Type Here to Get Search Results !

ಮಣ್ಣಿನ ಸವೆತ ಮತ್ತು ಅದಕ್ಕೆ ಕಾರಣಗಳು | UPSC KPSC exam

 ಮಣ್ಣಿನ ಸವೆತ 

            ಮಣ್ಣಿನ ಸವೆತ ಎಂಬುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಭೂ ಸ್ವರೂಪದ  ಮೇಲೆ ಪರಿಣಾಮ ಬಿರುವಂತಹ ಕ್ರಿಯೆಯಾಗಿದೆ. ಜಗತ್ತಿನ ಎಲ್ಲೆಡೆ ಕೊಡ ಮಣ್ಣಿನ ಸವೆತವು ಕಂಡು ಬರುತ್ತದೆ. ಭೂ ಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ "ಮಣ್ಣಿನ ಸವೆತ" ಅಥವಾ "ಭೂ ಸವೆತ" ಎಂದು ಕರೆಯುತ್ತಾರೆ. 


ಭೂಸವೆತದ ಕರ್ತೃಗಳು 

   1) ಹರಿಯುವ ನೀರು 

   2) ಗಾಳಿ 

   3) ಸಮುದ್ರದ ಅಲೆ  ಮುಂತಾದವುಗಳು ಭೂಸವೆತದ ಮುಖ್ಯ ಕರ್ತೃಗಲಾಗಿದೆ. 


ಮಣ್ಣಿನ ಸವೆತಕ್ಕೆ ಕಾರಣಗಳು 

         ಮಣ್ಣಿನ ಸವೆತವು ದೇಶದ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ :
1) ಅರಣ್ಯಗಳ ನಾಶದಿಂದಾಗಿ ಭೂ ಪ್ರದೇಶವು ಬಯಲಾಗುತ್ತಿರುವುದರಿಂದ ಮಣ್ಣಿನ ಸವೆತ ಉಂಟಾಗುತ್ತಿದೆ. 
2) ಅಧಿಕವಾಗಿ ಸಾಕು ಪ್ರಾಣಿಗಳನ್ನು ಮೇಯಿಸುವುದು. 
3) ಅವೈಜ್ಞಾನಿಕ ಬೇಸಾಯ. 
4) ಅಧಿಕ ನೀರಾವರಿ ಬಳಕೆ . 
5) ಸ್ಥಳಾಂತರ ಬೇಸಾಯ. 
6) ಕಡಲ ತೀರದ ಕೊರತೆ.
7) ಮರುಭೂಮಿಯಲ್ಲಿನ ಮಾರುತಗಳು.
8) ಮೇಲ್ಭಾಗದ ಮಣ್ಣನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವುದು. ಉದಾ|| ಇಟ್ಟಿಗೆ, ಹಂಚು, ಮಡಿಕೆ ತಯಾರಿಕೆ ಮುಂತಾದವುಗಳಿಂದ ಮೇಲ್ಮಣ್ನು ನಾಶವಾಗಿ ಅನುಪಯುಕ್ತವಾದ ಮಣ್ಣು ಉಳಿದುಕೊಳ್ಳುವುದು. 
ಮಣ್ಣಿನ ಸವೆತ ಮತ್ತು ಅದಕ್ಕೆ ಕಾರಣಗಳು


ಮಣ್ಣಿನ ಸವೆತದ ಪರಿಣಾಮಗಳು

          ಮಣ್ಣಿನ ಸವೆತವು  ಅನೇಕ ಸಮಸ್ಯೆಗಳಿಗೆ ಕಾರಣವಾಗುವುದು. ಅವುಗಳಲ್ಲಿ ಮುಖ್ಯವಾದವುಗಳೆಂದರೆ,
1) ಮಣ್ಣಿನ ಸವೆತದಿಂದ ನದಿಗಳಲ್ಲಿ ಹೊಳುತುಂಬಿ ಪ್ರವಾಹ ಉಂಟಾಗುತ್ತವೆ. 
2) ನದಿಯ ಪಾತ್ರದಲ್ಲಿ ಹೊಳು ತುಂಬುವುದರಿಂದ ನದಿಗಳು ತಮ್ಮ ಪಾತ್ರವನ್ನು ಬದಲಾಯಿಸುತ್ತದೆ. 
3) ಜಲಾಶಯ ಮತ್ತು ಕೆರೆಗಳಲ್ಲಿ ಹೊಳು ತುಂಬುವುದರಿಂದ ನೀರನ್ನು ಸಂಗ್ರಹಿಸುವ ಅವುಗಳ ಸಾಮರ್ಧ್ಯವು ಕಡಿಮೆಯಾಗುವುದು. 
4) ಭೂ ಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವುದು. ಇದರಿಂದ ಸ್ವಾಭಾವಿಕ ಚಿಲುಮೆಗಳು ಬತ್ತಿ ಹೋಗುತ್ತದೆ. 
5) ಮಣ್ಣಿನ ಫಲವತ್ತತೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ ಮೇಲ್ಮಣ್ನು ಫಲವತ್ತಾದ ಮಣ್ಣಾದ್ದರಿಂದ ಮಣ್ಣಿನ ಸವಕಳಿಯಿಂದ ಫಲವತ್ತತೆ ಪ್ರಮಾಣವು ತಗ್ಗುತ್ತದೆ. 
6) ಮೇಲ್ಮಣ್ಣು ಕೊಚ್ಚಿ ಹೋಗುವುದರಿಂದ ಮಣ್ಣಿನಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗಿ ಪ್ರವಾಹಗಳು ಉಂಟಾಗುತ್ತದೆ. 
7) ಸಸ್ಯ ಸಂಪನ್ಮೂಲ ಕಡಿಮೆಯಾಗುವುದರಿಂದ ಮಳೆಯು ಕೊಡ ಕಡಿಮೆಯಾಗಿ ಬರಗಾಲಗಳು ಉಂಟಾಗುತ್ತದೆ. 
8) ದೇಶದ ಸಮಗ್ರ ಅರ್ಧಿಕ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ.


ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ 

              ಮಣ್ಣಿನ ಸವೆತವನ್ನು ತಡೆಕಟ್ಟುವುದು ಹಾಗೂ ಅದರ ಫಲವತ್ತತೆಯನ್ನು ಕಾಪಾಡುವವುದೆ "ಮಣ್ಣಿನ ಸಂರಕ್ಷಣೆ" ಜೊತೆಗೆ ಫಲವತ್ತತೆ ಕಡಿಮೆಯಾಗದಂತೆ ಸುಸ್ಥಿರ ರೀತಿಯಲ್ಲಿ ಮಣ್ಣನ್ನು ಬಯಕೆಮಾಡಿ ನಿರಂತರವಾಗಿ ಬೆಳೆಗಳ ಉತ್ಪಾದನೆಯನ್ನು ಪಡೆಯುವುದೇ ಮಣ್ಣಿನ ನಿರ್ವಾಹಣೆಯಾಗಿದೆ. ದೇಶದದ  ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಪ್ರಮುಖ್ಯತೆಯನ್ನು ನೀಡಲಾಗಿದೆ. ಅಣೆಕಟ್ಟುಗಳು ನಿರ್ಮಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲಾಗಿದೆ. ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸಿ ಮಣ್ಣಿನ ಆರೋಗ್ಯ ಕಾರ್ಡನ್ನು ವಿತರಿಸುಲಾಗುತ್ತಿದೆ. ಮಣ್ಣಿನ ಸವೆತವನ್ನು ತಡೆಕಟ್ಟುವ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಪ್ರಮುಖವಾದವು ಅಂದರೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಚಂಬಲ್ ನದಿಯಿಂದ ಉಂಟಾಗುವ ಅಪಾರ ಪ್ರಮಾಣದ ಮಣ್ಣಿನ ಸವೆತವನ್ನು ತಡೆಕಟ್ಟಲು ಅತಿ ದೊಡ್ಡ 4 ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.


ಮಣ್ಣಿನ ಸಂರಕ್ಷಣೆಯ ಕ್ರಮಗಳು 


1)  ಇಳಿಜಾರಿಗೆ ಅಡ್ಡಲಾಗಿ ಉಳಿಮೆ ಮಾಡುವುದು. 

2) ಅಡ್ಡ ಬದುಗಳನ್ನು ನಿರ್ಮಿಸುವುದು. 

3) ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳ ನಿರ್ಮಾಣ. 

4) ಅರಣ್ಯ ನಾಶವನ್ನು ತಡೆಕಟ್ಟುವುದು ಮತ್ತು ಅರಣ್ಯಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು 

5) ಪ್ರಾಣಿಗಳ ಅಧಿಕ ಮೇಯಿಸುವುಕೆ ನಿಯಂತ್ರಿಸುವುದು .

6) ನೀರಿನ ಯೋಜಿತ ಬಳಕೆ. 

7) ಚೆಕ್ ಡ್ಯಾಮ್ ಗಳ ನಿರ್ಮಾಣ.

8) ಆವರ್ತ ಬೆಳೆಗಳ ಬೇಸಾಯದ ಕ್ರಮ. 

9) ಸ್ಥಳಾಂತರ ಬೇಸಾಯಕ್ಕೆ ಕಡಿವಾಣ ಹಾಕುವುದು. 

10) ಬಂಜರು ಮತ್ತು ಬರಡು ಭೂಮಿಯನ್ನು ಪುನರ್ ಫಲವತ್ತೆತೆಗೊಳಿಸುವುದು. 

11) ಮಣ್ಣಿನ ಪ್ರಾಮುಖ್ಯತೆಯ ಬಗ್ಗೆ ಸಾಕ್ಷರತೆ ಮೂಡಿಸುವುದು. 

12) ಮಣ್ಣಿನ ಸಂರಕ್ಷಣೆಗೆ ಮುಂದಾದವರಿಗೆ ಪ್ರಶಸ್ತಿಗಳನ್ನು ನೀಡುವುದುರ ಮೂಲಕ ಪ್ರೋತ್ಸಾಹಿಸುವುದು. 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad