Type Here to Get Search Results !

ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂಪೂರ್ಣ ಮಾಹಿತಿ - UPSC KPSC

ರಾಷ್ಟ್ರೀಯ ತುರ್ತು ಪರಿಸ್ಥಿತಿ

* ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು 352 ನೇ ವಿಧಿಯು ತಿಳಿಸುತ್ತದೆ. 

    ಯುದ್ದ ಅಥವಾ ಬಾಹ್ಯ ಆಕ್ರಮಣ ಆತ ಶಶಸ್ತ ಬಂಡಾಯ ಇವುಗಳಿಂದ ಭಾರತದ ಅಥವಾ ಭಾರತದ ಯಾವುದೇ ಭಾಗದ ಭದ್ರತೆಗೆ ತೊಂದರೆಯಾದಾಗ ರಾಷ್ಟ್ರಾಧ್ಯಕ್ಷರು 352 ನೇ ವಿಧಿಯನ್ವಯ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.  ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಬಹುದೆಂದು ಭಾವಿಸಿದಲ್ಲಿ ರಾಷ್ಟ್ರಾಧ್ಯಕ್ಷರು ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಭಂಡಾಯ ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. 


* ಯುದ್ಧ ಅಥವಾ ಬಾಹ್ಯ ಆಕ್ರಮಣದ ಆಧಾರದ ಮೇಲೆ ಘೋಷಿಸಲಾಗುವ ತುರ್ತು ಪರಿಸ್ಥಿತಿಯನ್ನು ಬಾಹ್ಯ ತುರ್ತು ಪರಿಸ್ಥಿತಿ ಎಂದು ಕರೆಯುತ್ತಾರೆ.

* ಸಶಸ್ತ್ರ ಬಂಡಾಯದ ಆಧಾರದ ಮೇಲೆ ಘೋಷಿಸುಲಾಗುವ ತುರ್ತು ಪರಿಸ್ಥಿತಿಯನ್ನು ಆಂತರಿಕ ತುರ್ತು ಪರಿಸ್ಥಿತಿ ಎಂದು ಕರೆಯುವರು 

* ತುರ್ತು ಪರಿಸ್ಥಿತಿಯ ಘೋಷಣೆಯು ಇಡೀ ರಾಷ್ಟ್ರಕ್ಕೆ ಅನ್ವಯಿಸಬಹುದು ಅಥವಾ ರಾಷ್ಟ್ರದ ಯಾವುದಾದರೂ ಒಂದ ಭಾಗಕ್ಕೆ ಮಾತ್ರ ಅನ್ವಯಿಸಬಹುದು. 

* 1976ರ 42 ನೇ ತಿದ್ದುಪಡಿಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ರಾಷ್ಟ್ರದ ಒಂದು ನಿರ್ದಿಷ್ಟ ಭಾಗಕ್ಕೆ ಸೀಮಿತಗೊಳಿಸುವ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರಿಗೆ ನೀಡಿತು. 

* ಮೂಲ ಸಂವಿಧಾನವು "ಆಂತರಿಕ ದಂಗೆ"ಯ ಆಧಾರದ ಮೇಲೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು ಎಂದು ಹೇಳುತ್ತದೆ. 

* 1978 ರ 44 ನೇ ತಿದ್ದುಪಡಿಯ ಮೂಲಕ ಆಂತರಿಕ ದಂಗೆ ಎಂಬ ಪದದ ಬದಲಾಗಿ ಸಶಸ್ತ್ರ ಬಂಡಾಯ ಎಂಬ ಪದವನ್ನು ಸೇರಿಸಲಾಯಿತು. 


* ಆಂತರಿಕ ದಂಗೆಯ ನೆಪವೊಡ್ಡಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿಯನ್ನು ಘೋಷಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡದ್ದೆ ಈ ಬದಲಾವಣೆ ಕಾರಣ ಎಂದು ಹೇಳಬಹುದು. 

* 1978 ರ 44 ನೇ ತಿದ್ದುಪಡಿಯ ಪ್ರಕಾರ ರಾಷ್ಟ್ರಾಧ್ಯಕ್ಷರು ಸಚಿವ ಸಂಪುಟದ ಲಿಖಿತ ಶಿಫಾರಸಿನ ಮೇರೆಗೆ ಮಾತ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. 

*ಹೀಗೆ ಸಚಿವ ಸಂಪುಟದ ಸಮ್ಮಿತಿಯ ಮೇರೆಗೆ ಮಾತ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದೇ ಹೊರತು ಕೇವಲ ಪ್ರಾಧಾನಿಯ ಸಲಹೆಯ ಮೇರೆಗೆ ಸಾಧ್ಯವಿಲ್ಲ. 


ಸಂಸತ್ತಿನ ಅನುಮೋದನೆ ಮತ್ತು ಅವಧಿ 

* ತುರ್ತು ಪರಿಸ್ಥಿತಿ ಘೋಷಣೆಯಾದ ದಿನಾಂಕದಿಂದ ಒಂದು ತಿಂಗಳೊಳಗೆ ಸಂಸತ್ತಿನ ಉಭಯ ಸದನಗಳಿಂದ ಅನುಮೋದಿಸಲ್ಪಡಬೇಕು. 

* ಮೊದಲು ಎರಡು ತಿಂಗಳೊಳಗಾಗಿ ಸಂಸತ್ತಿನ ಅನುಮೋದನೆ ಪಡೆಯಬೇಕಿತ್ತು. 1978ರ 44 ನೇ ತಿದ್ದುಪಡಿಯ ಮೂಲಕ ಈ ಅವಧಿಯನ್ನು ಒಂದು ತಿಂಗಳಿಗೆ ಇಳಿಸಲಾಗಿದೆ. 

* ಲೋಕ ಸಭೆ ವಿಸರ್ಜನೆಯಾದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸದಲ್ಲಿ ಅಥವಾ ಒಂದು ತಿಂಗಳ ಕಾಲಾವಧಿಯಲ್ಲಿ ತುರ್ತು ಪರಿಸ್ಥಿಯ ಘೋಷಣೆಯನ್ನು ಅನುಮೋದಿಸದೆ ಸಂಸತ್ತು ವಿಸರ್ಜನೆಗೊಂಡರೆ, ಹೊಸಾದಾಗಿ ಅಸ್ತಿತ್ವಕ್ಕೆ ಬಂದ ಲೋಕಸಭಾ ಮೊದಲ ಅಧಿವೇಶನ ಆರಂಭವಾದ 30 ದಿನಗಳವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿರುತ್ತದೆ. 

* ಆದರೆ ಈ ಮಧ್ಯೆ ರಾಜ್ಯಸಭೆ ತುರ್ತು ಪರಿಸ್ಥಿತಿ ಘೋಷಣೆಯನ್ನು ಅನುಮೋದಿಸಿರಬೇಕು. 

* ಸಂಸತ್ತಿನ ಎರಡೂ ಸದನಗಳಿಂದ ಅನುಮೋಡಿಸಲ್ಪಟ್ಟರೆ ತುರ್ತು ಪರಿಸತಿತುಯು 6 ತಿಂಗಳವರೆಗೆ ಮುಂಡುವರೆಯುತ್ತಾರೆ. ಪ್ರತಿ 6 ತಿಂಗಲಿಗೊಮ್ಮೆ ಸಂಸತ್ತಿನ ಅನುಮೋದನೆ ಪಡೆದು ತುರ್ತು ಪರಿಸ್ಥಿತಿಯನ್ನು ಅನಿರ್ದಿಷ್ಟ ಕಾಲವಧಿಯ ವರೆಗೆ ವಿಸ್ತರಿಸಬಹುದು. 


* ಸಂಸತ್ತಿನ ನಿಯತಕಾಲಿಕ ಅನುಮೋದನೆಗೆ ಸಂಬಂಧಿಸಿದ ನಿಯಮವನ್ನು 1978 ರ 44 ನೇ ತಿದ್ದುಪಡಿ ಕಾಯ್ದೆಯ ಮೂಲಕ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. 

* ಸದನದ ಒಟ್ಟು ಸದಸ್ಯರ ಪೈಕಿ ಸರಳ ಬಹುಮತ ಮತ್ತು ಸದನದಲ್ಲಿ ಹಾಜರಿದ್ದು ಮತ ನಿಡುವವರ ಪೈಕಿ ⅔ ರಷ್ಟು ಬಹುಮತ ಇರಬೇಕು. 

ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂಪೂರ್ಣ ಮಾಹಿತಿ - UPSC KPSC



ಇದುವರೆಗಿನ ರಾಷ್ಟ್ರೀಯ ತುರ್ತು ಪರಿಸ್ಥಿತಿಗಳು 

ಬಾಹ್ಯ ತುರ್ತು ಪರಿಸ್ಥಿತಿ 

1) 1962 ರಲ್ಲಿ ಇಂಡೋ - ಚೈನಾ ಯುದ್ದದ ಸಂದರ್ಭದಲ್ಲಿ 

2) 1971 ರಲ್ಲಿ ಇಂಡೋ - ಪಾಕ್ ಯುದ್ದದ ಸಂದರ್ಭದಲ್ಲಿ 

ಆಂತರಿಕ ತುರ್ತು ಪರಿಸ್ಥಿತಿ 

3) 1975 ರಲ್ಲಿ ಆಂತರಿಕ ದಂಗೆಯ ಕಾರಣ 


ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಳ್ಳುವುದು 

ರಾಷ್ಟ್ರಾಧ್ಯಕ್ಷರು ಒಂದು ಘೋಷಣೆ ಹೊರಡಿಸುವ ಮೂಲಕ ತುರ್ತು ಪರಿಸ್ಥಿತಿಯನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಹಿಂದೆಗೆದುಕೊಳ್ಳಬಹುದು. ಅಂತಹ ಘೋಷಣೆಗೆ ಸಂಸತ್ತಿನ ಅನುಮೋದನೆಯ ಅಗತ್ಯವಿಲ್ಲ. ತುರ್ತು ಪರಿಸ್ಥಿತಿಯನ್ನು ಮುಂದುವರೆಸಬಾರದು ಎಂಬ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿದರೆ, ರಾಷ್ಟ್ರಾಧ್ಯಕ್ಷರು ತುರ್ತು ಪರಿಸ್ಥಿತಿ ಘೋಷಣೆಯನ್ನು ಕಡ್ಡಾಯವಾಗಿ ಹಿಂದಕ್ಕೆ ಪಡೆಯಬೇಕು. 1978 ರ 44 ನೇ ತಿದ್ದುಪಡಿಯ ಮೂಲಕ ಈ ರಕ್ಷಣೋಪಾಯವನ್ನು ಅವಳಾಡಿಸಿ ಕೊಳ್ಳಲಾಯಿತು. ಇದಕ್ಕೂ ಮುನ್ನ ರಾಷ್ಟ್ರಾಧ್ಯಕ್ಷರು ತುರ್ತು ಪರಿಸ್ಥಿತಿಯನ್ನು ತಮ್ಮ ಇಚ್ಛಾನುಸಾರ ಹಿಂದಕ್ಕೆ ಪಡೆಯಬಹುಡುದಾಗಿದೆ ಹಾಗೂ ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಲೋಕಸಭೆಗೆ ನಿಯಂತ್ರಣವಿರಲಿಲ್ಲ :

ತುರ್ತು ಪರಿಸ್ಥಿತಿಯನ್ನು ಮುಂಡುವರೆಸದಂತೆ ತಡೆಯಲು ಅಂಗೀಕರಿಸುವ ಗೊತ್ತುವಳಿಯು ತುರ್ತು ಪರಿಸ್ಥಿತಿಯನ್ನು ಮುಂಡುವರೆಸುವಂತೆ ಅಂಗೀಕರಿಸಲಾಗುವ ಗೊತ್ತುವಳಿಗಿಂತ ಎರಡು ವಿಷಯಗಳಲ್ಲಿ ಭಿನ್ನವಾಗಿದೆ. 

1. ತುರ್ತು ಪರಿಸ್ಥಿತಿಯನ್ನು ಮುಂದುವರೆಸದಂತೆ ತಡೆಯುವ ಗೊತ್ತುವಳಿಯನ್ನು ಲೋಕಸಭೆ ಮಾತ್ರ ಅಂಗೀಕರಿಸಬಹುದು. ತುರ್ತು ಪರಿಸ್ಥಿತಿಯನ್ನು ಮುಂದುವರೆಸುವುದಕ್ಕೆ ಸಂಬಂಧಿಸದಂತೆ ಗೊತ್ತುವಳಿಯು ಎರಡೂ ಸದನಗಳಿಂದ ಅಂಗೀಕರಿಸಲ್ಪಡಬೇಕು. 

2. ಮೊದಲನೇ ಗೊತ್ತುವಳಿಯನ್ನು ಸರಳ ಬಹುಮತದ ಮೂಲಕ ಅಂಗೀಕರಿಸಬೇಕು. ಎರಡನೆಯ ಗೊತ್ತುವಳಿಯನ್ನು ವಿಶೇಷ ಬಹುಮತದ ಮೂಲಕ ಅಂಗೀಕರಿಸಬೇಕು. 


ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಪರಿಣಾಮಗಳು 

 ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆ ಭಾರತದ ರಾಜಕೀಯ ವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತದೆ. ಈ ಪರಿಣಾಮಗಳನ್ನು ಈ ರೀತಿಯಾಗಿ ವರ್ಗೀಕರಿಸಬಹುದು. 

   1. ಕೇಂದ್ರ - ರಾಜ್ಯ ಸಂಬಂಧಗಳ ಮೇಲೆ ಪರಿಣಾಮ 

   2. ಲೋಕಸಭೆ ಮತ್ತು ವಿಧಾನ ಸಭೆಗಳ ಅಧಿಕಾರಾವಧಿ ಮೇಲೆ ಪರಿಣಾಮ 

   3. ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad