ಭಾರತದ ಪೂರ್ವ ಬಂದರು (Eastern Ports in India)
ಕೋಲ್ಕತಾ ಬಂದರು
◆ ಇದು ಭಾರತದ ಎರಡನೇ ದೊಡ್ಡ ಬಂದರು
◆ ಭಾರತದಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅತಿ ಹೆಚ್ಚು ಚಹಾ ಉತ್ಪಾದನೆ ಮಾಡುತ್ತಿದ್ದು, ಈ ಬಂದರಿನ ಮೂಲಕ ಹೆಚ್ಚಾಗಿ ಚಹವನ್ನು ರಫ್ತು ಮಾಡಲಾಗುತ್ತದೆ. ಹೀಗಾಗಿ ಕೋಲ್ಕತ್ತಾದ ಬಂದರನ್ನು ಭಾರತದ ಚಹಾ ಬಂದರು ಎಂದು ಕರೆಯುತ್ತಾರೆ.
◆ ಕೋಲ್ಕತ್ತಾ ಬಂದರು ಹೂಗ್ಲಿ ನದಿಯ ದಂಡೆಯ ಮೇಲಿದ್ದು, ಇದೊಂದು ನದಿ ಬಂದರಾಗಿದೆ. ಈ ಬಂದರು ಕೋಲ್ಕತ್ತಾ ನಗರದಲ್ಲಿಯೇ ಇರುವುದರಿಂದ ಕೋಲ್ಕತ್ತವು ಭಾರತದ ಪ್ರಮುಖ ರೇವು ಪಟ್ಟಣವಾಗಿದೆ.
◆ ಕೋಲ್ಕತ್ತಾದ ಬಂದರಿನಲ್ಲಿ ಆಗಾಗ್ಗೆ ಮರಳು ತುಂಬಿಕೊಳ್ಳುವುದರಿಂದ ಮರಳನ್ನು ಹೊರ ತೆಗೆಯಬೇಕಾಗುತ್ತದೆ, ಅಂತಹ ಕಾರ್ಯವನ್ನು ತಲಮಾರ್ಜನ / ನಿಕರ್ಷಣ ಎನ್ನುತ್ತಾರೆ.
◆ ಈ ಬಂದರು ನದಿಯ ಇಲಾಭಾಗದಲ್ಲಿ ಇರುವುದರಿಂದಾಗಿ ದೊಡ್ಡ ಹಡಗುಗಳು ಒಂದು ಹೋಗಲು ಕಷ್ಟಸಾಧ್ಯವಾಗುತ್ತದೆ.
◆ ಈ ಬಂದರು ಭಾರತದ್ದ ಪ್ರಾಚೀನ ಬಂದರಾಗಿದ್ದು, ಔರಂಗಜೀಬನ ಕಾಲದಲ್ಲಿ ನಿರ್ಮಾಣಗೊಂಡಿದೆ. ಇದನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯವರು ಅಭಿವೃದ್ಧಿಪಡಿಸಿದರು.
◆ ಇದು ಪೂರ್ವ ಭಾರತದ ಹೆಬ್ಬಾಗಿಲಾಗಿದೆ, ಈ ಬಂದರಿನ ಮೂಲಕ ರಫ್ತಾಗುವ ವಸ್ತುಗಳೆಂದರೆ ಸೆಣಬು, ಸೆಣಬಿನ ವಸ್ತುಗಳು, ಕಬ್ಬಿಣ ಅದಿರು, ಕಬ್ಬಿಣ ಮತ್ತು ಉಕ್ಕು ಹಾಗೂ ಚಹಾ, ಈ ಬಂದರಿನ ಮೂಲಕ ಆಮದಾಗುವ ವಸ್ತುಗಳಲ್ಲಿ ಕೋಕಿಂಗ್ ಕಲ್ಲಿದ್ದಲು ರಾಸಾಯನಿಕ ಗೊಬ್ಬರ, ಸುಣ್ಣದಕಲ್ಲು ಈ ಬಂದರಿನಲ್ಲಿ ಆಮದು ವಸ್ತುಗಳು ರಫ್ತಿಗಿಂತ ಹೆಚ್ಚಾಗಿದೆ.
ಭಾರತದ ಪೂರ್ವ ಬಂದರು
ಹಾಲ್ಡಿಯಾ ಬಂದರು
◆ ಕೋಲ್ಕತ್ತಾ ಬಂದರಿನ ಒತ್ತಡ ನಿವಾರಿಸಲು ಬಂಗಾಳ ಕೊಲ್ಲಿಯ ತೀರದಲ್ಲಿ ನಿರ್ಮಿಸಿರುವ ಬಂದರು.
◆ 1978 ರಲ್ಲಿ ಕೋಲ್ಕತ್ತಾ ಬಂದರಿನ ಉಪಬಂದರಾಗಿ ಪ್ರಾರಂಭಿಸಲಾಯಿತು. ಇದು ಕೋಲ್ಕತ್ತಾ ದಿಂದ 104 ಕಿ.ಮೀ ದಕ್ಷಿಣದಲ್ಲಿದೆ. ಇದು ಭಾರತದ 4 ನೇ ದೊಡ್ಡ ಬಂದರು. ಇದು N. H - 16 ಹೈವೇ ಯನ್ನು ಸಂಪರ್ಕಿಸುತ್ತದೆ. ಇದು ಅತಿ ಹೆಚ್ಚು ಗಾತ್ರದ ವಸ್ತುಗಳನ್ನು ಸಾಗಾಣಿಕೆ ಮಾಡುವುದು. ಈ ಬಂದರಿನ ಅಭಿವೃದ್ಧಿಯೊಡನೆ ಕೋಲ್ಕತ್ತಾ ಬಂದರಿನ ಒತ್ತಡವು ಇಳಿಮುಖವಾಗಿದೆ.
◆ ಇದು ವಿಸ್ತಾರವಾದ ಜಲಭಾಗವನ್ನು ಒಳಗೊಂಡಿದೆ, ದೊಡ್ಡ ಹಡಗುಗಳಿಗೂ ಹೆಚ್ಚು ಉಪಯುಕ್ತವಾಗಿದೆ.
◆ ಈ ಬಂದರು ಹಾಲ್ಡಿಯಾ ಎಂಬ ನದಿಯ ಪಕ್ಕದಲ್ಲಿರುವ ಬಂದರಾಗಿದೆ. ಈ ಬಂದರಿಗೆ ದೇಶದ ಅತಿ ದೊಡ್ಡ ರಾಷ್ಟ್ರೀಯ ಜಲ ಹೆದ್ದಾರಿ ( NWH-1) ಸಂಪರ್ಕ ಕಲ್ಪಿಸುತ್ತದೆ.
◆ ಹಾಲ್ಡಿಯಾ ಬಂದರನ್ನು ನಿರ್ಮಿಸಲು ಕಾರಣ ಎಂದರೆ ಕೋಲ್ಕತ್ತಾ ಬಂದರು ಹೂಗ್ಲಿ ನದಿ ದಡದ ಬಂದರಾಗಿದ್ದು ಮತ್ತು ಹೂಗ್ಲಿ ನದಿಯಲ್ಲಿ ನೀರಿನ ಆಳ ಏರುಪೇರಾಗಿದ್ದು ಅಲ್ಲದೇ ಈ ನದಿಯು ಅತಿ ಹೆಚ್ಚು ಹೂಳು ತುಂಬಿಕೊಳ್ಳುತ್ತಿದ್ದ ಕಾರಣದಿಂದಾಗಿ ದೊಡ್ಡ ಹಡಗು ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ಇದುರಿಂದ ಹಡಗು ಸಂಚಾರಕ್ಕೆ ತೊಂದರೆಯಾಗುತ್ತದೆ. ಇದರಿಂದಾಗಿ ಆಗಾಗ ಕೋಲ್ಕತ್ತಾದ ಹಡಗು ನಿರ್ಮಾಣದಲ್ಲಿ ಹೊಳೆತ್ತುವುದು ಅಗತ್ಯ ಹಾಗೂ ಹಡಗುಗಳು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಅದನ್ನು ನಿವಾರಿಸಲು ಹಾಲ್ಡಿಯಾ ಬಂದರನ್ನು ನಿರ್ಮಿಸಲಾಯಿತು.
ಭಾರತದ ಪೂರ್ವ ಬಂದರು
ಪಾರಾದೀಪ ಬಂದರು
◆ ಒಡಿಶಾ ರಾಜ್ಯದ ಕಟಕ್ ನಿಂದ 100ಕಿ. ಮೀ ದೂರದಲ್ಲಿದೆ, ಮಹಾನದಿ ದಡದಲ್ಲಿದೆ. ಒಡಿಶಾ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳಿಗೆ ಅನುಕೊಳವಾಗಿದೆ. ಅತಿ ಹೆಚ್ಚು ಖನಜ ಸಂಪನ್ಮೂಲ ಸುವರ್ಣ ತ್ರಿಕೋನ ಪ್ರದಶದ ಹೆಬ್ಬಾಗಿಲಿನಂತೆ ಪಾರಾದೀಪ ಕಾರ್ಯ ನಿರ್ವಹಿಸುತ್ತದೆ.
◆ ಈ ಬಂದರು ಭಾರತದ 8 ನೇ ಪ್ರಧಾನ ಬಂದರಾಗಿದೆ 1966 ರಲ್ಲಿ ಸ್ಥಾಪನೆಯಾಯಿತು.
◆ ಈ ಬಂದರು ಛೋಟನಾಗ್ಪುರ ಭಾಗದ ದೊಡ್ಡ ಬಂದರಾಗಿದ್ದು, ಇದನ್ನು ಭಾರತದ ಸುವರ್ಣ ತ್ರಿಕೋನದ ಹೆಬ್ಬಾಗಿಲು ಎನ್ನುವರು.
◆ ಈ ಬಂದರು ಭಾರತದಲ್ಲಿ ಅತಿ ಆಳವಾದ ನೀರಿನ ವಲಯ ಹೊಂದಿದ್ದು ಅತಿ ಹೆಚ್ಚು ಪ್ರಮಾಣದ ಭಾರ ವಸ್ತುಗಳನ್ನು ಸಾಗಿಸಲು ಉಪಯುಕ್ತವಾಗಿದೆ.
ವಿಶಾಖಪಟ್ಟಣಂ ಬಂದರು
◆ ಆಂಧ್ರಪ್ರದೇಶದಲ್ಲಿರುವ ಆಳವಾದ ಮತ್ತು ಭೂಭಾಗದಿಂದ ಸುತ್ತುವರಿದ ನೈಸರ್ಗಿಕ ಬಂದರು. ಇದು ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ, ಮಹಾರಾಷ್ಟ್ರಕ್ಕೆ ಅನುಕೂಲವಾಗಿದೆ. ಇದು ಪೂರ್ವ ಕರಾವಳಿಯ ಒಡವೆ ( The Jewel of East Coast ) ಇಲ್ಲಿ ಪೂರ್ವ ನೌಕಾ ಪದೆ ಇದೆ, ಇದು ಅತ್ಯಂತ ಹಳೆಯ ಹಡಗು ಕಟ್ಟುವ ಬಂದರು. ವಿಶಾಖ ಪಟ್ಟಣಂ ಪೂರ್ವ ಕಾರವಳಿಯಲ್ಲಿರುವ ಏಕೈಕ ರೇವು ಪಟ್ಟಣವಾಗಿದೆ.
◆ ವಿಶಾಖ ಪಟ್ಟಣಂ ಬಂದರನ್ನು 1933 ಡಿಸೆಂಬರ್ 19 ರಂದು ಸ್ಥಾಪಿಸಲಾಯಿತು. ವಿಶಾಖ ಪಟ್ಟಣವೂ ಸರಕು ನಿರ್ವಹಣೆಯ ಪ್ರಮಾಣದಲ್ಲಿ ಮುಂಬೈನ ನಂತರ 2 ನೇ ಸ್ಥಾನ ಹೊಂದಿದೆ.
◆ ಪೆಟ್ರೋಲಿಯಂ ವಸ್ತುಗಳು, ರಾಸಾಯನಿಕ ಗೊಬ್ಬರ, ಯಂತ್ರೋಪಕರಣಗಳು ಮತ್ತು ಕಲ್ಲಿದ್ದಲು ಈ ಬಂದರಿನ ಮೂಲಕ ಆಮದಾಗುವ ವಸ್ತುಗಳು. ಈ ಬಂದರು ಮೂಲಕ ರಫ್ತು ಆಗುವ ಮುಖ್ಯ ವಸ್ತುಗಳೆಂದರೆ ಕಬ್ಬಿಣದ ಅದಿರು, ಆಹಾರ ಧಾನ್ಯಗಳು, ಚರ್ಮದ ವಸ್ತುಗಳು, ಮರದ ದಿಮ್ಮಿಗಳು.
◆ ಭಾರತದ ಪೂರ್ವ ಕರಾವಳಿಯಲ್ಲಿ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಬಂದರಾಗಿದೆ. ಮುಂಬೈ ಬಂದರನ್ನು ಹೊರತು ಪಡಿಸಿದರೆ ಭಾರತದಲ್ಲಿಯೇ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುತ್ತದೆ.
ಚೆನ್ನೈ ಬಂದರು
◆ ಭಾರತದ 2 ನೇ ಹಳೆಯ ಕೃತಕ ಬಂದರಾಗಿದೆ. ಇದು ತಮಿಳುನಾಡಿನಲ್ಲಿದೆ. ಇದು ತಮಿಳುನಾಡು ಮತ್ತು ಕರ್ನಾಟಕಕ್ಕೆ ಉಪಯುಕ್ತವಾಗಿದೆ.
◆ ಈ ಬಂದರಿನ ಮೂಲಕ ಚರ್ಮದ ವಸ್ತುಗಳನ್ನು ರಫ್ತು ಮಾಡುವುದರಿಂದಾಗಿ ಚೆನ್ನೈ ಬಂದರನ್ನು ಚರ್ಮದ ಬಂದರು ಎನ್ನುವರು.
◆ ಇದನ್ನು 1875 ರಲ್ಲಿ ಆರಂಭಗೊಂಡಿತ್ತು.
◆ ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ ವೇರ್ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದು, ಇವುಗಳನ್ನು ಚೆನ್ನೈ ಬಂದರಿನ ಮೂಲಕ ರಫ್ತು ಮಾಡಲಾಗುತ್ತದೆ.
◆ ಈ ಬಂದರಿನ ಮೂಲಕ ಸಕ್ಕರೆ, ಆಹಾರ ಧಾನ್ಯಗಳು, ಗ್ರಾನೈಟ್, ಖಾದ್ಯ ತೈಲ, ಕಲ್ಲಿದ್ದಲು ಮುಂತಾದವುಗಳನ್ನು ರಫ್ತು ಮಾಡಲಾಗುತ್ತದೆ. ಅಲ್ಲದೇ ಪೆಟ್ರೋಲಿಯಂ ವಸ್ತುಗಳು, ರಾಸಾಯನಿಕಗಳು, ಔಷಧಿಗಳು, ಕಾಗದ ರಾಸಾಯನಿಕ ಗೊಬ್ಬರಗಳುನ್ನು ಆಮದು ಮಾಡಲು ಸಹಕಾರಿಯಾಗಿದೆ. ಈಶಾನ್ಯ ಮಾರುತಗಳ ಕಾಲಾವಧಿಯಲ್ಲಿ ಈ ಬಂದರು ಚಂದಮಾರುತಕ್ಕೆ ತುತ್ತಾಗಿ ತನ್ನ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತದೆ.
◆ ಇತ್ತೀಚಿಗೆ ಈ ಬಂದರಿನ ಕಲ್ಲಿದ್ದಲ ನಿರ್ವಹಣೆಯನ್ನು ಎನ್ನೂರು ಬಂದರಿಗೆ ವರ್ಗಾಯಿಸಲಾಯಿತು.
ಭಾರತದ ಕೃತಕ ಬಂದರು ( ಖಾಸಗಿ ಬಂದರು) ಎನ್ನೂರು ಬಂದರು
ಭಾರತದ ಮೊಟ್ಟ ಮೊದಲ ಖಾಸಗಿ ಬಂದರು ಎನ್ನೂರು ಬಂದರು. ಈ ಬಂದರನ್ನು ಕಾಮರಾಜ್ ಬಂದರು ಎಂದು ಮರುಣಾಮಕರಣ ಮಾಡಲಾಗಿದೆ. ಇದು ಚೆನ್ನೈ ಬಂದರಿನಿಂದ ಉತ್ತರಕ್ಕೆ ಸುಮಾರು 24 ಕಿ.ಮೀ ದೂರದಲ್ಲಿ ಕೋರಮಂಡಲ ತೀರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಡಿಡಿ ಪ್ಯಾರಿ ಕಂಪನಿಯು ಅಭಿವೃದ್ಧಿ ಪಡಿಸಿದೆ.
ಟುಟಿಕೊರಿಯನ್ ಬಂದರು
ಇದು ತಮಿಳುನಾಡಿನ ಚಿದಂಬರಂ ಜಿಲ್ಲೆಯ ಮುನ್ನಾರ ಅಖಾತದಲ್ಲಿ ಹೊಸದಾಗಿ ನಿರ್ಮಿಸಿರುವ ಬಂದರು. ಇದೊಂದು ಕೃತಕ ಬಂದರು. ಪೂರ್ವ ಕರಾವಳಿಯಲ್ಲಿನ ಅತಿ ದಕ್ಷಿಣದಲ್ಲಿರುವ ಪ್ರಧಾನ ಬಂದರು. ಇದು ಮೊದಲ ವ್ಯಾಪಾರ ಮತ್ತು ಮೀನುಗಾರಿಕೆಯ ಕೇಂದ್ರವಾಗಿತ್ತು. ಈ ಬಂದರು 4 ಹಡಗು ಕಟ್ಟೆಯನ್ನು ಹೊಂದಿದೆ. ಈ ಬಂದರು ಅತಿ ಹೆಚ್ಚು ವಿಸ್ತಾರವಾದ ಹಿನ್ನಾಡನ್ನು ಹೊಂದಿದ್ದು. ಬಂದರು ಅಭಿವೃದ್ಧಿಗೆ ಸಹಕಾರಿಯಾಗಿದೆ. 1968 ರಲ್ಲಿ ಸಣ್ಣ ಹಡಗು ನಿಲ್ದಾಣ ರೂಪಿಸಲಾಯಿತು ನಂತರ 1979 ರಲ್ಲಿ ಪ್ರಧಾನ ಬಂದರನ್ನಾಗಿ ಪರಿಗಣಿಸಲಾಯಿತು. ಇದು ಹತ್ತಿ, ಚಹಾ, ಏಲಕ್ಕಿ, ಹತ್ತಿ ಬಟ್ಟೆ, ರಫ್ತು ಮಾಡುತ್ತದೆ. ಈ ಬಂದರಿನಿಂದ ಯಂತ್ರೋಪಕರಣಗಳು ಹಾರ್ಡ್ ವೇರ್, ಕಲ್ಲಿದ್ದಲು, ಪೆಟ್ರೋಲಿಯಂ ವಸ್ತುಗಳು ಮತ್ತು ರಾಸಾಯನಿಕ ಗೊಬ್ಬರಗಳು ಆಮದಾಗುತ್ತದೆ.
◆ ಈ ಬಂದರಿನಲ್ಲಿ ಅತ್ಯಂತ ಹೆಚ್ಚಾಗಿ ಹವಳ ಮತ್ತು ಮುತ್ತುಗಳನ್ನು ಸಮುದ್ರದ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ.
ಪೋರ್ಟ್ ಬ್ಲರ್ - ( ಅಂಡಮಾನ್ ನಿಕೋಬಾರ್ )
◆ ಇದು ಸಾಗರೋತ್ಪನ್ನಗಳು, ಮಿಲಿಟೆರಿ ಉದ್ದೇಶ ಹೊಂದಿದೆ, ಅಂಡಮಾನ್ ನಿಕೋಬಾರ್ ನ ದಕ್ಷಿಣ ಅಂಡಮಾನ್ ದ್ವಿಪದಲ್ಲಿದೆ. ಈ ಬಂದರು ಆಗ್ನೇಯ ನೌಕಾ ಪಡೆಯ ಕೇಂದ್ರ ಕಛೇರಿಯಾಗಿದೆ.
![]() |
| ಭಾರತದ ಪೂರ್ವ ಬಂದರು |
vijayavikas.in


ಧನ್ಯವಾದಗಳು