ್ಗ :-
ಇದು ಪಿರ್ ಪಂಜಾಲ್ ಶ್ರೇಣಿಯ ಮೂಲಕ ಹಾದು ಹೋಗಿದೆ. ಈ ಶ್ರೇಣಿಯು ಕಾಶ್ಮೀರ ಕಣಿವೆಯ ದಕ್ಷಿಣಕ್ಕೆ ಇರುವ ಹೊರ ಹಿಮಾಲಯ ಮತ್ತು ಮೈದಾನಗಳಿಂದ ಬೇರ್ಪಡಿಸುವುದು. ರಾಷ್ಟ್ರೀಯ ಹೆದ್ದಾರಿ-1 A ( ಜಮ್ಮುವಿನಿಂದ ಶ್ರೀನಗರ )ನ್ನು ಈ ಕಣಿವೆಯ ಮೂಲಕ ನಿರ್ಮಿಸಲಾಗಿದೆ. ಜವಾಹರ್ ರಸ್ತೆ ಸುರಂಗ ( Jawahar Road Tunnel ) 2.5 ಕಿ.ಮೀ ಉದ್ದವಿದ್ದು,ಇದು ದೇಶದ ಅತಿ ಉದ್ದದ ರಸ್ತೆ ಸುರಂಗವಾಗಿದೆ. ಭಾರತೀಯ ರೈಲ್ವೆಯು ಪ್ರಮಾಣದ ದೂರವನ್ನು ಕಡಿಮೆ ಮಾಡಲು 11.21 ಕಿ.ಮೀ ಉದ್ದವಾದ ರೈಲ್ವೆ ಮಾರ್ಗವನ್ನು ಇದೇ ಕಣಿವೆ ಮಾರ್ಗದ ಮೂಲಕ ನಿರ್ಮಿಸಿ. ಇದು ದೇಶದ ಅತ್ಯಂತ ಉದ್ದವಾದ ರೈಲ್ವೆ ಸುರಂಗ ಮಾರ್ಗ ಆಗಿದ್ದು, ಖಾಝಿಗುಂಡ ಮತ್ತು ಬನಿಹಾಲ್ ಗಳ ಮಧ್ಯೆ ನಿರ್ಮಿಸಲಾಗಿದೆ.
ಪುಷ್ಪ ಕಣಿವೆ ( ಪ್ಲವರ್ ವ್ಯಾಲಿ ) ಮಾರ್ಗ :-
ಇದು ಪ್ರಪಂಚದಲ್ಲಿ ಅತ್ಯಂತ ಉದ್ದವಾದ ಪುಷ್ಪ ಕಣಿವೆಯಾಗಿದೆ. ಇದು ಉತ್ತರಾಖಂಡ ರಾಜ್ಯದಲ್ಲಿ ಕಂಡು ಬರುತ್ತದೆ. ಇದು ನಂದಾದೇವಿ ಜೈವಿಕ ಸಂರಕ್ಷಣಾ ವಲಯದಲ್ಲಿದೆ. ಈ ಕಣಿವೆಯಲ್ಲಿ ಆಲ್ಫೈನ್ ಗಳು ಮತ್ತು ವೈವಿಧ್ಯೆಮಯ ಹೂಗಳು ಕಂಡು ಬರುತ್ತದೆ. ಸಂಜೆಯಾದಂತೆ ಇವು ತಮ್ಮ ಬಣ್ಣವನ್ನು ಬದಲಾಯಿಸುತ್ತದೆ. ಇಲ್ಲಿರುವ ಪ್ರಮುಖ ಹೂಗಳೆಂದರೆ : ಬ್ರಹ್ಮಕಮಲ, ಕೋಬ್ರಾ ಲಿಲ್ಲಿ ಮತ್ತು ಬ್ಲ್ಯೂ ಪಪ್ಟಿ.
ನಥುಲ್ಲಾ ಕಣಿವೆ ( Nathula Pass ) ಮಾರ್ಗ :-
ನಥುಲ್ಲಾ ಕಣಿವೆ ಮಾರ್ಗವನ್ನು "ರೇಷ್ಮೆ ಮಾರ್ಗ" ಎಂದೂ ಕೊಡ ಕರೆಯುತ್ತಾರೆ. ಇದು ಹಳೆಯ ರೇಷ್ಮೆ ಮಾರ್ಗವಾಗಿದ್ದು, ಭಾರತ ಮತ್ತು ಚೀನಾದ ನಡುವೆ ರೇಷ್ಮೆ ವ್ಯಾಪಾರವನ್ನು ಈ ಮಾರ್ಗದಲ್ಲಿ ನಡೆಸುತ್ತಿದ್ದರು. ಇದೊಂದು ಕಣಿವೆ ಮಾರ್ಗವಾಗಿದೆ. ನಥುಲ್ಲಾ ಹಿಮಾಲಯದಲ್ಲಿನ ಒಂದು ಪರ್ವತ ಕಣಿವೆ ಮತ್ತು ವಾಣಿಜ್ಯ ಗಡಿ ಪ್ರದೇಶವಾಗಿದೆ. ಇದು ಭಾರತದ ಸಿಕ್ಕಿಂ ಮತ್ತು ಟಿಬೆಟ್ ನಡುವೆ ಬರುತ್ತದೆ. ಇದು ಭಾರತ ಮತ್ತು ಚೀನಾದ ಒಂದು ಗಡಿ ಪ್ರದೇಶವಾಗಿದೆ. ಇದು 4,310 ಮೀಟರ್ ಎತ್ತರದಲ್ಲಿದೆ. ಸಿಕ್ಕಿಂ ನ ರಾಜಧಾನಿ ಗ್ಯಾಂಗ್ಟಕ್ ನಿಂದ 54 ಕಿ.ಮೀ ದೂರದಲ್ಲಿದೆ. ಟಿಬೆಟ್ ಭಾಷೆಯಲ್ಲಿ ನಾಥು ಎಂದರೆ "ಕೇಳಿಸಿಕೊಳ್ಳುವ ಕಿವಿ" "ಲಾ" ಎಂದರೆ "ಕಣಿವೆ".
ಜಿಲೆಪ್-ಲಾ ಮಾರ್ಗ :-
ಜಿಲೆಪ್-ಲಾ ಇದು ತಿಬೆಟ್ಟಿನ ರಾಜಧಾನಿಯಾದ ಲ್ಹಾಸಾವನ್ನು ಪಶ್ಚಿಮ ಬಂಗಾಳದ ಕಾಲಿಂಪಾಂಗ್ ನೊಂದಿಗೆ ಸೇರಿಸುತ್ತದೆ. ಈ ಕಣಿವೆಗಳು ಉತ್ತಮ ಸಂಚಾರ ಸೌಲಭ್ಯವನ್ನು ಒದಗಿಸಿರುವುದಲ್ಲದೆ, ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರಗಳಾಗಿವೆ. ಇದು ಭಾರತದ ಅತಿ ದೊಡ್ಡ ಕಣಿವೆ ಮಾರ್ಗವಾಗಿದೆ.
ಕೈಬರ್ ಕಣಿವೆ ಮಾರ್ಗ :-
ಪಾಕಿಸ್ತಾನ-ಅಫ್ಘಾನಿಸ್ತಾನದ ಮಧ್ಯೆ ಉತ್ತರದ ಕಿರ್ತಾರ ಮತ್ತು ಸುಲೈಮಾನ್ ಶ್ರೇಣಿಯಲ್ಲಿ ಕಂಡುಬರುತ್ತದೆ.
ಮನಾಪಸ್ :-
ಉತ್ತರಾಖಂಡದ ನಂದಾದೇವಿ ಪರ್ವತದ ಕಣಿವೆಯ ಮೂಲಕ ಚೀನಾದ ಟಿಬೆಟ್ ಅನ್ನು ಸಂಪರ್ಕಿಸುತ್ತದೆ .
ಚಂಕನ್ ಕಣಿವೆ ಮಾರ್ಗ :-
ಇದು ಅರುಣಾಚಲ ಪ್ರದೇಶ ಮತ್ತು ಮಯನ್ಮರ್ ಗಳಿಗೆ ಸಂಪರ್ಕ ಕಲ್ಪಿಸುವ ಕಣಿವೆ ಮಾರ್ಗವಾಗಿದೆ.
ಬೊಂಡಿಲಾ ಪಾಸ್ :-
ಇದು ಅರುಣಾಚಲ ಪ್ರದೇಶದಲ್ಲಿ ನೀತಿಪಾಸ್ ಭಾರತ ಮತ್ತು ಟಿಬೆಟ್ ಅನ್ನು ಸಂಪರ್ಕಿಸುತ್ತದೆ.
ಡಿಪೊ ಕಣಿವೆ ಮಾರ್ಗ :-
ಭಾರತ, ಚೀನಾ ಮತ್ತು ಮಯನ್ಮರ್ 3 ದೇಶಗಳು ಸಂಧಿಸುವ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಪರ್ವತ ಕಣಿವೆಯಾಗಿವೆ. 1960 ಅಕ್ಟೋಬರ್ ನಲ್ಲಿ ಚೀನಾ ಮತ್ತು ಮಯನ್ಮರ್ ಗಳು ಡಿಪೊ ಕಣಿವೆ ಪ್ರದೇಶವನ್ನು ತಮ್ಮ ಗಡಿ ಪ್ರದೇಶ ಎಂದು ಗುರುತಿಸಿಕೊಂಡಿವೆ. 3 ದೇಶಗಳೂ ಸೇರುವ ಈ ಕಣಿವೆ ಮಾರ್ಗವನ್ನು ತ್ರಿ ಬಿಂದು ಪ್ರದೇಶ ಎಂದು ಕರೆಯಲಾಗುತ್ತದೆ. ಈ ಕಣಿವೆ ಪ್ರದೇಶವು ಚೀನಾ ಮತ್ತು ಭಾರತದ ಮಧ್ಯೆ ವಿವಾದ ಹೊಂದಿದೆ.
ಶಿಪ್ಕಿಲಾ ಮಾರ್ಗ :-
ಟೆಬೆಟ್ ನ ಗಾರ್ಟೋಕ್ ನಿಂದ ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಈ ಕಣಿವೆಯಿಂದ ಸಟ್ಲೇಜ್ ನದಿ ಭಾರತವನ್ನು ಪ್ರವೇಶಿಸುತ್ತದೆ.
ಹಿಮಾದ್ರಿಯ ಕಣಿವೆಗಳು :-
ಹಿಮಾದ್ರಿ ಎಂದರೆ "ದೇವರ ವಾಸಸ್ಥಾನ" ಎಂದರ್ಥ. ಮಹಾಹಿಮಾಲಯವು ಅನೇಕ ಕಣಿವೆಗಳನ್ನು ಒಳಗೊಂಡಿದ್ದು, ಇಲ್ಲಿನ ಕಣಿವೆಗಳು 4,570 ಮೀ ಗಿಂತ ಎತ್ತರದಲ್ಲಿದೆ. ಇದರ ಪ್ರಮುಖ ಕಣಿವೆಗಳೆಂದರೆ, ಕಾಶ್ಮೀರದ ಬುರ್ಜಿಲ್, ಜೋಜಿಲಾ, ಹಿಮಾಚಲ ಪ್ರದೇಶದ ಬಾರಾಲಾಫ್ಟ್. ಅಸ್ಸಾಂ ರಾಜ್ಯದಲ್ಲಿ ಸೋರ್ಮ ಕಣಿವೆ ಮತ್ತು ಬರಾಕ ಕಣಿವೆ ಕಂಡು ಬರುತ್ತವೆ. ಬರಾಕ ಕಣಿವೆಯಲ್ಲಿ ಬರಾಕ ನದಿ ಹರಿಯುತ್ತದೆ. ಈ ಕಣಿವೆಯು ಅಸ್ಸಾಂ ರಾಜ್ಯದಲ್ಲಿ ಸೆಣಬಿನ ಬೆಳೆಗೆ ಅತಿ ಪ್ರಸಿದ್ದಿಯಾಗಿದೆ.
ರೋಹಾಸ್ತ / ರೋಟಿಂಗ್ಯಾ :-
ರೋಟಿಂಗ್ಯಾ ಕಣಿವೆಯು ಪೀರ್ ಪಂಜಾಲ್ ಶ್ರೇಣಿಯ ಮೂಲಕ ಲೇಹಾದಿಂದ ಮನಾಲಿಯನ್ನು ಸಂಪರ್ಕಿಸುತ್ತದೆ.
ಧನ್ಯವಾದಗಳು