Type Here to Get Search Results !

ಭಾರತದ ವಾಯುಸಾರಿಗೆ |Air Transport of India in Kannada

 ಭಾರತದ ವಾಯುಸಾರಿಗೆ 


         ವಾಯು ಸಾರಿಗೆಯು ಇತರ ಸಾರಿಗೆಗಳಿಗಿಂತ ಅತ್ಯಂತ ವೆಚ್ಚದಾಯಕ ಸಾರಿಗೆಯಾಗಿದೆ. ಅಲ್ಲದೇ ಅತ್ಯಂತ ವೇಗವಾದ ಸಾರಿಗೆಯಾಗಿದೆ. ಯುದ್ದ ಪ್ರವಾಹ ಭೂಕಂಪಗಳಂತಹ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಯು ಸಾರಿಗೆಯು ಅತ್ಯಂತ ಉಪಯುಕ್ತವಾಗಿದೆ. ಭಾರತದಲ್ಲಿ ವಾಯು ಸಾರಿಗೆಯು ಸಾರ್ವಜನಿಕ ವಲಯಕ್ಕೆ ಸೇರಿದ್ದು, ಇತ್ತೀಚಿಗೆ ಕೆಲವು ಖಾಸಗಿ ಸಂಸ್ಥೆಗಳಿಗೊ ವಾಯುಸಾರಿಗೆಯು ಪರವಾನಿಗೆಯನ್ನು ನೀಡಲಾಗಿದೆ. ಉದಾ || ಜೆಟ್ ಏರ್ವೇಸ್, ಸಹರಾ ಏರ್ ವೇಸ್ ಮುಂತಾದವು. 


ಭಾರತದ ವಾಯುಸಾರಿಗೆ |Air Transport of India in Kannada
ಭಾರತದವಾಯುಸಾರಿಗೆ


ಭಾರತದ ಮೊದಲ ವಿಮಾನ ಹಾರಾಟ 

1911 ಫೆಬ್ರವರಿ 18 ರಲ್ಲಿ ಭಾರತದ ಮೊದಲ ವಿಮಾನ ಸಂಚಾರವು ಹೆನ್ರಿಪೀಕ್ವೆ ಎಂಬುವ ಚಾಲಕನಿಂದ "ಸಾಮ್ಮರ್" ದ್ವಿ ರೆಕ್ಕೆ ವಿಮಾನ ಅಲಹಾಬಾದ್ ನಿಂದ 10 ಕಿ.ಮೀ ದೊರದಲ್ಲಿರುವ ನೈನಿಯ ವರೆಗೆ ಅಂಚೆ ಕಾರ್ಯಾಚರಣೆಗಾಗಿ ಪ್ರಾರಂಭವಾಯಿತು. ಭಾರತದಲ್ಲಿ 1927 ರಲ್ಲಿ ಭಾರತೀಯ ವಿಮಾನ ಸಾರಿಗೆ ಅಭಿವೃದ್ದಿಗಾಗಿ " ನಾಗರೀಕ ವಿಮಾನಯಾನ ಇಲಾಖೆ" ತೆರೆಯಲಾಯಿತು. 1932 ರಲ್ಲಿ ಕರಾಚಿ, ಲಾಹೋರ್, ದೆಹಲಿ ಮತ್ತು ಮದ್ರಾಸ್(ಚೆನ್ನೈ) ಗಳ ನಡುವೆ ಆಂತರಿಕ ವಿಮಾನ ಕಾರ್ಯಾರಂಭಗೊಂಡಿತ್ತು, ಬೆಂಗಳೂರು ಅಂತರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರವು ಈ ನಿಲ್ದಾಣದ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ. (ಭಾರತದ ವಾಯುಸಾರಿಗೆ)



ವಾಯು ಸಾರಿಗೆಯ ಉಪಯೋಗಗಳು 


1) ದೊರದ ಪ್ರದೇಶಗಳಿಗೆ ಕಡಿಮೆ ಅವಧಿಯಲ್ಲಿ ತಲುಪಬಹುದು. 

2) ವಿದೇಶದೊಂದಿಗೆ ಉತ್ತಮವಾದ ಭಂದವ್ಯ ಹೊಂಡಬಹುದು. 

3) ಯುದ್ದ ಪ್ರವಾಹ,ಬರಗಾಲ,ಚಂಡಮಾರುತದಂತಹ ಸಂದರ್ಭಗಳಲ್ಲಿ ಅತಿ ವೇಗವಾಗಿ ಸೌಲಭ್ಯಗಳನ್ನು ಒದಗಿಸಬಹುದು. 

4) ಭಾರತದ ವಿಸ್ತಾರವಾದ ಪ್ರದೇಶದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇಗ ತಲುಪಬಹುದು. 

5) ಈಶಾನ್ಯದಂತಹ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಿಗೆ ಭೂ ಸಾರಿಗೆ ಕಷ್ಟವಾದ ಸಂದರ್ಭದಲ್ಲಿ ಇದು ಉಪಯುಕ್ತ. 

6) ವಿದೇಶಗಳಿಗೆ ಮಾಹಿತಿ ಮತ್ತು ಸರಕುಗಳ ವಿನಿಮಯಕೆ ಸುಲಭವಾದ ಮಾರ್ಗವಾಗಿದೆ. 


ಸ್ವಾತಂತ್ರ್ಯ ಭಾರತದಲ್ಲಿ ವಿಮಾನಯಾನ 

 

1) ಸ್ವಾತಂತ್ರ್ಯ ಭಾರತದಲ್ಲಿರುವ ಎಲ್ಲಾ ಖಾಸಗಿ ವಿಮಾನ ಸಂಸ್ಥೆಗಳನ್ನು ಒಗ್ಗೂಡಿಸುವ ಸಲುವಾಗಿ 1950 ರಲ್ಲಿ ವಿಮಾನ ಸಾರಿಗೆ ವಿಚಾರಣಾ ಸಮಿತಿಯನ್ನು ನೇಮಕ ಮಾಡಲಾಯಿತು. 

2) ಈ ಸಮಿತಿಯು ದೇಶದಲ್ಲಿರುವ ಎಲ್ಲಾ ಖಾಸಗಿ ವಿಮಾನ ಸಂಸ್ಥೆಗಳನ್ನು ಒಗ್ಗೂಡಿಸಿ ನಾಲ್ಕು ಸಂಸ್ಥೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬೇಕೆಂದು ಶಿಫಾರಸ್ಸು ನೀಡಿತು. 

3) ಈ ಶಿಫಾರಸ್ಸಿಗೆ ಖಾಸಗಿ ಸಂಸ್ಥೆಗಳು ಒಪ್ಪದ ಕಾರಣ ಸರ್ಕಾರವು ಎಲ್ಲಾ ಖಾಸಗಿ ವಿಮಾನ ಸಂಸ್ಥೆಗಳನ್ನು 1953 ರಲ್ಲಿ ರಾಷ್ಟ್ರೀಕರಣಗೊಳಿಸಿ ಇವುಗಳ ನಿರ್ವಹಣೆಯನ್ನು ಎರಡು ಸಂಸ್ಥೆಗಳಿಗೆ ವಹಿಸಲಾಯಿತು. ಅವುಗಳೆಂದರೆ. 

   1) ಇಂಡಿಯನ್ ಏರ್ ಲೈನ್ 

   2) ಏರ್ ಇಂಡಿಯಾ ಇಂಟರ್ನ್ಯಾಷನಲ್ ಕಾರ್ಪೋರೇಷನ್




1) ಇಂಡಿಯನ್ ಏರ್ ಲೈನ್ (Indian Airline )


1) ಇದು ದೇಶದ ಆಂತರಿಕ ಹಾಗೂ ನೆರೆ ರಾಷ್ಟ್ರಗಳಿಗೆ ವಾಯುಯಾನದ ಸೌಲಭ್ಯವನ್ನು ಒದಗಿಸುವುದು. 

2) ಇದು 1953 ಆಗಸ್ಟ್ 1 ರಿಂದ ಆರಂಭವಾಗಿದ್ದು, ಇದರ ಕೇಂದ್ರ ಕಛೇರಿ ನವದೇಹಳಿಯಲ್ಲಿದೆ. 

3) ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನಗಳಿಗೆ ಸಂಪರ್ಕ ಒದಗಿಸುತ್ತದೆ. 

4) ಈ ಸೇವೆಯನ್ನು ಮಾಲ್ಡೀವ್ಸ್, ಸಿಂಗಪುರ, ಥೈಲ್ಯಾಂಡ್ ದೇಶಗಳಿಗೂ ಒದಗಿಸುವುದು. 

5) ಇದು ವಿಮಾನಯಾನ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರ ಪ್ರಮುಖ ಕೇಂದ್ರವು ಮುಂಬೈನಲ್ಲಿದೆ. 

6) ಈ ಸಂಸ್ಥೆಗೆ ಕಡಿಮೆ ದೊರದ ವಾಯುಯಾನದ ಸೌಲಭ್ಯ ಒದಗಿಸಲು 1981 ರಲ್ಲಿ ವಾಯುಧೂತ್ ವಿಮಾನಯಾನವನ್ನು ಪ್ರಾರಂಭಿಸಲಾಯಿತು. ಪ್ರಸ್ತುತವಾಗಿ ಇಂಡಿಯನ್ ವಾಯುಧೂತ್ ದೇಶದ 56 ಕಡೆ ಸಂಪರ್ಕ ಕಲ್ಪಿಸುತ್ತದೆ. 

7) ಈಶಾನ್ಯ ಪರ್ವತ ರಾಜ್ಯಗಳಿಗೆ ಪವನ್ ಹಾನ್ಸ್ ಹೆಲಿಕ್ಯಾಪ್ಟರ್ ಲಿಮಿಟೆಡ್ ಕಂಪನಿಯು ಉತ್ತಮ ಸೇವೆ ಓದಗಿಸುತ್ತಿದೆ. 



2) ಏರ್ ಇಂಡಿಯಾ ಇಂಟರ್ನ್ಯಾಷನಲ್ ಕಾರ್ಪೋರೇಷನ್( Air India International Corporation )


1) ಏರ್ ಇಂಡಿಯವು ಪ್ರಸ್ತುತವಾಗಿ ಏಷ್ಯಾದ 16 ನೇ ವಾಯುಯಾನವಾಗಿದ್ಡು, ಭಾರತದಿಂದ ವಿದೇಶಗಳಿಗೆ ಸೇವೆಯನ್ನು ಒದಗಿಸುತ್ತದೆ. ಇದು ಜಗತ್ತಿನಾದ್ಯಾಂತ 24 ಸ್ಥಳಗಳಿಗೆ ಸೇವೆಯನ್ನು ಒದಗಿಸುತ್ತದೆ. 

2) ಘೋಷ ವಾಕ್ಯ :- "Youth place in the Sky"

3) ಕೇಂದ್ರ ಕಛೇರಿ : ಮುಂಬೈ 

4) ಏರ್ ಇಂಡಿಯಾವನ್ನು ಜೆ.ಆರ್.ಡಿ ಟಾಟಾ ರವರು 1932 ರಲ್ಲಿ "ಟಾಟಾ ಏರ್ ಲೈನ್" ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ನಂತರ 1946 ಜು 29 ರಂದು ಟಾಟಾ ಏರ್ ಲೈನ್ಸ್ ನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿ "ಏರ್ ಇಂಡಿಯಾ" ಹೆಸರಿನಲ್ಲಿ ಮರುನಾಮಕರಣ ಮಾಡಲಾಯಿತು. ಇದರ ಪ್ರಮುಖ ಮಾರಹಗಳೆಂದರೆ :

     1) ಭಾರತ-ಬ್ರಿಟನ್-ಅಮೇರಿಕಾ 

     2) ಭಾರತ-ಜಪಾನ್ 

     3) ಭಾರತ-ಪೂರ್ವ ಆಫ್ರಿಕಾ 

     4) ಭಾರತ-ರಷ್ಯಾ 


                                  ಇಂಡಿಯನ್ ಏರ್ ಲೈನ್ ಅಧಿಕೃತವಾಗಿ ಏರ್ ಇಂಡಿಯಾಗೆ 2011 ಫೆಬ್ರವರಿ 27 ರಂದು ವಿಲೀನಗೊಂಡಿತು. 


ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ ( AAI- Airports Authority of India )


1) ಭಾರತದ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಉದ್ದೇಶದಿಂದ ನಾಗರೀಕ ವಿಮಾನಯಾನ ಖಾತೆಯಡಿಯಲ್ಲಿ ಭಾರತದ ವಿಮಾನ ನಿಲ್ದಾಣ ಅಭಿವೃದ್ದಿ ಪ್ರಾಧಿಕಾರವನ್ನು 1995 ಏಪ್ರಿಲ್ 1 ರಂದು ಸ್ಥಾಪಿಸಲಾಯಿತು. ಇದನ್ನು ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (NAA) ಮತ್ತು ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (IAAI) ಎಂಬ ಎರಡು ಸಂಸ್ಥೆಗಳನ್ನು ವಿಲೀನಗೊಳಿಸಿ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಸ್ಥಾಪಿಸಲಾಯಿತು. 


2) ಇದು ಸಂಪೂರ್ಣ ಸರ್ಕಾರಿ ಸಂಸ್ಥೆಯಾಗಿದ್ದು, ಇದರ ಕೇಂದ್ರ ಕಛೇರಿಯು ನವ ದೆಹಲಿಯಲ್ಲಿದೆ. ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು 12 ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು, 89 ಸ್ವದೇಶಿ ವಿಮಾನ ನಿಲ್ದಾಣಗಳನ್ನು ಮತ್ತು 26 ಗಡಿ ಭದ್ರತಾ ವಿಮಾನ ನಿಲ್ದಾಣಗಳನ್ನು ಸೇರಿದಂತೆ ಒಟ್ಟು 127 ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಭಾರತ ವಿಮಾನ ನಿಲ್ದಾಣ ಅಭಿವೃದ್ದಿ ಪ್ರಾಧಿಕಾರವು ವಿಮಾನ ನಿಲ್ದಾಣಗಳನ್ನು ನಾಲ್ಕು ದರ್ಜೆಗಳಲ್ಲಿ ವಿಂಗಡಿಸಿದೆ. 

   1) ಆಂತರಾಷ್ಟ್ರೀಯ ವಿಮಾನ ನಿಲ್ದಾಣಗಳು 

   2) ದೇಶ ಪ್ರಧಾನ ವಿಮಾನ ನಿಲ್ದಾಣಗಳು 

   3) ಮಧ್ಯೆಮ ದರ್ಜೆ ವಿಮಾನ ನಿಲ್ದಾಣಗಳು 

   4) ಕೆಳಹಂತದ ವಿಮಾನ ನಿಲ್ದಾಣಗಳು 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad