ಥಾರ್ ಮರುಭೂಮಿ
ಉತ್ತರ ಭಾರತದ ಬಹುತೇಕ ಭಾಗವು ಸಿಂಧೂ, ಗಂಗಾ ನದಿಯ ಬಯಲು ಫಲವತ್ತಾದ ಪ್ರದೇಶವಾದರೆ, ರಾಜಸ್ಥಾನದ ಪಶ್ಚಿಮದ ಬಹುಭಾಗ ಮರಳಿನಿಂದ ಕೊಡಿದ ಮರುಭೂಮಿಯಾಗಿದೆ. ಅಂತಹ ಮರುಭೂಮಿಯೇ "ಥಾರ್ ಮರುಭೂಮಿ"
* ಅರಾವಳಿ ಬೆಟ್ಟಗಳ ಪಶ್ಚಿಮ ಭಾಗದಲ್ಲಿರುವ ಈ ಪ್ರದೇಶವು ಅತೀ ಕಡಿಮೆ ಮಳೆ ಪಡೆಯುವುದರಿಂದಾಗಿ ಅಪಾರ ಪ್ರಮಾಣದ ಗಾಳಿ ಸಂಚಯನ ಕಾರ್ಯದಿಂದ ಈ ಪ್ರದೇಶವು ಮರುಭೂಮಿಯಾಗಿ ಮಾರ್ಪಟ್ಟಿದೆ.
* ಈ ಭೂಮಿಯು ಗಾಳಿಯ ಚಟುವಟಿಕೆ ಮತ್ತು ವಿಷಮ ವಾಯುಗುಣ ಪರಿಸ್ಥಿತಿಯಿಂದ ನಿರ್ಮಿತವಾಗಿದ್ದು, ಇದು ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಕಂಡು ಬರುತ್ತದೆ. ಈ ಮರುಭೂಮೀಯು ಭಾರತದಲ್ಲಿ ಶೇಕಡಾ 85ರಷ್ಟು ಹರಡಿದ್ದು, ಉಳಿದ ಭಾಗವು ಪಾಕಿಸ್ತಾನದಲ್ಲಿ ಹರಡಿದೆ.
* ಥಾರ್ ಮರುಭೂಮಿಯು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೂ ಕೊಡ ವಿಸ್ತರಣೆಯಾಗಿದ್ದು, ಪಾಕಿಸ್ತಾನದಲ್ಲಿ ಈ ಮರುಭೂಮಿಯನ್ನು "ಚೋಲಿಸ್ತಾನ್ ಮರುಭೂಮಿ" ಎಂದು ಕರೆಯುತ್ತಾರೆ.
* ಥಾರ್ ಮರುಭೂಮಿಯ ವಿಸ್ತೀರ್ಣಯವು 2 ಲಕ್ಷ ಚ.ಕಿ.ಮೀ ಆಗಿದೆ
* ಜಗತ್ತಿನ 9 ನೇ ಅತಿ ದೊಡ್ಡ ಶುಷ್ಕ ಮರುಭೂಮಿಯಾಗಿದೆ. ಶೀತ ಮರುಭೂಮಿಗಳನ್ನು ಪರಿಗಣಿಸಿದರೆ ಜಗತ್ತಿನ 17 ನೇ ಮರುಭೂಮಿಯಾಗಿದೆ.
ಭಾರತದಲ್ಲಿ ಥಾರ್ ಮರುಭೂಮಿ
ದೇಶದ 4 ರಾಜ್ಯಗಳಾದ ರಾಜಸ್ತಾನ, ಪಂಜಾಬ್, ಹರಿಯಾಣ ಮತ್ತು ಗುಜರಾತ್ ಗಳಲ್ಲಿ ಹರಡಿದೆ. ಥಾರ್ ಮರುಭೂಮಿಯು ಭಾರತದ ರಾಜಸ್ತಾನದಲ್ಲಿ ಶೇ 60 ರಷ್ಟು ಹರಡಿದ್ದು, ಉಳಿದಂತೆ ಹರಿಯಾಣ ಮತ್ತು ಪಂಜಾಬ್ ನ ದಕ್ಷಿಣ ಭಾಗದಲ್ಲಿ ಮತ್ತು ಗುಜರಾತ್ ನ ಉತ್ತರ ಭಾಗದಲ್ಲಿ ಹರದಿಕೊಂಡಿದೆ.
ಭಾರತದ ಥಾರ್ ಮರುಭೂಮಿಯ ವಾಯುಗುಣ
ದೇಶದ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಸ್ಥಳ
ರಾಜಸ್ಥಾನದ ಗಂಗಾನಗಾರವು 52 ಸೆಲ್ಸಿಯಸ್ ನ್ನು ಹೊಂದುವ ಮೂಲಕ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಭಾರತದ ಸ್ಥಳವೆಂದು ಪರಿಗಣಿಸಲಾಗಿದೆ, ಉತ್ತರ ರಾಜಸ್ಥಾನದಲ್ಲಿರುವ ರೊಹ್ಲಿ ವಾರ್ಷಿಕವಾಗಿ 8.3 ಸೆಂ.ಮೀ ಮಳೆ ಪಡೆಯುವ ಸ್ಥಳವಾಗಿದ್ದು, ಈ ಮೂಲಕ ದೇಶದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ ಎನಿಸಿದೆ.
ಥಾರ್ ಮರುಭೂಮಿಯಲ್ಲಿ ಹವಾಮಾನ ಪರಿಸ್ಥಿತಿಯು ಅತ್ಯಂತ ವಿಷಮತೆಯಿಂದ ಕೊಡಿದೆ. ಬೇಸಿಗೆಯಲ್ಲಿ ಉಷ್ಣತೆಯು 50 ಸೆಲ್ಸಿಯಸ್ ಗಿಂತ ಹೆಚ್ಚಾಗಿದ್ದಾರೆ, ಚಳಿಗಾಲದಲ್ಲಿ 10 ಸೆಲ್ಸಿಯಸ್ ಗಿಂತ ಕಡಿಮೆಯಾಗಿರುತ್ತದೆ.
ಸಾಂಬಾರ್ ಸರೋವರ :-
ಈ ಸರೋವರವು ರಾಜಸ್ಥಾನದಲ್ಲಿದ್ದು, ಭಾರತದ ಅತಿ ಹೆಚ್ಚು ಪ್ರಮಾಣದ ಉಪ್ಪಿನ ಅಂಶ ಹೊಂದಿರುವ ಸರೋವರವಾಗಿದೆ. ಇದು ಬೋಗುಣಿಯಾಕಾರದಲ್ಲಿದೆ.
ಮರುಭೂಮಿಯು ಹಡಗು - ಒಂಟೆ
ಒಂಟೆಯನ್ನು "ಮರುಭೂಮಿಯ ಹಡಗು" ಎಂದು ಕರೆಯುತ್ತಾರೆ. ಒಂಟೆಯ ಡುಬ್ಬದಲ್ಲಿ ಕೊಬ್ಬಿನ ಅಂಶವು ಶೇಖರಣೆಯಾಗಿರುತ್ತದೆ. ಕೊಬ್ಬು ಕರಗಿ ಆಹಾರ ಹಾಗೂ ನೀರನ್ನು ಒದಗಿಸುತ್ತದೆ.
ಧನ್ಯವಾದಗಳು