ಮೋಡಗಳು (Clouds) ಮತ್ತು ಮಳೆ
ವಾಯುಮಂಡಲದ ಉಷ್ಣಾಂಶವು ಕಡಿಮೆಯಾದಾಗ, ಅದರಲ್ಲಿನ ಜಲಾಂಶವು ಘನೀಕರಣಗೊಂಡು ನಿರ್ಮಾಣವಾಗುವ ಸಣ್ಣ ಸಣ್ಣ ನೀರಿನ ಹನಿಗಳು ಅಥವಾ ಹಿಮಕಣಗಳ ರಾಶಿಯನ್ನು "ಮೋಡ" ಎನ್ನುವರು.
ಮೋಡಗಳ ವಿಧಗಳು
ಮೊದಗಳನ್ನು ಅವುಗಳ ಆಕಾರ, ಎತ್ತರ ಮತ್ತು ಇತರ ಲಕ್ಷಣಗಳ ಆಧಾರದಿಂದ 3 ವಿಧಗಳಾಗಿ ವಿಂಗಡಿಸಬಹುದು.
1) ಪದರು ಮೋಡಗಳು (Stratus clouds)
2) ರಾಶಿ ಮೋಡಗಳು (Cumulus Clouds)
3) ಹಿಮಕಣ ಮೊದಗಳು (Cirrus Clouds)
1) ಪದರು ಮೋಡಗಳು (Stratus Clouds)
ಈ ಮೋಡಗಳು ವಾಯುಮಂಡಲದಲ್ಲಿ ಅತ್ಯಂತ ಕೆಲಮಟ್ಟದಲ್ಲಿರುತ್ತದೆ. ಭೂಮಿಯ ಮೇಲ್ಮೈನಿಂದ 2 ಕಿ.ಮೀ ರಷ್ಟು ಎತ್ತರದವರೆಗೆ ಈ ಮೋಡಗಳು ಕಂಡು ಬರುತ್ತವೆ. ಇವು ತೆಳುವಾದ ಹಾಳೆ ಅಥವಾ ವಿಸ್ತಾರವಾದ ಪದರುಗಳಂತೆ ಕಾಣುತ್ತೆವೆ. ಪದರು ಮೋಡಗಳು ಉತ್ತಮ ಹವಮಾನಕ್ಕೆ ಸಹಕಾರಿಯಾಗಿದ್ದು. ಅಲ್ಪ ಮಳೆಯನ್ನು ಸುರಿಸುತ್ತವೆ.
ಪದರು ಮೋಡಗಳ ಮೇಲ್ಭಾಗ ಮತ್ತು ರಾಶಿ ಮೋಡಗಳ ಕೆಳಭಾಗದಲ್ಲಿ ಅತಿ ಹೆಚ್ಚು ಮಳೆ ತರುವ ರಾಶಿವೃಷ್ಟಿ ಮೋಡಗಳು ಕಂಡು ಬರುತ್ತದೆ. ಇವುಗಳನ್ನು ನಿಬೋಸ್ ಕ್ಲೌಡ್ಸ್ ಎನ್ನುವರು.
2) ರಾಶಿ ಮೋಡಗಳು (Cumulus Clouds)
ರಾಶಿ ಮೋಡಗಳು ಊರ್ಧ್ವಮುಖವಾಗಿ ಬೆಳೆದಿದ್ದು, ಇದರ ಮೇಲ್ಮೈ ಗೋಪುರ ಬಾಗಿರುವುದರಿಂದ ಹೋ ಕೋಸಿನ ರಚನೆಯನ್ನು ಹೋಲುತ್ತದೆ. ಇವುಗಳು ಮಳೆತರುವ ಮೊದಗಳಾಗಿವೆ. ಈ ಮೋಡಗಳು ಉಣ್ಣೆಯ ಗುಡ್ಡೆಯಂತೆ ಕಂಡು ಬರುವುದರಿಂದ ಇವುಗಳನ್ನು "ಉಣ್ಣೆಯ ಗುಡ್ಡೆ" ಎಂತಲೂ, ಇವುಗಳು ಬಳಿಯ ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಕಂಡು ಬರುತ್ತವೆ. ಇವುಗಳು ಜಲಾಂಶದಿಂದ ಸಂಪೊರಿತಗೊಂಡಾಗ ಮಳೆಯನ್ನು ನೀಡುತ್ತದೆ.
![]() |
ಮೋಡ ಮತ್ತು ಮಳೆ |
3) ಹಿಮಕರಣ ಮೋಡಗಳು (Cirrus Clouds)
ಇವುಗಳು ವಾಯುಮಂಡಲದಲ್ಲಿ ಅತಿ ಹೆಚ್ಚು ಎತ್ತರದಲ್ಲಿ ಅಂದರೆ 6 ಕಿ. ಮೀ ಗಳಿಗಿಂತ ಎತ್ತರದಲ್ಲಿರುತ್ತವೆ. ಈ ಮೋಡಗಳು "ಗುಂಗುರುಕೊಡಲಿನ" ಆಕಾರ ಹೊಂದಿದ್ದು, ರೆಕ್ಕೆ ಅಥವಾ ನಾರನ್ನು ಹೊಂದಿರುವಂತೆ ಕಾಣುತ್ತದೆ. ಇದು ಹಿತಕರವಾದ ಹವಾಮಾನ ಸ್ಥಿತಿಯನ್ನು ಸೂಚಿಸುತ್ತದೆ ಹಾಗೂ ಈ ಮೊದಗಳಲ್ಲಿ ಸೂರ್ಯನು ಪ್ರಕಾಶಮಾನವಾಗಿ ಬೆಳುಗುತ್ತಾನೆ. ಈ ಮೋಡಗಳ ಜನಪ್ರಿಯ ಹೆಸರು "ಕುದುರೆ ಬಾಲದ ಮೋಡಗಳು" ಎಂತಲೂ ಕರೆಯುತ್ತಾರೆ.
ಮೋಡಬಿತ್ತನೆ ( Cloud Seeding)
ಕೃತಕವಾಗಿ ಮೋಡವನ್ನು ಬಿತ್ತನೆ ಮಾಡಿ ಮಳೆಯನ್ನು ಸುರಿಸಲಾಗುತ್ತದೆ. ವಿಮಾನಗಳ ಮೂಲಕ "ಸಿಲ್ವರ್ ಆಯೋಡೈಡ್, ಒಣ ಮಂಜುಗಡ್ಡೆ, ಅಮೋನಿಯಂ ಸಲ್ಫೇಟ್ ಗಳನ್ನು ಸಿಂಪಡಿಸುವ ಮೂಲಕ ಅನಿಲ ರೋಪದಲ್ಲಿರುವ ನೀರನ್ನು ಸಾಂದ್ರೀಕರಣಗೊಳಿಸಿ ಮಳೆ ಬೀಳುವಂತೆ ಮಾಡಲಾಗುವುದು. ಈ ವಿಧಾನವನ್ನೇ "ಮೋಡಬಿತ್ತನೆ" ಎಂದು ಕರೆಯುತ್ತಾರೆ. ಘನ ಇಂಗಾಲದ ಡೈ ಆಕ್ಸೈಡ್ ( Dry Ice), ಸಿಲ್ವರ್ ಆಯೋಡೈಡ್, ಉಪ್ಪು ಇವುಗಳು ಜಲಾಕರ್ಷಕ ಬೀಜಕಣಗಳಂತೆ ವರ್ತಿಸುತ್ತದೆ. ವಿನ್ಸೆಂಟ್ ಸ್ಕಾಯಿಫರ್ ಎಂಬ ಅಮೆರಿಕನ್ ರಸಾಯನಶಾಸ್ತ್ರಜ್ಞನು ಮೋಡಬಿತ್ತನೆ ವಿಧಾನವನ್ನು 1946 ರಲ್ಲಿ ಅಭಿವೃದ್ದಿಪಡಿಸಿದನು. ಕರ್ನಾಟಕ ರಾಜ್ಯದಲ್ಲಿ ಎಸ್. ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದು ಅವಧಿಯಲ್ಲಿ "ಪ್ರಾಜೆಕ್ಟ್ ವರುಣ" ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ "ವರ್ಷಧಾರೆ" ಎಂಬ ಮೋಡ ಬಿತ್ತನೆ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.
ವೃಷ್ಟಿ (Rain)
ಮೋಡಗಳಿಂದ ದ್ರವ ಅಥವಾ ಘನ ರೋಪದಲ್ಲಿ ಭೂಮಿಯ ಮೇಲೆ ಬೀಳುವ ನೀರಿಗೆ "ವೃಷ್ಟಿ" ಎಂದು ಕರೆಯುತ್ತಾರೆ. ಮೋಡಗಳಲ್ಲಿ ನೀರಿನ ಹನಿಗಳು ಪರಸ್ಪರ ಸರ್ಪಡೆಯಾಗಿ ದೊಡ್ಡ ಅನಿಲಗಳಾಗಿ ಪರಿವರ್ತನೆಯಾಗಿ ಭಾರವಾದಾಗ ಭೂಮಿಯ ಮೇಲೆ ಬೀಳುತ್ತದೆ. ಇದನ್ನೇ ವೃಷ್ಟಿ ಎನ್ನುವರು. ಮೋಡಗಳಿಂದ ಭೂಮಿಗೆ ಬೀಳುವ ಹನಿಗಳ ಆಕಾರ, ಗಾತ್ರ, ಸ್ಥಿತಿಗಳನ್ನು ಆಧರಿಸಿ ವೃಷ್ಟಿಯನ್ನು ಈ ಕೆಲಕಂಡಂತೆ ವಿಂಗಡಿಸಲಾಗಿದೆ.
ವೃಷ್ಟಿಯ ರೋಪಗಳು
ಹಿಮ ಮಳೆ :- ಹಿಮದಿಂದ ಕೊಡಿದ ಮಳೆ
ಆಲಿಕಲ್ಲು ಮಳೆ :- ದೊಡ್ಡ ಹಿಮಗಳ ತುಂಡುಗಳಿಂದ ಕೊಡಿದಂತಹ ಮಳೆಯೇ ಆಲಿಕಲ್ಲು ಮಳೆ.
ತುಂತುರು ಮಳೆ :- ಸೂಕ್ಷ್ಮ ನೀರಿನ ಹನಿಗಳಿಂದ ಕೊಡಿರುವ ಮಳೆಯನ್ನು ತುಂತುರು ಮಳೆ ಎಂದು ಕರೆಯುತ್ತಾರೆ.
ಧನ್ಯವಾದಗಳು