ಹತ್ತಿ ಬಟ್ಟೆ ಕೈಗಾರಿಕೆಗಳು
ಬಿಳಿ ಚಿನ್ನ ಎಂದು ಕರೆಯಲ್ಪಡುವ ಹತ್ತಿಯಿಂದ ಹತ್ತಿ ಬಟ್ಟೆ ತಯಾರಿಕೆ ಪ್ರಾಚೀನ ಕಾಲದಿಂದ ನಡೆದು ಬಂದಿದೆ. ಈ ಉದ್ಯಮವನ್ನು "ಜವಳಿ ಉದ್ಯಮ","ಮಾರುಕ್ಕಟ್ಟೆ ಆಧಾರಿತ ಕೈಗಾರಿಕೆ" ಎಂದು ಕರೆಯುತ್ತಾರೆ. ಭಾರತದಲ್ಲಿ ಹತ್ತಿ ಬಟ್ಟೆ ಉತ್ಪಾದನೆಯು ಪ್ರಾಚೀನಾದಲ್ಲಿ ಗೃಹ ಕೈಗಾರಿಕೆಯಾಗಿತ್ತು. ಹತ್ತಿ ಬಟ್ಟೆಯನ್ನು ಕೈಮಗ್ಗದಿಂದ ಉತ್ಪಾದಿಸುತಿದ್ದರು. ಅವುಗಳಲ್ಲಿ ಢಾಕಾದ ಮಸ್ಲೀನ್, ಮಚಲೀಪಟ್ಟಣದ ಚೆನ್ಪಜಸ್, ಕಲ್ಲಿಕೋಟೆಯ ಕ್ಯಾಲಿಕೋ, ಬರೊಚ್ ಮತ್ತು ಬರೋಡಾದ ಬಫ್ಟಾನ್ ಬಟ್ಟೆಗಳು ಪ್ರಸಿದ್ದವಾಗಿದ್ದುವು, ಇವುಗಳಿಗೆ ಬಾರಿ ಬೇಡಿಕೆ ಇತ್ತು.
ಹತ್ತಿ ಕೈಗಾರಿಕೆ ಆರಂಭದ ಹಿನ್ನಲೆ
1) ಕೈಮಗ್ಗದಿಂದ ಸಿದ್ದಪಡಿಸಿದ ಬಟ್ಟೆಗಳು ನಯವಾಗಿದುದ್ದರಿಂದ ಭಾರತದ ಹತ್ತಿ ಬಟ್ಟೆಗಳಿಗೆ ಜಗತ್ತಿನಾದ್ಯಂತ ಉತ್ತಮ ಬೇಡಿಕೆ ಪ್ರಾರಂಭವಾಯಿತು.
2) ಕೈಗಾರಿಕಾ ಕ್ರಾಂತಿಯ ನಂತರ ಬ್ರಿಟನ್ನಿನಲ್ಲಿ ಹತ್ತಿ ಬೀಜವನ್ನು ಬೇರ್ಪಡಿಸುವ, ನೊಲುವು, ನೇಯುವ ಯಂತ್ರಗಳ ಸಂಶೋಧನೆಗಳಿಂದ ಹತ್ತಿ ಬಟ್ಟೆ ಕೈಗಾರಿಕೆಗಳ ಸ್ಥಾಪನೆಯಾಯಿತು. ಬ್ರಿಟನ್ನಿನಲ್ಲಿ ಕಚ್ಚಾ ಹತ್ತಿಯ ಕೊರತೆಯಿಂದ ಭಾರತದಿಂದ ಕಚ್ಚಾ ಹತ್ತಿಯನ್ನು ಬ್ರಿಟನ್ ಕೈಗಾರಿಕೆಗಳು ಆಮದು ಮಾಡಿಕೊಂಡು ಹತ್ತಿ ಬಟ್ಟೆಯನ್ನು ತಯಾರಿಸುತ್ತಿದ್ದವು. ನಂತರದ ದಿನಗಳಲ್ಲಿ ಭಾರತದಲ್ಲೇ ಹತ್ತಿ ಬಟ್ಟೆ ಕೈಗಾರಿಕೆಗಳು ಆರಂಭವಾದವು.
ಭಾರತದಲ್ಲಿ ಹತ್ತಿ ಕೈಗಾರಿಕೆ ಸ್ಥಾಪನೆ
1) 1817 ರಲ್ಲಿ ಭಾರತದ ಮೊಟ್ಟ ಮೊದಲ ಹತ್ತಿ ಬಟ್ಟೆ ಕೈಗಾರಿಕೆಯು ಪಶ್ಚಿಮ ಬಂಗಾಳದ ಹೌರಾದ ಬಳಿ ಆರಂಭವಾಯಿತು.
2) ಭಾರತದಲ್ಲಿ 2 ನೇ ಹತ್ತಿ ಬಟ್ಟೆ ಕೈಗಾರಿಕೆಯು 1830 ರಲ್ಲಿ ಪಾಂಡಿಚೇರಿಯಲ್ಲಿ ಆರಂಭಗೊಂಡಿತು. ಆದರೆ ಈ ಎರಡೂ ಪ್ರದೇಶದಲ್ಲಿ ಆರಂಭವಾದ ಕೈಗಾರಿಕೆಗಳು ಯಶಸ್ವಿಯಾಗದ ಕಾರಣ ಮುಂಬೈನಲ್ಲಿ ಆಧುನಿಕ ವಾದಂತಹ, ಯಶಸ್ವಿಯಾದಂತಹ ಹತ್ತಿ ಕೈಗಾರಿಕೆಯನ್ನು ಸ್ಥಾಪಿಸಲಾಯಿತು.
ಭಾರತದ ಮೊದಲ ಯಶಸ್ವಿ ಹತ್ತಿ ಬಟ್ಟೆ ಕೈಗಾರಿಕೆ
*) 1817 ರಲ್ಲಿ ಹೌರಾದಲ್ಲಿ ಮತ್ತು 1830 ರಲ್ಲಿ ಪಾಂಡಿಚೇರಿಯಲ್ಲಿ ಆರಂಭಗೊಂಡ ಹತ್ತಿ ಬಟ್ಟೆ ಕೈಗಾರಿಕೆಗಳು ಯಶಸ್ವಿಯಾಗದ ಕಾರಣ 1854 ರಲ್ಲಿ ಮುಂಬೈನಲ್ಲಿ ಆಧುನಿಕವಾಗಿ, ಭಾರತದ ಪ್ರಥಮ ಯಶಸ್ವಿ ಹತ್ತಿ ಕೈಗಾರಿಕೆ ( ಹತ್ತಿ ಗಿರಣಿ )ಯು ಆರಂಭವಾಯಿತು. ದೇಶದಲ್ಲಿ ಮೊದಲ ಕೈಗಾರಿಕೆ 1854 ರಲ್ಲಿ ಮುಂಬೈ ಮತ್ತು ಬರೋಚಗಳಲ್ಲಿ ಸ್ಥಾಪಿಸಲ್ಪಟ್ಟಿತು.
*) 1858 ರಲ್ಲಿ ಅಹಮದಾಬಾದ್, ಕಾನ್ಪುರ, ನಾಗ್ಪುರ, ಸೊಲ್ಲಾಪುರ ಮತ್ತು ಸೊರತ್ ಕಡೆಗಳಲ್ಲಿ ಹತ್ತಿ ಬಟ್ಟೆ ಗಿರಣಿಗಳು ಪ್ರಾರಂಭವಾದವು.
*) 1879 ರಿಂದ 1880 ರ ಅವಧಿಯಲ್ಲಿ ಭಾರತದಲ್ಲಿ ಹತ್ತಿ ಕೈಗಾರಿಕೆಗಳ ಸಂಖ್ಯೆ 58 ಕ್ಕೆ ಏರಿತು. ಬ್ರಿಟಿಷ್ ರ ಕಾಲದಲ್ಲಿ ಹತ್ತಿ ಕೈಗಾರಿಕೆ ಸ್ಥಾಪನೆ ಮಂದಗತಿಯಲ್ಲಿ ಸಾಗಿದರೂ, ಸ್ವಾತಂತ್ರ್ಯ ನಂತರ ತೀವ್ರಗತಿಯಲ್ಲಿ ಸ್ಥಾಪನೆಯಾದವು.
1951 ರಲ್ಲಿ ಭಾರತದಲ್ಲಿ 383 ಕೈಗಾರಿಕೆಗಳಿದ್ದವು.
* 2 ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರೆಗಳಿಗೆ ಅಧ್ಯೆತೆ ನೀಡಿದ ಕಾರಣ 1955-1956 ರಲ್ಲಿ ಭಾರತದಲ್ಲಿ ಹತ್ತಿ ಕೈಗಾರಿಕೆ ಸಂಖ್ಯೆಯು 412 ಇದ್ದದ್ದು ನಂತರ 1961 ರಲ್ಲಿ 478 ಕ್ಕೆ ಏರಿಕೆಯಾಯಿತು. ಪ್ರಸ್ತುತವಾಗಿ ಭಾರತದಲ್ಲಿ ಒಟ್ಟಾರೆ ಸುಮಾರು 1789 ಹತ್ತಿ ಬಟ್ಟೆ ಕೈಗಾರಿಕೆಗಳಿವೆ. ಹತ್ತಿ ಕೈಗಾರಿಕೆಯು ಭಾರತದ ದೇಶದ ಕೃಷಿ ಆಧಾರಿತ ಕೈಗಾರಿಕೆಯಾಗಿದೆ. ಭಾರತದ ರಾಜ್ಯಗಳಲ್ಲಿ ಹತ್ತಿ ಬಟ್ಟೆ ಉತ್ಪಾದನೆ ಭಾರತವು ಹತ್ತಿ ಬಟ್ಟೆ ಉತ್ಪಾದನೆಯಲ್ಲಿ ಚೀನಾದ ನಂತರ 2 ನೇ ಸ್ಥಾನ ಹೊಂದಿದೆ.
ಭಾರತದಲ್ಲಿ ಹತ್ತಿ ಬಟ್ಟೆ ಉತ್ಪಾದನೆ
*) ಭಾರತದಲ್ಲಿ ಹತ್ತಿ ಬಟ್ಟೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ 1 ನೇ ಸ್ಥಾನ ಮಹಾರಾಷ್ಟ್ರದಲ್ಲಿ ಒಟ್ಟು 203 ಹತ್ತಿ ಬಟ್ಟೆ ಕೈಗಾರಿಕೆಗಳಿವೆ, ಇದು ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬಟ್ಟೆ ಉತ್ಪಾದಿಸುವ 1 ನೇ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಮುಂಬೈ, ಪೂನಾ, ನಾಗಪುರ, ಸೊಲ್ಲಾಪುರ, ಸಾಂಗ್ಲಿ, ಜಲಾಂಗಾವ್ ಗಳು ಪ್ರಮುಖ ಕೇಂದ್ರಗಳು.
*) ಭಾರತದಲ್ಲಿ ಗುಜರಾತ್, ಕರ್ನಾಟಕದಲ್ಲಿ ಹಾವೇರಿ ಜಿಲ್ಲೆ ಅತಿ ಹೆಚ್ಚು ಹತ್ತಿಯನ್ನು ಉತ್ಪಾದಿಸುತ್ತದೆ.
ಧನ್ಯವಾದಗಳು