ಈಶಾನ್ಯ ಬೆಟ್ಟಗಳು | ಪೂರ್ವಾಚಲ ಬೆಟ್ಟಗಳು ( North East Hills )
ಮಿಜೋ ಬೆಟ್ಟಗಳು ( Mizo Hills )
ಇವು ಮಿಜೋರಾಂ ಮತ್ತು ತ್ರಿಪುರಾದ ಭಾಗಗಳಲ್ಲಿ ಕಂಡು ಬರುತ್ತದೆ. ಈ ಬೆಟ್ಟಗಳನ್ನು ಲುಸಾಯಿ ಬೆಟ್ಟಗಳೆಂದು ಕೊಡ ಕರೆಯುತ್ತಾರೆ. ಮಿಜೋ ಬೆಟ್ಟಗಳು ಪಾತಕೈ ಪರ್ವತ ಶ್ರೇಣಿಗಲ್ಲಿ ಕಂಡು ಬರುವ ಬೆಟ್ಟಗಲಾಗಿವೆ. ಈ ಬೆಟ್ಟಗಳಲ್ಲಿ ಲುಸಾಯಿಸ್ ಅಥವಾ ಮಿಜೋ ಮತ್ತು ಕೋಗ್ನೆಟ್ ಜನಾಂಗದವರು ವಾಸಿಸುತ್ತಾರೆ. ಈ ಬೆಟ್ಟಗಳ ಅತ್ಯಂತ ಎತ್ತರವಾದ ಶಿಖರ ಫಾವ್ನಾಗ್ಪುಯಿ ( Phawngpui ) ಆಗಿದ್ದು, ಇದು ಸಮುದ್ರ ಮಟ್ಟದಿಂದ ಸರಾಸರಿ 2,157 ಮೀಟರ್ ಎತ್ತವಿದೆ. ಇದನ್ನು ಬ್ಲೂ ಮೌಂಟೇನ್ ಎಂತಲೂ ಕರೆಯುತ್ತಾರೆ.
ಖಾಸಿ ಬೆಟ್ಟಗಳು ( Khasi Hills )
ಖಾಸಿ ಬೆಟ್ಟಗಳು ಗಾರೋ-ಖಾಸಿ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಬೆಟ್ಟಗಳಾಗಿವೆ. ಇವುಗಳು ಮೇಘಾಲಯದಲ್ಲಿ ಕಂಡು ಬರುತ್ತದೆ. ಈ ವಲಯದಲ್ಲಿ ಖಾಸಿ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಈ ಪ್ರದೇಶದಲ್ಲಿ ಭಾರತದ ಅತ್ಯಂತ ಹೆಚ್ಚು ಮಳೆ ಬೀಳುವ ಮೌಸಿಮ್ ರಾಮ್ ಕಂಡು ಬರುತ್ತದೆ ಹಾಗೂ ಅತ್ಯಂತ ಶೀತ ಪ್ರದೇಶವಾದ ಚಿರಾಪುಂಜಿಯು ಇಲ್ಲಿ ಕಂಡು ಬರುತ್ತದೆ. ಲುಮ್ ಶೆಲಾಂಗ್ ಎಂಬುದು ಈ ಬೆಟ್ಟಗಳಲ್ಲಿ ಕಂಡು ಬರುವ ಅತ್ಯಂತ ಎತ್ತರವಾದ ಶಿಖರವಾಗಿದೆ. ಈ ಶಿಖರವು 1,968 ಮೀಟರ್ ಎತ್ತರವಿದೆ. ಈ ಪ್ರದೇಶವನ್ನು ಭಾರತದ ಪೂರ್ವದ ಸ್ಕಾಟ್ ಲ್ಯಾಂಡ್ ಎನ್ನುವರು.
ಗಾರೋ ಬೆಟ್ಟಗಳು ( Garo Hills)
ಈ ಬೆಟ್ಟಗಳು ಮೇಘಲಯದ ಗಾರೋ ಖಾಸಿ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಬೆಟ್ಟಗಳಾಗಿವೆ. ಇದು ಪ್ರಪಂಚದ ಅತ್ಯಂತ ತೇವಭರಿತ ಪ್ರದೇಶವಾಗಿದೆ. ಮೇಘಲಯದ ರಾಜಧಾನಿ ಶಿಲ್ಲಾಂಗ್ ಈ ಬೆಟ್ಟದ ಪ್ರದೇಶಗಳಲ್ಲಿ ಕಂಡು ಬರುತ್ತದೆ.
* ಈ ಬೆಟ್ಟಗಲ್ಲಿ ನೋಕ್ರೆಕ್ ಶಿಖರ ಮತ್ತು ತೂರು ಶಿಖರಗಳು ಕಂಡು ಬರುತ್ತದೆ. ಗಾರೋ ಬೆಟ್ಟಗಳು ಪ್ರಮುಖವಾಗಿ 3 ಜಿಲ್ಲೆಗಳನ್ನು ಒಳಗೊಂಡಿದೆ.
* ತುರು ಎಂಬುದು ಅತಿ ದೊಡ್ಡ ನಗರವಾಗಿದ್ದು, 70,000 ಕ್ಕಿಂತ ಹೆಚ್ಚು ಜನಸಂಖ್ಯೆಯು ಈ ಪ್ರದೇಶದಲ್ಲಿ ಕಂಡು ಬರುತ್ತದೆ. ಈ ಬೆಟ್ಟಗಳಲ್ಲಿ ಗಾರೋ ಬುಡಕಟ್ಟು ಜನಾಂಗವು ವಾಸಿಸುತ್ತಾರೆ. ಭಾರತದ ಪ್ರಮುಖ ರಾಜ್ಯಗಳಾದ ಮೇಘಾಲಯ, ಅಸ್ಸಾಂ, ತ್ರಿಪುರ, ಹಾಗೂ ನಾಗಾಲ್ಯಾಂಡ್ ಗಳಲ್ಲಿ ಗಾರೋ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ.
* ಈ ಬೆಟ್ಟಗಳಲ್ಲಿ ಸಿಜು ಎಂಬ ಸ್ವಾಭಾವಿಕ ಗುಹೆಗಳು ಕಂಡು ಬಂದಿದ್ದು, ಇವು ಏಷ್ಯಾದ ಅತಿ ದೊಡ್ಡ ಸ್ವಾಭಾವಿಕ ಗುಹೆಗಲಾಗಿವೆ. ಈ ಗುಹೆಗಳಲ್ಲಿ ಬಾವಲಿಗಳ ಪ್ರಭೇದಾಗಳು ಕಂಡು ಬರುತ್ತದೆ.
* ಗಾರೊ ಬೆಟ್ಟವು ಸ್ವಭಾವಿಕ ಸಸ್ಯಗಳ ಮತ್ತು ಪ್ರಾಣಿಗಳ ತಂಗುದಾಣವಾಗಿದೆ.
ನಾಗಾ ಬೆಟ್ಟಗಳು ( Naga Hills )
ನಾಗಾ ಬಟ್ಟಗಳು ಭಾರತ ಮತ್ತು ಮಯನ್ಮರ್ ದೇಶಗಳ ಗಡಿಯಲ್ಲಿ ಕಂಡು ಬರುವ ಬೆಟ್ಟಗಲಾಗಿವೆ. ಈ ಬೆಟ್ಟಗಳು ನಾಗಾಲ್ಯಾಂಡ್ ಮತ್ತು ಮಯನ್ಮರ್ ನಡುವೆ ಸ್ವಭಾವಿಕ ಗಡಿಯಂತೆ ಕಂಡುಬರುವೆ. ಈ ಶ್ರೇಣಿಯಲ್ಲಿ ಕಂಡು ಬರುವ ಸಾರಾಮತಿ ಶಿಖರವು ನಾಗಾ ಬೆಟ್ಟಗಳಲ್ಲಿ ಅತಿ ಎತ್ತರವಾದ ಶಿಖರವಾಗಿದೆ.
* ಈ ಶಿಖರವು 3,825 ಮೀಟರ್ ಎತ್ತರವನ್ನು ಹೊಂದಿರುವಂತಹ ಬೆಟ್ಟವಾಗಿವೆ. ನಾಗ ಬೆಟ್ಟಗಳು ಸಂಕೀರ್ಣ ಪರ್ವತ ವ್ಯವಸ್ಥೆಯ ಒಂದು ಭಾಗವಾಗಿದೆ.
* ಈ ಬೆಟ್ಟದ ಸಾಲಿನಲ್ಲಿ ನಾಗಾಲ್ಯಾಂಡ್ ಕಂಡು ಬರುತ್ತದೆ. ನಾಗಾ ಬೆಟ್ಟಗಳು ಆರಾಕ್ ಯೇಂ ಬೆಟ್ಟಗಳ ಭಾಗ್ಯವಾಗಿವೆ ಇಲ್ಲಿ ನಾಗಾ ಎಂಬ ಬುಡಕಟ್ಟು ಜನರು ವಾಸಿಸುತ್ತರೆ.
ಮಿಕಿರ್ ಬೆಟ್ಟಗಳು ( Mikir Hills )
ಇವು ಅಸ್ಸಾಂ ರಾಜ್ಯದ ದಕ್ಷಿಣದಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿ ಕಂಡು ಬರುತ್ತವೆ. ದಂಬುಚ್ಕೊ (Dambuchko) ಎಂಬುದು ಮಿಕಿರ್ ಬೆಟ್ಟಗಳ ಎತ್ತರವಾದ ಶಿಖರವಾಗಿದೆ.
ಮಣಿಪುರ ಬೆಟ್ಟಗಳು ( Manipur Hills )
ಮಣಿಪುರ ಬೆಟ್ಟಗಳು ನಾಗಾ ಬೆಟ್ಟದಿಂದ ದಕ್ಷಣಕ್ಕೆ ಚಾಚಿರುವ ಬೆಟ್ಟಗಳ ಸಾಲನ್ನು ಮಣಿಪುರ ಬೆಟ್ಟಗಳು ಎನ್ನುವರು. ಈ ಬೆಟ್ಟಗಳು ಮಣಿಪುರ ಮತ್ತು ಮಯನ್ಮರ್ ನಡುವೆ ನೈಸರ್ಗಿಕ ಗಡಿ ರೇಖೆಯಂತೆ ಕಂಡು ಬರುತ್ತವೆ. ಈ ಬೆಟ್ಟಗಳು ಸಮುದ್ರ ಮಟ್ಟದಿಂದ 2,500 ಮೀಟರ್ ಎತ್ತರ ಹೊಂದಿದೆ.
ಪಾಟ್ಕಾಯ್ ಬುಂ ಬೆಟ್ಟಗಳು ( Patkai Bum Hills )
ಪಾಟ್ಕಾಯಿ ಬುಂ ಬೆಟ್ಟಗಳು ಹಿಮಾಲಯ ಶ್ರೇಣಿಗಳ ಅರುಣಾಚಲ ಪ್ರದೇಶದಲ್ಲಿ ದಿ ಹಾಂಗ್ ಕೆಂದರಿನಿಂದ ದಕ್ಷಿಣದಲ್ಲಿ ಬಿಲ್ಲಿನ ಆಕಾರದಲ್ಲಿ ಚಾಚಿಕೊಂಡಿರುವ ಬೆಟ್ಟಗಳಾಗಿವೆ. ಇವುಗಳನ್ನು ಪಾಟ್ಕಾಯ್ ಬುಂ ಬೆಟ್ಟಗಳು ಎನ್ನುವರು.
ಈ ಬೆಟ್ಟಗಳು ಮರಳುಗಲ್ಲಿನಿಂದ ಕೊಡಿದ ಭೂ ಒಳಮಡಿಕೆಗೆ ನಿದರ್ಶನವಾಗಿವೆ. ಭಾರತ ಮತ್ತು ಮಯನ್ಮರ್ ದೇಶಗಳ ನಡುವೆ ಈ ಬೆಟ್ಟಗಳು ಸ್ವಾಭಾವಿಕ ಗಡಿಯಂತೆ ಕಂಡು ಬರುತ್ತದೆ.
ಮಿಶ್ಮಿ ಬೆಟ್ಟಗಳು (Mishimi Hills)
ಮಿಶ್ಮಿ ಬೆಟ್ಟಗಳು ಅರುಣಾಚಲ ಪ್ರದೇಶದ ಉತ್ತರದಲ್ಲಿ ಕಂಡು ಬರುವ ಬೆಟ್ಟಗಳಾಗಿವೆ. ಈ ಪರ್ವತ ಶ್ರೇಣಿಗಳು ಇಂಡೋ ಬರ್ಮ ಸರಣಿಯಲ್ಲಿ ಕಂಡು ಬರುವ ಶಿಖಗಳಾಗಿವೆ. ಅರುಣಾಚಲ ಪ್ರದೇಶದಲ್ಲಿ ಸ್ಥಳೀಯವಾಗಿ ಬೆಟ್ಟಗಳನ್ನು ಮಿಶ್ಮಿ ಎಂದು ಕರೆಯುತ್ತಾರೆ.
* 1950 ರ ಅವಧಿಯಲ್ಲಿ ಈ ಬೆಟ್ಟಗಳು ವಿನಾಶಕಾರಿ ಭೂಕಂಪದ ಕೇಂದ್ರ ಭಾಗವಾಗಿತ್ತು.
* ಈಶಾನ್ಯ ಬೆಟ್ಟಗಳು ಮಧ್ಯೆ ಭಾರತದಿಂದ ಪೂರ್ವ ಭಾಗದಲ್ಲಿ ಭಾರತ ಮತ್ತು ಮಯನ್ಮರ್ ನ ಗಡಿಯಾಗಿ ಹಂಚಿಕೆಯಾಗಿದೆ.
ಅರಾಕ್ ಯೇಂ ಸರಣಿ
ಭಾರತದ ಈಶಾನ್ಯ ಬೆಟ್ಟಗಳಲ್ಲಿ ಮಯನ್ಮರ್ ಮತ್ತು ಭಾರತದ ಗಡಿಯುದ್ಧಕ್ಕೂ ಅರುಣಾಚಲ ಪ್ರದೇಶ ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂ ನಲ್ಲಿ ಕಂಡು ಬರುವ ಪರ್ವತ ಸರಣಿಯಾಗಿದೆ.
ಹೆಚ್ಚುವರಿ ಮಾಹಿತಿ
ಭಾರತದ ಈಶಾನ್ಯ ಭಾಗದಲ್ಲಿರುವ ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲಪ್ರದೇಶ, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಮೇಘಾಲಯ, ರಾಜ್ಯಗಳನ್ನು ಸಪ್ತ ಸಹೋದರಿ ರಾಜ್ಯಗಳು ಎನ್ನುವರು. ಈ 7 ರಾಜ್ಯಗಳು ಅಸ್ಸಾಂ ನಿಂದ ವಿಭಜನೆ ಗೊಂಡಿವೆ. ಇವು ಭಾರತದ ಈಶಾನ್ಯ ರಾಜ್ಯಗಳಾಗಿದ್ದು, ಇವುಗಳೊಂದಿಗೆ ಸಿಕ್ಕಿಂ ಕೊಡ ಈಶಾನ್ಯ ರಾಜ್ಯವಾಗಿದೆ.
ಧನ್ಯವಾದಗಳು