ಭಾರತದ ರಸ್ತೆಗಳ ವಿಧಗಳು
ಭಾರತದ ರಸ್ತೆಗಳನ್ನು ಪ್ರಮುಖವಾಗಿ 1943 ರ ನಾಗ್ಪುರ ಯೋಜನೆಯ ಅನ್ವಯ 4 ವಿಭಾಗಗಳಾಗಿ ವಿಂಗಡಿಸಲಾಗಿದೆ.
1. ರಾಷ್ಟ್ರೀಯ ಹೆದ್ದಾರಿ ( NH- National Highways )
2. ರಾಜ್ಯ ಹೆದ್ದಾರಿ ( SH - State Highway )
3. ಜಿಲ್ಲಾ ರಸ್ತೆಗಳು
4. ಗ್ರಾಮೀಣ ರಸ್ತೆಗಳು
![]() |
ಭಾರತದ ರಸ್ತೆಗಳ ವಿಧಗಳು |
ರಾಷ್ಟ್ರೀಯ ಹೆದ್ದಾರಿಗಳು
1. ರಾಷ್ಟ್ರೀಯ ಹೆದ್ದಾರಿಗಳು ಅತಿ ಉದ್ದದ ರಸ್ತೆಗಳಾಗಿವೆ.
2. ಬಹುತೇಕ ರಾಷ್ಟ್ರೀಯ ಹೆದ್ದಾರಿಗಳನ್ನು ಭಾರತ ಸರ್ಕಾರವು ನಿರ್ವಹಿಸುತ್ತದೆ. ಕೆಲವು ರಸ್ತೆಗಳನ್ನು ಖಾಸಗಿಯವರ ಸಹದ್ಯೋಗದಲ್ಲೂ ಕೊಡ ನಿರ್ವಹಣೆ ಮಾಡಲಾಗುತ್ತಿದೆ.
3. ಭಾರತ ದೇಶದಲ್ಲಿ 2018 ರ ಪ್ರಕಾರ 1,31,326 ಕಿ. ಮೀ ಉದ್ದ ರಾಷ್ಟ್ರೀಯ ಹೆಡ್ಡರಿಗಳಿವೆ. ರಾಷ್ಟ್ರೀಯ ಹೆದ್ದಾರಿಯು ಭಾರದ ಒಟ್ಟು ಸಂಪರ್ಕದಲ್ಲಿ ಶೇ.2.7 ರಷ್ಟು ರಸ್ತೆಯನ್ನು ಒಳಗೊಂಡಿದೆ.
4. ಭಾರತದಲ್ಲಿ ಪ್ರಮುಖವಾಗಿ 67 ಸಾವಿರ ಕಿ.ಮೀ ಉದ್ದವಿರುವಂತಹ ಹೆದ್ದಾರಿ ಕಂಡುಬರುತ್ತದೆ. ಸುಮಾರು 200 ಕಿ.ಮೀ ಉದ್ದವಿರುವಂತಹ ಹೆದ್ದಾರಿಯನ್ನು "ಎಕ್ಸ್ ಪ್ರೆಸ್ ಹೆದ್ದಾರಿ" ಎನ್ನುವರು. 10 ಸಾವಿರ ಕಿ.ಮೀ ಉದ್ದದ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಗಳು ಭಾರತದಲ್ಲಿ ಕಂಡುಬರುತ್ತದೆ.
5. ಆದರೆ 40 ರಷ್ಟು ಸಾರಕುಗಳು ಸಾಗಿಸುತ್ತದೆ. ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ದಿಪಡಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಯೋಜನೆಯನ್ನು 1998 ರಿಂದ ಜಾರಿಗೆ ತರಲಾಯಿತು.
6.ಈ ಯೋಜನೆಯನ್ನು ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಮೂಲಕ ನಿರ್ವಹಿಸುತ್ತವೆ.
7. ರಾಷ್ಟ್ರೀಯ ಹೆದ್ದಾರಗಳ ನಿರ್ವಾಹಣೆಯನ್ನು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಲಯವು ರಾಷ್ಟ್ರೀಯ ಹೆದ್ದಾರಿ ಅಭಿವರುದ್ದಿ ಪ್ರಾಧಿಕಾರದ ಮೂಲಕ ನಿರ್ವಹಿಸುತ್ತದೆ.
8. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ (NHAI) 1988 ರಲ್ಲಿ ಸ್ಥಾಪನೆಯಾಯಿತು. ಇದರ ಕೇಂದ್ರ ಕಛೇರಿಯು ನವದೆಹಲಿಯಲ್ಲಿವೆ.
9. ಉತ್ತರ ಪ್ರದೇಶ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಹೊಂದಿರುವ ರಾಜ್ಯವಾಗಿದೆ.
10. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಿ.ಮೀ ಸೂಚಿಸುವ ಕಲ್ಲುಗಳು ಬಿಳಿ ಮತ್ತು ಹಳದಿ ಬಣ್ಣದಿಂದ ಕೊಡಿರುತ್ತದೆ.
ರಾಜ್ಯ ಹೆದ್ದಾರಿಗಳು
1. ರಾಜ್ಯ ಹೆದ್ದಾರಿಗಳು ದೇಶದ 2 ನೇ ಪ್ರಮುಖ ರಸ್ತೆಗಳಾಗಿವೆ. ರಾಜ್ಯದ ಹೆದ್ದಾರಿಗಳು ರಾಜ್ಯದ ಜಿಲ್ಲಾ ಕೇಂದ್ರಗಳು ಹಾಗೂ ರಾಜ್ಯದ ರಾಜಧಾನಿಗಳೊಡನೆ ಸಂಪರ್ಕ ಹೊಂದಿರುದೆ. ಇವುಗಳನ್ನು ಆಯಾ ರಾಜ್ಯ ಸರ್ಕಾರಗಳ ಲೋಕೋಪಯೋಗಿ ಇಲಾಖೆ ಈ ರಸ್ತೆಗಳನ್ನು ನಿರ್ವಹಣೆ ಮಾಡುತ್ತದೆ.
2. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಅಭಿವೃದ್ದಿ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರ ನಿರ್ವಹಣೆ ಮಾಡುವುದಿಲ್ಲ. ರಾಜ್ಯದ ಹೆದ್ದಾರಿಗಳು ರಾಜ್ಯದಲ್ಲಿರುವ ಪ್ರಮುಖ ನಗರಗಳನ್ನು, ಬಂದರುಗಳನ್ನು, ಕೈಗಾರಿಕೆಗಳನ್ನು ಸಂಪರ್ಕಿಸುತ್ತದೆ. ಉತ್ತರ ಪ್ರದೇಶವು ಅತಿ ಹೆಚ್ಚು (4,942ಕಿ.ಮೀ) ರಾಜ್ಯ ಹೆದ್ದಾರಿ ಹೊಂದಿರುವಂತಹ ರಾಜ್ಯವಾಗಿದೆ. 2 ನೇ ಸ್ಥಾನವನ್ನು ಮಧ್ಯಪ್ರದೇಶ(4664), 3 ನೇ ಸ್ಥಾನವನ್ನು ರಾಜಸ್ಥಾನ(4597) ಹೊಂದಿದೆ.
3. ರಾಜ್ಯ ಹೆದ್ದಾರಿಗಳಲ್ಲಿ ಕಿ.ಮೀ ಕಲ್ಲುಗಳು ಬಿಳಿ ಮತ್ತು ಹಸಿರು ಬಣ್ಣದಿಂದ ಕೊಡಿರುತ್ತದೆ.
ಜಿಲ್ಲಾ ರಸ್ತೆಗಳು
ಇವು ದೇಶದ 3 ನೇ ಪ್ರಕಾರದ ರಸ್ತೆಗಳು. ಇವುಗಳು ತಾಲ್ಲೂಕು ಮತ್ತು ದೊಡ್ಡ ಗ್ರಾಮೀಣ ಕೇಂದ್ರಗಳೊಂದಿಗೆ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಇವುಗಳು ನಿರ್ವಹಣೆ ಜಿಲ್ಲಾಪಂಚಯಿತಿಯ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ತುಮುಕುರು ಜಿಲ್ಲೆ ಅತಿ ಹೆಚ್ಚು ಜಿಲ್ಲಾ ಹೆದ್ದಾರಿಯನ್ನು ಹೊಂದಿದೆ. ಜಿಲ್ಲಾ ಹೆದ್ದಾರಿಗಳಲ್ಲಿ ಕಿ.ಮೀ ಕಲ್ಲುಗಳು ಬಿಳಿ ಮತ್ತು ಕಪ್ಪು ಬಣ್ಣದಿಂದ ಕೊಡಿರುತ್ತಡದೆ.
ಗ್ರಾಮೀಣ ರಸ್ತೆಗಳು
ಇವು ಗ್ರಾಮ ಗ್ರಾಮಗಳನ್ನು ಸಂಪರ್ಕಿಸುವುದರೊಂದಿಗೆ ತಾಲ್ಲೂಕುಗಳನ್ನು ಸಂಪರ್ಕಿಸುವ ರಸ್ತೆಗಲಾಗಿವೆ. ಇವುಗಳ ನಿರ್ವಹಣೆ ಮತ್ತು ನಿರ್ಮಾಣ ತಾಲ್ಲೂಕು ಪಂಚಾಯತಿಯದ್ದಾಗಿದೆ. ಗ್ರಾಮೀಣ ರಸ್ತೆಗಳ ಕಿ.ಮೀ ಸೂಚಿಸುವ ಕಲ್ಲುಗಳು ಬಿಳಿ ಮತ್ತು ಕೇಸರಿ ಬಣ್ಣದಿಂದ ಕೊಡಿರುತ್ತದೆ.
ಭಾರತದ 4 ವಿಧದ ರಸ್ತೆಗಳ ನಿರ್ವಹಣೆ ಮತ್ತು ಅವುಗಳನ್ನು ಸೂಚಿಸುವ ಮೈಲುಗಲ್ಲುಗಳು
ರಸ್ತೆಗಳು | ನಿರ್ವಹಣೆ | ಕಿ.ಮೀ ಕಲ್ಲುಗಳ ಬಣ್ಣ |
---|---|---|
ರಾಷ್ಟ್ರೀಯ ಹೆದ್ದಾರಿಗಳು | National Highway Authority of India | ಬಿಳಿ ಮತ್ತು ಹಳದಿ |
ರಾಜ್ಯ ಹೆದ್ದಾರಿಗಳು | ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ | ಬಿಳಿ ಮತ್ತು ಹಸಿರು |
ಜಿಲ್ಲಾ ಹೆದ್ದಾರಿಗಳು | ಜಿಲ್ಲಾ ಪಂಚಾಯತಿ | ಬಿಳಿ ಮತ್ತು ಕಪ್ಪು |
ಗ್ರಾಮೀಣ ಹೆದ್ದಾರಿಗಳು | ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ | ಬಿಳಿ ಮತ್ತು ಕೇಸರಿ |
ಧನ್ಯವಾದಗಳು