Type Here to Get Search Results !

ಭೂ ಬಳಕೆಯ ಪ್ರಕಾರಗಳು - UPSC KPSC

 ಭೂ ಬಳಕೆಯ ಪ್ರಕಾರಗಳು 

ಭಾರತದಲ್ಲಿ ಕೃಷಿಗೆ ಸಂಬಂಧಿಸಿದಂತೆ ಭೂ ಬಳಕೆಗಾಗಿ ಲಭ್ಯವಿರುವ ಭೂಮಿಯ ಬಳಕೆಯನ್ನು ವಿವಿಧ ಪ್ರಕಾರಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ 

      1. ನಿವ್ವಳ ಸಾಗುವಳಿ ಕ್ಷೇತ್ರ 

      2. ಅರಣ್ಯ ಭೂಮಿ 

      3. ವ್ಯವಸಾಯೇತರ ಭೂ ಬಳಕೆ 

      4. ಬೀಳು ಭೂಮಿ 

      5. ಹುಲ್ಲುಗಾವಲು 

      6. ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ . ಇತ್ಯಾದಿ.... 

1. ನಿವ್ವಳ ಸಾಗುವಳಿ ಕ್ಷೇತ್ರ :-

ಇದು ಭಾರತದ ಭೂ ಬಳಕೆಯ ವಿಧಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ಭಾರತದ ವ್ಯವಸಾಯ ಪ್ರಧಾನ ಆರ್ಥಿಕತೆಗೆ ಅನುಗುಣವಾಗಿ ಅತಿಹೆಚ್ಚು ಭೂಮಿಯನ್ನು ಸಾಗುವಳಿಗೆ ಬಳಸಲಾಗುತ್ತದೆ. ಭಾರತವು ಪ್ರಪಂಚದಲ್ಲಿ ಸಾಗುವಳಿ ಕ್ಷೇತ್ರದ ವಿಸ್ತೀರ್ಣದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ನಂತರ ಎರಡನೇ ಸ್ಥಾನದಲ್ಲಿದೆ. ಭಾರತದ ರಾಜ್ಯದಲ್ಲಿ ಹರಿಯಾಣ, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರಗಳಲ್ಲಿ ನಿವ್ವಳ ಸಾಗುವಳಿ ಕ್ಷೇತ್ರವು ಪ್ರತಿಶತ 60 ಕ್ಕಿಂತ ಹೆಚ್ಚಾಗಿದೆ. 


2. ಅರಣ್ಯ ಭೂಮಿ :-

ಭಾರತದಲ್ಲಿ ಸಮೀಕ್ಷೆಗೊಳಪಟ್ಟ ಇಟ್ಟು ಭೂ ಪ್ರದೇಶ ಪ್ರತಿಶತ 21.3 ರಷ್ಟು ಮಾತ್ರ ಅರಣ್ಯಗಳಿಂದ ಕೊಡಿದೆ. ಅದು 1950-51 ರಲ್ಲಿ ಪ್ರತಿಶತ 16.2 ರಷ್ಟಿತ್ತು. ರಾಷ್ಟ್ರೀಯ ಅರಣ್ಯ ನೀತಿ - 1988 ರ ಪ್ರಕಾರ ಪ್ರತಿಶತ 33% ರಷ್ಟು ಅರಣ್ಯ ವಿರಬೇಕು. ಆದ್ದರಿಂದ ಅರಣ್ಯ ಭೂಮಿಯನ್ನು ಹೆಚ್ಚಿಸಲು ಸಾಕಷ್ಟು ಪ್ರಾಯತ್ನಿಸಲಾಗುತ್ತಿದೆ. 


3. ವ್ಯವಸಯೇತರ ಭೂ ಬಳಕೆ :-

ಸಾಗುವಳಿ ಹಾಗೂ ಅರಣ್ಯ ಕ್ಷೇತ್ರದ ವಿಸ್ತಾರವನ್ನು ಹೊರತುಪಡಿಸಿ ವ್ಯವಸಯೇತರ ಬಳಕೆಗಾಗಿ ಹೆಚ್ಚು ಭೂಮಿಯನ್ನು ಬಳಸಲಾಗಿದೆ. ಕಟ್ಟಡ ನಿರ್ಮಾಣ, ಜಲಾಶಯ, ಕೈಗಾರಿಕೆ, ರಸ್ತೆ, ರೈಲ್ವೆ ಮೊದಲಾದವುಗಳ ನಿರ್ಮಾಣಕ್ಕಾಗಿ ಹೆಚ್ಚು ಭೂಮಿಯನ್ನು ಬಳಸಲಾಗುತ್ತದೆ. 


4. ಬೀಳು ಭೂಮಿ :-

ಜನಸಂಖ್ಯೆ ಅಧಿಕಗೊಂಡಂತೆ ವ್ಯವಸಾಯ ಉತ್ಪನ್ನಗಳ ಮೇಲೆ ಹೆಚ್ಚು ಒತ್ತಡವಾಗಿದ್ದು, ಅದಕ್ಕೆ ಅನುಗುಣವಾಗಿ ಹೆಚ್ಚು ಕ್ಷೇತ್ರವನ್ನು ಸಾಗುವಳಿ ಬಳಸಲಾಗಿದೆ. ಅಲ್ಲದೆ ಬೀಳು ಬಿದ್ದಿದ್ದ ಹಾಗೂ ವ್ಯವಸಾಯ ಯೋಗ್ಯವಲ್ಲದ ಭೂ ಪ್ರದೇಶಗಳನ್ನು ಸಹ ತಾಂತ್ರಿಕತೆಯ ಅಳವಡಿಕೆಯೊಂದಿಗೆ ಇಂದು ವ್ಯವಶಯಕ್ಕೆ ಬಳಸಲಾಗಿದೆ. 


5. ಹುಲ್ಲುಗಾವಲು :-

ವ್ಯವಸಾಯ ಪ್ರದೇಶದ ವಿಸ್ತರಣೆಯೊಂದಿಗೆ ಹುಲ್ಲುಗಾವಲುಗಳ ಕ್ಷೇತ್ರ ನಿರಂತರವಾಗಿ ಕಡಿಮೆಯಾಗಿದೆ. ಹಿಮಾಚಲ ಪ್ರದೇಶ ರಾಜ್ಯವು ಹುಲ್ಲುಗಾವಲು ಪ್ರದೇಶವನ್ನು ಹೊಂದಿದ್ದು, ಪಂಜಾಬ್, ಹರಿಯಾಣ ರಾಜ್ಯಗಳ ಅತ್ಯಂತ ಕಡಿಮೆ ಹುಲ್ಲುಗಾವಲುಗಳನ್ನು ಹೊಂದಿವೆ. 


6. ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ :-

ಭಾರತದ ವಿವಿಧ ಭಾಗಗಳಲ್ಲಿ ಹಿಂದೆ ಬೇಸಾಯಕ್ಕೆ ಬಳಸಲಾಗುತ್ತಿದ್ದ ಕೆಲವು ಭಾಗಗಳು ಇಂದು ಮಣ್ಣಿನ ರಾಸಾಯನಿಕ ಸಂಯೋಜನೆಯ ಬದಲಾವಣೆಗಳಿಂದಾಗಿ ಅನುಪಯುಕ್ತವಾಗಿ ಪರಿಣಮಿಸಿವೆ. ಈ ಭೂಮಿಯಲ್ಲಿ ಆಮ್ಲತೆ ಹೆಚ್ಚಿದ್ದು, ಫಲವತ್ತತೆ ಕಡಿಮೆಯಾಗಿದೆ. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad