ವಿವಿಧ ಉದ್ದೇಶಗಳನ್ನು ಪೂರೈಸುವ ನದಿ ಕಣಿವೆ ಯೋಜನೆಯನ್ನು "ವಿವಿಧೊದ್ದೇಶ ನದಿ ಕಣಿವೆ ಯೋಜನೆಗಳೆನ್ನುವರು. ದೇಶದ ಅಭಿವೃದ್ದಿಗೆ ನೀರಾವರಿ ಒದಗಿಸುವ ಅಣೆಕಟ್ಟೆಗಳು ಪ್ರಮುಖ ಪಾತ್ರವಹಿಸುತ್ತದೆ. (ಭಾರತದ ವಿವಿಧೊದ್ದೇಶ) ಹತ್ತು ಹಲವು ಉದ್ದೇಶಗಳಿಗೆ ರೊಪಿತಗೊಂಡ ವಿವಿಧೊದ್ದೇಶ ಅಣೆಕಟ್ಟೆಗಳ ಮಹತ್ವವನ್ನರಿತ ಭಾರತದ ಮಾಜಿ ಪ್ರಧಾನಿ 'ಜವಾಹರ್ ಲಾಲ್ ನೆಹರು' ರವರು ಅಣೆಕಟ್ಟೆಗಳನ್ನು 'ಆಧುನಿಕ ಭಾರತದ ದೇವಾಲಯಗಳು' ಎಂದು ಕರೆದಿದ್ದಾರೆ. ಅಂತಹ ಅಣೆಕಟ್ಟೆಗಳನ್ನು ಭಾರತದಲ್ಲಿ ರೋಪಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನದ ಟೆನೆನ್ಸಿ ನದಿ ಕಣಿವೆ ಯೋಜನೆಯ ಮಾದರಿಯಂತೆ ಭಾರಟದಲ್ಲೂ ಕೊಡ ವಿವಿಧೊದ್ದೇಶ ನದಿ ಕಣಿವೆ ಯೋಜನೆ ಪ್ರಾರಂಭವಾಗಿದೆ.
ಭಾರತದ ವಿವಿಧೊದ್ದೇಶ ಯೋಜನೆಯ ಉದ್ದೇಶಗಳು
1) ನೀರಾವರಿ
2) ಜಲವಿಧ್ಯುಚ್ಛಕ್ತಿ
3) ಮನರಂಜನೆ
4) ಪ್ರವಾಹ ನಿಯಂತ್ರಣ
5) ಮಣ್ಣಿನ ಸವಕಳಿ ತಡೆಯುವುದು
6) ಪ್ರವಾಸೋದ್ಯಮ
7) ಕೈಗಾರಿಕೆಗೆ ನೀರು
8) ಮೀನುಗಾರಿಕೆ
9) ಅರಣೀಕರಣ
10) ಸಾಂಕ್ರಾಮಿಕ ರೋಗ ತಡೆಯುವುದು.
11) ಚೌಗು ಪ್ರದೇಶದ ನಿರ್ಮಾಣ ತಡೆಕಟ್ಟವುದು
12) ಅಂತರ್ಜಲವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಮೇಲಿನ ಉದ್ದೇಶಗಳಿಗೆಗಾಗಿ ಭಾರತ ದೇಶದಲ್ಲಿ ಹಲವು ರಾಜ್ಯಗಳು ಜಂಟಿಯಾಗಿ ವಿವಿಧೊದ್ದೇಶ ಯೋಜನೆಗಳನ್ನು ಪ್ರಾರಂಭಿಸಿವೆ. ಇತಹ ಯೋಜನೆಗಳು ಕೋಸಿ, ದಾಮೋದರ ನದಿಗಳ ಪ್ರವಾಹದಿಂದಾಗುವ ನಷ್ಟವನ್ನು ತಡೆಯಲು ಹಾಗೂ ನದಿಗಳ ನೀರು ಸಮರ್ಪಕವಾಗಿ ಬಳಕೆಯಾಗಿ ಉತ್ತಮ ಬೆಳೆಯನ್ನು ತರಲು ಸಹಕಾರಿಯಾಗಿದೆ. ಜೊತೆಗೆ ಜಲವಿದ್ಯುತ್ ಗೂ ಸಹಕಾರಿಯಾಗಿವೆ. ಭಾರತದ ವಿವಿಧೊದ್ದೇಶ ವಿಶೇಷ
ಅಣೆಕಟ್ಟೆಗಳ ವಿಶೇಷತೆ
1) ದೇಶದ ಅತೀ ಉದ್ದವಾದ ಅಣೆಕಟ್ಟೆ -- ಹಿರಾಕುಡ್
2) ಭಾರತದಲ್ಲೇ ಅತ್ಯಂತ ಎತ್ತರವಾದ ಅಣೆಕಟ್ಟೆ -- ತೆಹರಿ
3) ದೇಶದ ಅತಿ ದೊಡ್ಡ ಕೃತಕ ಸರೋವರ -- ನಾಗರ್ಜುನ ಸಾಗರ
4) ಪ್ರವಾಹ ನಿಯಂತ್ರಿಸುವ ಯೋಜನೆಗಳು -- ಹಿರಾಕುಡ್, ಕೋಸಿ
5) ಮಣ್ಣಿನ ಸವಕಳಿ ತಡೆಯುವ ಯೋಜನೆ -- ಚಂಬಲ್ ಯೋಜನೆ
6) ಹೆಚ್ಚು ವಿವಾದದಿಂದ ಕೊಡಿದ ಯೋಜನೆ -- ನರ್ಮದಾ ಯೋಜನೆ
7) ದೇಶದ(ನೇಪಾಳ)ದೊಂದಿಗೆ ಕೊಡಿ ಸ್ಥಾಪನೆಯಾದ ಯೋಜನೆ -- ಕೋಸಿ ಯೋಜನೆ
8) ಪ್ರಪಂಚದಲ್ಲಿಯೇ ಅತಿ ದೊಡ್ಡ ಏತ ನೀರಾವರಿ ಯೋಜನೆ -- ಕಾಲೇಶ್ವರಂ ಯೋಜನೆ
9)ಸ್ವತಂತ್ರ ಭಾರತದ ಮೊದಲ ನದಿ ಕಣಿವೆ (ಡಿವಿಸಿ) ಯೋಜನೆ -- ದಾಮೋದರ ನದಿ ಕಣಿವೆ ಯೋಜನೆ
![]() |
ಭಾರತದ ವಿವಿಧೊದ್ದೇಶ |
ಭಾರತ ದೇಶದ ವಿವಿಧ ರಾಜ್ಯಗಳಲ್ಲಿರುವ ಜಲಶಯಗಳು
ರಾಜ್ಯಗಳು | ಅಣೆಕಟ್ಟೆಗಳು |
---|---|
ಮಹಾರಾಷ್ಟ್ರ | 1845 |
ಗುಜರಾತ್ | 666 |
ಕರ್ನಾಟಕ | 236 |
ತಮಿಳುನಾಡು | 120 |
ಉತ್ತರ ಪ್ರದೇಶ | 131 |
ಉತ್ತರಾಖಂಡ | 19 |
ಕೇರಳ | 52 |
ಛತ್ತೀಸ್ ಗಡ | 25 |
ಗೋವಾ | 5 |
ಜಾರ್ಖಂಡ | 77 |
ತ್ರಿಪುರ | 1 |
ಅರುಣಾಚಲ ಪ್ರದೇಶ | 1 |
ಮೇಘಾಲಯ | 7 |
ನಾಗಾಲ್ಯಾಂಡ್0 | 0 |
ಮಧ್ಯ ಪ್ರದೇಶ | 906 |
ಆಂಧ್ರಪ್ರದೇಶ | 334 |
ರಾಜಸ್ಥಾನ | 211 |
ಒಡಿಶಾ | 157 |
ಪ. ಬಂಗಾಳ | 28 |
ಪಂಜಾಬ್ | 15 |
ಹಿಮಾಚಲ ಪ್ರದೇಶ | 19 |
ಬಿಹಾರ | 28 |
ಜಮ್ಮು ಮತ್ತು ಕಾಶ್ಮೀರ | 14 |
ಸಿಕ್ಕಿಂ | 2 |
ಅಂಡಮಾನ್ ನಿಕೋಬಾರ್ | 2 |
ಮಣಿಪುರ | 5 |
ಹರಿಯಾಣ | 0 |
ಮಿಜೋರಾಂ | 0 |
ಭಾರತದಲ್ಲಿ ಪ್ರಮುಖ ಅಣೆಕಟ್ಟೆಗಳ ಪಟ್ಟಿ
ಅಣೆಕಟ್ಟೆ | ನದಿ | ರಾಜ್ಯ | ವಿಶೇಷತೆ |
---|---|---|---|
ತೆಹರಿ | ಭಗೀರಥಿ | ಉತ್ತರಾಖಂಡ | ಅತಿ ಎತ್ತರವಾ ಜಲಾಶಯ |
ಭಾಕ್ರಾ ಡ್ಯಾಮ್ | ಸಟ್ಲೇಜ್ | ಹಿಮಾಚಲ ಪ್ರದೇಶ | 2 ನೇ ಎತ್ತರವಾದ ಜಲಾಶಯ |
ಹಿರಾಕುಡ್ ಡ್ಯಾಮ್ | ಮಹಾನದಿ | ಒಡಿಶ | ಅತಿ ಉದ್ದವಾದ ಜಲಾಶಯ |
ಕೋಸಿ ಡ್ಯಾಮ್ | ಕೋಸಿ | ನೇಪಾಳ ಮತ್ತು ಬಿಹಾರ | 2 ದೇಶಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಡ್ಯಾಮ್ |
ಗಾಂಧಿ ಸಾಗರ | ಚಂಬಲ್ | ಮಧ್ಯಪ್ರದೇಶ | ಮಣ್ಣಿನ ಸವೆತದ ನಿಯಂತ್ರಣ ಯೋಜನೆ |
ರಾಣಾ ಪ್ರತಾಪ್ ಸಾಗರ | ಚಂಬಲ್ | ರಾಜಸ್ಥಾನ | ಮಣ್ಣಿನ ಸವೆತದ ನಿಯಂತ್ರಣ ಯೋಜನೆ |
ನೆಹರು ಸಾಗರ | ಚಂಬಲ್ | ರಾಜಸ್ಥಾನ | ಮಣ್ಣಿನ ಸವೆತದ ನಿಯಂತ್ರಣ ಯೋಜನೆ |
ಕೂಟ ಸಾಗರ | ಚಂಬಲ್ | ರಾಜಸ್ಥಾನ | ಮಣ್ಣಿನ ಸವೆತದ ನಿಯಂತ್ರಣ ಯೋಜನೆ |
ಬಿಸ್ಲಾಪುರ | ಬನಾಸ್ | ರಾಜಸ್ಥಾನ | - |
ಇಂದಿರಾ ಸಾಗರ | ನರ್ಮದಾ ನದಿ | ಮಧ್ಯ ಪ್ರದೇಶ | . |
ಸರ್ದಾರ್ ಸರೋವರ | ನರ್ಮದಾ | ಗುಜರಾತ್ | ನರ್ಮದಾ ನದಿಯ ಅತಿ ದೊಡ್ಡ ಯೋಜನೆ |
ಬಾರ್ಗಿ ಡ್ಯಾಮ್ | ನರ್ಮದಾ | ಮಧ್ಯಪ್ರದೇಶ | ರಾಣಿ ಅವಂತ ಸಾಗರ ಯೋಜನೆ ಎನ್ನುವರು |
ಕೋಲಾರ್ ಡ್ಯಾಮ್ | ಕೋಲಾರ್ | ಮಧ್ಯಪ್ರದೇಶ | ಭೂಪಾಲ್ ನಗರಕ್ಕೆ ನೀರು ಸರಬರಾಜು |
ಜೋಬಾಟ್ ಡ್ಯಾಮ್ | ಹಾತ್ನಿ | ಮಧ್ಯಪ್ರದೇಶ | ಚಂದ್ರಶೇಖರ ಆಜಾದ್ ಜಲಾಶಯ ಅನ್ನುವರು |
ನಾಗರ್ಜುನ ಸಾಗರ | ಕೃಷ್ಣ | ಆಂಧ್ರಪ್ರದೇಶ | ಅತಿ ದೊಡ್ಡ ಕೃತಕ ಸರೋವರ |
ಮಂಡಿ ಯೋಜನೆ | ಬಿಯಾಸ್ | ಹಿಮಾಚಲ ಪ್ರದೇಶ | . |
ರಿಹಾಂದ್ | ರಿಹಾಂದ್ | ಉತ್ತರ ಪ್ರದೇಶ | ಗೋವಿಂದ ವಲ್ಲಭ ಪಂಥ್ ಎನ್ನುವರು |
ಕಾಳೇಶ್ವರಂ ಡ್ಯಾಮ್ | ಗೋದಾವರಿ | ತೆಲಂಗಾಣ | ಪ್ರಪಂಚದ ಅತಿ ದೊಡ್ಡ ಏತ ನೀರಾವರಿ ಯೋಜನೆ |
ನಿಜಾಂ ಸಾಗರ ಡ್ಯಾಮ್ | ಮಂಜ್ರಾ | ತೆಲಂಗಾಣ | . |
ಟಾಟಾ ಹೈಡಲ್ ಡ್ಯಾಮ್ | ಭಿಮಾ | ಮಹಾರಾಷ್ಟ್ರ | . |
ಲಿಂಗನಮಕ್ಕಿ ಡ್ಯಾಮ್ | ಶರಾವತಿ | ಕರ್ನಾಟಕ | ಕರ್ನಾಟಕದ ಅತಿ ದೊಡ್ಡ ಜಲಾಶಯ |
ಫಾರಕ್ಕಾ ಡ್ಯಾಮ್ | ಗಂಗಾ/ಹೊಗ್ಲಿ | ಪಶ್ಚಿಮ ಬಂಗಾಳ | . |
ಮಾಹಿ / ಕದನ | ಮಾಹಿ | ಗುಜರಾತ್ | . |
ಸಲಾಲ್ ಡ್ಯಾಮ್ | ಚನಾಬ್ | ಜಮ್ಮು ಮತ್ತು ಕಾಶ್ಮೀರ | . |
ಪಂಪ ಸಾಗರ/ ತುಂಗಭದ್ರಾ | ತುಂಗಭದ್ರಾ | ಕರ್ನಾಟಕ | ಕರ್ನಾಟಕ ಮತ್ತು ಆಂಧ್ರಪ್ರದೇಶದೊಂದಿಗೆ ನಿರ್ಮಾಣಗೊಂಡಿರುವ ಯೋಜನೆ |
ಉಕಾಯಿ ಡ್ಯಾಮ್ | ತಪತಿ | ಗುಜರಾತ್ | . |
ಶ್ರೀಶೈಲಂ ಡ್ಯಾಮ್ | ಕೃಷ್ಣ | ಆಂಧ್ರಪ್ರದೇಶ | . |
ಕಿಷಾನ್ ಗಂಗಾ ಡ್ಯಾಮ್ | ನೀಲಂ | ಜಮ್ಮು ಮತ್ತು ಕಾಶ್ಮೀರ | ಪಾಕಿಸ್ತಾನ ಮತ್ತು ಭಾರತದ ಮಧ್ಯೆ ವಿವಾದಾತ್ಮಕ ಅಣೆಕಟ್ಟು |
ಧನ್ಯವಾದಗಳು