ಭಾರತದಲ್ಲಿ ಮಳೆಯ ಹಂಚಿಕೆ
ಭಾರತದ ಮಳೆಯು ಮಾನ್ಸೂನ್ ಮಾರುತಗಳನ್ನು ಅವಲಂಭಿಸಿದ್ದು, ಮಳೆಯ ಹಂಚಿಕೆಯ ಆಧಾರದ ಮೇಲೆ ಮೂರು ವಿಭಾಗಗಳಾಗಿ ವಿಂಗಡಿಸಬಹುದು
1. ಕಡಿಮೆ ಮಳೆ ಪ್ರದೇಶ
2. ಸಾಧಾರಣ ಮಳೆ ಪ್ರದೇಶ
3. ಅಧಿಕ ಮಳೆ ಪ್ರದೇಶ
ಕಡಿಮೆ ಮಳೆ ಪ್ರದೇಶ
ಈ ಪ್ರದೇಶದಲ್ಲಿ ವಾರ್ಷಿಕ 50 ಸೆಂ.ಮೀ ಗಿಂತ ಕಡಿಮೆ ಮಳೆ ಬೀಳುತ್ತದೆ. ರಾಜಸ್ಥಾನದ ಧಾರ್ ಮರುಭೂಮಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಪಂಜಾಬ್, ಹರಿಯಾಣ, ಗುಜರಾತ್ ನ ಕಛ್ ಪ್ರದೇಶ. ಕರ್ನಾಟಕದ ಒಳನಾಡುಗಳನ್ನು ಒಳಗೊಂಡಿದೆ.
ಅತಿ ಕಡಿಮೆ ಮಳೆ ಬೀಳುವ ಪ್ರದೇಶಗಳು
*) ರೋಹ್ಲಿ :
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ರೋಹ್ಲೀ ಪ್ರದೇಶವು ಅತಿ ಕಡಿಮೆ ಮಳೆ ಅಂದರೆ ವಾರ್ಷಿಕವಾಗಿ 8.3ಸೆಂ.ಮೀ ಮಳೆ ಪಡೆಯುವ ಮೂಲಕ ಭಾರತದಲ್ಲೇ ಅತಿ ಕಡಿಮೆ ಮಳೆ ಪಡೆಯುವ ಮತ್ತು ಭಾರತದಲ್ಲಿಯೆ ಅತಿ ಶುಷ್ಕ ಪ್ರದೇಶವಾಗಿದೆ.
ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಬೀಳುವ ಸ್ಥಳ
ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಬೀಳುವ ಸ್ಥಳವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ "ನಾಯಕನಹಟ್ಟಿ"ಯಾಗಿದೆ.
ಜಗತ್ತಿನಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ
ಅಟಕಾಮ ಮರುಭೂಮಿ :- ದಕ್ಷಿಣ ಅಮೆರಿಕದ ಅಟಕಾಮ ಮರುಭೂಮಿಯಲ್ಲಿ ಜಗತ್ತಿನಲ್ಲೇ ಅತಿ ಕಡಿಮೆ ಮಳೆ ಬೀಳುವ ಸ್ಥಳವಾಗಿದೆ. ಅಟಗಾಮ ಮರುಭೂಮಿಯ ಚಿಲಿ ಭಾಗದಲ್ಲಿ ಸುಮಾರು 400 ವರ್ಷಗಳಿಂದ ಮಳೆಯಾಗಿಲ್ಲ. ಕ್ರಿ.ಶ. 1570 ರಿಂದ 1971ರ ವರೆಗೆ ಈ ಪ್ರದೇಶದಲ್ಲಿ ಮಾಲೆಯಾಗಿಲ್ಲವೆಂದು ದಾಖಲಾಗಿದೆ.
ಸಾಧಾರಣ ಮಳೆ ಪ್ರದೇಶ
ವಾರ್ಷಿಕ 50 ರಿಂದ 250 ಸೆಂ.ಮೀ ವರೆಗೆ ಮಳೆ ಬೀಳುವ ಪ್ರದೇಶವನ್ನು ಸಾಧಾರಣ ಮಳೆ ಪ್ರದೇಶ ಎನ್ನುವರು. ಅತಿ ಹೆಚ್ಚು ಮಳೆ ಮತ್ತು ಅತಿ ಕಡಿಮೆ ಮಳೆ ಬೀಳುವ ಪ್ರದೇಶಗಳನ್ನೆಲ್ಲಾ ಬಿಟ್ಟು ಭಾರತದ ಉಳಿದ ಭಾಗಗಳನ್ನು ಒಳಗೊಂಡಿರುತ್ತದೆ.
ಅಧಿಕ ಮಳೆ ಪ್ರದೇಶ
ವಾರ್ಷಿಕವಾಗಿ 250 ಸೆ.ಂ ಗಿಂತ ಹೆಚ್ಚು ಮಳೆ ಬೀಳುತ್ತದೆ. ಪಶ್ಚಿಮ ಘಟ್ಟದ ಪಶ್ಚಿಮ ಭಾಗ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ ಈ ಪ್ರದೇಶಕ್ಕೆ ಸೇರುತ್ತವೆ.
ಭಾರತದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶವು ನಾಲ್ಕು ಬೇರೆ ಬೇರೆ ಭಾಗಗಳಲ್ಲಿ ಕಂಡು ಬರುತ್ತದೆ.
1) ಪಶ್ಚಿಮ ಕರಾವಳಿಯ ಕಿರಿದಾದ ಪ್ರದೇಶ
2) ಪೂರ್ವ ಕರಾವಳಿಯ ಪ್ರದೇಶ
3) ಹಿಮಾಲಯದ ತಪ್ಪಲು ಪ್ರದೇಶ
4) ಈಶಾನ್ಯ ಭಾಗದ ಕೆಲವು ಪ್ರದೇಶಗಳು
ಹೆಚ್ಚು ಮಳೆ ಬೀಳುವ ಪ್ರದೇಶಗಳು
1) ಮೌಸಿನ್ ರಾಂ :
ಭಾರತದ ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಚಿರಾಪುಂಜಿಯ ಹತ್ತಿರದಲ್ಲಿರುವ ಮೌಸಿನ್ ರಾಂ. ಮೌಸಿನ್ ರಾಂ ಮೇಘಾಲಯದ ಪೂರ್ವ ಖಾಸಿ ಬೆಟ್ಟದ ಬಳಿ ಕಂಡುಬರುವ ಒಂದು ಗ್ರಾಮವಾಗಿದೆ. ವಾರ್ಷಿಕವಾಗಿ 11,872 ಮೀ.ಮೀಟರ್ ಮಾಲೆಯಾಗುತ್ತದೆ. ಇದು ಭೂಮಿಯ ಮೇಲಿನ ಅತಿ ಹೆಚ್ಚು ತೇವಾಂಶವಿರುವ ಪ್ರದೇಶವಾಗಿದೆ. ಚಿರಾಪುಂಜಿಯು ಭೂಮಿಯ ಮೇಲಿನ 2 ನೇ ಅತಿ ಹೆಚ್ಚು ತೇವಾಂಶವಿರುವ ಪ್ರದೇಶವಾಗಿದೆ. 1985 ರಲ್ಲಿ ಮೌಸಿನ್ ರಾಮ್ ನಲ್ಲಿ 26 ಸಾವಿರ ಮೀ. ಮೀ (1000 ಇಂಚು)ಮಳೆಯಾಗಿದ್ದು, ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ.
2) ಆಗೊಂಬೆ
ಆಗೊಂಬೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಬೀಳುವ ಪ್ರದೇಶವೆಂದು ಖ್ಯಾತವಾಗಿದೆ. ಆಗೊಂಬೆಯು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಂಡುಬರುತ್ತದೆ. ಅಗೊಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ "ಹುಲಿಕಲ್" ಎಂಬ ಸ್ಥಳವು ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಪಡೆದಿರುವ ಸ್ಥಳವಾಗಿತ್ತು. ಆದರೆ 2016 ರಿಂದ ಪುನಃ ಆಗೊಂಬೆ ಹುಲಿಕಲ್ ಗಿಂತ ಹೆಚ್ಚು ಮಳೆ ಪಡೆಯುವ ಪ್ರದೇಶವಾಗಿದೆ.
ಧನ್ಯವಾದಗಳು