ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯ ಪರಿಚಯ
ನಿಯಮಿತ ಹೊಣೆಗಾರಿಕೆ ಮತ್ತು ನಿರಂತರವಾದ ಆಸ್ತಿತ್ವವನ್ನು ಹೊಂದಿದ್ಡು, 2008ರ ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯಿದೆಯ ಪ್ರಕಾರ ಸ್ಥಾಪಣೆಗೊಂಡಿರುವ ಹಾಗೂ ನೋಂದಾಯಿಸಲ್ಪಟ್ಟ ಪಾಲುದಾರಿಕೆಯನ್ನು "ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ" ಎನ್ನುವರು. ಇದು ಪಾಲುದಾರಿಕೆ ಮತ್ತು ಕಂಪನಿಯ ಲಕ್ಷಣಗಳನ್ನು ಒಳಗೊಂಡಿರುತ್ತದೆ.
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯ ಲಕ್ಷಣಗಳು
1. ಪ್ರತ್ಯೇಕ ಕಾನೂನಿನ ಅಸ್ತಿತ್ವ
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಯು ತನ್ನ ಸದಸ್ಯರಿಂದ ಪ್ರತ್ಯೇಕ ಕಾನೂನಿನ ಸ್ಥಾನಮಾನವನ್ನೂ ಹೊಂದಿದೆ. ಸದಸ್ಯರ ಪರಸ್ಪರ ಹಕ್ಕುಗಳು ಮತ್ತು ಕರ್ತವ್ಯಗಳು ಕಾಯಿದೆಯ ಒಪ್ಪಂದದ ಪ್ರಕಾರ ರೋಪಿಸಲ್ಪಡುತ್ತವೆ. ಇದು ಇತರರ ಮೇಲೆ ದಾವೆ ಹೊಡಬಹುದು ಮತ್ತು ಇತರರು ಸಂಸ್ಥೆಯ ಮೇಲೆ ದಾವೆ ಹೊಡಬಹುದು.
2. ನಿಯಮಿತ ಹೊಣೆಗಾರಿಕೆ
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಯು ತಾನು ಹೊಂದಿರುವ ಸ್ವತ್ತುಗಳ ಮೌಲ್ಯದವರೆಗೆ ಮಾತ್ರ ಜವಾಬ್ದಾರವಾಗಿರುತ್ತದೆ. ಪಾಲುದಾರನ ಜವಾಬ್ದಾರಿಯೂ ಸಹ ಒಪ್ಪಂದದ ಪ್ರಕಾರ ತಾನು ವಂತಿಕೆ ಸಲ್ಲಿಸಲು ಭರವಸೆ ನೀಡಿದ ಮೊತ್ತದವರೆಗೆ ಮಾತ್ರ ಇರುತ್ತದೆ.
3. ಇತರರ ತಪ್ಪಿಕೆ ಪಾಲುದಾರನು ಜವಾಬ್ದಾರನಲ್ಲ
ಸಂಸ್ಥೆಯ ಪಾಲುದಾರರ ತಪ್ಪು ವರ್ತನೆಗೆ or ಅನಧಿಕೃತವಾದ ನಿರ್ಣಾಯಗಳಿಗೆ ಉಳಿದ ಪಾಲುದಾರರು ಜವಾಬ್ದಾರರಾಗುವುದಿಲ್ಲ. ಹೀಗೆ ಯಾವುದೇ ಪಾಲುದಾರನ ಸ್ವತಂತ್ರ ವರ್ತನೆಯ ಪರಿಣಾಮವಾಗಿ ಉಂಟಾದ ಜವಾಬ್ದಾರಿಗೆ ಪಾಲುದಾರಿಕೆ ಸಂಸ್ಥೆಯ ಇತರೆ ಪಾಲುದಾರರು ಜವಾಬ್ದಾರರಾಗುವುದಿಲ್ಲ.
4. ಸದಸ್ಯರ ಸಂಖ್ಯೆ
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯ ಸ್ಥಾಪನೆಗೆ ಕನಿಷ್ಟ ಇಬ್ಬರು ಪಾಲುದಾರರು ಸಾಕು. ಇಬ್ಬರು ಪಾಲುದಾರರಲ್ಲಿ ಕನಿಷ್ಟ ಒಬ್ಬ ಪಾಲುದಾರನು ಭಾರತೀಯ ನಿವಾಸಿಯಾಗಿರಬೇಕು. ಗರಿಷ್ಟ ಸಂಖ್ಯೆಯ ಸದಸ್ಯರ ಸೇರ್ಪಡೆಗೆ ಕಾನೂನಿನಲ್ಲಿ ಅವಕಾಶವಿದೆ.
5. ನಿರಂತರ ಅಸ್ತಿತ್ವ
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗೆ ನಿರಂತರವಾದ ಅಸ್ತಿತ್ವವಿದೆ. ಯಾವುದೇ ಪಾಲುದಾರನ ಆಗಮನ, ನಿರ್ಗಮನ, ನಿವೃತಿ, or ಮರಣವು ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ.
6. ವಾರ್ಷಿಕ ಲೆಕ್ಕಪತ್ರಗಳು
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯು ವಾರ್ಷಿಕ ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡಬೇಕಾದ ಅಗತ್ಯವಿದೆ. ವಾರ್ಷಿಕ ಲೆಕ್ಕಪತ್ರಗಳಲ್ಲಿ ನೈಜತೆ ಮತ್ತು ನ್ಯಾಯಬದ್ಧತೆಯಿರಬೇಕು. ಪ್ರತಿ ವರ್ಷವೂ ಕಂಪನಿಯ ನೋಂದಣಾಧಿಕಾರಿಗಳಿಗೆ ವಾರ್ಷಿಕ ಲೆಕ್ಕಪತ್ರಗಳ ತಃಖ್ತೆ ಮತ್ತು ಋಣಪರಿಹಾರ ಸಾಮಾರ್ಟಿಯದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
7. ಅನ್ವಯಿಸದಿರವಿಕೆ
1932 ರ ಭಾರತೀಯ ಪಾಲುದಾರಿಕೆ ಕಾಯಿದೆಯ ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗೆ ಅನ್ವಯವಾಗುವುದಿಲ್ಲ. ಒಂದು ಪಾಲುದಾರಿಕೆ ಸಂಸ್ಥೆ, ಖಾಸಗಿ ಕಂಪನಿ ಮತ್ತು ಯಾದೀಕರಿಸಿದ ಸಾರ್ವಜನಿಕ ಕಂಪನಿಯು ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳಾಗಿ ಪರಿವರ್ತನೆ ಹೊಂದಲು ಅವಕಾಶವಿದೆ.
8. ಶೋಧನೆಯ ಅಧಿಕಾರ
ಕೇಂದ್ರ ಸರ್ಕಾರವು ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಯ ವ್ಯವಹಾರಗಳನ್ನು ಶೋಧಿಸುವ ಅಧಿಕಾರ ಹೊಂದಿದೆ. ಒಂದು ವೇಳೆ ಕೇಂದ್ರ ಸರ್ಕಾರವು ಅವಶ್ಯಕವೆಂದು ಭಾವಿಸಿದರೆ ಈ ಉದ್ದೇಶಕ್ಕಾಗಿ ಸೂಕ್ತವಾದ ಪರೀಕ್ಷಕನನ್ನೂ ನೇಮಿಸಬಹುದು.
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯ ಪ್ರಯೋಜನಗಳು
1. ಪ್ರತ್ಯೇಕ ಕಾನೂನಿನ ಅಸ್ತಿತ್ವ
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯು ಪ್ರತ್ಯೇಕವಾದ ಕಾನೂನಿನ ಆಸ್ತಿತ್ವವನ್ನು ಹೊಂದಿರುವ ಸಂಸ್ಥೆಯಾಗಿದೆ. ಅಂದರೆ ಅದು ತನ್ನ ಪಾಲುದಾರರಿಗಿಂತ ಪ್ರತ್ಯೇಕವಾಗಿರುತ್ತದೆ. ಇದು ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆ 2008ರ ಪ್ರಕಾರ ನೋಂದಾಣಿಯಾಗಿರುತ್ತದೆ.
2. ನಿರಂತರ ಅಸ್ತಿತ್ವ
ಇದು ನಿರಂತರ ಅಸ್ತಿತ್ವವನ್ನು ಹೊಂದಿದೆ. ಯಾವುದೇ ಪಾಲುದಾನ ಮರಣ, ದಿವಾಳಿತನ, ನಿವೃತಿ or ಸೇರ್ಪಡೆಯು ಇದರ ಅಸ್ತಿತ್ವದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಇದರ ಮುಂದುವರಿಕೆ ನಿರಂತರವಾಗಿರುತ್ತದೆ.
3. ನಿಯಮಿತ ಹೊಣೆಗಾರಿಕೆ
ಸಂಸ್ಥೆಗೆ ವಂತಿಕೆಯಾಗಿ ಸಲ್ಲಿಸಿರುವ ಮೊತ್ತಕ್ಕೆ ಮಾತ್ರ ಪಾಲುದಾರರ ಹೊಣೆಗಾರಿಕೆಯು ಸೀಮಿತವಾಗಿರುತ್ತದೆ. ಪಾಲುದಾರರ ವೈಯುಕ್ತಿಕ ಆಸ್ತಿಗಳ ಮೇಲೆ ಹಕ್ಕು ಸಾಧಿಸಲು ಸಂಸ್ಥೆಯ ಸಾಲಿಗರಿಗೆ ಅಧಿಕಾರ ಇರುವುದಿಲ್ಲ. ಅದ್ದುದರಿಂದ ನಿಯಮಿತ ಹೊಣೆಗಾರಿಕೆಯು ಪಾಲುದಾರಿಕೆಯು ಕಂಪನಿಯಷ್ಟೆ ರಕ್ಷಿತವಾಗಿರುತ್ತದೆ.
4. ಕೆಲವೇ ನಿಯಮಗಳ ಅನುಸರಣೆ
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯನ್ನು ಕನಿಷ್ಟ ಸಂಖ್ಯೆಯ ನಿಯಮಗಳನ್ನು ತೃಪ್ತಿಪಡಿಸಿ ಸ್ಥಾಪನೆ ಮಾಡಬಹುದು. ಆದರೆ ಒಂದು ಖಾಸಗಿ ನಿಯಮಿತ ಕಂಪನಿಯ ಸ್ಥಾಪನೆಗೆ ಹಲವಾರು ನಿಯಮಗಳನ್ನು ತೃಪ್ತಿಪಡಿಸಬೇಕಾಗುತ್ತದೆ.
5. ನಮ್ಯತೆ
2008 ರ ನಿಯಮಿತ ಹೊಣೆಗಾರಕೆ ಪಾಲುದಾರಿಕೆ ಕಾಯ್ದೆಯು ಪಾಳಿದರಿಕೆ ಸಂಸ್ಥೆಯನ್ನು ನಡೆಸಲು, ಮತ್ತು ನೀತಿಗಳನ್ನು ರೂಪಿಸಲು ಅವಕಾಶ ಮಾಡಿಕೊಡುತ್ತದೆ. ಆದುದರಿಂದ ಪಾಲುದಾರರು ಸಂಸ್ಥೆಯ ನಿರ್ವಹಣೆಗೆ ನೀತಿಯ ಚೌಕಟ್ಟನ್ನು ಸ್ವತಂತ್ರವಾಗಿ ರೂಪಿಸಬಹುದು.
6. ಸುಲಭ ಸಮಾಪನೆ
ಒಂದು ಖಾಸಗಿ ನಿಯಮಿತ ಕಂಪನಿಗೆ ಹೋಲಿಕೆ ಮಾಡಿದರೆ ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯನ್ನು ಸುಲಭವಾಗಿ ಸಮಾಪನೆ ಮಾಡಬಹುದು. ಸಮಾಪನೆಯ ಪ್ರಕ್ರಿಯೆಯ ಕಾಡಿಮೆಯಿರುತ್ತದೆ ಮತ್ತು ಇಡೀ ಸಮಾಪನೆ ಪ್ರಕ್ರಿಯೆಯನ್ನು 2-3 ತಿಂಗಳ ಒಳಗೆ ಮುಕ್ತಾಯಗೊಳಿಸಬಹುದು.
ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯ ಅನಾನುಕೂಲಗಳು
1. ಸಾಹಸ ಬಂಡವಾಳ ಆಕರ್ಷಣೆಯಲ್ಲಿ ವಿಫಲತೆ
ಸಾಹಸ ಬಂಡವಾಳ ಒದಗಿಸುವ ಕಂಪನಿಗಳು ನಿಯಮಿತ ಪಾಲುದಾರಿಕೆ ಸಂಸ್ಥೆಗೆ ಬಂಡವಾಳ ಹೂಡಲು ಹಿಂಜರಿಯುತ್ತವೆ. ಏಕೆಂದರೆ ಎಲ್ಲ ಪಾಲುದಾರರ ಹೊಣೆಗಾರಿಕೆಯು ಸೀಮಿತವಾಗಿರುತ್ತದೆ ಮತ್ತು ಅವರು ನಿರ್ದಿಷ್ಟ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಸಾಹಸ ಬಂಡವಾಳ ಕಂಪನಿಗಳು ಇದನ್ನು ಇಚ್ಛಿಸುವುದಿಲ್ಲ.
2. ಖಾಸಾಗಿತನದ ಕೊರತೆ
ಕಾಯ್ದೆಯ 34ನೇಯ ಪರಿಚ್ಛೇದನ ಪ್ರಕಾರ ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯ ಸಂಸ್ಥೆಯು ತನ್ನ ಎಲ್ಲ ಹಣಕಾಸಿನ ಮಾಹಿತಿಯನ್ನು ಸರಕಾರಕ್ಕೆ ಬಹಿರಂಗಗೊಳಿಸಬೇಕಾಗಿರುತ್ತದೆ. ಆದುದರಿಂದ ಖಾಸಗಿ ರಹಸ್ಯಗಳನ್ನು ಕಾಪಾಡುವುದು ಕಷ್ಟಕರ.
3. ಅನಿವಾಸಿ ಭಾರತೀಯರಿಗೆ ಅವಕಾಶವಿಲ್ಲ
ನಿಯಮಿತ ಹೊಣೆಕರಿಕೆ ಪಾಲುದಾರಿಕೆಯನ್ನು ಪೂರ್ಣಪ್ರಮಾನದಲ್ಲಿ ಅನಿವಾಸಿ ಭಾರತೀಯರಿಂದ ಸ್ಥಾಪಿಸಲಾಗದು. ಏಕೆಂದರೆ ನಿಯಮದ ಬಪ್ರಕಾರ, ಪಾಲುದಾರರಲ್ಲಿ ಯಾವುದೇ ಒಬ್ಬ ಪಾಲುದಾರನು ನಿವಾಸಿ ಭಾರತಿಯರಾಗಿರಬೇಕು.
4. ಹಕ್ಕನ್ನು ಮಾರಾಟ ಮಾಡಲು ಅವಕಾಶವಿಲ್ಲ
ಒಬ್ಬ ಪಾಲುದಾರನು ಇತರೆ ವಿದ್ಯುನ್ಮಾನ್ ವಾಣಿಜ್ಯ ಕಂಪನಿಗಳಿಗೆ ತನ್ನ ಹಕ್ಕನ್ನು or ಪಾಲನ್ನು ಮಾರಾಟ ಮಾಡಿ ಬಂಡವಾಳ ಸಂಗ್ರಹಿಸುವಂತಿಲ್ಲ. ಏಕೆಂದರೆ ಹಕ್ಕು ಎಂಬ ಪರಿಕಲ್ಪನೆಯು ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಯಲ್ಲಿ ಇರುವುದಿಲ್ಲ.
ಧನ್ಯವಾದಗಳು