ಭಾರತದ ಪಶ್ಚಿಮ ಬಂದರುಗಳು (Western Ports in India)
1. ಕಾಂಡ್ಲಾ ಬಂದರು
◆ ಗುಜರಾತಿನ ಕಛ್ ಜಿಲ್ಲೆಯ ಗಲ್ಫ್ ಆಫ್ ಕಛ್ ನ ಖಾರಿಯ ಶಿರೋಭಾಗದಲ್ಲಿದೆ.
◆ 1950 ರಲ್ಲಿ ಪ್ರಾರಂಭವಾಯಿತು. 1998 ರಲ್ಲಿ ಚಂಡಾಮರುತಕ್ಕೆ ಬಲಿಯಾಗಿತ್ತು. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ್, ಪಂಜಾಬ್, ಹರಿಯಾಣ, ಉತ್ತರಾಂಚಲಗಳು ಈ ಬಂದರಿನ ಹಿನ್ನಾಡುಗಳಗಿವೆ.
◆ ಸ್ವತಂತ್ರ ಪೂರ್ವದಲ್ಲಿ ಭಾರತದ ವಾಯುವ್ಯ ಭಾಗದ ಕರಾಚಿ ಬಂದರು ಅತಿ ದೊಡ್ಡ ಬಂದರಾಗಿತ್ತು. ದೇಶ ವಿಭಜನೆ ನಂತರ ಕರಾಚಿಯು ಪಾಕಿಸ್ತಾನಕ್ಕೆ ಸೇರಿದಾಗ ಈ ಬಂದರನ್ನು ಅಭಿವೃದ್ಧಿ ಪಡಿಸಲಾಯಿತು.
◆ ಈ ಬಂದರಿನಿಂದ ಅತಿ ಹೆಚ್ಚಾಗಿ ಸೌದಿ ಅರೇಬಿಯಾ ದೇಶಕ್ಕೆ ಬಾಸುಮತಿ ಅಕ್ಕಿಯನ್ನು ರಫ್ತು ಮಾಡಲಾಗುತ್ತದೆ ಮತ್ತು ಸೌದಿ ಅರೇಬಿಯಾದಿಂದ ಅತಿ ಹೆಚ್ಚು ಪೆಟ್ರೋಲಿಯಂ ಅನ್ನು ಆಮದು ಮಾಡಿಕೊಳ್ಳಲಾಗುತ್ತದೆ.
◆ ಕಾಂಡ್ಲಾ ಬಂದರಿನ ನಿರ್ಮಾಣ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾರಂಭವಾಯಿತು. ಈ ಬಂದರನ್ನು " ಹೊಸ ಸಹಸ್ರಮಾನದ ಬಂದರು" ಎನ್ನುವರು.
◆ ಕಾಂಡ್ಲಾ ಬಂದರನ್ನು ಪಂಡಿತ್ ದೀನ ದಯಾಳ್ ಉಪಾಧ್ಯಾಯ ಬಂದರು ಎಂಬುದಾಗಿ ಮರುಣಾಮಕರಣ ಮಾಡಲಾಯಿತು.
◆ ಕಾಂಡ್ಲಾ ಬಂದರು ರಫ್ತಿನ ವಸ್ತುಗಳಿಗಿಂತಲು ಆಮದಿನ ವಸ್ತುಗಳಿಗೆ ಹೆಸರುವಾಸಿಯಾಗಿದೆ.
◆ ಪೆಟ್ರೋಲಿಯಂ ಉತ್ಪನ್ನಗಳು, ರಾಸಾಯನಿಕ ಗೊಬ್ಬರ, ರಂಜಕ, ಗಂಧಕ ಮೊದಲಾದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
◆ ಕಾಂಡ್ಲಾ ಬಂದರನ್ನು ಉಬ್ಬರವಿಳಿತಡ ಬಂದರು ಎನ್ನುವರು.
◆ ಈ ಬಂದರು ಮಧ್ಯೆ ಏಷ್ಯಾ ದೇಶಗಳಿಗೆ ಹತ್ತಿರವಾಗಿದೆ.
◆ ಅತಿ ಹೆಚ್ಚು ಪೆಟ್ರೋಲಿಯಂ ವಸ್ತುಗಳು ಕಾಂಡ್ಲಾ ಬಂದರಿನ ಮೂಲಕವೇ ಆಮದು ಮಾಡಿಕೊಳ್ಳುವುದು.
◆ ಕಾಂಡ್ಲಾ ಬಂದರನ್ನು 1930 ರಲ್ಲಿ ಕಛ್ ರಾಜ ಸಂಸ್ಥಾನದ ಮಹಾರಾವ್ ಖೆಂಗರ್ಜಿರವರಿಂದ ವಾಣಿಜ್ಯಕ್ಕೆ ಸಹಾಯವಾಗುವಂತೆ ಪ್ರಾರಂಭವಾಯಿತು.
◆ ಸರ್ದಾರ್ ವಳಲಾಭಬಾಯಿ ಪಟೇಲ್ ಸಲಹೆ ಮೇರೆಗೆ ಪಶ್ಚಿಮ ಕರಾವಳಿಯ ಪ್ರಧಾನ ಬಂಡರುಗಳ ಅಭಿವೃದ್ಧಿ ಸಲಾಹಾಮಂಡಲಿ ಸ್ಥಾಪನೆ.
◆ ಅದರ ಶಿಫಾರಸ್ಸಿನ ಮೇಲೆ ಕಾಂಡ್ಲಾ ಬಂದರನ್ನು ನವಿಕರಣಗೊಳಿಸಿ 1955 ರಲ್ಲಿ ಹೊಸ ಬಂದರನ್ನಾಗಿ ನಿರ್ವಹಣೆ ಮಾಡಲಾಯಿತು. ಕಾಂಡ್ಲಾ ಬಂದರು ಉತ್ತಮ ರೈಲು ಸಾರಿಗೆ ಮತ್ತು ರಾಷ್ಟ್ರೀಯ ಸಂಪರ್ಕ ಒಳಗೊಂಡಿದೆ.
2. ಮುಂಬೈ ಬಂದರು
◆ " ಭಾರತದ ಹೆಬ್ಬಾಗಿಲು " ಎಂದು ಕರೆಯುತ್ತಾರೆ. ಭಾರತದ ಅತಿ ದೊಡ್ಡದಾದ ಹಾಗೂ ವಿಶಾಲವಾದ ಬಂದರು. ಸ್ವಾಭಾವಿಕ ಬಂದರಾಗಿದೆ. ಸುರಕ್ಷಿತವಾದ ಬಂದರಾಗಿದೆ. ಇದು ಮಹಾರಾಷ್ಟ್ರದ ರಾಜ್ಯದಲ್ಲಿದೆ. ದೆಹಲಿ, ಕರ್ನಾಟಕ, ಪಶ್ಚಿಮ ಆಂಧ್ರಪ್ರದೇಶ, ಮಹಾರಾಷ್ಟ್ರ ಇದರ ಹಿನ್ನಡೆಯಾಗಿದೆ. ಈ ಬಂದರು ಕೊಂಕಣಿ ತೀರದಲ್ಲಿ ಕಂಡು ಬರುವ ಅತಿ ದೊಡ್ಡ ಬಂದರಾಗಿದೆ.
◆ ಮುಂಬೈ ಪ್ರದೇಶವನ್ನು ಪೋರ್ಚುಗಿಸರು ಬೋಮ್ ಬಹಿಯಾ ಎಂತಲೂ ಬ್ರಿಟಿಷರು ಮುಂಬೈ ಎಂತಲೂ ಕರೆಯುತ್ತಿದ್ದರು.
◆ ಇದರ ಒತ್ತಡ ಕಡಿಮೆ ಮಾಡಲು ನವಶೇವಾ ಬಂದರನ್ನು ಮಹಾರಾಷ್ಟ್ರದಲ್ಲಿ ಪ್ರಾರಂಭಿಸಲಾಗಿದೆ.
◆ ಮುಂಬೈ ಬಂದರು ಮೂರು ಹಡಗುಕಟ್ಟೆ ಹೊಂದಿದೆ. ಇಂದಿರಾ, ಪೃನ್ಸಸ್, ವಿಕ್ಟೋರಿಯಾಗಳು ಪ್ರಮುಖ ಹಡಗು ಕಟ್ಟೆಗಲಾಗಿವೆ.
◆ ಈ ಬಂದರು ಒಟ್ಟು ಸರಕು ಸಾಗಾಣಿಕೆ ನಿರ್ವಹಣೆಯಲ್ಲಿ ಶೇಕಡಾ 44 ರಷ್ಟು ಪೂರೈಸುವುದು.
◆ ಮುಂಬೈ ಬಂದರು ಭಾರತದ ಒಟ್ಟು ಸಾಗರೋತ್ತರ ವ್ಯಾಪಾರದ ಶೇಕಡಾ 16 ರಷ್ಟುನ್ನು ನಿರ್ವಹಿಸುತ್ತದೆ.
◆ ಮುಂಬೈ ಬಂದರು ವ್ಯಾಪ್ತಿಯಲ್ಲಿ ಚಿಕ್ಕ ದ್ವೀಪ ಜವಾಹರ್ ದ್ವೀಪ, ಕಚ್ಚಾತೈಲ ಹಾಗೂ ಪೆಟ್ರೋಲಿಯಂ ವಸ್ತುಗಳನ್ನು ಸಾಗಾಣಿಕೆ ನಿರ್ವಹಿಸುವ 4 ಜೆಟ್ ಗಳನ್ನು ಒಳಗೊಂಡಿದೆ.
3. ನವಶೇವಾ ಬಂದರು
◆ ನವಶೇವಾ ಬಂದರನ್ನು " ಜವಾಹರಲಾಲ್ ನೆಹರು ಪೋರ್ಟ್ (JNPT) ಎನ್ನುವರು. ಇದು ಮಹಾರಾಷ್ಟ್ರ ರಾಜ್ಯದಲ್ಲಿದೆ. ಸರಕು ಸಾಗಾಣಿಕೆಯ ಆಧುನಿಕ ಕಂಟೈನರ್ ಗಳನ್ನು ಹೊಂದಿದೆ.
◆ ಹೆಚ್ಚು ಸರಕು ಸಾಗಿಸುವ ಬಂದರಾಗಿದೆ. 1982 ರಿಂದ ಕಾರ್ಯನಿರ್ವಹಿಸುತ್ತಿದೆ. ಮುಂಬೈ ನಿಂದ 14 ಕಿ.ಮೀ ದೂರದಲ್ಲಿದೆ.
◆ ಈ ಬಂದರಿನಲ್ಲಿ ಅತಿ ದೊಡ್ಡ ಹಡಗುಗಳು ಕೂಡ ಸಂಚರಿಸುವುದು. ಮುಂಬೈ ಬಂದರಿನ ಸರಕು ಸಾಗಾಣಿಕೆ ಒತ್ತಡವನ್ನು ಕಡಿಮೆಗೊಳಿಸಲು ಸ್ಥಾಪಿಸಲಾದ ಬಂದರು.
◆ ಈ ಬಂದರು ಆಧುನಿಕ ತಂತ್ರಜ್ಞಾನ ಮತ್ತು ಕಂಟೈನರ್ ಗಳನ್ನು ( ಸಂಗ್ರಹಧಾರಕಗಳು ) ಸೌಲಭ್ಯಗಳನ್ನು ಒಳಗೊಂಡಿದೆ.
◆ ಇದು ಅತಿ ಹೆಚ್ಚು ಸರಕುಗಳನ್ನು ಸಾಗಾಣಿಕೆ ಮಾಡುವ, ಕಾರ್ಯ ನಿರ್ವಹಿಸುವ ಬಂದರಾಗಿದೆ. ( Busiest Port in India )
◆ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಂದರುಗಳಲ್ಲಿ 5 ನೇ ಸ್ಥಾನದಲ್ಲಿದೆ.
4. ಮರ್ಮಗೋವಾ ಬಂದರು
5. ನವ ಮಂಗಳೂರು ಬಂದರು
ರಫ್ತಾಗುವ ವಸ್ತುಗಳು :-
6. ಕೊಚ್ಚಿನ್ ಬಂದರು
![]() |
| ಭಾರತದ ಪಶ್ಚಿಮ ಬಂದರುಗಳು |


ಧನ್ಯವಾದಗಳು