Type Here to Get Search Results !

ಹವಾಮಾನ ಮತ್ತು ವಾಯುಗುಣಕ್ಕೆ ಸಂಬಂಧಿಸಿದ ಪ್ರಮುಖ ಪದಗಳು & ಸಾಧನಗಳು

 ಹವಾಮಾನ ಮತ್ತು ವಾಯುಗುಣಕ್ಕೆ ಸಂಬಂಧಿಸಿದ ಪ್ರಮುಖ ಪದಗಳು ಮತ್ತು ಸಾಧನಗಳು 



1) ಮೆಟಿರೋಲಜಿ ( Meteorology )

               ವಾಯುಮಂಡಲದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದನ್ನೇ "ಮೆಟಿರೋಲಜಿ" ಎಂದು ಕರೆಯುತ್ತಾರೆ. ಮೆಟಿರೋಲಜಿ ಎಂಬುದು ಗ್ರೀಕ್ ಭಾಷೆಯ ಪದವಾಗಿದೆ. 


2) ಬಿಯೋಪೋರ್ಟ್ ಸ್ಕೆಲ್ ( Beaufort scale )

                ಈ ಸ್ಕೆಲ್ ನ್ನು 1805 ರಲ್ಲಿ ಫ್ರಾನ್ಸಿಸ್ ಬಿಯೋಪೋರ್ಟ್ ಎಂಬುವರು ಅಭಿವೃದ್ದಿಪಡಿಸಿದರು. ಇದನ್ನು ಡಾರ್ವಿನ್ ರವರು 1831 ರಲ್ಲಿ ಸಂಶೋಧನೆಗಾಗಿ ಸಮುದ್ರಯಾನಕ್ಕೆ ಬಳಸಿದ ಎಚ್.ಎಂ.ಎಸ್ ಬೀಗಲ್ ಎಂಬ ಹಡಗಿನಲ್ಲಿ ಈ ಸ್ಕೆಲ್ ನ್ನು ಮೊದಲ ಬಾರಿಗೆ ಬಳಸಲಾಗಿತು. ಈ ಮಾಪಕವು ಗಾಳಿಯ ವೇಗಕ್ಕೆ ಸಂಬಂಧಿಸಿದಂತೆ ಸಮುದ್ರ ಮತ್ತು ಭೂಮಿಯಲ್ಲಿನ ಸ್ಥಿತಿಗತಿಗಳನ್ನು ತಿಳಿಸುವುದಾಗಿದೆ. 


3) ಹೈಗ್ರೋಮೀಟರ್ ( Hygrometer )

            ವಾತಾವರಣದ ಗಾಳಿಯಲ್ಲಿರುವ ತೇವಾಂಶ/ ತೇವಾಂಶದ ಪ್ರಮಾಣವನ್ನು ಅಳೆಯಲು ಬಳಸುವ ಸಾಧನವನ್ನೇ "ಹೈಗ್ರೋಮೀಟರ್" ಎಂದು ಕರೆಯುತ್ತಾರೆ. ಹೈಗ್ರೋಮೀಟರ್ ನ್ನು ಜಾನ್ ಫೆಡರಿಕ ಡ್ಯಾನಿಯಲ್ ಎಂಬ ಆಂಗ್ಲ ಭೌತಶಾಸ್ತ್ರಜ್ಞ ಕಂಡು ಹಿಡಿದನು. 


4) ಅನಿಮೋಮೀಟರ್ ( Anemometer ) 

                   ಅನಿಮೋಮೀಟರ್ ಗಾಳಿಯ ವೇಗವನ್ನು ಅಳೆಯುವ ಸಾಧನವಾಗಿದೆ. ಲಿಯಾನ್ ಬ್ಯಾಟಿಸ್ಟಾ ಅಲ್ ಬರ್ಟಿರವರು ಮೊಟ್ಟ ಮೊದಲ ಬಾರಿಗೆ ಅನಿಮೋಮೀಟರ್ ಬಗ್ಗೆ ವಿವರಣೆ ನೀಡಿದರು. 


5) ಕೊಯಲಿಸೆನ್ಸ್ ( Coalescence ) 

                 ಎರಡಕ್ಕಿಂತ ಹೆಚ್ಚು ಹನಿಗಳು ಸೇರ್ಪಡೆಯಾಗುವ ಕ್ರಿಯೆಗೆ ಕೊಯಲಿಸೆನ್ಸ್ ಎಂದು ಕರೆಯುತ್ತಾರೆ. ಹವಾಮಾನದಲ್ಲಿ ಇಂತಹ ಹನಿಗಳು ಸೇರಿ ಮೋಡಗಳಾಗುತ್ತದೆ. 


6) ಸಂತೃಪ್ತ ಬಿಂದು 

         ಹೆಚ್ಚಿನ ನಿರಾವಿಯನ್ನು ಹಿಡಿದಿಟ್ಟು ಕೊಳ್ಳುವ ಅಸಮರ್ಥವಾಗಿರುವ ವಾಯುವಿನ ಸ್ಥಿತಿ. 


7) ಬಾರೋಮೀಟರ್ ( barometer )

                       ಬಾರೋಮೀಟರ್ ವಾತಾವರಣದ ಒತ್ತಡವನ್ನು ಅಲೆಯುವಂತಹ ಸಾಧನವಾಗಿದೆ. ಇದನ್ನು ಇಟಲಿಯ ಭೌತಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞರಾದ ಎವಾಂಗಲಿಸ್ಟಾ ಟಾರೆಸೆಲ್ಲಿ ಅವರು ಸಂಶೋಧಿಸಿದರು. 


8) ಬಾರೋಗ್ರಾಫ್ ( Barograph )

                    ವಾತಾವರಣದ ಗಾಳಿಯ ಒತ್ತಡವನ್ನು ಆಲೇಖದ ಕಾಗದದಲ್ಲಿ ದಾಖಲಿಸುವುದನ್ನೇ ಬಾರೋಗ್ರಾಫ್ ಎಂದು ಕರೆಯುತ್ತಾರೆ. ನಿಗದಿತ ಅವಧಿಯಲ್ಲಿ ವಾತಾವರಣದಲ್ಲಿನ ಒತ್ತಡದ ವ್ಯತ್ಯಾಸವನ್ನು ದಾಖಲಿಸಲಾಗಿರುವ ದಾಖಲೆಯನ್ನು "ಬಾರೋ ಗ್ರಾಫ್" ಎಂದು ಕರೆಯುತ್ತಾರೆ. 


9) ಟೋಫೋಗ್ರಾಫ್ 

                 ಭೂಮಿಯ ಮೇಲ್ಮೈ ರಚನೆ ಮತ್ತು ಅದರ ಲಕ್ಷಣಗಳನ್ನು ಅಧ್ಯಯನ ಮಾಡುವುದಾಗಿದೆ. ಟೋಫೋಗ್ರಾಫಿಯು ವಿವಿಧ ಗ್ರಹ, ಉಪಗ್ರಹ ಮತ್ತು ಕ್ಷುದ್ರಗ್ರಹಗಳ ಲಕ್ಷಣವನ್ನು ಕೊಡ ಅಧ್ಯಯನ ಮಾಡುವುದಾಗಿದೆ. 

ಹವಾಮಾನ ಮತ್ತು ವಾಯುಗುಣಕ್ಕೆ ಸಂಬಂಧಿಸಿದ ಪ್ರಮುಖ ಪದಗಳು ಮತ್ತು ಸಾಧನಗಳು
ಹವಾಮಾನ ಮತ್ತು ವಾಯುಗುಣಕ್ಕೆ ಸಂಬಂಧಿಸಿದ


10) ಸಾಪೇಕ್ಷ ಆರ್ದ್ರತೆ ( Relative Humidity) 

                   ನಿರ್ದಿಷ್ಟ ಉಷ್ಣಾಂಶದಲ್ಲಿ ವಾಯುವಿನಲ್ಲಿರುವ ಸಂಪೂರ್ಣ ನೀರಾವಿಯ ಪ್ರಮಾಣ ಮತ್ತು ವಾಯುವು ಹಿಡಿದಿಟ್ಟುಕೊಳ್ಳಬಲ್ಲ ಗರಿಷ್ಟ ನೀರಾವಿಯ ಪ್ರಮಾಣವೇ ಸಾಪೇಕ್ಷ ಆರ್ದ್ರತೆಯಾಗಿದೆ. ವಾಯುವಿನ ಸಾಪೇಕ್ಷ ಸಾಂದ್ರತೆಯು ಶೇಕಡಾ 100 ರಷ್ಟಿದ್ದರೆ ಅದು ಸಂತೃಪ್ತವಾಗಿದೆ ಎಂದು ಹೇಳಲಾಗುತ್ತದೆ. 

* ಸಂತೃಪ್ತ ವಾಯು 

               ಒಂದು ನಿರ್ದಿಷ್ಟ ಉಷ್ಣಾಂಶದಲ್ಲಿ ಗರಿಷ್ಟ ಪ್ರಮಾಣದಲ್ಲಿ ನೀರಾವಿಯನ್ನು ಹಿಡಿದಿಟ್ಟುಕೊಂಡಿರುವ ವಾಯು. 

                ಪೂರ್ತಿ ಒಣ ವಾಯುವಿನಲ್ಲಿ ವಾಯುವಿನ ಸಾಪೇಕ್ಷ ಆರ್ದ್ರತೆಯು ಶೂನ್ಯವಾಗಿರುತ್ತದೆ. 

11) ಮಳೆಯ ಮಾಪಕ ( ವೃಷ್ಟಿ ಮಾಪಕ ) 

                ಮಳೆಯ ನೀರನ್ನು ಅಳೆಯಲು ಉಪಯೋಗಿಸುವ ಉಪಕರಣಕ್ಕೆ ಮಳೆಯ ಮಾಪಕ ಎಂದು ಕರೆಯುತ್ತಾರೆ. ಇದು ಸಿಲಿಂಡರ್ ಆಕಾರದಲ್ಲಿರುತ್ತದೆ. ಅದನ್ನು ಯುಡೋಮೀಟರ್, ಅಮ್ರೋಮೀಟರ್ ಎಂದು ಕೊಡ ಕರೆಯುತ್ತಾರೆ. 


12) ತೇವಬುರುಡೆ ಮಾಪಕ 

              ವಾಯುವಿನ ಉಷ್ಣಾಂಶವನ್ನು ಅಳೆಯುವ ಉಷ್ಣಮಾಪಕ. ಒಣಬುರುಡೆ ಮತ್ತು ತೇವ ಬುರುಡೆ ಉಷ್ಣಮಾಪಕಗಳ ಸಹಾಯದಿಂದ ಸಾಪೇಕ್ಷ ಆರ್ದ್ರತೆಯನ್ನು ಪಡೆಯಯಾಗುತ್ತದೆ. 


13) ಒಣಸ್ಥಿರೋಷ್ಟಿ ಇಳಿಕೆ ದರ 

                 ಅಸಂತೃಪ್ತ ವಾಯುವಿನಉಷ್ಣಾಂಶವು ಎತ್ತರದೊಂದಿಗೆ ಇಳಿಯುವ ದರ. ಇದು ಪ್ರತಿ 100 ಮೀ ಎತ್ತರಕ್ಕೆ ಹೋದಂತೆ 1ಡಿಗ್ರೀ ಸೆಲ್ಸಿಯಸ್ ಉಷ್ಣಾಂಶ ಇಳಿಯುತ್ತದೆ. 


14) ಉಷ್ಣಾಂಶವು ಸಾಮಾನ್ಯ ಇಳಿಕೆಯ ಪ್ರಮಾಣ 

              (Lapse of Temperature) ವಾಯುಮಂಡಲದಲ್ಲಿ ಮೇಲಕ್ಕೆ ಹೋದಂತೆ ಉಷ್ಣಾಂಶವೂ ಇಳಿಕೆಯಾಗುತ್ತಾ ಹೋಗುತ್ತದೆ. ಇಂತಹ ಇಳಿಯುವಿಕೆ ದರವನ್ನು ಲ್ಯಾಪ್ಸ್ ಆಫ್ ಟೆಂಪರೇಚರ್ ಅಥವಾ ಉಷ್ಣಾಂಶದ ಇಳಿಯುವಿಕೆ ಎಂದು ಕರೆಯುತ್ತಾರೆ. 165 ಮೀಟರ್ ಗೆ 1 ಡಿಗ್ರೀ ಸೆಲ್ಸಿಯಸ್ ಉಷ್ಣಾಂಶ / 1 ಕಿ. ಮೀ ಗೆ 6.4 ಸೆಂ ಉಷ್ಣಾಂಶ ಕಡಿಮೆಯಾಗುತ್ತಾ ಸಾಗುತ್ತದೆ. 



ಈವುಗಳು ಹವಾಮಾನ ಮತ್ತು ವಾಯುಗುಣಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು 
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad