Citizenship ಪೌರತ್ವ
ಭಾರತ ಸಂವಿಧಾನವು ಏಕಪೌರತ್ವ ಅವಕಾಶ ಮಾಡಿಕೊಟ್ಟಿದೆ. ಭಾರತದಲ್ಲಿ ಓರ್ವ ವ್ಯಕ್ತಿ ರಾಜ್ಯದ ಪೌರತ್ವವನ್ನು ಹೊಂದಿರದೆ ಕೇವಲ ರಾಷ್ಟ್ರೀಯ ಪೌರತ್ವವನ್ನು ಮಾತ್ರ ಹೊಂದಿದ್ದಾನೆ. ಭಾರತ ಸಂವಿಧಾನದ ಎರಡನೇ ಭಾಗದಲ್ಲಿ ಕಂಡುಬರುವ 5 ರಿಂದ 11 ನೇ ವಿಧಿಗಳು ಪೌರತ್ವ ಸಂಬಂಧಿಸಿವೆ. ಆದರೆ ಈ ಭಾಗವು ಪೌರತ್ವಕ್ಕೆ ಸಂಬಂಧಿಸಿದಂತೆ ಶಾಶ್ವತವಾದ ಅಥವಾ ಸುದೀರ್ಘವಾದ ಉಪಯಬಂಧಗಳನ್ನು ಹೊಂದಿರುವುದಿಲ್ಲ. ಸಂವಿಧಾನ ಆರಂಭವಾದ ಸಂದರ್ಭದಲ್ಲಿ (Jan26-1950)ಭಾರತದ ಪೌರತ್ವ ಹೊಂದಿದ್ದ ವ್ಯಕ್ತಿಗಳನ್ನು ಮಾತ್ರ ಗುರುತಿಸುತ್ತದೆ. ಸಂವಿಧಾನ ಜಾರಿಗೆ ಬಂದ ನಂತರ ಪೌರತ್ವನ್ನು ಪಡೆದುಕೊಳ್ಳುವ ಅಥವಾ ಕಳೆದುಕೊಳ್ಳುವುದರ ಬಗೆಗೆ ವಿವರಣೆಗಳನ್ನು ಒಳಗೊಂಡಿಲ್ಲ.
ಪೌರತ್ವ ಕಾಯ್ದೆ - 1955
ಸಂವಿಧಾನದ ಪ್ರಕಾರ ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. (11 ನೇ ವಿಧಿ). ಅದರಂತೆ ಸಂಸತ್ತು ಪೌರತ್ವ ಕಾಯ್ದೆ - 1955 ನ್ನು ರೂಪಿಸಿತು. ಈ ಕಾಯ್ದೆಯು ಸಂವಿಧಾನ ಜಾರಿಗೆ ಬಂದ ನಂತರ ಪೌರತ್ವವನ್ನು ಪಡೆದುಕೊಳ್ಳುವುದಕ್ಕೆ ಮತ್ತು ಕಳೆದುಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಈ ಕಾಯ್ದೆಯನ್ನು ಪೌರತ್ವ (ತಿದ್ದುಪಡಿ ) ಕಾಯ್ದೆ 1986, ಪೌರತ್ವ (ತಿದ್ದುಪಡಿ) ಕಾಯ್ದೆ 1992, ಪೌರತ್ವ (ತಿದ್ದುಪಡಿ)ಕಾಯ್ದೆ 2003 ಮತ್ತು ಪೌರತ್ವ (ತಿದ್ದುಪಡಿ)ಕಾಯ್ದೆ 2005 ಇವುಗಳ ಮೂಲಕ 4 ಬಾರಿ ತಿದ್ದುಪಡಿ ಮಾಡಲಾಗಿದೆ.
ಪೌರತ್ವವನ್ನು ಪಡೆದುಕೊಳ್ಳುವ ವಿಧಾನಗಳು
ಪೌರತ್ವ ಕಾಯ್ದೆ - 1955ರ ಪ್ರಕಾರ ಒಬ್ಬ ವ್ಯಕ್ತಿ ಈ ಕೆಳಗೆ ವಿವರಿಸಿರುವ 5 ವಿಧಾನಗಳ ಮೂಲಕ ಭಾರತದ ಪೌರತ್ವವನ್ನು ಪಡೆಯಬಹುದು.
1. ಜನನದಿಂದ (By Birth)
ಜನವರಿ 26-1950 ರಂದು ಅಥವಾ ನಂತರ ಭಾರತದಲ್ಲಿ ಜನಿಸಿದವರು ಭಾರತದ ಪೌರರಾಗುತ್ತಾರೆ. ಅಂತವರಿಗೆ ತಂದೆ, ತಾಯಿ,ಯಾವ ರಾಷ್ಟ್ರದವರೆಂದು ಪರಿಗಣಿಸಿ ಪೌರತ್ವವನ್ನು ನೀಡಲಾಗುತ್ತದೆ.
2. ವಂಶಾನುಪ್ರಾಪ್ತಿಯಿಂದ (BY Descent)
ಜನವರಿ 26-1950 ರಂದು ಅಥವಾ ನಂತರ ಭಾರತದ ಹೊರಗೆ ಭಾರತೀಯ ಕುಟುಂಬಗಳಲ್ಲಿ ಜನಿಸಿದವರು, ಭಾರತದ ಪೌರರಾಗುತ್ತಾರೆ. ಆದರೆ ಆತನ ಜನನದ ಸಮಯದಲ್ಲಿ ತಂದೆ ಅಥವಾ ತಾಯಿ ಯಾರಾದರೂ ಒಬ್ಬರು ಪೌರತ್ವ ಆಗಿರಬೇಕು.
3. ನೊಂದಾಯಿಸುವುದರ ಮೂಲಕ (By Registration)
ಈ ಕೆಳಗಿನ ವ್ಯಕ್ತಿಗಳು ಸೂಕ್ತ ಪಾಧಿಕಾರದ ಮುಂದೆ ನೊಂದಾಯಿಸುವುದರ ಮೂಲಕ ಪೌರತ್ವ ಪಡೆಯಬಹುದು.
*) ನೋಂದಣಿಗಾಗಿ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ 5 ವರ್ಷಗಳ ಕಾಲ ಭಾರತದ ನಿವಾಸಿಗಲಾಗಿರುವ ಭಾರತೀಯ ಮೂಲದ ವ್ಯಕ್ತಿಗಳು.
*) ಭಾರತೀಯರನ್ನು ವಿವಾಹವಾದ ಸ್ತ್ರೀಯರು. ಆದರೆ ಅಂತಹ ವ್ಯಕ್ತಿಯು ಪೌರತ್ವಕ್ಕೆ ಅರ್ಜಿ ಸಲ್ಲಿಸುವುದಕ್ಕಿಂತ ಮಂಚಿತವಾಗಿ ವರ್ಷಗಳ ಕಾಲ್ ಭಾರತದ ನಿವಾಸಿಯಾಗಿರಬೇಕು.
*) ಭಾರತದ ಪೌರತ್ವವನ್ನು ಪಡೆದ ವ್ಯಕ್ತಿಯ ಮಕ್ಕಳು.
*) ಕಾಮನ್ ವೆಲ್ತ್ ದೇಶಗಳ ಪೌರತ್ವ ಹೊಂದಿರುವ ವ್ಯಕ್ತಿಗಳು.
*) ಯಾವುದೇ ದೇಶದಲ್ಲಿ ಅಥವಾ ಭಾರತದ ಹೊರಗೆ ಯಾವುದೇ ಸ್ಥಳದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಗಳು.
4. ಸಹಜೀಕೃತ ವಿಧಾನದ ಮೂಲಕ (By Naturalisation)
ಈ ಮೇಲಿನ ವಿಧಾನಗಳ ಮೂಲಕ ಪೌರತ್ವವನ್ನು ಪಡೆಯುವ ಅರ್ಹತೆ ಇಲ್ಲದವರು. ಸಹಜೀಕೃತ ವಿಧಾನದ ಮೂಲಕ ಪೌರತ್ವ ಪಡೆಯಬಹುದು. ಈ ವಿಧಾನದ ಮೂಲಕ ಪೌರತ್ವ ಪಡೆಯಬಯಸುವ ವ್ಯಕ್ತಿಗಳು ಈ ಕೆಳಗಿನ ನಿಯಮಗಳನ್ನು ಪೂರೈಸಬೇಕು.
*) ಭಾರತೀಯರಿಗೆ ಯಾವ ದೇಶದ ಪೌರರಾಗಲು ಸಾಧ್ಯವಿಲ್ಲವೂ ಅಂತಹ ದೇಶಕ್ಕೆ ಸೇರಿದವರಾಗಿರಬಾರದು.
*) ಇತರೆ ದೇಶದ ಪೌರತ್ವವನ್ನು ತ್ಯಾಜಿಸಿರಬೇಕು.
*) ಅರ್ಜಿ ಸಲ್ಲಿಸುವ 12 ತಿಂಗಳು ಮುಂಚೆ ಭಾರತದಲ್ಲಿ ವಾಸಿಸುತ್ತಿರಬೇಕು ಅಥವಾ ಭಾರತ ಸರ್ಕಾರದ ಸೇವೆಯಲ್ಲಿರಬೇಕು ಅಥವಾ 12 ತಿಂಗಳಿಗಿಂತ ಮುಂಚಿತವಾಗಿ 7 ವರ್ಷಗಳ ಕಾಲ ಭಾರತದಲ್ಲಿ ವಾಸಮಾಡಿರಬೇಕು ಅಥವಾ 4 ವರ್ಷಗಳ ಕಾಲ ಭಾರತದ ಸರ್ಕಾರದ ಸೇವೆಯಲ್ಲಿರಬೇಕು.
*) ಸಂವಿಧಾನ ಮಾನ್ಯತೆ ನೀಡಿರುವ ಭಾಷೆಗಳಲ್ಲಿ ಯಾವುದಾದರೂ ಒಂದು ಬಗೆಗೆ ಸಾಕಷ್ಟು ಜ್ಞಾನ ಹೊಂದಿರಬೇಕು.
*) ಸಹಜೀಕೃತ ಪೌರತ್ವ ಪಡೆದ ನಂತರ ಭಾರತದಲ್ಲಿ ವಾಸಿಸುವ ಆತ ಭಾರತ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸುವ ಉದ್ದೇಶ ಹೊಂದಿರಬೇಕು.
ಪ್ರತಿಯೊಬ್ಬ ಸಹಜೀಕೃತ ಪೌರತ್ವ ಭಾರತ ಸರಕಾರಕ್ಕೆ ನಿಷ್ಠಯಿಂದರುವುದಾಗಿ ಪ್ರಮಾಣ ಮಾಡಬೇಕು . ವಿಜ್ಞಾನ, ತತ್ವಜ್ಞಾನ, ಕಲೆ, ಸಾಹಿತ್ಯ, ವಿಶ್ವಶಾಂತಿ ಇವುಗಳಿಗಾಗಿ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಯ ವಿಷಯದಲ್ಲಿ ಭಾರತದ ಸರಕಾರ ಈ ಮೇಲಿನ ಎಲ್ಲ ಅಥವಾ ಯಾವುದೇ ನಿಯಮದಿಂದ ವಿನಾಯ್ತಿ ನೀಡಬಹುದು
5. ಭೂ ಪ್ರದೇಶಗಳ ಸರ್ಪಡೆಯಿಂದ ( By Incorporation of Territory)
ವಿದೇಶಕ್ಕೆ ಸೇರಿದ ಯಾವುದೇ ಒಂದು ಭೂ ಪ್ರದೇಶ ಭಾರತದೇಶಕ್ಕೆ ಸೇರ್ಪಡೆಯಾದರೆ, ಭಾರತ ಸರಕಾರವು ಆ ಭೂಪ್ರದೇಶದಲ್ಲಿ ನೆಲೆಸಿರುವ ವ್ಯಕ್ತಿಗಳು ಭಾರತದ ಪೌರರಾದರೆಂದು ಒಂದು ಅಧಿಸೂಚನೆಯ ಮೂಲಕ ಘೋಷಿಸುತ್ತದೆ. ಉದಾ: ಪಾಂಡಿಚೇರಿಯು ಭಾರತದಲ್ಲಿ ಸರ್ಪಡೆಯಾದಾಗ ಭಾರತ ಸರಕಾರವು ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ಪೌರತ್ವ (ಪಾಂಡಿಚೇರಿ)ದ ಆದೇಶ ಹೊರದಿಸಿತು.
ಪೌರತ್ವವನ್ನು ಕಳೆದುಕೊಳ್ಳುವಿಕೆ
1955ರ ಪೌರತ್ವ ಕಾಯ್ದೆಯ ಅನ್ವಯ ಮೂರು ರೀತಿಯಲ್ಲಿ ಭಾರತದ ಪೌರತ್ವವನ್ನು ಕಳೆದುಕೊಳ್ಳಬಹುದು.
1. ತ್ಯಾಜಿಸುವಿಕೆ ( Renunciation )
ಭಾರತೀಯ ಪೌರಾನು ಸಂಬಂಧಪಟ್ಟ ಪ್ರಾಧಿಕಾರದ ಅದುರಿನಲ್ಲಿ ನಿಗದಿತ ರೀತಿಯಲ್ಲಿ ಘೋಷಣೆ ಮಾಡುವುದರ ಮೂಲಕ ಪೌರತ್ವವನ್ನು ತ್ಯಾಜಿಸಬಹುದು. ಒಂದು ವೇಳೆ ಪೌರತ್ವವನ್ನು ತ್ಯಜಿಸುವ ವ್ಯಕ್ತಿ ಪುರುಷವಾಗಿದ್ದಲ್ಲಿ ಅವನ ಮಕ್ಕಳು ಕೊಡ ಭಾರತದ ಪೌರತ್ವವನ್ನು ಕಳೆದುಕೊಳ್ಳುತ್ತಾರೆ. ಅಂತಹ ಮಕ್ಕಳು ತಾವು ಇಚ್ಚಿಸಿದಲ್ಲಿ ಪ್ರಾಪ್ತ ವಯಸ್ಕರಾದ ಒಂದು ವರ್ಷದೊಳಗೆ ಭಾರತದ ಪೌರತ್ವವನ್ನು ಮರಳಿ ಪಡೆಯಬಹುದು.
2. ರದ್ದು ಮಾಡುವುದು (By Termination)
ಭಾರತೀಯ ಪೌರನು ಸ್ವಚ್ಛಯಿಂದ ಬೇರೆ ದೇಶದ ಪೌರತ್ವವನ್ನು ಸ್ವೀಕರಿಸಿದರೆ ಆತನ ಭಾರತೀಯ ಪೌರತ್ವ ತನ್ನಷ್ಟಕ್ಕೆ ತಾನೆ ರದಡಾಗುತ್ತದೆ.
3. ಕಸಿದುಕೊಳ್ಳುವುದು (Deprivation)
ಈ ಕೆಳಗಿನ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ಕೇಂದ್ರ ಸರ್ಕಾರವು ಕಡ್ಡಾಯವಾಗಿ ಕಸಿದುಕೊಳ್ಳುತ್ತದೆ.
*) ಒಬ್ಬ ವ್ಯಕ್ತಿಯು ಮೋಸ, ಸುಳ್ಳು, ವಂಚನೆಗಳ ಮೂಲಕ ಪೌರತ್ವ ಪಡೆದಿದ್ದರೆ.
*) ಒಬ್ಬ ಪೌರತ್ವ ಭಾರತ ಸಂವಿಧಾನಕ್ಕೆ ಅವಿಧೇಯತೆ ತೋರಿದರೆ,
*) ಭಾರತ ಯುದ್ದದಲ್ಲಿ ತೊಡಗಿದ ಸಮಯದಲ್ಲಿ ಒಬ್ಬ ಪೌರನು ಕಾನೂನುಬಾಹಿರವಾಗಿ ಶತ್ರುವಿನೊಂದಿಗೆ ವ್ಯವಹಾರದಲ್ಲಿ ತೊಡಗಿದರೆ ಅಥವಾ ಸಂಪರ್ಕ ಹೊಂದಿದೆ.
*) ಯಾವುದೇ ವ್ಯಕ್ತಿಯು ನೋಂದಣಿಯ ಮೂಲಕ ಅಥವಾ ಸಹಜೀಕೃತ ವಿಧಾನದ ಮೂಲಕ ಪೌರತ್ವ ಪಡೆದ 5 ವರ್ಷಗಳೊಳಗೆ ಎರಡು ವರ್ಷಗಳ ಕಾಲ ಸೆರೆವಾಸ ಶಿಕ್ಷೆ ಅನುಭವಿಸಿದ್ದರೆ.
ಧನ್ಯವಾದಗಳು