Type Here to Get Search Results !

ದ್ವಿ ಪೌರತ್ವ | Citizenship of India

 ದ್ವಿ ಪೌರತ್ವ 


ವಿದೇಶಗಳಲ್ಲಿ ವಾಸಿಸುವ ಭಾರತೀಯ ಮೂಲದ ವ್ಯಕ್ತಿಗಳಿಗೆ (Persons Of Indian Origin) ದ್ವಿ-ಪೌರತ್ವವನ್ನು ನೀಡುವ ಉದ್ದೇಶದಿಂದ ಸಂಸತ್ತು 2003 ರ ಡಿಸೆಂಬರ್ 23 ರಂದು ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿತು. ಈ ತಿದ್ದುಪಡಿಯನ್ನು ಅನುಷ್ಟಾನಗೊಳಿಸಲು ಕೇಂದ್ರ ಸರ್ಕಾರವು 2004ಮಾರ್ಚ್ ತಿಂಗಳಲ್ಲಿ ನಿಯಮಗಳನ್ನು ಪ್ರಕಟಿಸಿತು. ಈ ನಿಯಮದ ಪ್ರಕಾರ ಆಸ್ಟ್ರೇಲಿಯಾ, ಅಮೇರಿಕ, ಬ್ರಿಟನ್, ಕೆನಡಾ, ಪಿನ್ ಲ್ಯಾಂಡ್, ಫ್ರಾನ್ಸ್, ಗ್ರೀಸ್, ಐರ್ ಲ್ಯಾಂಡ್, ಇಸ್ರೇಲ್, ಇಟಲಿ, ನೆದರ್ ಲ್ಯಾಂಡ್, ನ್ಯೂಜಿಲ್ಯಾಂಡ್, ಪೋರ್ಚಗಲ್, ಸೈಪ್ರೆಸ್, ಸ್ವೀಡನ್ ಮತ್ತು ಸ್ವೀಡ್ಜರ್ ಲ್ಯಾಂಡ್ ಈ 16 ರಾಷ್ಟ್ರಗಳಲ್ಲಿ ಪೌರತ್ವವನ್ನು ಹೊಂದಿರುವ ಭಾರತೀಯ ಮೂಲದ ವ್ಯಕ್ತಿಗಳು ದ್ವಿ ಪೌರತ್ವಕ್ಕೆ ಅರ್ಹರಾಗಿದ್ದಾರೆ. ಭಾರತ ಗಣರಾಜ್ಯವಾದ ನಂತರ ವಿದೇಶಗಳಿಗೆ ವಲಸೆ ಹೋದ ಭಾರತಿಯರಿಗೂ (Non Residential Indians) ದ್ವಿ ಪೌರತ್ವವನ್ನು ನೀಡಲು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ (U.P.A)ವು 2005 ರ ಜನವರಿ 7 ರಂದು ನಿರ್ಧರಿಸಿತು. 2015 ರ ಜನವರಿ 9 ರಂದು ಸುಗ್ರೀವಾಜ್ಞೆಯ ಮೂಲಕ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಅನಿವಾಸಿ ಭಾರತೀಯರ ನಡುವೆ ಸಮಾನ ಸ್ಥಾನಮಾನ ಕಲ್ಪಿಸಲಾಗಿದೆ. ಈ ವರ್ಷದಿಂದ ಅನಿವಾಸಿ ಭಾರತೀಯರಿಗೆ ಇ-ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸುವ ಅವಕಾಶ ನೀಡಲಾಗಿದೆ. 


ಪ್ರವಾಸಿ ಭಾರತೀಯ ದಿವಸ್ 


ಭಾರತದ ಅಭಿವೃದ್ದಿಗೆ ಸಾಗರೋತ್ತರ ಭಾರತೀಯ ಸಮುದಾಯ ( Overseas Indian Community )ವು ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಭಾರತದಲ್ಲಿ ಪ್ರತಿ ವರ್ಷ ಜನವರಿ 9 ರಂದು ಪ್ರವಾಸಿ ಭಾರತೀಯ ದಿವಸ್ (PBD) ಅನ್ನು ಆಚರಿಸಲಾಗುತ್ತದೆ. ಈ ದಿನವು ಮಹಾತ್ಮ ಗಾಂಧಿಯವರು 1915 ರಲ್ಲಿ ದಕ್ಷಿಣ ಆಫ್ರಿಕಾ ದಿಂದ ಭಾರತಕ್ಕೆ ಆಗಮಿಸಿದ್ದನು ನೆನಪಿಸುತ್ತದೆ. 2003 ರಲ್ಲಿ ಆರಂಭವಾದ ಈ ಆಚರಣೆಯನ್ನು ಭಾರತೀಯ ವಿದ್ಯಮಾನಗಳ ಸಾಗರೋತ್ತರ ಸಚಿವಾಲಯ, ಭಾರತ ಸರ್ಕಾರ, ಭಾರತೀಯ ಕೈಗಾರಿಕೆಗಳ ಒಕ್ಕೂಟ ಮತ್ತು ಈಶಾನ್ಯ ಪ್ರದೇಶ ಅಭಿವೃದ್ದಿ ಸಚಿವಾಲಯ ( Ministry of Devlelopment of North Eastern Region)ಗಳ ಪ್ರಯೋಜನಕತ್ವದಲ್ಲಿ ಆಚರಿಸಲಾಗುತ್ತದೆ. 

ದ್ವಿ ಪೌರತ್ವ




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad