Type Here to Get Search Results !

ಭಾರತದ ಶಾಸನಿಯ ಅಧಿಕಾರಗಳ ವಿಭಜನೆ

 ಶಾಸನಿಯ ಅಧಿಕಾರಗಳ ವಿಭಜನೆ 

 ಕೇಂದ್ರ - ರಾಜ್ಯಗಳ ನಡುವಣ ಶಾಸನಿಯ ಅಧಿಕಾರಗಳ ವಿಭಜನೆಯನ್ನು ಸಂವಿಧಾನದ Ⅶನೇ ಅನುಸೂಚಿಯಲ್ಲಿ ಕಾಣಬಹುದು. ಈ ಅಧಿಕಾರ ವಿಭಜನೆಯು ಕೆನಡಾ ಹಾಗೂ ಆಸ್ಟ್ರೇಲಿಯಾಗಳ ಅಧಿಕಾರ ವಿಭಜನೆಯ ಮಾದರಿಯನ್ನು ಹೋಲುತ್ತದೆ. ಕೆನಡಾ ಸಂವಿಧಾನದಂತೆ ಭಾರದ ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಪಟ್ಟಿಗಳನ್ನು ಹೊಂದಿರುವುದರ ಜೊತೆಗೆ ಶೇಷಾಧಿಕಾರಗಳನ್ನು ಕೇಂದ್ರ ಸರಕಾರಕ್ಕೆ ನೀಡಿದೆ. ನಮ್ಮ ಸಂವಿಧಾನವು ಆಸ್ಟ್ರೇಲಿಯಾ ಸಂವಿಧಾನದಂತೆ ಸಮಾವರ್ತ ಪಟ್ಟಿಯನ್ನು ಒಳಗೊಂಡಿದೆ. ಭಾರತದ ಸಂವಿಧಾನದಲ್ಲಿ ಕಂಡುಬರುವ ಶಾಸನೀಯ ಅಧಿಕಾರಗಳ ವಿಭಜನೆಯ ಮಾಡರಿಯು 1915 ರ ಭಾರತ ಸರ್ಕಾರದ ಕಾಯ್ದೆಯನ್ನು ಹೆಚ್ಚಾಗಿ ಹೋಲುತ್ತದೆ. ಶಾಸನೀಯ ಅಧಿಕಾರಗಳ ವಿಭಜನೆಗೆ ಸಂಬಂಧಿಸಿದಂತೆ ನಮ್ಮ ಸಂವಿಧಾನದಲ್ಲಿ 3 ಪಟ್ಟಿ ಕಂಡುಬರುತ್ತದೆ. ಅವುಗಳೆಂದರೆ 

      1. ಕೇಂದ್ರ ಪಟ್ಟಿ 

      2. ರಾಜ್ಯ ಪಟ್ಟಿ 

      3. ಸಮವರ್ತ ಪಟ್ಟಿ 

ಭಾರತದ ಶಾಸನಿಯ ಅಧಿಕಾರಗಳ ವಿಭಜನೆ


ಕೇಂದ್ರ ಪಟ್ಟಿ -

                         ಕೇಂದ್ರ ಪಟ್ಟಿಯು ರಾಷ್ಟ್ರೀಯ ಮಹತ್ವ ಪಡೆದ 100 ವಿಷಯಗಳನ್ನು ಒಳಗೊಂಡಿದೆ. ವಿದೇಶಾಂಗ ವ್ಯವಹಾರ, ರಕ್ಷಣೆ, ಹಣಕಾಸು, ಅಂತರ ರಾಜ್ಯ ವ್ಯಾಪಾರ, ರೈಲ್ವೆ, ಅಂಚೆ ಮತ್ತು ತಂತಿ, ಆದಾಯ ತೆರಿಗೆ, ಚುನಾವಣೆಗಳು, ನಾಗರೀಕ ವಿಮಾನಯಾನ, ಆಮದು-ರಫ್ತು, ಅಂತರರಾಷ್ಟ್ರೀಯ ವ್ಯಾಪಾರ, ಬ್ಯಾಂಕಿಂಗ್, ವಿಮೆ, ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳ ರಾಚೆನೆ ಮತ್ತು ಅಧಿಕಾರ, ಗಣಿಗಾರಿಕೆ ಅಭಿವೃದ್ದಿ, ಗಣಿ ಮತ್ತು ತೈಲ ಸಂಪನ್ಮೂಲಗಳು, ಕೇಂದ್ರ ಲೋಕ ಸೇವಾ ಆಯೋಗ ಮೊದಲಾದ ಮುಖ್ಯವಾದವುಗಲಾಗಿವೆ. ಈ ಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಶಾಸನಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಮಾತ್ರ ಹೊಂದಿದೆ. ಆದ್ದರಿಂದ ಈ ಪಟ್ಟಿಯನ್ನು ಕೇಂದ್ರ ಪಟ್ಟಿ ಎಂದು ಕರೆಯಲಾಗುತ್ತದೆ. 


ರಾಜ್ಯ ಪಟ್ಟಿ -

                            ರಾಜ್ಯ ಪಟ್ಟಿಯು ಸ್ಥಳೀಯ ಮಹತ್ವ ಪಡೆದ 61 ವಿಷಯಗಳನ್ನು ಒಳಗೊಂಡಿದೆ. ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ, ಪೊಲೀಸ್, ಸಾರ್ವಜನಿಕ ಶಾಂತಿಪಾಲನೆ, ಬಂದೀಖಾನೆ, ವಾಣಿಜ್ಯ ತೆರಿಗೆ, ಪಶುಸಂಗೋಪನೆ, ನೀರಾವರಿ, ಭೂಕಂದಾಯ, ಸ್ಥಳೀಯ ಸರ್ಕಾರಗಳು, ರಾಜ್ಯ ಸೇವೆಗಳು, ಕೃಷಿ, ಮೀನುಗಾರಿಕೆ, ರಾಜ್ಯ ಲೋಕ ಸೇವಾ ಆಯೋಗ, ಮೊದಲಾದವು ಮುಖ್ಯಾವಾದವುಗಲಾಗಿವೆ. 

      ಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕಾಯ್ದೆಗಳನ್ನು ರೂಪಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದೆ. ಆದ್ದರಿಂದ ಈ ಪಟ್ಟಿಯನ್ನು ರಾಜ್ಯ ಪಟ್ಟಿ ಎಂದು ಕರೆಯುತ್ತಾರೆ. 


ಸಮವರ್ತ ಪಟ್ಟಿ -

                                 ಸಮವರ್ತ ಪಟ್ಟಿಯು ವಿವಾಹ, ವಿಚ್ಛೇದನ, ಮುದ್ರಣ ಮಧ್ಯಮ, ಅಪರಾಧಿಕ ಪ್ರಕ್ರಿಯಾ ಸಂಹಿತೆ, ಸಿವಿಲ್ ಪ್ರಕ್ರಿಯಾ ಸಂಹಿತೆ, ಕರಾರುಗಳು, ಅಪಕೃತ್ಯಗಳು, ದತ್ತಿ, ಕಾರ್ಮಿಕ ಕಲ್ಯಾಣ, ಆರ್ಥಿಕ ಮತ್ತು ಸಾಮಾಜಿಕ ಯೋಜನೆ, ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಯೋಜನೆ, ಶಿಕ್ಷಣ,ಅರಣ್ಯ, ಅಳತೆ, ಮತ್ತು ತೋಕ, ವನ್ಯ ಮೃಗಗಳು, ಮತ್ತು ಪಕ್ಷಿಗಳ ಸಂರಕ್ಷಣೆ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳನ್ನು ಹೊರತು ಪಡಿಸಿ ಇತರೆ ನ್ಯಾಯಾಲಯಗಳ ರಚನೆ ಮುಂತಾದ 52 ವಿಷಯಗಳನ್ನು ಹೊಂದಿವೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೋಪಿಸುವ ಕಾಯ್ದೆಗಳ ನಡುವೆ ಘರ್ಷಣೆ ಉಂಟಾದರೆ ರಾಜ್ಯ ಸರ್ಕಾರದ ಕಾಯ್ದೆ ರದ್ದಾಗಿ ಕೇಂದ್ರ ಸರ್ಕಾರದ ಕಾಯ್ದೆ ಆಸ್ತಿತ್ವದಲ್ಲಿ ಉಳಿಯುತ್ತದೆ[254(2). 


ಶೇಷಾಧಿಕಾರಗಳು -

                           ಮೇಲಿನ ಮೂರು ಪಟ್ಟಿಗೆ ಸೇರದ್ದೇ ಇರುವ ವಿಷಯಗಳನ್ನು ಶೇಷಾಧಿಕಾರಗಳು ಅಥವಾ ಉಳಿಕ ಅಧಿಕಾರಗಳು ಎಂದು ಕರೆಯಲಾಗುತ್ತದೆ. ಭಾರತ ಸಂವಿಧಾನವು ಶೇಷಾಧಿಕಾರಗಳನ್ನು ಕೇಂದ್ರ ಸರಕಾರಕ್ಕೆ ನೀಡಿದೆ(248 ನೇ ವಿಧಿ). ಯಾವುದೇ ಒಂದು ವಿಷಯವು ಶೇಷಾಧಿಕಾರದ ವ್ಯಾಪ್ತಿಗೆ ಸೇರಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಇದೆ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad