Type Here to Get Search Results !

ಸಂಯುಕ್ತ ವ್ಯವಸ್ಥೆಯ ಲಕ್ಷಣಗಳು

 ಸಂಯುಕ್ತ ವ್ಯವಸ್ಥೆಯ ಲಕ್ಷಣಗಳು 

ಭಾರತೀಯ ರಾಜಕೀಯ ವ್ಯವಸ್ಥೆಯು ಈ ಕೆಳಗಿನ ಸಂಯುಕ್ತ ವ್ಯವಸ್ಥೆಯ ಲಕ್ಷಣಗಳನ್ನು ಒಳಗೊಂಡಿದೆ. 


1. ಲಿಖಿತ ಸಂವಿಧಾನ 

ಭಾರತೀಯ ರಾಜಕೀಯ ವ್ಯವಸ್ಥೆಯು ಹೊಂದಿರುವ ಸಂಯುಕ್ತ ಪದ್ದತಿಯ ಪ್ರಥಮ ಲಕ್ಷಣವೆಂದರೆ ಲಿಖಿತ ಸಂವಿಧಾನ ಭಾರತದ ಸಂವಿಧಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಚನೆ, ಅಧಿಕಾರ ಮತ್ತು ಕರ್ತವ್ಯಗಳು ಕೇಂದ್ರ ಹಾಗೂ ರಾಜ್ಯಗಳ ನಡುವಣ ಸಂಬಂಧ ಮುಂತಾದ ಪ್ರಮುಖ ಅಂಶಗಳಿಗೆ ಸಂಬಂಧಿಸಿದ ವಿವರಗಳು ಬರವಣೆಗೆಯ ರೂಪದಲ್ಲಿದೆ. 


2. ದ್ವಿ-ಸರ್ಕಾರ ಪದ್ದತಿ

ಸಂಯುಕ್ತ ಪದ್ದತಿಯನ್ನು ಹೊಂದಿರುವ ಇತರೆ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿಯೂ ಕೊಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅಸ್ತಿತ್ವದಲ್ಲಿರುವುದನ್ನು ಕಾಣಬಹುದು. ಇದನ್ನು ದ್ವಿ-ಸರ್ಕಾರ ಪದ್ದತಿ ಎಂದು ಕರೆಯಲಾಗುತ್ತದೆ; ಕೇಂದ್ರ ಸರ್ಕಾರವು ರಾಷ್ಟ್ರೀಯ ಪ್ರಮುಖ್ಯತೆಯನ್ನು ಪಡೆದ ವಿಷಯಗಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ರೂಪಿಸುವುದಲ್ಲದೆ ಸಮಸ್ತ ರಾಷ್ಟ್ರದ ಆಡಳಿತವನ್ನು ನಿರ್ವಹಿಸುತ್ತದೆ. ಪ್ರತಿಯೊಂದು ಒಕ್ಕೊಟ ಘಟ್ಟಕವು ತನ್ನದೇ ಆದ ಸರ್ಕಾರವನ್ನು ಹೊಂದಿದ್ದು ಇದನ್ನು ರಾಜ್ಯ ಸರ್ಕಾರವು ಸ್ಥಳೀಯ ಮಹತ್ವ ಪಡೆದ ವಿಷಯಗಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ರೂಪಿಸುವುದಲ್ಲದೆ ರಾಜ್ಯಾದಾಳಿತವನ್ನು ನಿರ್ವಹಿಸುತ್ತದೆ. 


3. ಅಧಿಕಾರ ವಿಭಜನೆ 

ಕೇಂದ್ರ ಪಟ್ಟಿಯು ವಿದೇಶಾಂಗ ವ್ಯವಹಾರ, ರಕ್ಷಣೆ, ಅಂತರರಾಜ್ಯ ವ್ಯಾಪಾರ, ರೈಲ್ವೆ, ಅಂಚೆ ಮತ್ತು ತಂತಿ, ಆದಾಯ ತೆರಿಗೆ, ಹಣಕಾಸು, ಚುನಾವಣೆಗಳು, ನಾಗರಿಕ ವಿಮಾನಯಾನ, ಆಮದು-ರಫ್ತು ಮುಂತಾದ ರಾಷ್ಟ್ರೀಯ ಮಹತ್ವವನ್ನು ಪಡೆದ 100 ವಿಷಯಗಳನ್ನೂಳಗೊಂಡಿದೆ. ಕೇಂದ್ರ ಸರ್ಕಾರವು ಮಾತ್ರ ಈ ಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಶಾಸನಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿದ್ದು 

      a. ಕೇಂದ್ರ ಪಟ್ಟಿ 

      b. ರಾಜ್ಯಪಟ್ಟಿ 

      c. ಸಮವರ್ತ ಪಟ್ಟಿ 


4. ಅನಮ್ಯ ಸಂವಿಧಾನ 

 ಅನಮ್ಯ ಸಂವಿಧಾನವು ಸಂಯುಕ್ತ ಪದ್ದತಿಯ ಒಂದು ಪ್ರಮುಖ ಲಕ್ಷಣವಾಗಿದೆ. ಭಾರತ ಸಂವಿಧಾನದ ಕೆಲವು ಭಾಗಗಳನ್ನು ವಿಶೇಷ ವಿಧಾನದಿಂದ ಮಾತ್ರ ತಿದ್ದುಪಡಿ ಮಾಡಲು ಸಾಧ್ಯ. ಕೇಂದ್ರ ರಾಜ್ಯ ಸಂಭಂಧಗಳು, ರಾಷ್ಟ್ರಾಧ್ಯಕ್ಷರ ಚುನಾವಣೆ, ನ್ಯಾಯಾಂಗದ ರಚನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದತೆ ಸಂವಿಧಾನದ ತಿದ್ದುಪಡಿ ತರಲು ಸಂಸತ್ತಿನ ವಿಶೇಷ ಬಹುಮತದೊಂದಿಗೆ ಅರ್ಧ ದಷ್ಟು ಶಾಸಕಾಂಗಗಳ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. 


5. ಸ್ವತಂತ್ರ ನ್ಯಾಯಾಂಗ 

ಸಂಯುಕ್ತ ಪದ್ದತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಉದ್ಭವಿಸಬಹುದಾದ ವಿವಾದಗಳನ್ನು ಅತ್ಯರ್ಥಗೊಳಿಸಲು ಸ್ವತಂತ್ರ ನ್ಯಾಯಾಂಗದ ಅವಶ್ಯಕತೆ ಇರುತ್ತದೆ. ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. 


6. ಸಂವಿಧಾನದ ಪಾರಮತ್ಯೆ 

ಇತರೆ ಸಂಯುಕ್ತ ವ್ಯವಸ್ಥೆಗಳಲ್ಲಿರುವಂತ ಭಾರತದ ರಾಜಕೀಯ ವ್ಯವಸ್ಥೆಯಲ್ಲಿಯೂ ಸಂವಿಧಾನದ ಪಾರಮತ್ಯೆ ಅಥವಾ ಶ್ರೇಷ್ಟತೆಯನ್ನು ಕಾಣಬಹುದು. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಣ ಅಧಿಕಾರ ವಿಭಜನೆಯು ಸಂವಿಧಾನದತ್ತವಾದುದಾಗಿದೆ. ಸಂವಿಧಾನದ ವ್ಯಾಪ್ತಿಯನ್ನು ಉಲ್ಲೇಂಘಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾನೂನುಗಳನ್ನು ಆಜ್ಞೆಗಳನ್ನು ಹಾಗೂ ನಿರ್ಧಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಸಂವಿಧಾನ ಬಾಹಿರ ಹಾಗೂ ಅಸಿಂಧು ಎಂದು ಘೋಷಿಸುತ್ತದೆ. ಇದು ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗಿಂತ ಸಂವಿಧಾನವೇ ಶ್ರೇಷ್ಟವಾದುದು ಎಂಬುಡನ್ನು ತೋರಿಸುತ್ತದೆ. 


7. ದ್ವಿ- ಸದನ ಶಾಸಕಾಂಗ ಪದ್ದತಿ 

ಸಂಯುಕ್ತ ಪಡ್ಡತಿಯು ಆಸ್ತಿತ್ವದಲ್ಲಿರುವ ಯಾವುದೇ ರಾಷ್ಟ್ರಗಳಂತೆ ಭಾರತವೂ ಕೊಡ ದ್ವಿ-ಸದನ ಶಾಸಕಾಂಗ ಪದ್ದತಿಯನ್ನು ಹೊಂದಿದೆ. ನಮ್ಮ ಶಾಸಕಾಂಗವಾದ ಸಂಸತ್ತು, ಲೋಕಸಭೆ ಮತ್ತು ರಾಜ್ಯಸಭೆ ಎಂಬ ಎರಡು ಸದನಗಳನ್ನು ಹೊಂದಿದೆ. ಕೆಳಮನೆಯಾದ ಲೋಕಸಭೆಯು ಜನತೆಯನ್ನು ಪ್ರತಿನಿಧಿಸಿದರೆ, ಮೇಲ್ಮನೆಯಾದ ರಾಜ್ಯಸಭೆಯು ಒಕ್ಕೊಟ ಘಟಕಗಳಾದ ರಾಜ್ಯಗಳನ್ನು ಪ್ರತಿನಿಧಿಸುತ್ತದೆ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad