Type Here to Get Search Results !

ರಾಜ್ಯ ನಿರ್ದೇಶಕ ತತ್ವಗಳು| ವರ್ಗೀಕರಣ ಮತ್ತು ಹೊಸ ರಾಜ್ಯ ನಿರ್ದೇಶಕ ತತ್ವಗಳು

 ರಾಜ್ಯ ನಿರ್ದೇಶಕ ತತ್ವಗಳು 

       ಭಾರತ ಸಂವಿಧಾನದ 4 ನೇ ಭಾಗವು ರಾಜ್ಯ ನಿದೇಶಕ ತತ್ವಗಳನ್ನು ಒಳಗೊಂಡಿದೆ. ಸಂವಿಧಾನ 36 ರಿಂದ 51 ರವರೆಗಿನ ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿವೆ. ಈ ತತ್ವಗಳನ್ನು ಐರಿಶ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ರಾಜ್ಯ ನಿರ್ದೇಶಕ ತತ್ವಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನದಿಂದ ನೀಡಲ್ಪಟ್ಟ ನಿರ್ದೇಶನಗಳ ಸ್ವರೂಪದಲ್ಲಿವೆ. ಇವುಗಳು ನ್ಯಾಯರಕ್ಷಿತವಾದವುದಿಲ್ಲದ್ದರೂ ದೇಶದ ಆಡಳಿತಕ್ಕೆ ಮೂಲಭೂತ ನಿಯಮಗಲಾಗಿವೆ. ಆದ್ದರಿಂದ ಕಾನೂನುಗಳನ್ನು ರೂಪಿಸುವಾಗ, ನೀತಿಗಳನ್ನು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಮತ್ತು ಆಡಳಿತ ನಡೆಸುವಾಗ ಈ ತತ್ವಗಳನ್ನು ಆಳವಡಿಸಿಕೊಳ್ಳುವುದು ರಾಜ್ಯದ ಆದ್ಯ ಕರ್ತವ್ಯವಾಗಿದೆ ಎಂಬುದಾಗಿ 37 ನೇ ವಿಧಿ ಸ್ಪಷ್ಟಪಡಿಸುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಶಿಲ್ಪಿಗಳಾದ ಡಾ|| ಬಿ.ಆರ್ ಅಂಬೇಡ್ಕರ್ ರವರು " ಈ ತತ್ವಗಳು ಸರಕಾರ ಹೇಗೆ ಕಾರ್ಯ ಪ್ರವೃತ್ತವಾಗಬೇಕು ಎಂಬುದರ ಮಾರ್ಗಸೂಚಿಗಲಾಗಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ'.



ಸಂವಿಧಾನದ ಪ್ರಸ್ತಾವನೆಯಲ್ಲಿ ವ್ಯಕ್ತವಾಗಿರುವ ಸಾಮಾಜಿಕ, ಆರ್ಥಿಕ,ರಾಜಕೀಯ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ ಮುಂತಾದ ಧ್ಯೇಯೋದ್ದೇಶಗಳನ್ನು ಸಾಧಿಸಲು ಈ ತತ್ವಗಳು ನೆರವಾಗುತ್ತವೆ ಎಂಬುದು ನಿರ್ವಿವಾದ. ರಾಜ್ಯ ನಿರ್ದೇಶತ ತತ್ವಗಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಾಜಾಪ್ರಭುತ್ವ, ಕಲ್ಯಾಣ ರಾಜ್ಯ ಮತ್ತು ಸಮಾಜವಾದ ಇವುಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ. 


ಗ್ರಾನ್ ವಿಲ್ಲೆ ಆಸ್ಟಿನ್ ರವರು ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶತ ತತ್ವಗಳನ್ನು ಸಂವಿಧಾನದ ಅಂತರಾತ್ಮ ಎಂದಿದ್ದಾರೆ 


ರಾಜ್ಯ ನಿರ್ದೇಶಕ ತತ್ವಗಳ ವರ್ಗೀಕರಣ 

           ಸಂವಿಧಾನವು ರಾಜ್ಯ ನಿರ್ದೇಶಕ ತತ್ವಗಳ ಯಾವುದೇ ರೀತಿಯ ವರ್ಗೀಕರಣವನ್ನು ಹೊಂದಿಲ್ಲ. ಆದರೆ ಅವುಗಳ ಸ್ವರೂಪವನ್ನು ಆದರಿಸಿ ಸ್ಥೂಲವಾಗಿ 3 ವರ್ಗಗಳಾಗಿ ವರ್ಗೀಕರಿಸಬಹುದು. 

      1. ಸಮಾಜವಾದಿ ತತ್ವಗಳು 

      2. ಗಾಂಧಿ ತತ್ವಗಳು 

      3. ಉದಾರತಾ ತತ್ವಗಳು 


1) ಸಮಾಜವಾದಿ ತತ್ವಗಳು 

                   ಈ ತತ್ವಗಳು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವುದರ ಮೂಲಕ ಭಾರತವನ್ನು ಒಂದು ಕಲ್ಯಾಣ ರಾಜ್ಯವನ್ನಾಗಿ ಪರಿವರಿಸುವ ಉದ್ದೇಶ ಹೊಂದಿವೆ 

*) ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಾಗಳು ಆಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸುವುದರ ಮೂಲಕ ಜನರ ಕಲ್ಯಾಣವನ್ನು ಪ್ರೋತ್ಸಾಹಿಸುವುದು ಮತ್ತು ಆದಾಯ, ಸ್ಥಾನಮಾನ, ಸೌಲಭ್ಯಗಕು ಮತ್ತು ಅವಕಾಶಗಳಲ್ಲಿ ಕಂಡುಬರುವ ಅಸಮಾನತಯನ್ನು ಕಡಿಮೆ ಮಾಡುವುದು (38 ನೇ ವಿಧಿ )ಆದಾಯ, ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿ ಕಂಡುಬರುವ ಅಸಮಾನತೆಯನ್ನು ಕಡಿಮೆ ಮಾಡುವುದು - ಈ ತತ್ವವನ್ನು 1978 ರಲ್ಲಿ 44 ನೇ ತಿದ್ದುಪಡಿಯ ಮೂಲಕ ಸಂವಿಧಾನದ 4 ನೇ ಭಾಗಕ್ಕೆ ಸೇರ್ಪಡೆ ಮಾಡಲಾಯಿತು. 


2) 

a. ಪ್ರತಿಯೊಬ್ಬ ಪೌರನಿಗೂ ಜೀವನಾವಶ್ಯಕ ವಸ್ತುಗಳು ದೊರಕುವಂತೆ ಮಾಡುವುದು. 

b. ಸಮುದಾಯದ ಭೌತಿಕ ಸಂಪನ್ಮೂಲಗಳನ್ನು ಎಲ್ಲರ ಒಳಿತಿಗಾಗಿ ಸಮನಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುವುದು. 

c. ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಕೇಂದ್ರೀಕೃತವಾಗದಂತೆ ತಡೆಕಟ್ಟುವುದು. 

d. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. 

e. ಕಾರ್ಮಿಕರು ಮತ್ತು ಮಕ್ಕಳ ಆರೋಗ್ಯ ಹಾಗೂ ಶಕ್ತಿಯನ್ನು ಬಲವಂತಪೂರ್ವಕವಾಗಿ ದುರುಪಯೋಗವಾಗದಂತೆ ಸಂರಕ್ಷಿಸುವುದು (39 ನೇ ವಿಧಿ). 

f. ಕೆಲಸ ನಿರ್ವಹಿಸಲು ಪೂರಕವಾದ ನ್ಯಾಯಾಯುತ ಹಾಗೂ ಮಾನವೀಯ ಸ್ಥಿಗತಿಗಳನ್ನು ಉಂಟು ಮಾಡುವುದು ಮತ್ತು ಹೆರಿಗೆ ಸೌಲಭ್ಯ ನೀಡುವುದು (42 ನೇ ವಿಧಿ). 


3) ಸಾಮಾನ್ಯ ವ್ಯಾಯಾವನ್ನು ಪ್ರೋತ್ಸಾಹಿಸುವುದು ಮತ್ತು ಬಡವರಿಗೆ ಉಚಿತ ಕಾನೂನು ನೆರವು ನೀಡುವುದು (39-a)

4) ನಿರುದ್ಯೋಗಿಗಳು, ವೃದ್ಧರು, ರೋಗಿಗಳು, ಅಸಮರ್ಥರು ಮತ್ತು ದುರ್ಬಲರಿಗೆ ಉದ್ಯೋಗದ ಹಕ್ಕು, ಶೈಕ್ಷಣಿಕ ಹಕ್ಕು ಮತ್ತು ಸಾರ್ವಜನಿಕ ನೆರವನ್ನು ಒದಗಿಸುವುದು (41 ನೇ ವಿಧಿ)

5) ಕೆಲಸ ನಿರ್ವಹಿಸಲು ಪೂರಕವಾದ ನ್ಯಾಯಾಯುತ ಹಾಗೂ ಮಾನವೀಯ ಸ್ಥಿತಿಗತಿಗಳನ್ನು ಉಂಟು ಮಾಡುವುದು ಮತ್ತು ಹೆರಿಗೆ ಸೌಲಭ್ಯ ನಡುವುದು (42 ನೇ ವಿಧಿ )

6) ಎಲ್ಲ ಕೆಲಸಗಾರರಿಗೆ ಜೀವನ ನಿರ್ವನಾ ಕೊಲಿ, ಉತ್ತಮ ಜೀವನ ಮಟ್ಟ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅವಕಾಶಗಳನ್ನು ದೊರೆಕಿಸಿಕೊಡುವುದು (43 ನೇ ವಿಧಿ )

7) ಉದ್ಯಮಗಳು ಅಥವಾ ಕೈಗಾರಿಕೆಗಳ ವ್ಯವಸ್ಥಾಪನೆಯಲ್ಲಿ ಕಾರ್ಮಿಕರಿಗೆ ಭಾಗವಹಿಸುವ ಅವಕಾಶ ನೀಡಲು ಕ್ರಮಗಳನ್ನು ತೆಗದುಕೊಳ್ಳುವುದು (43-a)

8) ಪೌಷ್ಟಿಕತೆಯ ಮಟ್ಟ ಮತ್ತು ಜನರ ಜೀವನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ( 47 ನೇ ವಿಧಿ ).



2. ಗಾಂಧಿ ತತ್ವಗಳು 

                 ಗಾಂಧಿವಾದವನ್ನು ಆಧರಿಸಿರುವ ಈ ತತ್ವಗಳು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ರಾಷ್ಟ್ರೀಯ ಪುನರ್ ರಚನಾ ಕಾರ್ಯಕ್ರಮಗಳನ್ನು ಪ್ರತಿನಿಧಿಸುತ್ತವೆ. ಗಾಂಧಿಜಿ ಯವರು ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ಅವರ ಕೆಲವು ಸಿದ್ದಾಂತಗಳನ್ನು ರಾಜ್ಯ ನಿರ್ದೇಶಕ ತತ್ವಗಳನ್ನಾಗಿ ಆಳವಡಿಸಿಕೊಳ್ಳಲಾಯಿತು. ಈ ತತ್ವಗಳು ರಾಜ್ಯಕ್ಕೆ ಈ ಕೆಳಗಿನ ನಿರ್ದೇಶಗಳನ್ನು ನೀಡುತ್ತದೆ. 


1. ಗ್ರಾಮ ಪಂಚಾಯತಿಗಳನ್ನು ಸಂಘಟಿಸಲು ಕ್ರಮ ತೆಗದುಕೊಳ್ಳುವುದು ಹಾಗೂ ಸರ್ಕಾರದ ಸ್ವಾಯತ್ತ ಘಟಕಗಳಾಗಿ ಕಾರ್ಯ ನಿರ್ವಹಿಸಲು ಅಗತ್ಯವಾದ ಅಧಿಕಾರ ಮತ್ತು ಪ್ರಾಧಿಕಾರವನ್ನು ಅವುಗಳಿಗೆ ನೀಡುವುದು (40 ನೇ ವಿಧಿ). 

2. ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು (43 ನೇ ವಿಧಿ)

3. ಸಹಕಾರ ಸಂಘಗಳ ಐಚ್ಚಿಕ ರಚನೆ, ಸ್ವಾಯತ್ತ ಕಾರ್ಯನಿರ್ವಹಣೆ, ಪ್ರಜಾಸತ್ತಾತ್ಮಕ ನಿಯಂತ್ರಣ ಮತ್ತು ವೃತ್ತಿಪರ ನಿರ್ವಹಣೆಯನ್ನು ಪ್ರೋತ್ಸಾಹಿಸುವುದು (43-b ವಿಧಿ )

4. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು ಮತ್ತು ಸಮಾಜದ ಇತರ ದುರ್ಬಲ ವರ್ಗಗಳ ಶಿಕ್ಷಣಿಕ ಹಾಗೂ ಆರ್ಥಿಕ ಹಿತಾಶಕ್ತಿಯನ್ನು ಪ್ರೋತ್ಸಾಹಿಸುವುದು ಮತ್ತು ಅವರನ್ನು ಸಾಮಾಜಿಕ ಅನ್ಯಾಯ ಹಾಗೂ ಎಲ್ಲ ರೀತಿಯ ಶೋಷಣೆಗಳಿಂದ ಸಂರಕ್ಷಿಸುವುದು (46 ನೇ ವಿಧಿ )

5. ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳ ನಿಷೇದ ( 47 ನೇ ವಿಧಿ ) 

6 ಕೃಷಿ ಮತ್ತು ಪಶು ಸಂಗೋಪಣೆಯನ್ನು ವೈಜ್ಞಾನಿಕ ಮಾದರಿಯಲ್ಲಿ ಅಭಿವೃದ್ದಿ ಪಡಿಸುವುದು, ಗೋಹತ್ಯೆ ನಿಷೇಧ ಮತ್ತು ಅವುಗಳ ತಳಿ ಅಭಿವೃದ್ದಿ (48 ನೇ ವಿಧಿ)


3. ಉದಾರತಾ ತತ್ವಗಳು 


1. ರಾಷ್ಟ್ರದಾದ್ಯಂತ ಎಲ್ಲ ಪ್ರಜೆಗಳಿಗೆ ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೊಳಿಸುವುದು (44ನೇ ವಿಧಿ )

2. ಆರು ವರ್ಷಗಳನ್ನು ಪೂರೈಸುವವರೆಗೆ ಎಲ್ಲ ಮಕ್ಕಳಿಗೆ ಶೈಶವಾವಸ್ಥೆಯ ರಕ್ಷಣೆ ಮತ್ತು ಶಿಕ್ಷಣ ನೀಡುವುದು (45 ನೇ ವಿಧಿ )

3. ಕೃಷಿ ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ಮಾದರಿಯಲ್ಲಿ ಅಭಿವೃದ್ದಿ ಪಡಿಸುವುದು (48 ನೇ ವಿಧಿ )

4. ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ (48-a)

5. ರಾಷ್ಟ್ರೀಯ ಮಹತ್ವದ ಸ್ಮಾರಕಗಳು, ಸ್ಥಳಗಳು ಮತ್ತು ವಸ್ತುಗಳ ರಕ್ಷಣೆ (49 ನೇ ವಿಧಿ )

6. ರಾಜ್ಯದ ಸಾರ್ವಜನಿಕ ಸೇವೆಗಳಲ್ಲಿ ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು (50 ನೇ ವಿಧಿ)

7. ಅಂತರರಾಷ್ಟ್ರೀಯ ಶಾಂತಿ ಅತ್ತು ಭದ್ರತೆಯನ್ನು ಕಾಪಾಡುವುದು ಮತ್ತು ರಾಷ್ಟ್ರ ರಾಷ್ಟ್ರಗಳ ನಡುವೆ ನ್ಯಾಯಾಯುತವಾದ ಮತ್ತು ಗೌರವಯುತವಾದ ಸಂಬಂಧಗಳನ್ನು ಕಾಯ್ದುಕೊಂಡು ಬರುವುದು, ಅಂತಾರಾಷ್ಟ್ರೀಯ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯಾರ್ಥಪಡಿಸಲು ಪ್ರೋತ್ಸಾಹಿಸುವುದು (51 ನೇ ವಿಧಿ ). 



ಹೊಸ ರಾಜ್ಯ ನಿರ್ದೇಶಕ ತತ್ವಗಳು 

               1976 ರ 42 ನೇ ತಿದ್ದುಪಡಿಯ ಮೂಲಕ ಮೂಲಪಟ್ಟಿಗೆ ನಾಲ್ಕು ಹೊಸ ರಾಜ್ಯ ನಿರ್ದೇಶಕ ತತ್ವಗಳನ್ನು ಸೇರ್ಪಡೆ ಮಾಡಲಾಯಿತು. 


1. ಮಕ್ಕಳ ಆರೋಗ್ಯಕರ ಬೆಳವಣಿಗೆ ಅವಕಾಶ ನೀಡುವುದು (39). 

2. ಸಾಮಾನ ನ್ಯಾಯವನ್ನು ಪ್ರೋತ್ಸಾಹಿಸುವುದು ಮತ್ತು ಬಡವರಿಗೆ  ಉಚಿತ ಕಾನೂನು ನೆರವು ನೀಡುವುದು (39-a)

3. ಕೈಗಾರಿಕೆಗಳ ವ್ಯವಸ್ಥಾಪನೆಯಲ್ಲಿ ಭಾಗವಹಿಸಲು ಕಾರ್ಮಿಕರಿಗೆ ಅವಕಾಶ ನೀಡುವುದು (43-a)

4. ಪರಿಸರ ಸಂರಕ್ಷಣೆ, ಸುಧಾರಣೆ ಮತ್ತು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ (48-a). 

5. ಸಹಕಾರ ಸಂಘಗಳ ಐಚ್ಚಿಕ ರಚನೆ,ಸ್ವಾಯತ್ತ ಕಾರ್ಯನಿರ್ವಹಣೆ, ಪ್ರಜಾಸತ್ತಾತ್ಮಕ ನಿಯಂತ್ರಣ ಮತ್ತು ವೃತ್ತಿಪರ ನಿರ್ವಹಣೆಯನ್ನು ಪ್ರೋತ್ಸಾಹಿಸುವುದು (43-bವಿಧಿ )

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad