ಭಾರತದಲ್ಲಿನ ಬೆಳೆಗಳ ವಿಧಗಳು
1) ಆಹಾರ ಬೆಳೆಗಳು
2) ವಾಣಿಜ್ಯ ಬೆಳೆಗಳು
3) ತೋಟಗಾರಿಕೆ ಬೆಳೆಗಳು
1. ಆಹಾರ ಬೆಳೆಗಳು (Food Crops)
*. ಆಹಾರಕ್ಕಾಗಿ ಬೆಳೆಯುವ ಬೆಳೆಗಳನ್ನು ಆಹಾರ ಬೆಳೆಗಳು ಎನ್ನುವರು. ಈ ಬೆಳೆಗಳಲ್ಲಿ ಆಹಾರ ಧಾನ್ಯಗಳಾದ ಭತ್ತ, ಗೋಧಿ, ಜೋಳ, ಬಾರ್ಲಿ, ಮೆಕ್ಕೆಜೋಳ, ನವಣೆ, ರಾಗಿ, ಸಜ್ಜೆ ಹಾಗೂ ತರಕಾರಿ, ಹಣ್ಣುಗಳು ಹಾಗೂ ದ್ವಿದಲ ಧಾನ್ಯಗಳನ್ನು ಇಳಗೊಂಡಿರುತ್ತದೆ.
*. ಈ ಬೆಳೆಗಳು ಮಾನವನ ಮೂಲ ಬೇಡಿಕೆಗಳಲ್ಲಂದಾದ ಆಹಾರವನ್ನು ಒದಗಿಸುತ್ತವೆ. ಈ ಬೆಳೆಗಳನ್ನು ದೇಶದ ಎಲ್ಲಾ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಆಹಾರ ಧಾನ್ಯಗಳನ್ನು ಹೆಚ್ಚು ಬೆಳೆಯುವ ರಾಜ್ಯ "ಉತ್ತರ ಪ್ರದೇಶ"ವಾಗಿದ್ದು ನಂತರ ಮಧ್ಯೆಪ್ರದೇಶ, ಮಹಾರಾಷ್ಟ್ರ, ಬಿಹಾರ ರಾಜ್ಯಗಳು ಬೆಳೆಯುತ್ತವೆ. ಮೆಕ್ಕೆಜೋಳ, ಸಜ್ಜೆ, ಜೋಳ, ರಾಗಿ, ಕಾಲುಧಾನ್ಯಗಳು ಹಾಗೂ ಬಾರ್ಲಿ ಒರಟು ಧಾನ್ಯಗಲಾಗಿವೆ.
2. ವಾಣಿಜ್ಯ ಬೆಳೆಗಳು ( Commercial Crops)
*. ವ್ಯಾಪಾರದ ಉದ್ದೇಶದಿಂದ ಬೆಳೆಗಳ ಉತ್ಪಾದನೆ ಹಾಗೂ ಪ್ರಾಣಿ ಸಾಕಾಣಿಕೆ ಮಾಡುವುದನ್ನು "ವಾಣಿಜ್ಯ ಬೇಸಾಯ"ಎಂದು ಕರೆಯುತ್ತಾರೆ. ಕಚ್ಚಾವಸ್ತು ರೂಪದಲ್ಲಿ ಅಥವಾ ಅರೆ ಸಂಸ್ಕರಿಸಿ ಪ್ರಕ್ರಿಯೆಗೊಳಪಡಿಸಿ ಮಾರಾಟ ಮಾಡುವುದಕ್ಕಾಗಿ ಬೆಳೆಯುವ ಬೆಳೆಗಳನ್ನು ವಾಣಿಜ್ಯ ಬೆಳೆ ಅಥವಾ ಹಣದ ಬೆಳೆ ಎನ್ನುವರು.
*. ಈ ಪದ್ಧತಿಯಲ್ಲಿ ವಿಸ್ತಾರವಾಗಿರುವ ಕೃಷಿ ಪ್ರದೇಶವು ಒಂದು ಬೆಳೆ ಉತ್ಪಾದನೆಗೆ ಬಳಕೆಯಾಗುತ್ತದೆ. ವಾಣಿಜ್ಯ ಬೆಳೆಗಳೆಂದರೆ ಕಬ್ಬು, ಹತ್ತಿ, ಎಣ್ಣೆಕಾಳುಗಳು, ತೆಂಗಿನ ಕಾಯಿ, ಸೆಣಬು, ಮೆಣಸಿನ ಕಾಯಿ ಮತ್ತು ಹೊಗೆ ಸೊಪ್ಪು. ಈ ಬೆಳೆ ಉತ್ಪಾದನೆಗೆ ಭೂಮಿಯ ಸ್ವರೂಪ, ಮಣ್ಣಿನ ವಿಧ, ನೀರು, ವಾಯುಗುಣಗಳು ಹೆಚ್ಚು ಉಪಯುಕ್ತವಾಗಿರಬೇಕು. ಕೆಲವು ವಾಣಿಜ್ಯ ಬೆಳೆಗಳನ್ನು ತೋಟಗಾರಿಕಾ ಬೆಲೆಯಾಗಿಯೂ ಕೊಡ ಬೆಳೆಯುತ್ತಾರೆ.
3)ತೋಟಗಾರಿಕೆ ಬೆಳೆಗಳು ( Horticulture Crops)
* ನೆಡುತೋಪು ಬೇಸಾಯ ಪದ್ಧತಿಗಳಲ್ಲಿ ತೋಟಗಾರಿಕೆ ಬೇಸಾಯ ಒಂದಾಗಿದೆ. ತೋಟಗಾರಿಕೆಯನ್ನು "harticulture" ಎನ್ನುವರು
* ತೋಟಗಾರಿಕೆಯನ್ನು ಸಸ್ಯಗಳ ಸಂಸ್ಕೃತಿ ವ್ಯವಸ್ಥೆ ಎಂತಲೂ ವಿಯಖಾನಿಸಲಾಗಿದೆ.
* ತೋಟಗಾರಿಕಾ ಬೆಳಗಳು ಇತರೆ ಕೃಷಿ ಬೆಳೆಗಳಿಂದ ಹೆಚ್ಚು ಲಾಭದಾಯಕವಾಗಿವೆ. ಹಣ್ಣು, ತರಕಾರಿ, ಟೀ,ಕಾಫಿ, ರಬ್ಬರ್,ಗೋಡಂಬಿ, ಅಡಿಕೆ, ಕೊಕ್, ಏಲಕ್ಕಿ, ಮೆಣಸು, ವಿಳ್ಯಾದೆಲೆ, ತೆಂಗು ಮತ್ತು ಮತ್ತಿತರ ಸಾಂಬಾರ್ ಪದಾರ್ಥಗಳು ತೋಟಗಾರಿಕೆ ಬೆಳೆಗೆ ಸೇರಿದೆ.
* ಭಾರತದಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ,ತಮಿಳುನಾಡು, ಕೇರಲಾಗಳಲ್ಲಿ ತೋಟಗಾರಿಕೆ ಬೆಳಗಳು ಕಂಡುಬರುತ್ತದೆ. ಒ ಬೆಳೆಗಳಿಂದ ವೇದೇಶಿ ವಿನಿಮಯವು ಹಚ್ಚಕಾಗುತ್ತದೆ. ಒಂದೇ ಬೆಳೆಯನ್ನು ವಿಸ್ತಾರವಾದ ಜಾಗದಲ್ಲಿ ಬೆಳಯಲಾಗುತ್ತದೆ.
ಧನ್ಯವಾದಗಳು