ಗಾದೆ ಎಂದರೇನು ?
ಗಾದೆ ಒಂದು ನಾಡಿನ ಜನಸಾಮಾನ್ಯರು ನಿತ್ಯ ವ್ಯವಹಾರದಲ್ಲಿ ಸಹಜವಾಗಿ ಬಳಸುವ ರೂಡಿಗತ ಅಲಂಕಾರಿಕ ಮಾತು. ಇದು ಯಾರಿಂದ ಯಾವಾಗ ಹುಟ್ಟುತ್ತದೋ ಹೇಳಲಾಗದು. ಒಂದು ವಿಶೇಷ ಅನುಭವವು ಇಲ್ಲಿ ನುಡಿಗಟ್ಟಿನಲ್ಲಿ ರೂಪುಗೊಳ್ಳುತ್ತದೆ.
ಗಾದೆ ಪದದ ಉತ್ಪತಿ :-
‘ಗಾಥಾ’ ಎಂಬ ಪ್ರಾಕ್ರತ ಪದದ ಮತ್ತೊಂದು ರೂಪವವೇ ಗಾದೆ.
50 ಗಾದೆಗಳು
1. ತಾಳಿದವನು ಬಾಳಿಯಾನು
2. ಕಾಯಕವೇ ಕೈಲಾಸ
3. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
4. ಆರೋಗ್ಯವೇ ಭಾಗ್ಯ
5. ಕೈ ಕೆಸರಾದರೆ ಬಾಯಿ ಮೊಸರು
6 ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
7. ಹಿತ್ತಲ ಗಿಡ ಮದ್ದಲ್ಲ
8. ದೂರದ ಬೆಟ್ಟ ನುಣ್ಣಗೆ
9. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
10. ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
11. ಗುಣ ನೋಡಿ ಗೆಳೆತನ ಮಾಡು
12. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
13. ಬಡವ ನೀ ಮಡಗಿದ ಹಾಗಿರು
14. ಬಡವನ ಕೋಪ ದವಡೆಗೆ ಮೂಲ
15. ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
16. ಪಾಲಿಗೆ ಬಂದದ್ದೆ ಪರಮಾನ್ನ .
17. ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ
18. ಪುರಾಣ ಹೇಳೊಕೆ ; ಬದನೆಕಾಯಿ ತಿನ್ನೋಕೆ
19. ನಮ್ಮ ದೇವರ ಸತ್ಯ ನಮಗೆ ಗೊತ್ತು
20. ದಡ್ಡ ಮನುಷ್ಯ ನೆಲಕ್ಕೆ ಭಾರ , ಅನ್ನಕ್ಕೆ ಖಾರ
21. ದಡನಿಗೆ ಹಗಲು ಕಳೆಯುವುದಿಲ್ಲ , ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ
22. ಹೊತ್ತಿಗಿಲ್ಲದ ಗಾದೆ , ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ
23. ಹೊರಗೆ ಥಳುಕು , ಒಳಗೆ ಹುಳುಕು
24. ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
25. ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
26. ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
27. ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ
28. ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು
29. ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
30.ಸಂತೇಲಿ ಮಂತ್ರ ಹೇಳಿದಂಗೆ
31. ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
32.ಸಂತೇಲಿ ಮಂತ್ರ ಹೇಳಿದಂಗೆ ಸಂದೀಲಿ ಸಮಾರಾಧನೆ ಮಾಡ್ಡಂಗೆ
33. ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
34. ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ
35. ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
36. ಉಗಮವಾಗದಿರಲಿ ಹಿಂಸೆ , ಹೆಚ್ಚಿಗೆಯಾಗದಿರಲಿ ಆಸೆ
37. ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ
38. ಉಗಿದರೆ ತುಪ್ಪ ಕೆಡುತ್ತದೆ , ನುಂಗಿದರೆ ಗಂಟಲು ಕೆಡುತ್ತದೆ
39. ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
40. ಅಡವಿಯ ದೊಣ್ಣೆ ಪರದೇಸಿಯ ತಲೆ
41. ಉಡೋಕೆ ಇಲ್ಲದವ ಮೈಲಿಗೆಗೆ ಹೇಸ , ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
42. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ .
43. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ .
44. ಅಡಿಗೆ ಬಿದ್ದರೂ ಮೀಸೆ ಮೇಲೆ
45. ಅತ್ತೆಗೊಂದು ಕಾಲ , ಸೊಸೆಗೊಂದು ಕಾಲ
46. ಅನ್ನ ಹಾಕಿದ ಮನೆಗೆ ಕನ್ನ ಹಕಬೇಡ
47. ಅನ್ನ ಇಕ್ಕಿ ಸಾಕು ಅನ್ನಿಸ ಬಹುದು , ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
48. ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ
49. ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ
50. ಗಾಳಿ ಬಂದಾಗ ತೂರಿಕೋ
ಧನ್ಯವಾದಗಳು