Type Here to Get Search Results !

ಮಳೆಗಳ ವಿಧಗಳು (Types of Rainfall) - KPSC UPSC Exam

 ಮಳೆಗಳ ವಿಧಗಳು (Types of Rainfall)

                  ಮಳೆಯು ಉಂಟಾಗುವ ಕಾರಣವನ್ನು ಆಧರಿಸಿ ಅಥವಾ ಅದರ ಹಿನ್ನಲೆಯನ್ನು ಆಧರಿಸಿ ಮಳೆಯನ್ನು 3 ವಿಧಗಳಾಗಿ ವಿಂಗಡಿಸಬಹುದು 

     ಮಳೆಯ ವಿಧಗಳು 

1) ಪರಿಸರಣ / ಪ್ರಚಲನ ಮಳೆ ( Convectional Rainfall )

2) ಆವರ್ತ/ ವಾಯುವಿಕ ಮಳೆ ( Cyclonic Rainfall )

3) ಪರ್ವತ / ಪ್ರತಿರೋಧ ಮಳೆ ( Orographic Rainfall )

ಮಳೆಗಳ ವಿಧಗಳು (Types of Rainfall) - KPSC UPSC Exam
 ಮಳೆಗಳ ವಿಧಗಳು


ಪರಿಸರಣ / ಪ್ರಚಲನ ಮಳೆ ( Convectional Rainfall )

                     ಆರೋಹ ಮಳೆಯು ಉಷ್ಣವಳಯದಲ್ಲಿ ಕಂಡು ಬರುತ್ತದೆ. ಈ ಮಳೆಯು ಸಮಭಾಜಕವೃತ್ತದ ಸುತ್ತಮುತ್ತ ಇರುವ ಉಷ್ಣವಲಯದಲ್ಲಿ ಕಂಡು ಬರುತ್ತದೆ. ಸಮಭಾಜಕ ವೃತ್ತದಲ್ಲಿ ಪರಿಸರಣ ಮಳೆಯನ್ನು " ಅಪರಾಹ್ನದ ಮಳೆ, 'ಚಹಾ ಸಮಯದ ಮಳೆ'/'4 ಗಂಟೆಯ ಮಳೆ' ಎಂದು ಕರೆಯುತ್ತಾರೆ . 


* ಈ ಮಳೆಯನ್ನು ಕೇರಳದಲ್ಲಿ ಮಾವಿನ ಹೂಯ್ಲು, ಕರ್ನಾಟಕದಲ್ಲಿ ಕಾಫಿಯ ಹೂಯ್ಲು, ಪಶ್ಚಿಮ ಬಂಗಾಳದಲ್ಲಿ ಕಾಲಭೈಸಾಕಿ ಮಳೆ ಎಂತಲೂ ಕರೆಯುವರು. 

* ಸಮಭಾಜಕ ವೃತ್ತದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ವಾಯುವು ಚೆನ್ನಾಗಿ ಕಾದು ಮೇಲಕ್ಕೆ ಹಾರುತ್ತದೆ. ಮೇಲೆಕ್ಕೆ ಹಾರಿ ಮೋಡಗಳಾಗುತ್ತದೆ. 

* ತೇವಾಂಶಭರಿತ ವಾಯು ಮೇಲೆಕ್ಕೆ ಹಾರುವುದರಿಂದ ಗುಡುಗು ಮತ್ತು ಬಿರುಗಾಳಿ ಉತ್ತಾಗುತ್ತದೆ. ಇದರಲ್ಲಿ ವಾಯುವಿನ ಊರ್ದ್ವಮುಖ ಪ್ರವಾಹಗಳು ನೀರಿನ ಹನಿಗಳನ್ನು ಮೇಲೆಕ್ಕೆ ತಳ್ಳುತ್ತವೆ. ಈ ಹನಿಗಳು ಒಟ್ಟುಗೊಡಿ ನಂತರ ಹೊಡೆಯುತ್ತದೆ. 

* ಆರೋಹ ಮಳೆಯು ಗುಡುಗು ಮತ್ತು ಮಿಂಚುಗಳನ್ನು ಒಳಗೊಂಡಿರುತ್ತದೆ. ಈ ಪ್ರದೇಶದಲ್ಲಿ ಬೆಳಗಿನ ವೇಳೆ ಮೋಡವು ನಿರ್ಮಲವಾಗಿರುತ್ತದೆ. ನಂತರದ ಅವಧಿಯಲ್ಲಿ ಬಿಸಿಲು ಹಚ್ಚಾಗಿ ವಾಯುವು ಕಾದು ಮೇಲೇರುತ್ತ ಹೋಗುತ್ತದೆ. ಇದರ ಪರಿಣಾಮವಾಗಿ ಊರ್ದ್ವಮುಖವಾಗಿ ಗಾಳಿಯು ಮೇಲೇರುತ್ತದೆ. 

* ನಂತರ ಮೇಲೇರಿದ ತೇವಾಂಶ ಭರಿತ ಗಾಳಿಯು ಸಾಂದ್ರೀಕರಣಗೊಂಡು ನಂತರ ಭಾರವಾಗಿ ಹೊಡೆದು ನಾಳೆ ರೋಪದಲ್ಲಿ ಕೆಳಗೆ ಬೀಳುತ್ತದೆ. 

*  ಸಮಭಾಜಕ ವೃತ್ತದಲ್ಲಿ ಈ ಮಳೆಯು ಪ್ರತಿದಿನ ಕಂಡುಬರುತ್ತದೆ. ಆದರೆ ಇತರೆ ಪ್ರದೇಶಗಳಲ್ಲಿ ಆರೋಹ ಮಳೆಯು ಬೇಸಿಗೆ ಕಾಲದಲ್ಲಿ ಮಾತ್ರ ಕಂಡು ಬರುತ್ತದೆ. ಈ ಮಳೆಯು ತಟಸ್ಥ ಗುಣಧರ್ಮವನ್ನು ಹೊಂದಿದ್ದು, ಆರಂಭದಲ್ಲಿ ಮಳೆಹನಿಗಳು ಹೊಡೆಯುವ ಮೊದಲು ಧನ ಮತ್ತು ಋಣ ವಿದ್ಯುತ್ ನ್ನು ಸಮಾನ ಪ್ರಮಾಣದಲ್ಲಿ ಹೊಂದಿರುತ್ತವೆ. 

* ಸಾಂದ್ರೀಕೃತಗೊಂಡ ಮೋಡಗಳು ಘರ್ಷಣೆಯಿಂದ ಸ್ಥಾಯಿ ವಿದ್ಯುತ್ ಉತ್ಪತ್ತಿಯಾಗುತ್ತದೆ ಸ್ಥಾಯಿ ವಿದ್ಯುತ್ ನ ಪರಿಣಾಮವಾಗಿ ಮಿಂಚು ಮತ್ತು ಗುಡುಗು ಉಂಟಾಗುತ್ತದೆ. 

* ಮಿಂಚು ಉಂಟಾದ ಸ್ವಲ್ಪ ಸಮಯದ ನಂತರ ಗುಡುಗು ಕಂಡು ಬರುತ್ತದೆ. ಕಾರಣ ಬೆಳಕಿನ ವೇಗವು ಶಬ್ಧದ ವೇಗಕ್ಕಿಂತ ಹೆಚ್ಚಾಗಿರುತ್ತದೆ. ಮಿಂಚು ವಾಯುವಿನೊಳಗೆ ಹಾದು ಬರುವಾಗ 25 ಸಾವಿರ ಡಿಗ್ರೀ ಸೆಲ್ಸಿಯಸ್ ವರೆಗೂ ಉಷ್ಣಾಂಶವನ್ನು ಹೊಂದಿರುತ್ತೆ. ಮಿಂಚು ಭೂಮಿಯ ಕಡೆಗೆ ಹಾದು ಬರುವಾಗ ಕೆಲವು ಮಂದಿಗೆ ಸ್ಪರ್ಶಿಸುವುದರಿಂದ ಸಾವು ಸಂಭವಿಸುತ್ತದೆ. 

*  ವಾಯುಮಂಡಲದಿಂದ ಹಾದು ವಾರುವ ಮಿಂಚಿನಲ್ಲಿ ಸಂಗ್ರಹವಾಗಿರುವ ವಿದ್ಯುಚ್ಛಕ್ತಿಯಿಂದ ಗೋಡೆ ಮತ್ತು ಕಟ್ಟಡಗಳನ್ನು ರಕ್ಷಿಸಲು "ಮಿಂಚು ಬಂಧಕ"ವನ್ನು ಬಳಸುತ್ತಾರೆ. 

* ಉಷ್ಣವಲಯದ ಪ್ರದೇಶಗಳಲ್ಲಿ ಮಧ್ಯಾಹ್ನದ ವೇಳೆಗೆ ಭೂಮಿಯ ಗಾಳಿಯು ಕಾದು ಮೇಲೆಕ್ಕೆ ಹಾರಿ ಸಾಂದ್ರೀಕರಣಗೊಂಡು ಉಂಟಾಗುವ ಮೋಡವಾಗಿ ಭೂಮಿಯ ಗುರುತ್ವದಿಂದ ಮಳೆಯಾಗಿ ಹನಿಗಳ ರೂಪದಲ್ಲಿ ಸೂರಿಯುತ್ತದೆ. 

* ಸಮಭಾಜಕ ವೃತ್ತದ ಬದಿಯಲ್ಲಿರುವ ಉಷ್ಣ ಪ್ರದೇಶದಲ್ಲಿರುವ ವಾಯುವು ಕಾದು ಮೇಲೇರಿ ಸಾಂದ್ರೀಕರಣಗೊಂಡು ಉಂಟಾಗುವ ಮೋಡಗಳನ್ನು "ಕ್ಯೂಮುಲೊ-ನಿಂಬಸ್" ಮೋಡಗಳೆಂದು ಕರೆಯುತ್ತಾರೆ. ಸಂಜೆ ವೇಳೆಗೆ ಈ ಪ್ರದೇಶವು ಮಳೆಯಾಗಿ ನಂತರ ಮೋಡಗಳಿಂದ ಮುಕ್ತವಾಗುತ್ತದೆ. 

* ಸಮಭಾಜಕ ವೃತ್ತದಲ್ಲಿ ನಿರಂತರ ಮಾರುತಗಳು ಕಂಡು ಬಂದು ಮತ್ತು ವರ್ಷ ಪೂರ್ತಿ ಪರಿಸರಣ ಮಳೆ ಉಂಟಾಗುತ್ತದೆ. ಸಮಭಾಜಕ ವೃತ್ತದಲ್ಲಿ ವರ್ಷವಿಡೀ ಮಳೆಯಾಗುವುದರಿಂದ ನಿತ್ಯಹರಿದ್ವರ್ಣದ ಕಾಡುಗಳು ಕಂಡು ಬರುತ್ತದೆ. 



ಆವರ್ತ ಮಳೆ ( Cyclonic Rainfall )


 ಆವರ್ತಕ ಮಳೆಯನ್ನು "ವಾಯುವಿಕ ಮಳೆ" ಅಥವಾ "ವಾಯುಮುಖ ಮಳೆ" ಎಂದೊ ಕೊಡ ಕರೆಯುವರು. ಆವರ್ತ ಮಳೆಯು ಆವರ್ತ ಮಾರುತಗಳಿಂದ ಉಂಟಾಗುವ ಮಾಲೆಯಾಗಿದೆ 

* ಶೀತ ವಾಯುರಾಶಿ ಮತ್ತು ಉಷ್ಣ ವಾಯುರಾಶಿ ಸಂಧಿಸುವ ಸೀಮಾ ವಲಯದಲ್ಲಿ ಆವರ್ತ ಮಳೆ (ವಾಯು ಮಳೆ ) ಉಂಟಾಗುತ್ತದೆ. ಶೀತ ವಾಯು ರಾಶಿಯ ಮೇಲೆ ಉಷ್ಣ ವಾತು ರಾಶಿಯು ಮೇಲೇರುವುದರಿಂದ ತಂಪಾಗುತ್ತದೆ. 

* ಆವರ್ತಮಾಲೆಯಲ್ಲಿ ಮೊದಲ ಉಷ್ಣ ವಾಯುರಾಶಿಯು ಶೀತ ವಾಯು ರಾಶಿಯ ಮೇಲೇರುತ್ತದೆ. ಆಗ ಉಷ್ಣ ವಾಯುರಾಶಿಯಲ್ಲಿನ ತೇವಾಂಶವು ಸಾಂದ್ರೀಕರಣ ಹೊಂದಿ ಮೋಡಗಳಾಗಿ ಮಳೆಯು ಸುರಿಯುತ್ತದೆ. 

* ಸಮಶೀತೋಷ್ಣ ವಲಯಗಳಲ್ಲಿ ಆವರ್ತನ ಮಳೆಯು ವಾಯುಮುಖಗಳೊಂದಿಗೆ ಸಂಬಂಧ ಹೊಂದಿದೆ. ಆವರ್ತ ಮಳೆಯು ಸಾಮಾನ್ಯವಾಗಿ ಯೂರೋಪ್ ಖಂಡದಲ್ಲಿ ಕಂಡು ಬರುತ್ತದೆ.  

* ಉಷ್ಣ ವಲಯದ ಆವರ್ತ ಮಳೆಯನ್ನು ಹಿಂದು ಮಹಸಾಗರದಲ್ಲಿ ಚಂಡಮಾರುತಗಳೆಂದು ಕರೆಯುತ್ತಾರೆ. ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ, ಚೀನಾ ಸಮುದ್ರ ಮತ್ತು ಕೆರಿಬಿಯನ್ ಸಮುದ್ರ ಸುತ್ತಮುತ್ತ ಪ್ರದೇಶಗಳಲ್ಲಿ ಈ ಚಂಡಮಾರುತ ಕಂಡು ಬರುತ್ತದೆ. 

* ಉಷ್ಣ ವಲಯದ ಆವರ್ತ ಮಾರುತಗಳಿಂದ ಉಂಟಾಗುವ ಮಳೆ ಅತ್ಯಧಿಕವಾಗಿದ್ದು, ಕೆಲವೊಮ್ಮೆ ವಿನಾಶಕಾರಿಯಾಗಿರುತ್ತದೆ. 

* ಉಷ್ಣ ವಲಯದ ಆವರ್ತ ಮಾಲೆಗಳು ಗುಡುಗು ಮತ್ತು ಮಿಂಚುಗಳಿಂದ ಕೊಡಿರುತ್ತದೆ. 

* ಉಪ ದ್ರುವದ ಕಡಿಮೆ ಒತ್ತಡ ಪ್ರದೇಶದಲ್ಲಿ ಉಷ್ಣವಳಯದಲ್ಲಿ ವಾಯು ರಾಶಿ ಮತ್ತು ದ್ರುವೀಯ ವಾಯು ರಾಶಿಗಳ ಸಂಪರ್ಕ ವಲಯದಲ್ಲಿ ಉಂಟಾಗುವಂತಹ ಮಳೆಗೆ "ವಾಯುಮುಖ ಮಳೆ" ಎನ್ನುವರು. 



ಪರ್ವತದ ಮಳೆ ( ಪ್ರತಿರೋಧ ಮಳೆ ) 

   ತೇವಭರಿತ ವಾಯುವು ಪರ್ವತ ಶ್ರೇಣಿಯಿಂದ ತಡೆಯಲ್ಪಟ್ಟಾಗ ಪರ್ವತದ ಎದುರಿಗೆ ಇಳಿಜಾರಿನಲ್ಲಿ ಮೇಲೇರುತ್ತದೆ. ಭಾರತದಲ್ಲಿ ಬೀಸುವ ನೈರುತ್ಯ ಮಾನ್ಸೂನ್ ಮಾರುತಗಳು ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯ ಮೇಲೆ ಬೀಸುತ್ತದೆ.( ಇದು  ಮಳೆಗಳ ವಿಧಗಳು)

* ಅರಬ್ಬೀ ಸಮುದ್ರದಿಂದ ಬೀಸುವ ಮಾರುತಗಳನ್ನು ಪಶ್ಚಿಮ ಘಟ್ಟಗಳ ತಡೆಯುತ್ತವೆ. ಆದುದ್ದರಿಂದ ಈ ಮಾರುತಗಳು ಪಶ್ಚಿಮ ಘಟ್ಟಗಳಲ್ಲಿ ಮೇಲೇರುತ್ತದೆ. ಮಾರುತಗಳ ಮೇಲೇರುವಿಕೆಯಿಂದ ಪಶ್ಚಿಮ ಘಟ್ಟಗಳಲ್ಲಿ ಉಷ್ಣಾಂಶ ಇಳಿಯುತ್ತದೆ. 

* ತೇವಾಂಶಭರಿತ ವಾಯುವು ಮೇಲೇರಿ ತೇವಾಂಶ ಕಡಿಮೆಯಾಗುವವರೆಗೂ ಮಳೆಯನ್ನು ಸುರಿಸುತ್ತವೆ. ಆದರೆ ಮಾರುತವು ತನ್ನ ವಿರುದ್ದ ಬದಿಯಲ್ಲಿ ಬೀಸುವಾಗ ಉಷ್ಣಾಂಶ ಹೆಚ್ಚಾಗುವುದರಿಂದ ಮಳೆಯನ್ನು ಸುರಿಸುವುದಿಲ್ಲ. 

* ಪಶ್ಚಿಮ ಘಟ್ಟದ ಪೂರ್ವ ಬದಿಯ ಮೇಲೆ ಮಳೆಯಾಗುವುದಿಲ್ಲ ಆದುದ್ದರಿಂದ ಪಶ್ಚಿಮ ಘಟ್ಟದ ಪೂರ್ವಬದಿಯನ್ನು "ಮಳೆಯ ನೆರಳಿನ ನಾಡು" ಎಂದು ಕರೆಯುತ್ತಾರೆ. 

* ಕರ್ನಾಟಕದಲ್ಲಿ ಮೈದಾನ ಪ್ರದೇಶವು ಮಳೆಯಿಂದ ವಂಚಿತವಾಗಿ "ಮಳೆ ನೆರಳಿನ ನಾಡು" ಆಗಿದೆ. 

* ಪರ್ವತ ಮಳೆಯು ಗುಡುಗು ಮತ್ತು ಮಿಂಚುಗಳ ಜೊತೆಯಲ್ಲೇ ಬರುತ್ತದೆ. ವಾಯುವು ಇಬ್ಬನಿ ಬಿಂದುವಿಗಿಂತ ಕಡಿಮೆ ತಂಪಾದಾಗ ಸಾಂದ್ರೀಕರಣ ಹೊಂಡ ಮೋಡಗಳು ಉಂಟಾಗುತ್ತೆ. 

* ಮೋಡದ ಸೂಕ್ಷ್ಮ ಹನಿಗಳು ಒಟ್ಟುಗೂಡಿ ದೊಡ್ಡ ಹನಿ ಆಗುತ್ತದೆ ಹಾಗೂ ಸಮ್ಮುಖ ಬದಿಯ ಮೇಲೆ ಬಾರಿ ಮಳೆ ಬೀಳುತ್ತದೆ. 


(ಇವುಗಳು  ಮಳೆಗಳ ವಿಧಗಳು)

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad